ಮಡಿಕೇರಿ, ಜು. ೨೦: ರಾಜ್ಯ ಲೋಕೋಪಯೋಗಿ ಇಲಾಖೆಯು ಜೂನ್ ೩೦ ರಂದು ರಾಜ್ಯ ಹೆದ್ದಾರಿಗಳ ಗಡಿಯಿಂದ ಕಟ್ಟಡ ನಿರ್ಮಿಸುವ ಸಂದರ್ಭ ಬಿಡಬೇಕಾದ ಅಂತರಕ್ಕೆ ಸಂಬAಧಪಟ್ಟAತೆ ಸುತ್ತೋಲೆಯೊಂದನ್ನು ಹೊರಡಿಸಿದೆ. ಲೋಕೋಪಯೋಗಿ ಇಲಾಖೆಯ ಉಪ ಕಾರ್ಯದರ್ಶಿ ಕೆ.ಸಿ. ಮೀನ ಕುಮಾರಿ ಅವರು ಹೊರಡಿಸಿರುವ ಆದೇಶದ ಪ್ರಕಾರ ರಾಜ್ಯ ಹೆದ್ದಾರಿಯ ಗಡಿಯಿಂದ ಮಹಾನಗರಪಾಲಿಕೆ, ನಗರಸಭೆ, ಪುರಸಭೆ ಮತ್ತು ಪಂಚಾಯಿತಿ ವ್ಯಾಪ್ತಿಯಲ್ಲಿ ೬ ಮೀಟರ್ಗಳಷ್ಟು ಮತ್ತು ಮಹಾನಗರಪಾಲಿಕೆ ವ್ಯಾಪ್ತಿಯ ಹೊರಗೆ ೧೫ ಕಿಲೋಮೀಟರ್ ನಂತರ ೧೨ ಮೀಟರ್ಗಳಷ್ಟು ಸ್ಥಳವನ್ನು ಬಿಟ್ಟು ಕಟ್ಟಡ ನಿರ್ಮಾಣ ಮಾಡಬೇಕೆಂದು ಸ್ಪಷ್ಟಪಡಿಸಿದ್ದಾರೆ.
ಈ ಕುರಿತು ರಾಜ್ಯ ಅಬಕಾರಿ ಇಲಾಖೆಯು ಸ್ಪಷ್ಟನೆ ಕೋರಿ ಲೋಕೋಪಯೋಗಿ ಇಲಾಖೆಗೆ ಪತ್ರ ಬರೆದಿತ್ತು. ಪತ್ರದಲ್ಲಿ ರಾಷ್ಟಿçÃಯ ಹೆದ್ದಾರಿ ಪ್ರಾಧಿಕಾರ ಮತ್ತು ಲೋಕೋಪಯೋಗಿ ಇಲಾಖೆಯ ಕಟ್ಟಡ ರೇಖೆಗಳಲ್ಲಿ ವ್ಯತ್ಯಾಸವಿದ್ದು, ಇದರಿಂದಾಗಿ ರಾಜ್ಯ ಹೆದ್ದಾರಿಗಳ ಪಕ್ಕದಲ್ಲಿ ಸಿಎಲ್ ೭ ಮದ್ಯ ಮಾರಾಟ ಸ್ಥಳಗಳಿಗೆ ಪರವಾನಗಿ ನೀಡುವಾಗ ಗೊಂದಲವಾಗುತ್ತಿದೆ ಎಂದು ಇಲಾಖೆ ತಿಳಿಸಿತ್ತು. ಇದಕ್ಕೆ ಉತ್ತರವಾಗಿ ಕಟ್ಟಡ ರೇಖೆಯನ್ನು ಪರಿಷ್ಕರಿಸಿ ಆದೇಶ ಹೊರಡಿಸಲಾಗಿದೆ.
