*ಗೋಣಿಕೊಪ್ಪ, ಜು. ೨೦: ಕೆದಮುಳ್ಳೂರು ಗ್ರಾಮ ಪಂಚಾಯಿತಿ ವ್ಯಾಪ್ತಿಯ ಸಂಜೀವಿನಿ ಒಕ್ಕೂಟದ ನೂತನ ಕಚೇರಿ ಕಟ್ಟಡ ಕಾಮಗಾರಿ ಪ್ರಾರಂಭಕ್ಕೆ ಗ್ರಾಮ ಪಂಚಾಯಿತಿ ಅಧ್ಯಕ್ಷೆ ನಡಿಕೇರಿಯಂಡ ಶೀಲಾ ಭೂಮಿಪೂಜೆ ನೆರವೇರಿಸಿದರು. ಪಂಚಾಯಿತಿ ವ್ಯಾಪ್ತಿಯ ತೆರೆಮೆಮೊಟ್ಟೆ ಗ್ರಾಮದ ಜಾಗದಲ್ಲಿ ರೂ. ೧೭ ಲಕ್ಷದ ವೆಚ್ಚದಲ್ಲಿ ಸುಸಜ್ಜಿತ ಸಭಾಂಗಣ, ಕಚೇರಿ ನಿರ್ಮಾಣ ನಡೆಯಲಿದೆ. ಉದ್ಯೋಗ ಖಾತ್ರಿ ಯೋಜನೆಯ ಅನುದಾನದ ಬಳಕೆಯೊಂದಿಗೆ ಕಾಮಗಾರಿ ಪ್ರಾರಂಭಿಸಲಾಗುತ್ತಿದೆ ಎಂದು ಅಧ್ಯಕ್ಷರು ಈ ಸಂದರ್ಭ ಮಾಹಿತಿ ನೀಡಿದರು. ಉಪಾಧ್ಯಕ್ಷೆ ಮೀನಾಕ್ಷಿ, ಸದಸ್ಯರುಗಳಾದ ಮಾಳೇಟಿರ ಪ್ರಶಾಂತ್ ಉತ್ತಪ್ಪ, ಮಿತಲ್‌ತಂಡ ಇಸ್ಮಾಯಿಲ್, ವಿಮಲ, ಪವಿತ್ರ, ಜಯಂತಿ, ತಾಲೂಕು ವಲಯ ಮೇಲ್ವಿಚಾರಕ ಸೋಮಶೇಖರ್, ಸ್ಥಳೀಯ ಸಮೂಹ ಸಂಪನ್ಮೂಲ ವ್ಯಕ್ತಿ ಶೈನಿ ಕೆ.ಆರ್, ಎಂ.ಎA. ರೇವತಿ, ಪ್ರಧಾನ ಪುಸ್ತಕ ಬರಹಗಾರ ಕೆ.ಜೆ. ಮುತ್ತಮ್ಮ, ಪಂಚಾಯಿತಿ ಅಭಿವೃದ್ಧಿ ಅಧಿಕಾರಿ ಪ್ರಮೋದ್, ಕಾರ್ಯದರ್ಶಿ ಸತೀಶ್, ಸಂಜಿವಿನಿ ಒಕ್ಕೂಟದ ಪದಾಧಿಕಾರಿಗಳು, ಸದಸ್ಯರು ಇದ್ದರು.