ಮಡಿಕೇರಿ, ಜು. ೨೦ : ಕೊಡಗಿನ ಗಡಿಯಲ್ಲಿರುವ ಪುಷ್ಪಗಿರಿ ವನ್ಯಧಾಮದ ಗಡಿಯ ಕೂಜಿಮಲೆಯ ಹರಳುಕಲ್ಲು ನಿಕ್ಷೇಪ ಜಾಗಕ್ಕೆ ಕೊಡಗು ಜಿಲ್ಲೆಯ ಅರಣ್ಯ ಸಂರಕ್ಷಣಾಧಿಕಾರಿ ಬಿ.ಎನ್.ಎನ್. ಮೂರ್ತಿ ಮತ್ತು ಮಡಿಕೇರಿ ವನ್ಯಜೀವಿ ವಿಭಾಗದ ಉಪ ಅರಣ್ಯ ಸಂರಕ್ಷಣಾಧಿಕಾರಿ ಶಿವರಾಮ್ ಬಾಬು ದಿಢೀರ್ ಭೇಟಿ ನೀಡಿ ಪರಿಶೀಲನೆ ನಡೆಸಿದರು. ಕ್ಯಾಂಪ್ ಸುತ್ತಲೂ ಇರುವ ಹಳೆಯ ಹರಳುಕಲ್ಲು ನಿಕ್ಷೇಪ ಜಾಗಗಳನ್ನು ಪರಿಶೀಲಿಸಿ ಅಲ್ಲಿ ಇರುವ ಕ್ಯಾಮರಾ ಟ್ರಾಪ್ ಸುಸ್ಥಿತಿಯಲ್ಲಿ ಇವೆಯೇ ಎಂದು ಖಾತರಿ ಪಡಿಸಿಕೊಂಡರು.
ನಂತರ ವನ್ಯಧಾಮ ಒಳಗೆ ಸುಮಾರು ೧೦ ಕಿಮೀ ದೂರದವರೆಗೆ ಸಿಬ್ಬಂದಿಗಳೊAದಿಗೆ ಕೂಂಬಿAಗ್ ಕಾರ್ಯ ಮಾಡಲಾಯಿತು. ಮಳೆ ಬರುತ್ತಿದ್ದರೂ ಕೂಂಬಿAಗ್ ಮುಂದುವರಿಸಿದ ಅಧಿಕಾರಿಗಳು ಕೂಜಿಮಲೆಯಿಂದ ಸುಟ್ಟತ್ತ್ ಮಲೆವರೆಗೂ ಹೋಗಿ ಪರಿಶೀಲನೆ ಮಾಡಿದರು. ನಂತರ ಕೂಜಿಮಲೆ ಕ್ಯಾಂಪ್‌ಗೆ ಹಿಂತಿರುಗಿ ಬಂದು ಯಾವುದೇ ಕಾರಣಕ್ಕೂ ಅಕ್ರಮ ಗಣಿಗಾರಿಕೆ ನಡೆಸಲು ಅವಕಾಶ ನೀಡಬಾರದು; ಯಾವುದೇ ತೊಂದರೆ ಆದರೆ ತಕ್ಷಣ ಮಾಹಿತಿ ನೀಡಬೇಕು. ಹೆದರುವ ಅವಶ್ಯಕತೆ ಇಲ್ಲ. ಸದಾ ನಿಮ್ಮ ನೆರವಿಗೆ ಇರುವದಾಗಿ ಸಿಬ್ಬಂದಿಗಳಿಗೆ ಧೈರ್ಯ ತುಂಬಿದರು.
ನAತರ ಸ್ಥಳದಲ್ಲಿ ಸಿಸಿ ಟಿವಿ ಕ್ಯಾಮರಾ ಅಳವಡಿಕೆ ಮಾಡಲು ತಕ್ಷಣ ಕ್ರಮ ವಹಿಸಬೇಕು. ಅದಕ್ಕಾಗಿ ಸೂಕ್ತ ಅನುದಾನ ಬಿಡುಗಡೆ ಮಾಡಲಾಗುವುದು ಕ್ಯಾಂಪ್‌ಗೆ ಹೆಚ್ಚುವರಿ ನೂತನ ಬಂದೂಕು ವಿತರಿಸುವ ಭರವಸೆ ನೀಡಿದರು. ಸಿಬ್ಬಂದಿಗಳು ಪ್ರತಿದಿನ ಪಾಳಿಯಲ್ಲಿ ಹಗಲು - ರಾತ್ರಿ ಗಸ್ತು ತಿರುಗುವಂತೆ ಸೂಚಿಸಿದರು. ಸಹಾಯಕ ಅರಣ್ಯ ಸಂರಕ್ಷಣಾಧಿಕಾರಿ ಶ್ರೀನಿವಾಸ ನಾಯ್ಕ ವಲಯ ಅರಣ್ಯಾಧಿಕಾರಿ ವಿಮಲ್ ಬಾಬು ಉಪವಲಯ ಅರಣ್ಯಾಧಿಕಾರಿ ಗಣೇಶ ಅರಣ್ಯ ರಕ್ಷಕರು ಮತ್ತು ಕ್ಯಾಂಪಿನ ಸಿಬ್ಬಂದಿಗಳು ಕೂಂಬಿAಗ್‌ನಲ್ಲಿ ಭಾಗವಹಿಸಿದ್ದರು.
? ಕುಡೆಕಲ್ ಸಂತೋಷ್