ಲೋಕೋಪಯೋಗಿ ಇಲಾಖೆಯ ೯-೧೦-೧೯೯೮ ಮತ್ತು ೧೬-೧೧-೨೦೦೨ ರಂದು ಹೊರಡಿಸಲಾದ ಸುತ್ತೋಲೆಯ ಪ್ರಕಾರ ರಾಷ್ಟಿçÃಯ ಮತ್ತು ರಾಜ್ಯ ಹೆದ್ದಾರಿಗಳ ಮಧ್ಯ ಭಾಗದಿಂದ ೪೦ ಮೀಟರ್ಗಳವರೆಗೆ ಕಟ್ಟಡ ನಿರ್ಮಾಣಕ್ಕೆ ನಿರಾಕ್ಷೇಪಣಾ ಪತ್ರ ನೀಡಬಾರದು. ಈ ೪೦ ಮೀಟರ್ ಅಂತರವನ್ನು ರಾಜ್ಯ ಹೈಕೋರ್ಟ್ ನೀಡಿದ್ದ ತೀರ್ಪಿನ ಅನ್ವಯ ನಿಗದಿಮಾಡಲಾಗಿತ್ತು. ಅಲ್ಲದೆ ಇಷ್ಟು ಅಂತರವನ್ನು ಬಿಟ್ಟು ಕೂಡ ನಗರಪಾಲಿಕೆ, ಪುರಸಭೆಯ ವ್ಯಾಪ್ತಿಯಲ್ಲಿ ಮತ್ತೆ ೧೨ ಮೀಟರ್ ಸ್ಥಳವನ್ನು ಬಿಟ್ಟು ಕಟ್ಟಡವನ್ನು ನಿರ್ಮಿಸಬೇಕಿತ್ತು. ನೂತನ ಸುತ್ತೋಲೆಯಿಂದ ಈ ಅಂತರ ೧೨ ಮೀಟರ್ಗಳಿಂದ ೬ ಮೀಟರ್ ಗಳಿಗೆ ಇಳಿಕೆಯಾಗಿದೆ. ಆದರೆ ಮಹಾನಗರಪಾಲಿಕೆ ವ್ಯಾಪ್ತಿಯಲ್ಲಿ ಈ ಅಂತರ ೧೫ ಕಿಲೋಮೀಟರ್ಗಳವರೆಗೆ ೧೫ ಮೀಟರ್ಗಳವರೆಗೆ ಮುಂದುವರಿಕೆಯಾಗಿದೆ.
ಈ ಕುರಿತು ಪ್ರತಿಕ್ರಿಯಿಸಿದ ಮಡಿಕೇರಿ ಲೋಕೋಪಯೋಗಿ ಇಲಾಖೆಯ ಹಿರಿಯ ಇಂಜಿನಿಯರ್ ಒಬ್ಬರು ಸದ್ಯ ಕೊಡಗಿನಲ್ಲಿ ಹೆದ್ದಾರಿಗಳ ಮಧ್ಯ ಭಾಗದಿಂದ ೬೦ ಅಡಿಗಳಷ್ಟು ಅಂತರ ಬಿಟ್ಟು ಕಟ್ಟಡ ನಿರ್ಮಾಣಕ್ಕೆ ಅನುವು ಮಾಡಿಕೊಡಲಾಗುತ್ತಿದೆ ಎಂದು ಹೇಳಿದರು. ಬಹುತೇಕ ಹೆದ್ದಾರಿಗಳ ಅಕ್ಕ ಪಕ್ಕದ ಜಾಗವು ಖಾಸಗಿಯವರದ್ದಾಗಿದ್ದು, ರಾಜ್ಯ ಸರ್ಕಾರಗಳು ರಸ್ತೆ ಅಗಲೀಕರಣ ಮಾಡುವ ಸಂದರ್ಭದಲ್ಲಿ ಭೂ ಸ್ವಾಧೀನದ ಮೂಲಕ ಭೂಮಿಯನ್ನು ಪಡೆದುಕೊಂಡು ಅದಕ್ಕೆ ಮಾರುಕಟ್ಟೆ ದರದನ್ವಯ ಪರಿಹಾರ ನೀಡಲಾಗುತ್ತದೆ ಎಂದು ಸ್ಪಷ್ಟಪಡಿಸಿದ ಅವರು ಈಗಾಗಲೇ ಬೆಂಗಳೂರು - ಮೈಸೂರು ಎಕ್ಸ್ಪ್ರೆಸ್ ಹೆದ್ದಾರಿ ನಿರ್ಮಾಣಕ್ಕೆ ಖಾಸಗೀ ಜಾಗಗಳಿಗೆ ಪರಿಹಾರ ನೀಡಿ ಇದೇ ರೀತಿ ಭೂ ಸ್ವಾಧೀನಪಡಿಸಿಕೊಂಡಿರುವುದನ್ನು ಉಲ್ಲೇಖಿಸಿದರು.
