(ವಿಶೇಷ ವರದಿ : ಹೆಚ್.ಕೆ. ಜಗದೀಶ್) ಗೋಣಿಕೊಪ್ಪಲು, ಜು. ೨೦ : ಕೊಡಗಿನಲ್ಲಿ ಇತ್ತೀಚೆಗೆ ಸುರಿದ ಮಳೆಯಿಂದಾಗಿ ಜಿಲ್ಲಾದ್ಯಂತ ಮರಗಳು ವಿದ್ಯುತ್ ತಂತಿಯ ಮೇಲೆ ಉರುಳಿದ ಪರಿಣಾಮ ವಿದ್ಯುತ್ ಕಂಬಗಳು, ಟ್ರಾನ್ಸ್ಫಾರ್ಮರ್‌ಗಳು, ವಿದ್ಯುತ್ ತಂತಿಗಳು ಸೇರಿದಂತೆ ಇನ್ನಿತರ ವಿದ್ಯುತ್ ಉಪಕರಣಗಳು (ವಿಶೇಷ ವರದಿ : ಹೆಚ್.ಕೆ. ಜಗದೀಶ್)

ಗೋಣಿಕೊಪ್ಪಲು, ಜು. ೨೦ : ಕೊಡಗಿನಲ್ಲಿ ಇತ್ತೀಚೆಗೆ ಸುರಿದ ಮಳೆಯಿಂದಾಗಿ ಜಿಲ್ಲಾದ್ಯಂತ ಮರಗಳು ವಿದ್ಯುತ್ ತಂತಿಯ ಮೇಲೆ ಉರುಳಿದ ಪರಿಣಾಮ ವಿದ್ಯುತ್ ಕಂಬಗಳು, ಟ್ರಾನ್ಸ್ಫಾರ್ಮರ್‌ಗಳು, ವಿದ್ಯುತ್ ತಂತಿಗಳು ಸೇರಿದಂತೆ ಇನ್ನಿತರ ವಿದ್ಯುತ್ ಉಪಕರಣಗಳು ನಡೆಯುತ್ತಿದೆ.

ವೀರಾಜಪೇಟೆ ಉಪ ವಿಭಾಗದಲ್ಲಿ ೩೩೭ ಕಂಬಗಳು ಹಾಳಾಗಿದ್ದು, ೨೯೭ ಕಂಬಗಳನ್ನು ಸರಿಪಡಿಸಲಾಗಿದೆ, ೪೦ ಕಂಬಗಳ ಕೆಲಸ ನಡೆಯುತ್ತಿದೆ. ಕುಶಾಲನಗರ ಉಪವಿಭಾಗದಲ್ಲಿ ೨೨೮ ವಿದ್ಯುತ್ ಕಂಬಗಳು ಹಾಳಾಗಿದ್ದು, ೨೧೫ ಕಂಬಗಳನ್ನು ಬದಲಾಯಿಸಲಾಗಿದೆ. ೧೩ ಕಂಬಗಳನ್ನು ಇನ್ನಷ್ಟೇ ಅಳವಡಿಸಬೇಕಿದೆ. ಸೋಮವಾರಪೇಟೆ ಉಪವಿಭಾಗದಲ್ಲಿ ೨೧೨ ವಿದ್ಯುತ್ ಕಂಬಗಳು ಹಾನಿಗೊಳಗಾಗಿದ್ದು, ೧೭೨ ಕಂಬಗಳನ್ನು ಬದಲಾಯಿಸಿದ್ದು, ೪೦ ಕಂಬಗಳನ್ನು ಬದಲಾಯಿಸುವ ಪ್ರಕ್ರಿಯೆ ಚಾಲನೆಯಲ್ಲಿದೆ. ಒಟ್ಟಾಗಿ ೧೫೮೯ ವಿದ್ಯುತ್ ಕಂಬಗಳು ಹಾಳಾಗಿದ್ದು, ೧೪೪೭ ವಿದ್ಯುತ್ ಕಂಬಗಳನ್ನು ಈಗಾಗಲೇ ಬದಲಾಯಿಸಲಾಗಿದೆ. ಉಳಿದ ೧೪೨ ವಿದ್ಯುತ್ ಕಂಬಗಳನ್ನು ಬದಲಾವಣೆ ಕಾರ್ಯ ಭರದಿಂದ ಸಾಗಿದೆ. ಮಡಿಕೇರಿ ಉಪ ವಿಭಾಗದಲ್ಲಿ ೩೫, ಗೋಣಿಕೊಪ್ಪ ಉಪವಿಭಾಗದಲ್ಲಿ ೪೪, ವೀರಾಜಪೇಟೆ ಉಪವಿಭಾಗದಲ್ಲಿ ೯, ಕುಶಾಲನಗರ ಉಪವಿಭಾಗದಲ್ಲಿ ೨೩ ಹಾಗೂ ಸೋಮವಾರಪೇಟೆ ಉಪವಿಭಾಗದಲ್ಲಿ ೨೬ ಟ್ರಾನ್ಸ್ಫಾರ್ಮರ್‌ಗಳನ್ನು ಬದಲಾವಣೆ ಮಾಡಲಾಗಿದೆ. ಗ್ರಾಮೀಣ ಪ್ರದೇಶದಲ್ಲಿ ಹಲವು ದಿನಗಳಿಂದ ನಿಲುಗಡೆಯಾಗಿದ್ದ ವಿದ್ಯುತ್ ಪೂರೈಕೆಯನ್ನು ಇದೀಗ ಸರಿಪಡಿಸಲಾಗಿದೆ. ಈ ಬಾರಿ ಸುರಿದ ಮಳೆ, ಗಾಳಿಯಿಂದಾಗಿ ಸೆಸ್ಕ್ಗೆ ರೂ. ೩ ಕೋಟಿ ನಷ್ಟ ಸಂಭವಿಸಿರುವುದಾಗಿ ಸೆಸ್ಕ್ ಜಿಲ್ಲಾ ಇಇ ಅನಿತಬಾಯಿ ಎಸ್. ಮಾಹಿತಿ ಒದಗಿಸಿದರು.

