ಮಡಿಕೇರಿ, ಜು. ೧೯: ಮಡಿಕೇರಿ ತಾಲೂಕಿನ ೨ನೇ ಮೊಣ್ಣಂಗೇರಿ ಗ್ರಾಮದಲ್ಲಿ ಪದೇ ಪದೇ ಭೂಕುಸಿತ ಸಂಭವಿಸುತ್ತಿದ್ದು, ಅಪೂರ್ಣ ಪರಿಹಾರ ಕಾಮಗಾರಿಗಳು ಗ್ರಾಮಸ್ಥರನ್ನು ಮಳೆಗಾಲದಲ್ಲಿ ಕಾಡುತ್ತಿವೆ. ಗ್ರಾಮದಲ್ಲಿನ ಶಾಲೆ ಹಾಗೂ ಅಂಗನವಾಡಿಯು ಸುಮಾರು ಒಂದು ವಾರದಿಂದ ಬಂದ್ ಆಗಿದ್ದು, ಮರುಕಳಿಸುವ ಮಳೆಗಾಲದ ಸಂಕಷ್ಟಕ್ಕೆ ಶಾಶ್ವತ ಪರಿಹಾರ ನೀಡುವಂತೆ ನಿವಾಸಿಗಳು ಮನವಿ ಮಾಡಿದ್ದಾರೆ.
ಪ್ರಕೃತಿಯ ನಡುವೆ ಇರುವ ೨ನೇ ಮೊಣ್ಣಂಗೇರಿ ಕೊಡಗಿನ ಮಾದರಿ ಗ್ರಾಮಗಳಲ್ಲಿ ಒಂದಾಗಿತ್ತು. ಆದರೂ, ೨೦೧೮ರ ಪ್ರಾಕೃತಿಕ ವಿಪತ್ತು ಗ್ರಾಮದ ಭೂಪ್ರದೇಶವನ್ನು ಬದಲಾಯಿಸಿತಲ್ಲದೆ, ಅಂದಿನಿAದ ಪ್ರತಿ ಮಳೆಗಾಲದಲ್ಲಿ ಇಲ್ಲಿಯ ನಿವಾಸಿಗಳು ಸಂಕಷ್ಟದ ಜೀವನ ಸಾಗಿಸಿಕೊಂಡು ಬಂದಿದ್ದಾರೆ. ಇವರ ಸಂಕಷ್ಟಗಳು ವೈಜ್ಞಾನಿಕ ಪರಿಹಾರ ಕಾಮಗಾರಿಗಳಿಂದ ನೀಗಬಹುದಾದರೂ, ಕಾಮಗಾರಿಗಳು ಗುತ್ತಿಗೆದಾರರಿಗೆ ಕೇವಲ ಹಣಸಂಪಾದನೆಯ ದಾರಿಯಾಗಿ ಮೂಡಿರುವುದು ವಿಪರ್ಯಾಸವೇ ಸರಿ.
ರಾಮಕೊಲ್ಲಿಯಲ್ಲಿ ಒಂದು ದುರ್ಬಲವಾದ ಅಪೂರ್ಣ ಸೇತುವೆ ಹಾಗೂ ಮತ್ತೊಂದು ಕೊಚ್ಚಿಹೋದ ಸೇತುವೆಯು ಗ್ರಾಮಕ್ಕೆ ಸಂಪರ್ಕದ ಏಕೈಕ ಮಾರ್ಗವಾಗಿದೆ. ಯಾವುದೇ ತುರ್ತು ಪರಿಸ್ಥಿತಿ ಬಂದರೂ ಸರಿಯಾದ ರಸ್ತೆ ಸಂಪರ್ಕವಿಲ್ಲದೆ ಗ್ರಾಮಸ್ಥರು ಪರದಾಡುವಂತಾಗಿದೆ.