ಹೆದ್ದಾರಿಗಳ ಅಗಲವನ್ನು ಹೈ ಕೋರ್ಟ್ ಆದೇಶದ ಮೇರೆಗೆ ನಿಗದಿಪಡಿಸಲಾಗಿದ್ದು, ಸರ್ಕಾರವು ರಸ್ತೆಯನ್ನು ನಿರ್ಮಾಣ ಮಾಡದಿದ್ದರೂ ಮುಂದಿನ ೧೦೦-೨೦೦ ವರ್ಷಗಳ ನಂತರದ ವಾಹನ ದಟ್ಟಣೆ ಹಿನ್ನೆಲೆಯಲ್ಲಿ ೪೦ ಮೀಟರ್ ಗಳಷ್ಟು ಅಂತರದವರೆಗೆ ಕಟ್ಟಡ ನಿರ್ಮಾಣ ಮಾಡಲು ನಿರ್ಬಂಧ ವಿಧಿಸಲಾಗಿದೆ. ಇದರಿಂದಾಗಿ ಹೆದ್ದಾರಿಯ ವಿಸ್ತರಣೆಯ ಸಂದರ್ಭಗಳಲ್ಲಿ ಸರ್ಕಾರವು ನೀಡುವ ಭೂ ಪರಿಹಾರ ಗಣನೀಯವಾಗಿ ಕಡಿಮೆ ಆಗಲಿದೆ ಎಂಬುದು ಸರ್ಕಾರದ ಉದ್ದೇಶವಾಗಿದೆ.
೨೫೦ ಅಡಿ ಅಗಲ ರಸ್ತೆ ದೇಶದಲ್ಲೆ ಎಲ್ಲೂ ಇಲ್ಲ ಆದರೆ ಕಟು ಸತ್ಯ ಏನೆಂದರೆ ದೇಶದ ಎಲ್ಲಿಯೂ ಕೂಡ ರಾಷ್ಟಿçÃಯ ಹೆದ್ದಾರಿಯು ೨೫೦ ಅಡಿ ಅಗಲ ಮತ್ತು ಕಟ್ಟಡ ಗಡಿ ರೇಖೆ ಅಂತರವಾದ ೨೦ ಅಡಿಗಳನ್ನು ಬಿಟ್ಟು ಕಟ್ಟಡ ಕಟ್ಟಲಾಗಿಲ್ಲ. ಆದರೆ ಸರ್ಕಾರದ ಈ ಆದೇಶದಿಂದ ಹೆದ್ದಾರಿಗಳ ಪಕ್ಕದ ನಿವಾಸಿಗಳಿಗೆ ಕಟ್ಟಡ ನಿರ್ಮಿಸಲು ಅನುಮತಿ ನೀಡದೆ ಆಸ್ತಿಯ ಹಕ್ಕನ್ನು ಕಿತ್ತುಕೊಂಡAತೆ ಆಗಿದೆ. ಈ ಆಸ್ತಿಗಳನ್ನು ನೂರಾರು ವರ್ಷಗಳಿಂದ ಸರ್ಕಾರಕ್ಕೆ ತೆರಿಗೆಯನ್ನೂ ಪಾವತಿಸಿ ಅನುಭವಿಸಿಕೊಂಡು ಬರುತಿದ್ದು, ಸರ್ಕಾರದ ಆದೇಶವನ್ನು ಕಟ್ಟುನಿಟ್ಟಾಗಿ ಪಾಲಿಸಿದರೆ ಕೋಟ್ಯಾಂತರ ರೂಪಾಯಿ ಆಸ್ತಿಗಳ ಮಾಲೀಕರು ತಾತ್ಕಾಲಿಕವಾಗಿ ನಿರಾಶ್ರಿತರೇ ಆಗಬೇಕಾಗುತ್ತದೆ.