ಕಳೆದ ಮೂರು ವರ್ಷಗಳ ಹಿಂದೆ ಪ್ರಕೃತಿ ವಿಕೋಪದಿಂದ ಅನುಭವಿಸಿದ ಕಷ್ಟನಷ್ಟಗಳ ಹಿನ್ನೆಲೆಯಲ್ಲಿ ಕೊಡಗು ಜಿಲ್ಲೆಯ ಸೆಸ್ಕ್ ಇಲಾಖೆಯು ಮಳೆಗಾಲಕ್ಕೂ ಮುನ್ನ ಮುಂಜಾಗ್ರತಾ ಕ್ರಮಗಳನ್ನು ಕೈಗೊಂಡಿದ್ದು, ಜಿಲ್ಲೆಯ ಉದ್ದಗಲಕ್ಕೂ ವಿದ್ಯುತ್ ತಂತಿ ಹಾದು ಹೋಗುವ ಮಾರ್ಗದಲ್ಲಿ ವಿದ್ಯುತ್ ತಂತಿಗೆ ಅಡಚಣೆಯಾಗುವ

(ಮೊದಲ ಪುಟದಿಂದ) ಮರದ ಕೊಂಬೆಗಳನ್ನು ತೆರವುಗೊಳಿಸಿತ್ತು. ಈ ನಿಟ್ಟಿನಲ್ಲಿ ವಾರದ ಕೆಲವು ದಿನಗಳಲ್ಲಿ ವಿದ್ಯುತ್ತನ್ನು ಸಂಪೂರ್ಣ ನಿಲುಗಡೆಗೊಳಿಸಿ ಸೆಸ್ಕ್ ಸಿಬ್ಬಂದಿಗಳು ಮುಂಜಾನೆಯಿAದಲೇ ತಮ್ಮ ಕೆಲಸಗಳನ್ನು ಆರಂಭಿಸಿದ್ದರು. ವಿಪರೀತವಾಗಿ ಬೀಸುವ ಗಾಳಿಯಿಂದ ಮರದ ಕೊಂಬೆಗಳು ಹಾಗೂ ಕೆಲವು ಮರಗಳು ವಿದ್ಯುತ್ ತಂತಿಯ ಮೇಲೆ ಬೀಳುತ್ತಿರುವುದರಿಂದ ಸಮಸ್ಯೆ ಹೆಚ್ಚಾಗಿರುವುದನ್ನು ಮನಗಂಡು ಇಂತಹ ಸ್ಥಳದಲ್ಲಿ ಮರಗಳನ್ನು ತೆರವುಗೊಳಿಸುವ ಕಾರ್ಯ ಕೂಡ ನಡೆಯುತ್ತಿದೆ.

ಕಾರ್ಯನಿರ್ವಾಹಕ ಇಂಜಿನಿಯರ್ ಜಿಲ್ಲೆಗೆ ೧೪ ಪಿಕಪ್ ವಾಹನಗಳ ಜೋಡಣೆ, ತುರ್ತು ಕೆಲಸಕ್ಕಾಗಿ ಗ್ಯಾಂಗ್ ಮನ್‌ಗಳನ್ನು ಇಲಾಖೆಯು ನೇಮಿಸಿಕೊಂಡಿತ್ತು. ಮಳೆಯ ಹಿನ್ನೆಲೆಯಲ್ಲಿ ಜಿಲ್ಲೆಯಲ್ಲಿ ಸಾವಿರಕ್ಕೂ ಅಧಿಕ ವಿದ್ಯುತ್ ಕಂಬಗಳನ್ನು ಶೇಖರಣೆ ಮಾಡಲಾಗಿತ್ತು. ೭೦ ಟ್ರಾನ್ಸ್ಫಾರ್ಮರ್‌ಗಳನ್ನು ಹಾಗೂ ೩೫ ಕಿ.ಮೀ. ವಿದ್ಯುತ್ ತಂತಿಯನ್ನು ದಾಸ್ತಾನು ಇಟ್ಟುಕೊಳ್ಳಲಾಗಿತ್ತು. ಕೊಡಗು ಜಿಲ್ಲಾ ಸೆಸ್ಕ್ ಕಚೇರಿಗೆ ಹಲವು ವರ್ಷಗಳಿಂದ ಖಾಯಂ ಇಇ ಇಲ್ಲದೆ ಮೈಸೂರಿನಿಂದ ಪ್ರಭಾರ ಅಧಿಕಾರಿಗಳಾಗಿ ಆಗಮಿಸಿ ಕೊಡಗು ಜಿಲ್ಲೆಯ ವಿದ್ಯುತ್ ಸಮಸ್ಯೆಗಳ ಉಸ್ತುವಾರಿ ನಿಭಾಯಿಸುತ್ತಿದ್ದರು. ಇದೀಗ ಕಳೆದ ಒಂದು ವಾರದ ಹಿಂದೆ ಮೈಸೂರಿನಲ್ಲಿ ಕೆಲಸ ನಿರ್ವಹಿಸುತ್ತಿದ್ದ ಇಇ ಅನಿತಬಾಯಿ ಅವರು ಜಿಲ್ಲೆಗೆ ಖಾಯಂ ಅಧಿಕಾರಿಯಾಗಿ ನೇಮಕಗೊಂಡಿದ್ದಾರೆ.