ಮಡಿಕೇರಿ, ಜು. ೨೦: ಯಶಸ್ವಿಯಾಗಿ ಹದಿನೇಳು ವರುಷ ಕಳೆದಿರುವ ಮಡಿಕೇರಿ ಮಿಸ್ಟಿಹಿಲ್ಸ್ ಎಂದಿನAತೆ ಈ ಬಾರಿಯೂ ಜಿಲ್ಲಾ ಸಮಿತಿಯಲ್ಲಿ ಹಲವು ಸ್ಥಾನ ಗಳಿಸಿದೆ ಎಂದು ಸ್ಥಾಪಕ ಅಧ್ಯಕ್ಷ ಬಿ.ಜಿ. ಅನಂತಶಯನ ತಿಳಿಸಿದ್ದಾರೆ.
ಪ್ರತಿಷ್ಠಿತ ಕ್ರೀಡಾ ಸಮಿತಿಯ ಅಧ್ಯಕ್ಷರಾಗಿ ಬಿ.ಕೆ. ರವೀಂದ್ರ ರೈ, ಸಿವಿಕ್ ರೆಸ್ಪಾನ್ಸಿಬಿಲಿಟಿ ಅಧ್ಯಕ್ಷರಾಗಿ ಕೆ.ಕೆ. ವಿಶ್ವನಾಥ್, ಪಬ್ಲಿಕ್ ಇಮೇಜ್ ಸಮಿತಿ ಅಧ್ಯಕ್ಷರಾಗಿ ಅನಿಲ್ ಎಚ್.ಟಿ. ಆಯ್ಕೆಯಾಗಿದ್ದಾರೆ. ನೂತನ ಸದಸ್ಯರುಗಳ ಪ್ರೇರೇಪಣಾ ಸಮಿತಿ ಉಪಾಧ್ಯಕ್ಷರಾಗಿ ಬಿ.ಜಿ. ಅನಂತಶಯನ, ಫೌಂಡೇಶನ್ ಸಮಿತಿ ಉಪಾಧ್ಯಕ್ಷರಾಗಿ ಮೋಹನ್ ಪ್ರಭು, ರೋಟರಾಕ್ಟ್ ಸದಸ್ಯರ ಪರಿವರ್ತನಾ ಸಮಿತಿ ಉಪಾಧ್ಯಕ್ಷರಾಗಿ ಎ.ಕೆ. ವಿನೋದ್, ಅಡಲ್ಟ್ ಎಜುಕೇಶನ್ ಉಪಾಧ್ಯಕ್ಷರಾಗಿ ತಿಲಕ್, ಕಾನ್ಫರೆನ್ಸ್ ಸಮಿತಿ ಪ್ರಾಂತೀಯ ಅಧ್ಯಕ್ಷರಾಗಿ ಬಿ.ಆರ್. ರವಿಶಂಕರ್, ಮಹಿಳಾ ಸದಸ್ಯರ ಸಮಿತಿ ಉಪಾಧ್ಯಕ್ಷೆಯಾಗಿ ಅನಿತಾ ಪೂವಯ್ಯ ಮತ್ತು ಮಹಿಳಾ ಸಬಲೀಕರಣ ಉಪಾಧ್ಯಕ್ಷೆಯಾಗಿ ಪ್ರತಿಭಾ ರೈ ಹಾಗೂ ಸದಸ್ಯತ್ವ ವಿಸ್ತರಣಾ ಸಮಿತಿ ಉಪಾಧ್ಯಕ್ಷರಾಗಿ ಪಿ.ಎಂ. ಸಂದೀಪ್, ದೃಷ್ಟಿದೋಷ ತಡೆ ಸಮಿತಿ ಉಪಾಧ್ಯಕ್ಷರಾಗಿ ವೈದ್ಯ ಸಿ.ಆರ್. ಪ್ರಶಾಂತ್ ಆಯ್ಕೆಯಾಗಿದ್ದಾರೆ.
ಅರವತ್ತೆಂಟು ಸದಸ್ಯರನ್ನು ಹೊಂದಿರುವ ಮಿಸ್ಟಿಹಿಲ್ಸ್, ಅನಿತಾ ಪೂವಯ್ಯ ಅಧ್ಯಕ್ಷೆ ಹಾಗೂ ರಾಜೇಶ್ ಕಾರ್ಯದರ್ಶಿ ಆಗಿದ್ದ ಸಂದರ್ಭ ಐದು ಜಿಲ್ಲಾ ಪ್ರಸಸ್ತಿ ಗಳಿಸಿದೆ. ಇದೀಗ ಪ್ರಸಾದ್ ಗೌಡ ಮತ್ತು ಪ್ರಮೋದ್ ರೈ ಅಧ್ಯಕ್ಷ ಹಾಗೂ ಕಾರ್ಯ ದರ್ಶಿಯಾಗಿ ಮುಂದುವರೆದಿದ್ದಾರೆ.
ಅಸಿಸ್ಟೆAಟ್ ಗವರ್ನರ್ ಆಗಿ ರತನ್
ರೋಟರಿ ವಲಯ ಆರರ ನಿಗದಿತ ಕ್ಲಬ್‌ಗಳಿಗೆ ಅಸಿಸ್ಟೆಂಟ್ ಗವರ್ನರ್ ಆಗಿ ರತನ್ ತಮ್ಮಯ್ಯ ನೇಮಿಸಲ್ಪಟ್ಟಿದ್ದಾರೆ.
ರತನ್ ತಮ್ಮಯ್ಯ ಅವರು ಕಾಸ್ಮೋಪಾಲಿಟನ್ ಕ್ಲಬ್ ಹಾಗೂ ರೋಟರಿ ಮಡಿಕೇರಿಯಲ್ಲಿ ಅಧ್ಯಕ್ಷರಾಗಿ ಸೇವೆ ಸಲ್ಲಿಸಿದ್ದರು. ವಕೀಲರೂ ಆಗಿರುವ ಅವರು, ವಕೀಲರ ಸಂಘದ ಉಪಾಧ್ಯಕ್ಷರೂ ಆಗಿದ್ದಾರೆ.