೨೦೦೧ ರಲ್ಲೇ ಹೆದ್ದಾರಿ ಪಕ್ಕ ಗುರುತು ಲೋಕೋಪಯೋಗಿ ಇಲಾಖೆಯು ೨೦೦೧ನೇ ಇಸವಿಯಲ್ಲಿಯೇ ಕೊಡಗಿನಲ್ಲಿ ಹಾದು ಹೋಗುವ ಹೆದ್ದಾರಿಗಳ ಅಕ್ಕ ಪಕ್ಕದ ಕಟ್ಟಡಗಳ ಮೇಲೆ ಲೋಕೋಪಯೋಗಿ ಇಲಾಖೆಗೆ ಸೇರಿದ ಹೆದ್ದಾರಿಯ ಸರಹದ್ದನ್ನು ಗುರುತು ಮಾಡಲಾಗಿದೆ. ಇಲಾಖೆಯ ರಸ್ತೆ ನಕಾಶೆ ಪ್ರಕಾರ ಈ ಗುರುತು ಮಾಡಲಾಗಿದ್ದು, ಗುರುತು ಮಾಡಲ್ಪಟ್ಟ ಸ್ಥಳದವರೆಗೆ ಹೆದ್ದಾರಿ ಅತಿಕ್ರಮಣವಾಗಿದೆ ಎಂದು ಪರಿಗಣಿಸಲಾಗಿದೆ. ಲೋಕೋಪಯೋಗಿ ಇಲಾಖೆಯು ಸ್ಥಳಿಯ ಸಂಸ್ಥೆಗಳಾದ ನಗರಪಾಲಿಕೆ, ನಗರಸಭೆ, ಪುರಸಭೆ ಮತ್ತು ಪಂಚಾಯ್ತಿಗಳಲ್ಲಿ ಲಭ್ಯವಿರುವ ನಕಾಶೆ ಅಥವಾ ಭೂ ಮಾಲೀಕತ್ವದ ದಾಖಲೆಗಳನ್ನು ಪರಿಗಣಿಸುವುದಿಲ್ಲ. ಏಕೆಂದರೆ ಈ ಹಿಂದೆ ನ್ಯಾಯಾಲಯಗಳಲ್ಲಿ ನಡೆದ ವಿಚಾರಣೆಗಳಲ್ಲಿ ಇಂತಹ ಒತ್ತುವರಿ ಪ್ರಕರಣಗಳಲ್ಲಿ ರಸ್ತೆಗೆ ಸೇರಿದ ಸ್ಥಳಕ್ಕೂ ಮಾಲೀಕತ್ವ ನೀಡಿರುವುದು ಸಾಬೀತಾಗಿತ್ತು. ಆದರೆ ಕಂದಾಯ ಇಲಾಖೆಯ ದಾಖಲಾತಿಗಳನ್ನು ಪರಿಗಣಿಸುತ್ತದೆ. ಗುರುತು ಮಾಡಲ್ಪಟ್ಟ ಸ್ಥಳಕ್ಕಿಂತ ಹೆಚ್ಚು ಸ್ಥಳವು ರಸ್ತೆ ನಿರ್ಮಾಣಕ್ಕೆ ಬೇಕಾದಾಗ ಮಾರುಕಟ್ಟೆ ದರದಲ್ಲಿ ವಾಹನ ದಟ್ಟಣೆ ಪರಿಗಣಿಸಿ ವಿಸ್ತರಣೆ ಲೋಕೋಪಯೋಗಿ ಇಲಾಖೆಯು ಹೆದ್ದಾರಿ ಗಡಿಯು ಮಧÀ್ಯ ಭಾಗದಿಂದ ೪೦ ಮೀಟರ್ ಎಂದು ನಿಗದಿಪಡಿಸಿದ್ದರೂ ಕೂಡ ಹೆದ್ದಾರಿಗಳ ಅಗಲೀಕರಣ ಮಾಡುವುದು ಆಯಾ ರಸ್ತೆಗಳ ವಾಹನ ದಟ್ಟಣೆಯನ್ನು ಅವಲಂಬಿಸಿರುತ್ತದೆ. ದಟ್ಟಣೆ ಹೆಚ್ಚಾಗಿ ವಾಹನ ಸಂಚಾರ ನಿಧಾನಗತಿ ಆದಾಗ ವಿಸ್ತರಣೆ ಕೈಗೆತ್ತಿಕೊಳ್ಳಲಾಗುತ್ತದೆ. ಇದಕ್ಕಾಗಿ ಇಲಾಖೆಯು ಪ್ರತೀ ಮೂರು ವರ್ಷಗಳಿಗೊಮ್ಮೆ ಪ್ರತೀ ಹೆದ್ದಾರಿಯಲ್ಲೂ ವಾಹನ ಓಡಾಟ ಸಮೀಕ್ಷೆ ನಡೆಸುತ್ತದೆ. ವಾಹನ ದಟ್ಟಣೆ ಇಲ್ಲದೆ ಅಗಲೀಕರಣ ಮಾಡಿದರೆ ರಸ್ತೆಗಳ ನಿರ್ಮಾಣಕ್ಕೆ ಕೋಟಿ ಗಟ್ಟಲೆ ರೂಪಾಯಿ ವೆಚ್ಚವಾಗುವುದರ ಜೊತೆಗೇ ನಿರ್ವಹಣೆಗೂ ಅಷ್ಟೇ ವೆಚ್ಚ ತಗುಲಲಿದೆ. ಹೀಗಾಗಿ ಯಾವುದೇ ಕಾರಣಕ್ಕೂ ಅಗತ್ಯಕ್ಕಿಂತ ಹೆಚ್ಚು ವಿಸ್ತರಣೆಗೆ ಸರ್ಕಾರ ಮುಂದಾಗುವುದಿಲ್ಲ. ಜತೆಗೆ ಇದೀಗ ರಾಷ್ಟಿçÃಯ ಹೆದ್ದಾರಿಗಳ ನಿರ್ಮಾಣವನ್ನು ಬೂಟ್ (buiಟಜ-oತಿಟಿ-oಠಿeಡಿಚಿಣe-ಣಡಿಚಿಟಿsಜಿeಡಿ) ಮೂಲಕ ಟೋಲ್ ರಸ್ತೆಗಳನ್ನಾಗಿ ಮಾಡುವುದರಿಂದ ದಟ್ಟಣೆ ಇಲ್ಲದ ರಸ್ತೆಗಳ ನಿರ್ಮಾಣಕ್ಕೆ ಯಾವುದೇ ಕಂಪೆನಿಯೂ ಟೆಂಡರ್ ಪಡೆಯಲು ಮುಂದೆ ಬರುವುದಿಲ್ಲ.
