ವೀರಾಜಪೇಟೆ, ಜು. ೨೦: ವೀರಾಜಪೇಟೆ ಪುರಸಭೆಯ ಸ್ಥಾಯಿ ಸಮಿತಿ ಚುನಾವಣೆ ವಿಳಂಬ ಮಾಡಿರುವ ಸಂಬAಧ ರಾಜ್ಯ ಉಚ್ಛ ನ್ಯಾಯಾಲಯ ಜಿಲ್ಲಾಧಿಕಾರಿ ಹಾಗೂ ಮುಖ್ಯಾಧಿಕಾರಿಗೆ ನೋಟೀಸ್ ಜಾರಿ ಮಾಡಿದ್ದು, ಮುಂದಿನ ವಿಚಾರಣೆಗೆ ಆಗಮಿಸುವಂತೆ ಸೂಚಿಸಿದೆ ಎಂದು ತಿಳಿದು ಬಂದಿದೆ.
ಸ್ಥಾಯಿ ಸಮಿತಿ ಚುನಾವಣೆ ನಡೆಸಲು ಜೂನ್ ೯ ರಂದು ವೀರಾಜಪೇಟೆ ಪುರಸಭೆಯ ಸಾಮಾನ್ಯ ಸಭೆಯನ್ನು ಕರೆಯಲಾಗಿತ್ತು. ಆದರೆ ಅಂದಿನ ಸಭೆಗೆ ಪುರಸಭೆಗೆ ಅಧ್ಯಕ್ಷೆ ಸೇರಿದಂರೆ ಆಡಳಿತ ಪಕ್ಷದ ಸದಸ್ಯರು ಗೈರಾದ ಹಿನ್ನೆಲೆ ಸಭೆ ಮುಂದೂಡಲಾಗಿತ್ತು. ಅದಾದ ಬಳಿಕ ನಡೆದ ೨ ಸಭೆಗಳಲ್ಲಿಯೂ ಆಯ್ಕೆ ಪ್ರಕ್ರಿಯೆ ನಡೆಸದ ಹಿನ್ನೆಲೆ ಆಕ್ಷೇಪ ವ್ಯಕ್ತಪಡಿಸಿ ಪುರಸಭೆಯ ವಿಪಕ್ಷ ಸದಸ್ಯರುಗಳು ಉಚ್ಛನ್ಯಾಯಾಲಯದಲ್ಲಿ ಮಾಜಿ ಹೆಚ್ಚುವರಿ ಅಡ್ವೋಕೇಟ್ ಜನರಲ್ ಎ.ಎಸ್. ಪೊನ್ನಣ್ಣ ಅವರ ಮೂಲಕ ರಿಟ್ ಅರ್ಜಿ ಸಲ್ಲಿಸಿದ್ದರು.
ಈ ಅರ್ಜಿಯೂ ತಾ. ೧೯ ರಂದು ವಿಚಾರಣೆ ನಡೆದು, ಪ್ರತಿವಾದಿಗಳಾದ ಕೊಡಗು ಜಿಲ್ಲಾಧಿಕಾರಿ ಹಾಗೂ ಪುರಸಭೆಯ ಮುಖ್ಯಾಧಿಕಾರಿ ಮತ್ತು ಇತರರಿಗೆ ತಾ. ೨೬ಕ್ಕೆ ವಿಚಾರಣೆಗೆ ಹಾಜರಾಗಲು ಉಚ್ಛ ನ್ಯಾಯಾಲಯ ನೋಟೀಸ್ ಜಾರಿ ಮಾಡಿದೆ.