ಮಡಿಕೇರಿ, ಜು. ೨೦: ಕನ್ನಡ ಸಾಹಿತ್ಯ ಪರಿಷತ್ತನ್ನು ಜಿಲ್ಲೆಯಲ್ಲಿ ಸದೃಢವಾಗಿ ಕಟ್ಟುವ ಉದ್ದೇಶದಿಂದ ಜಿಲ್ಲೆಯ ಎಲ್ಲ ಹೋಬಳಿಗಳಲ್ಲಿ ಕನ್ನಡ ಸಾಹಿತ್ಯ ಪರಿಷತ್ತಿನ ಘಟಕಗಳನ್ನು ಸಮರ್ಥ ನಾಯಕತ್ವದೊಂದಿಗೆ ಆಸಕ್ತ ಸದಸ್ಯರನ್ನು ಒಳಗೊಂಡ ಸಮಿತಿಯನ್ನು ಪ್ರಾರಂಭಿಸಲಾಗುತ್ತಿದೆ ಎಂದು ಕಸಾಪ ಜಿಲ್ಲಾ ಅಧ್ಯಕ್ಷ ಎಂ.ಪಿ. ಕೇಶವ ಕಾಮತ್ ನುಡಿದರು.
ಭಾಗಮಂಡಲದ ಕಾಶಿಮಠದಲ್ಲಿ ನಡೆದ ಹೋಬಳಿ ಕಸಾಪದ ಸರ್ವ ಸದಸ್ಯರ ಸಮಾಲೋಚನಾ ಸಭೆಯಲ್ಲಿ ಪ್ರಾಸ್ತಾವಿಕವಾಗಿ ಮಾತನಾಡಿದ ಅವರು, ಕನ್ನಡಿಗರೆಲ್ಲರೂ ಪರಿಷತ್ತಿನ ಸದಸ್ಯರಾಗಬೇಕೆಂಬ ಉದ್ದೇಶದಿಂದ ಸದಸ್ಯತ್ವ ಶುಲ್ಕವನ್ನು ಕಸಾಪದ ಸರ್ವ ಸದಸ್ಯರ ಮಹಾಸಭೆಯಲ್ಲಿ ಚರ್ಚಿಸಿ ಈ ಹಿಂದೆ ಇದ್ದ ರೂ. ೧೦೦೦ ದಿಂದ ರೂ. ೨೫೦ಕ್ಕೆ ಇಳಿಸಲಾಗಿದೆ. ಇದರ ಪ್ರಯೋಜನ ಪಡೆದುಕೊಂಡು ಸಂಸ್ಥೆಯ ಸದಸ್ಯತ್ವ ಹೆಚ್ಚಿಸಿ ಪರಿಷತ್ತನ್ನು ಸದೃಢಗೊಳಿಸಲು ಎಲ್ಲ ಸದಸ್ಯರು ಸಹಕರಿಸಬೇಕು ಎಂದರು.
ಜಿಲ್ಲಾ ಗೌರವ ಕಾರ್ಯದರ್ಶಿ ಎಸ್.ಐ. ಮುನೀರ್ ಅಹಮದ್ ಮಾತನಾಡಿ ಹೋಬಳಿ ಅಧ್ಯಕ್ಷರ ಮತ್ತು ಪದಾಧಿಕಾರಿಗಳ ಆಯ್ಕೆ ಜಿಲ್ಲಾ ಅಧ್ಯಕ್ಷರ ಅಧಿಕಾರವಾದರೂ ನಾವು ಎಲ್ಲ ಪದಾಧಿಕಾರಿಗಳನ್ನು ಪ್ರಜಾಪ್ರಭುತ್ವದ ವ್ಯವಸ್ಥೆಯಲ್ಲಿ ಆಯ್ಕೆ ಮಾಡಲು ಎಲ್ಲ ಹೋಬಳಿಗಳಲ್ಲಿ ಸರ್ವ ಸದಸ್ಯರ ಸಮಾಲೋಚನಾ ಸಭೆ ಕರೆದು ತೀರ್ಮಾನಿ ಸುತ್ತಿರುವುದಾಗಿ ನುಡಿದರು. ಪರಿಷತ್ತಿನ ಬೇರು ಇರುವುದೇ ಹೋಬಳಿ ಸಮಿತಿಗಳಲ್ಲಿ ಅಲ್ಲಿ ಕಾರ್ಯಕ್ರಮಗಳು ವ್ಯವಸ್ಥಿತವಾಗಿ ಸಂಯೋಜನೆ ಗೊಂಡರೆ ಮತ್ತು ಹೋಬಳಿ ಸಮಿತಿಗಳು ಬಲಿಷ್ಠಗೊಂಡರೆ ಪರಿಷತ್ತು ಬಲಗೊಳ್ಳುತ್ತದೆ ಎಂದರು.