ದಶಪಥ ಎಕ್ಸ್ಪ್ರೆಸ್ ಹೆದ್ದಾರಿ ನಿರ್ಮಾಣ ಈಗಾಗಲೇ ಬೆಂಗಳೂರು-ಮೈಸೂರು ದಶಪಥ ಹೆದ್ದಾರಿ ಕಾರ್ಯವು ೯೩೫೦ ಕೋಟಿ ರೂಪಾಯಿಗಳ ವೆಚ್ಚದಲ್ಲಿ ಭರದಿಂದ ಸಾಗಿದ್ದು, ದಸರಾ ವೇಳೆಗೆ ಉದ್ಘಾಟನೆ ಆಗಲಿದೆ. ಹಾಲಿ ಬೆಂಗಳೂರು - ಮೈಸೂರು ರಸ್ತೆಯ ಅಪರಿಮಿತ ವಾಹನ ದಟ್ಟಣೆ ಕಡಿಮೆ ಮಾಡಲು ೧೧೮ ಕಿ.ಮೀ. ಉದ್ದದ ಈ ದಶಪಥ ಹೆದ್ದಾರಿ ನಿರ್ಮಾಣ ಮಾಡಲಾಗುತಿದ್ದು, ಇದನ್ನು ಹುಬ್ಬಳ್ಳಿ ಮೂಲದ ದಿಲೀಪ್ ಬಿಲ್ಡ್ಕಾನ್ ಕಂಪೆನಿ ನಿರ್ಮಿಸುತ್ತಿದೆ. ನಿರ್ಮಾಣದ ನಂತರ ಈ ರಸ್ತೆಯಲ್ಲಿ ಕಾರಿನಲ್ಲಿ ಪ್ರಯಾಣಿಸಲು ಕಿಲೋಮೀಟರ್ಗೆ ೧.೫ ರಿಂದ ೨ ರೂಪಾಯಿಗಳವರೆಗೆ ಟೋಲ್ ನೀಡಬೇಕಾಗುತ್ತದೆ.
ಈ ರಸ್ತೆಗಾಗಿ ಜಮೀನು ನೀಡಿದವರಿಗೆಲ್ಲರಿಗೂ ಮತ್ತು ಕಟ್ಟಡ ಕಳೆದುಕೊಂಡವರಿಗೆ ಪ್ರಸ್ತುತ ಮಾರುಕಟ್ಟೆ ದರಕ್ಕಿಂತಲೂ ಹೆಚ್ಚು ಪರಿಹಾರ ನೀಡಲಾಗಿದೆ.