ಗ್ರಾಮದಿAದ ರಾಷ್ಟಿçÃಯ ಹೆದ್ದಾರಿಗೆ ಸಂಪರ್ಕ ಕಲ್ಪಿಸುವ ರಾಮಕೊಲ್ಲಿ ಸೇತುವೆ ೨೦೧೮ರಲ್ಲಿ ಕೊಚ್ಚಿ ಹೋಗಿತ್ತು. ಸುಮಾರು ರೂ. ೨೦ ಲಕ್ಷ ವೆಚ್ಚದ ಸೇತುವೆ ಕಾಮಗಾರಿ ಗ್ರಾಮಕ್ಕೆ ಮಂಜೂರಾದರೂ, ಇಲ್ಲಿಯವರೆಗೆ ಈ ಸೇತುವೆ ಅಪೂರ್ಣವಾಗಿಯೇ ಉಳಿದಿದೆ. ಅರ್ಧ ಪೂರ್ಣಗೊಂಡ ಕಾಂಕ್ರೀಟ್ ಸೇತುವೆಯು ರಭಸದಲ್ಲಿ ಹರಿಯುವ ಹೊಳೆ ನಡುವೆ ನಿಂತಿದ್ದು, ಈ ಸೇತುವೆಗೆ ತಲುಪಲು ಗ್ರಾಮಸ್ಥರು ಮರದ ದಿಮ್ಮಿಗಳನ್ನು ಬಳಸಿ ಸಂಪರ್ಕ ಹೊಂದುವ ಮೂಲಕ ಸಾಹಸ ಪಡುತ್ತಿದ್ದಾರೆ.
‘ಪ್ರತಿ ಬಾರಿ ಮಕ್ಕಳು ಅಥವಾ ಹಿರಿಯರು ಗ್ರಾಮ ಸೇರಬೇಕಾದರೆ, ನಾನು ಕಾವಲು ಕಾಯುತ್ತೇನೆ ಮತ್ತು ಈ ಸೇತುವೆಯನ್ನು ದಾಟಲು ಅವರಿಗೆ ಸಹಾಯ ಮಾಡುತ್ತೇನೆ. ವೈಜ್ಞಾನಿಕ ಪರಿಹಾರ ಕಾರ್ಯಗಳ ಮೂಲಕ ನಮ್ಮ ಸಮಸ್ಯೆಗಳನ್ನು ಪರಿಹರಿಸಬಹುದಾಗಿದ್ದರೂ, ಅದು ಸಾಧ್ಯವಾಗದೆ ಪ್ರತಿ ವರ್ಷ ಮಳೆಗಾಲದಲ್ಲಿ ನಾವು ತೊಂದರೆ ಅನುಭವಿಸುವಂತಾಗಿದೆ’ ಎಂದು ಗ್ರಾಮದ ನಿವಾಸಿ ಜಯಪ್ರಕಾಶ್ ಸ್ಥಳಕ್ಕೆ ತೆರಳಿದ್ದ ‘ಶಕ್ತಿ’ಯೊಂದಿಗೆ ತಮ್ಮ ಅಭಿಪ್ರಾಯ ಹಂಚಿಕೊAಡರು.
(ಮೊದಲ ಪುಟದಿಂದ) ಗ್ರಾಮಸ್ಥರ ದೂರುಗಳ ನಂತರ ಜಿಲ್ಲಾಡಳಿತವು ಕೆಲವು ಮರಳು ಚೀಲಗಳನ್ನು ಅಪೂರ್ಣಗೊಂಡ ರಾಮಕೊಲ್ಲಿ ಸೇತುವೆಯ ಪ್ರದೇಶದಲ್ಲಿ ಇರಿಸುವ ಕಾರ್ಯ ಮಾಡಿದೆ. ಆದರೆ, ಈ ಚೀಲಗಳು ಗ್ರಾಮಸ್ಥರ ಸುರಕ್ಷತೆಯನ್ನು ದೃಢಿಪಡಿಸುವಂತಿಲ್ಲ. ಸೇತುವೆಯ ಇನ್ನೊಂದು ಬದಿಯಲ್ಲಿ ವಾಸಿಸುವ ೨೦ ಕುಟುಂಬಗಳಿಗೆ ಜಿಲ್ಲಾಡಳಿತವು ಆಹಾರ ಕಿಟ್ಗಳನ್ನು ಸಹ ನೀಡಿದೆ. ಆದರೂ, ಯಾವುದೇ ವೈದ್ಯಕೀಯ ಅಥವಾ ಇತರ ತುರ್ತು ಸಂದರ್ಭ ಸಂಪರ್ಕದ ಕೊರತೆಯಿಂದಾಗಿ ದುರಂತದಲ್ಲಿ ಕೊನೆಗೊಳ್ಳುವದು ಖಚಿತ ಎಂಬAತಿದೆ ಈ ಗ್ರಾಮದ ನಿಜಸ್ಥಿತಿ.
ಇದಲ್ಲದೆ, ಅನೇಕ ಸಣ್ಣ ಭೂಕುಸಿತಗಳು ಗ್ರಾಮದ ಹಲವಾರು ಪ್ರದೇಶಗಳನ್ನು ನಿರ್ಬಂಧಿಸಿರುವುದರಿAದ ಗ್ರಾಮದ ಮಕ್ಕಳು ಶಾಲೆಗೆ ಹೋಗಲು ಸಾಧ್ಯವಾಗುತ್ತಿಲ್ಲ. ಗ್ರಾಮದ ಇನ್ನೊಂದು ಹೊಳೆಗೆ ಅಡ್ಡಲಾಗಿ ಗ್ರಾಮಸ್ಥರು ನಿರ್ಮಿಸಿದ್ದ ಸೇತುವೆಯೂ ಕೊಚ್ಚಿ ಹೋಗಿದ್ದು, ಗ್ರಾಮಸ್ಥರು ಕೆಸರು ಮಣ್ಣಿನ ಮೂಲಕ ಟ್ರೆಕ್ಕಿಂಗ್ ಮಾಡಿ ಭಯಾನಕ ಹೊಳೆ ದಾಟಿ ತಮ್ಮ ಮನೆಗಳಿಗೆ ತೆರಳುತ್ತಿದ್ದಾರೆ. ರಾಮಕೊಲ್ಲಿ ಸೇತುವೆಯ ೨೦ ಕುಟುಂಬಗಳಿಗೆ ಮಾತ್ರ ಆಹಾರ ಕಿಟ್ಗಳನ್ನು ನೀಡಲಾಗಿದೆ. ಉಳಿದವರಿಗೆ ಅವು ದೊರಕಿಲ್ಲ,” ಎಂದು ದೇವಯ್ಯ ಖಚಿತಪಡಿಸಿದರು. ಗ್ರಾಮದಲ್ಲಿ ೩೦೦ಕ್ಕೂ ಹೆಚ್ಚು ಕುಟುಂಬಗಳು ಆಶ್ರಯ ಪಡೆದಿದ್ದು, ೭೦೦ಕ್ಕೂ ಹೆಚ್ಚು ಮತದಾರರಿದ್ದಾರೆ.
ಗಾಳಿಬೀಡಿನ ಖಾಸಗಿ ರೆಸಾರ್ಟ್ನಿಂದ ೨೦೧೮ರಲ್ಲಿ ಭೂಕುಸಿತ ಪ್ರಾರಂಭಗೊAಡು ಇಡೀ ಗ್ರಾಮದ ಜನರು ಕಾಲ್ನಡಿಗೆ ಮೂಲಕ ಬೆಟ್ಟ-ಗುಡ್ಡಗಳನ್ನೇರಿ ತಮ್ಮ ಪ್ರಾಣವನ್ನು ಉಳಿಸಿಕೊಂಡಿದ್ದರು. ಅಂದಿನಿAದ ಈ ಗ್ರಾಮದ ಮಣ್ಣು ತನ್ನ ಫಲವತ್ತತೆ ಕಳೆದುಕೊಂಡಿದೆ ಎಂದು ಗ್ರಾಮಸ್ಥರು ಅಭಿಪ್ರಾಯಪಟ್ಟರು. ಇಲ್ಲಿಯ ಸುಮಾರು ೨೦ ಕುಟುಂಬಗಳಿಗೆ ಪುನರ್ವಸತಿ ದೊರಕಿದ್ದರೂ, ಇನ್ನುಳಿದವರು ಈ ದುರ್ಬಲ ಪ್ರದೇಶದಲ್ಲಿ ಮಳೆಗಾಲದ ಸಮಯದಲ್ಲಿ ಭೀತಿಯಿಂದಲೇ ಜೀವನ ಸಾಗಿಸಿಕೊಂಡಿದ್ದಾರೆ. ‘ಗ್ರಾಮಕ್ಕೆ ಸಂಪರ್ಕ ಕಲ್ಪಿಸುವ ತೂಗು ಸೇತುವೆಯೊಂದೇ ಇಲ್ಲಿಯ ಮಳೆಗಾಲದ ಸಮಸ್ಯೆಗಳಿಗೆ ಏಕೈಕ ಪರಿಹಾರದಂತೆ ತೋರುತ್ತದೆ’ ಎಂದು ಗ್ರಾಮಸ್ಥರಾದ ವಿಟ್ಟಲ್ ನಾಯಕ್, ರಾಘವಗೌಡ, ಮುನಿಯಪ್ಪ, ಈಶ್ವರ, ವೆಂಕಪ್ಪ ಹಾಗೂ ಇತರರು ಹೇಳುತ್ತಾರೆ.
-ಪ್ರಜ್ಞಾ ಜಿ.ಆರ್., ಇಬ್ರಾಹಿಂ ಮದೆನಾಡು