ನಂತರ ನಡೆದ ಸಮಿತಿ ಆಯ್ಕೆ ಪ್ರಕ್ರಿಯೆಯಲ್ಲಿ ಅಧ್ಯಕ್ಷರಾಗಿ ಸುನಿಲ್ ಪತ್ರಾವೋ, ಗೌರವ ಕಾರ್ಯದರ್ಶಿ ಗಳಾಗಿ ನಿಡ್ಯಮಲೆ ಚಲನ್ ಮತ್ತು ಮಹಿಳಾ ಗೌರವ ಕಾರ್ಯದರ್ಶಿ ಯಾಗಿ ಕುದುಕುಳಿ ಇಂದಿರಾವತಿ ಭರತ್, ಗೌರವ, ಕೋಶಾಧಿಕಾರಿ ಯಾಗಿ ನಿಡ್ಯಮಲೆ ಬಾಲಾಜಿ ಅವರನ್ನು ಆಯ್ಕೆ ಮಾಡಲಾಯಿತು.
ಸಹ ಕಾರ್ಯದರ್ಶಿ, ಸಂಘಟನಾ ಕಾರ್ಯದರ್ಶಿ ಹಾಗೂ ಇನ್ನಿತರ ಪದಾಧಿಕಾರಿಗಳನ್ನು ಎಲ್ಲ ಗ್ರಾಮದ ಸದಸ್ಯರಿಗೂ ಸಮಿತಿಯಲ್ಲಿ ಪ್ರಾತಿನಿಧ್ಯ ನೀಡುವ ಸಲುವಾಗಿ ಹೋಬಳಿಯ ಉಳಿದ ಗ್ರಾಮಗಳಿಂದ ಪದಾಧಿಕಾರಿಗಳನ್ನು ಆಯ್ಕೆ ಮಾಡುವಂತೆ ತೀರ್ಮಾನಿಸ ಲಾಯಿತು. ಜಿಲ್ಲಾ ಮಹಿಳಾ ಗೌರವ ಕಾರ್ಯದರ್ಶಿ ರೇವತಿ ರಮೇಶ್, ಭಾಗಮಂಡಲ ಹೋಬಳಿಯ ಮಾಜಿ ಅಧ್ಯಕ್ಷÀ ಕುದುಕುಳಿ ಭರತ್ ಮತನಾಡಿದರು.
ಮಡಿಕೇರಿ ತಾಲೂಕು ಅಧ್ಯಕ್ಷ ಅಂಬೆಕಲ್ ನವೀನ್ ಅಧ್ಯಕ್ಷತೆಯಲ್ಲಿ ನಡೆದ ಸಭೆಯಲ್ಲಿ ಕಸಾಪ ಸದಸ್ಯರುಗಳಾದ ವಿಠಲಾಚಾರ್, ದೇವಂಗೊಡಿ ಹರ್ಷ, ಅಬ್ದುಲ್ ಲತೀಫ್, ರವೀಂದ್ರ ಹೆಬ್ಬಾರ್, ಪೊಡನೋಳನ ವಿಠಲ, ದೇವಂಗೋಡಿ ರಾಮಚಂದ್ರ, ಕುದುಪಜೆ ಪ್ರಕಾಶ್, ಪರಿವಾರ ತಿಮ್ಮಯ್ಯ, ಜಿ.ಪಂ. ಮಾಜಿ ಸದಸ್ಯ ಪಿ.ಎಂ. ರಾಜೀವ, ಜಿಲ್ಲಾ ವಿಶೇಷ ಆಹ್ವಾನಿತರಾದ ವಿ.ಟಿ. ಮಂಜುನಾಥ್, ಉಪಸ್ಥಿತರಿದ್ದರು. ಮಡಿಕೇರಿ ತಾಲೂಕು ಗೌರವ ಕಾರ್ಯದರ್ಶಿ ಕೆ.ಯು. ರಂಜಿತ್ ಸ್ವಾಗತಿಸಿ ನಿರೂಪಿಸಿದರು. ನೂತನ ಹೋಬಳಿ ಗೌರವ ಕಾರ್ಯದರ್ಶಿ ನಿಡ್ಯಮಲೆ ಚಲನ್ ವಂದಿಸಿದರು.