ಶ್ರೀರಂಗಪಟ್ಟಣ-ಕುಶಾಲನಗರ ನೂತನ ಹೆದ್ದಾರಿ ಈ ನಡುವೆ ಶ್ರೀರಂಗಪಟ್ಟಣ ಸಮೀಪ ದಶಪಥ ಹೆದ್ದಾರಿಗೆ ಸಂಪರ್ಕ ಕಲ್ಪಿಸುವ ೬ ಪಥಗಳ ೩೮೮೩ ಕೋಟಿ ರೂಪಾಯಿ ವೆಚ್ಚದಲ್ಲಿ ನೂತನ ಹೆದ್ದಾರಿಯ ನಿರ್ಮಾಣಕ್ಕೆ ಭೂಸ್ವಾಧೀನ ಪ್ರಕ್ರಿಯೆ ನಡೆಯುತ್ತಿದೆ. ಈ ಉದ್ದೇಶಿತ ಹೆದ್ದಾರಿಯು ಕುಶಾಲನಗರ- ಮೈಸೂರಿನ ಹಾಲಿ ಹೆದ್ದಾರಿಯ ವಾಹನದಟ್ಟಣೆಯನ್ನು ಗಣನೀಯವಾಗಿ ಕಡಿಮೆ ಮಾಡಲಿದ್ದು, ಪ್ರಸ್ತುತ ಮಡಿಕೇರಿ - ಮೈಸೂರು ಪ್ರಯಾಣದ ಅವಧಿ ಮೂರುವರೆ ಘಂಟೆಗಳಾಗಿದ್ದು, ನೂತನ ಹೆದ್ದಾರಿಯು ಪೂರ್ಣಗೊಂಡರೆ ಪ್ರಯಾಣದ ಅವಧಿ ೯೦ ನಿಮಿಷಗಳಿಗೆ ಇಳಿಯಲಿದೆ. ಈ ಯೋಜನೆಗೆ ಸಾವಿರ ಎಕರೆಗಳಷ್ಟು ಭೂಮಿ ಅವಶ್ಯಕತೆ ಇದ್ದು, ಇದು ಕುಶಾಲನಗರ ಹೊರವಲಯದ ಬಸವನಹಳ್ಳಿವರೆಗೆ ಸಂಪರ್ಕ ಕಲ್ಪಿಸಲಿದೆ.
ಭೂಮಿ ಕಳೆದುಕೊಂಡವರಿಗೆ ದುಪ್ಪಟ್ಟು ದರ ಉದ್ದೇಶಿತ ಶ್ರೀರಂಗಪಟ್ಟಣ-ಬಸವನಹಳ್ಳಿವರೆಗಿನ ೬ ಪಥಗಳ ಹೆದ್ದಾರಿ ನಿರ್ಮಾಣಕ್ಕೆ ಭೂಸ್ವಾಧೀನಪಡಿಸಿಕೊಳ್ಳಲು ೧೧೫೦ ಕೋಟಿ ರೂಪಾಯಿಗಳನ್ನು ಮೀಸಲಿರಿಸಲಾಗಿದೆ. ಈ ಕುರಿತು ಮಾಹಿತಿ ನೀಡಿದ ಭೂಸ್ವಾಧೀನಾಧಿಕಾರಿ ದೇವರಾಜ್ ಅವರು ಈ ಹೆದ್ದಾರಿಯ ಸರ್ವೆ ಕಾರ್ಯವನ್ನು ರಾಷ್ಟಿçÃಯ ಹೆದ್ದಾರಿ ಅಭಿವೃದ್ಧಿ ಪ್ರಾಧಿಕಾರ ಮತ್ತು ಕಂದಾಯ ಇಲಾಖೆ ಜಂಟಿಯಾಗಿ ಮಾಡಲಾಗಿದ್ದು, ಈಗ ಭೂಮಿ ಕಳೆದುಕೊಳ್ಳುವ ಶ್ರೀರಂಗಪಟ್ಟಣ ಮತ್ತು ಮೈಸೂರು ತಾಲೂಕುಗಳ ಭೂಮಾಲೀಕರಿಗೆ ಜಮೀನು ಅಥವಾ ಕಟ್ಟಡದ ಮಾರುಕಟ್ಟೆ ಮೌಲ್ಯದ ದುಪ್ಪಟ್ಟು ದರವನ್ನು ಪರಿಹಾರವಾಗಿ ನೀಡಲಾಗುತ್ತಿದೆ ಎಂದರು. ಹುಣಸೂರು, ಪಿರಿಯಾಪಟ್ಟಣ ಮತ್ತು ಕುಶಾಲನಗರ ತಾಲೂಕುಗಳ ಭೂಮಾಲೀಕರಿಗೆ ಪರಿಹಾರ ನೀಡಲು ಪ್ರಸ್ತಾವನೆ ಸಲ್ಲಿಸಲಾಗಿದೆ ಎಂದರು. ಪರಿಹಾರ ನೀಡುವಾಗ ಆಯಾ ತಾಲೂಕುಗಳ ನೋಂದಣಾಧಿಕಾರಿಗಳ ಕಚೇರಿಯಲ್ಲಿ ಕಳೆದ ಮೂರು ವರ್ಷಗಳಲ್ಲಿ ನೋಂದಣಿಯಾದ ಹೆಚ್ಚು ಮೌಲ್ಯದ ೧೦೦ ಕ್ರಯಪತ್ರಗಳ ಆಧಾರದಲ್ಲಿ ದರ ನಿಗದಿ ಮಾಡುವುದಲ್ಲದೆ ಇದಕ್ಕೆ ಮಾರುಕಟ್ಟೆ ಮೌಲ್ಯವನ್ನೂ ಸೇರಿಸಲಾಗುತ್ತದೆ ಎಂದು ದೇವರಾಜ್ ತಿಳಿಸಿದರು. ನಗರಪಾಲಿಕೆ, ಪುರಸಭೆ ಪಂಚಾಯ್ತಿ ವ್ಯಾಪ್ತಿಯಲ್ಲಿ ಮಾರುಕಟ್ಟೆ ಮೌಲ್ಯದ ದುಪ್ಪಟ್ಟು, ವ್ಯಾಪ್ಯಿಯ ಹೊರಗೆ ೫ ಕಿಲೋಮೀಟರ್ಗಳವರೆಗೆ ಮಾರುಕಟ್ಟೆ ದರದ ಮೂರು ಪಟ್ಟು ಮತ್ತು ೫ ಕಿಲೋಮೀಟರ್ ಹೊರಗೆ ಭೂಮಿ ಕಳೆದುಕೊಳ್ಳುವವರಿಗೆ ಮೌಲ್ಯದ ನಾಲ್ಕು ಪಟ್ಟು ಪರಿಹಾರ ನೀಡಲಾಗುತ್ತಿದೆ ಎಂದು ಅವರು ತಿಳಿಸಿದರು. ೨೦೧೧ರಲ್ಲಿ ಸೋಮವಾರಪೇಟೆಯಲ್ಲಿ ತಹಶೀಲ್ದಾರ್ ಆಗಿಯೂ ಕರ್ತವ್ಯ ನಿರ್ವಹಿಸಿದ್ದ ದೇವರಾಜ್ ಅವರು ಹೆದ್ದಾರಿಯ ನಿರ್ಮಾಣದಲ್ಲಿ ಹೆಚ್ಚಿನ ಆಸ್ಥೆ ವಹಿಸುತ್ತಿದ್ದಾರೆ.
ಭೂಸ್ವಾಧೀನ ಪರಿಹಾರಕ್ಕೆ ೨೦೧೩ರ ಕಾಯ್ದೆ ಸಾರ್ವಜನಿಕ ಉದ್ದೇಶಕ್ಕೆ ಭೂಸ್ವಾಧೀನ ಪಡಿಸಿಕೊಳ್ಳುವಾಗ ಸರ್ಕಾರದ ವಿವಿಧ ಸಂಸ್ಥೆಗಳು ತಮ್ಮದೇ ಆದ ಮಾನದಂಡದ ರೂಪದಲ್ಲಿ ಭೂಮಾಲೀಕರಿಗೆ ಪರಿಹಾರವನ್ನು ನೀಡುತ್ತವೆ. ಬಿಡಿಎ, ಮೂಡದಂತಹ ಸಂಸ್ಥೆಗಳು ಭುಮಾಲೀಕರಿಗೆ ಅಭಿವೃದ್ಧಿಪಡಿಸಿದ ನಿವೇಶನದಲ್ಲಿ ಶೇಕಡಾವಾರು ಇಂತಿಷ್ಟು ಎಂದು ನಿವೇಶನ ನೀಡುವ ಮೂಲಕ ಪರಿಹಾರ ನೀಡುತ್ತವೆ ಮತ್ತು ತಾವು ಹಿಂದೆ ಮೀಸಲಿರಿಸಿದ ಬೆಲೆಬಾಳುವ ನಿವೇಶನವನ್ನೂ ನೀಡುತ್ತವೆ. ಕೆಐಎಡಿಬಿ, ಹೌಸಿಂಗ್ ಬೋರ್ಡ್ನಂತಹ ಸಂಸ್ಥೆಗಳು ರೈತರೊಂದಿಗೆ ಮಾತುಕತೆಯ ಮೂಲಕ ಎಕರೆಯೊಂದಕ್ಕೆ ಇಂತಿಷ್ಟು ಎಂದು ದರ ನಿಗದಿ ಮಾಡುತ್ತವೆ. ಆದರೆ ರಾಷ್ಟಿçÃಯ ಹೆದ್ದಾರಿ ಅಭಿವೃದ್ಧಿ ಪ್ರಾಧಿಕಾರವು ದೇಶಾದ್ಯಂತ ೨೦೧೩ರ (ಖighಣ ಣo ಈಚಿiಡಿ ಅomಠಿeಟಿsಚಿಣioಟಿ ಚಿಟಿಜ ಖಿಡಿಚಿಟಿsಠಿಚಿಡಿeಟಿಛಿಥಿ iಟಿ ಐಚಿಟಿಜ ಂಛಿquisiಣioಟಿ, ಖehಚಿbiಟiಣಚಿಣioಟಿ ಚಿಟಿಜ ಖeseಣಣಟemeಟಿಣ ಂಛಿಣ, ೨೦೧೩) ಅನ್ವಯ ಪರಿಹಾರ ನೀಡುತ್ತವೆ. ಈ ಕಾಯ್ದೆ ಜಾರಿಯು ೧೮೯೪ ರ ಬ್ರಿಟಿಷ್ ಭೂಸ್ವಾಧೀನ ಕಾಯ್ದೆಯನ್ನು ಸಂಪೂರ್ಣ ರದ್ದುಪಡಿಸಿದ್ದೇ ಅಲ್ಲದೆ ಭೂಮಾಲೀಕರಿಗೆ ಉತ್ತಮ ಪರಿಹಾರ ನೀಡುತ್ತಿದೆ. ಹೀಗಾಗಿ ಹೆದ್ದಾರಿಯ ಅಕ್ಕ ಪಕ್ಕದ ಭೂಮಾಲೀಕರಿಗೆ ಲೋಕೋಪಯೋಗಿ ಇಲಾಖೆಯ ನಿಯಮಗಳು ಕಠಿಣ ಎನಿಸಬಹುದಾದರೂ ಮುಂದೆ ಕಳೆದುಕೊಳ್ಳಲಿರುವ ಭೂಮಿಗೆ ಉತ್ತಮ ಪರಿಹಾರ ದೊರೆಯುವುದು ಖಚಿತವೇ ಆಗಿದೆ.
ಹೆದ್ದಾರಿ ಅಗಲೀಕರಣಕ್ಕೆ ಬಾರದ ಆದೇಶ ಕೇಂದ್ರ ಸಾರಿಗೆ ಸಚಿವ ನಿತಿನ್ ಘಡ್ಕರಿ ಅವರು ಇತ್ತೀಚೆಗೆ ಘೋಷಿಸಿರುವ ೧೬೦೦ ಕೋಟಿ ರೂಪಾಯಿಗಳ ಚನ್ನರಾಯಪಟ್ಟಣ - ಕೇರಳ ರಾಷ್ಟಿçÃಯ ಹೆದ್ದಾರಿಯ ಅಗಲೀಕರಣ ಕುರಿತು ಜಿಲ್ಲೆಯ ಲೋಕೋಪಯೋಗಿ ಇಲಾಖೆಗೆ ಅಂದಾಜು ಪಟ್ಟಿ ತಯಾರಿಸಲು ಇನ್ನೂ ಆದೇಶ ಬಂದಿಲ್ಲ ಎಂದು ತಿಳಿದು ಬಂದಿದೆ. ಈ ಉದ್ದೇಶಿತ ರಾಷ್ಟಿçÃಯ ಹೆದ್ದಾರಿಯು ವಾಹನ ದಟ್ಟಣೆಯ ಅನ್ವಯ ದ್ವಿಪಥ ರಸ್ತೆ ಆಗಿದ್ದು, ೭.೫ ಮೀಟರ್ಗಳವರೆಗೆ ಟಾರು ರಸ್ತೆ ನಿರ್ಮಾಣವಾಗಲಿದ್ದು, ಚರಂಡಿ, ಪಾದಚಾರಿ ಮಾರ್ಗ ಸೇರಿ ರಸ್ತೆಯ ಒಟ್ಟು ಅಗಲ ೧೫ ಮೀಟರ್ಗಳಷ್ಟು ಅಂದರೆ ಸುಮಾರು ೫೦ ಅಡಿಗಳಷ್ಟು ಇರಲಿದೆ ಎಂದು ಇಲಾಖೆಯ ಅಧಿಕಾರಿಯೊಬ್ಬರು ತಿಳಿಸಿದರು.
- ಕೋವರ್ಕೊಲ್ಲಿ ಇಂದ್ರೇಶ್