ಪೊನ್ನAಪೇಟೆ, ಜು. ೨೦: ಪೊನ್ನಂಪೇಟೆ ಸಮೀಪದ ಹಳ್ಳಿಗಟ್ಟು ಗ್ರಾಮದ ಭದ್ರಕಾಳಿ ಅಯ್ಯಪ್ಪ ದೇವಸ್ಥಾನದ ಹುಂಡಿಯನ್ನು ಒಡೆದು ಕಳವು ಮಾಡಲು ಯತ್ನಿಸಿದ್ದ ಆರೋಪಿಯನ್ನು ಪೊನ್ನಂಪೇಟೆ ಪೊಲೀಸರು ಬಂಧಿಸಿದ್ದಾರೆ. ಶಿವು ಅಲಿಯಾಸ್ ಶಂಕರ ಬಂಧಿತ ಆರೋಪಿ.

ಆರೋಪಿ ಶಿವು ತಾ.೧೮ ರಂದು ಸಂಜೆ ೫.೩೦ ರ ಸಮಯದಲ್ಲಿ ದೇವಸ್ಥಾನದ ಹುಂಡಿಯನ್ನು ಒಡೆಯಲು ಯತ್ನಿಸಿದ. ಈ ಬಗ್ಗೆ ಪೊನ್ನಂಪೇಟೆ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿತ್ತು. ದೇವಸ್ಥಾನದಲ್ಲಿ ಅಳವಡಿಸಿದ್ದ ಸಿಸಿ ಕ್ಯಾಮರಾದಲ್ಲಿ ಸೆರೆಯಾಗಿದ್ದ ದೃಶ್ಯವನ್ನು ಆಧರಿಸಿ ಪೊಲೀಸರು ಆರೋಪಿಯನ್ನು ಬಂಧಿಸಿದ್ದಾರೆ. ವೃತ್ತನಿರೀಕ್ಷಕ ಗೋವಿಂದರಾಜು ಮಾರ್ಗದರ್ಶನದಲ್ಲಿ ನಡೆದ ಕಾರ್ಯಾಚರಣೆಯಲ್ಲಿ ರಾಣಾಧಿಕಾರಿ ಡಿ.ಕುಮಾರ್, ಸಿಬ್ಬಂದಿಗಳಾದ ಪ್ರಮೋದ್, ಮನು, ಮಹದೇಶ್ವರ ಸ್ವಾಮಿ, ದಯಾನಂದ ಮತ್ತು ಪ್ರಸನ್ನ ಭಾಗವಹಿಸಿದ್ದರು.