ಗುಡ್ಡೆಹೊಸೂರು, ಜು. ೨೦: ಇಲ್ಲಿನ ಆರ್‌ಎಸ್‌ಎಸ್ ಶಾಖೆ ವತಿಯಿಂದ ಇಲ್ಲಿನ ಸಮುದಾಯ ಭವನದಲ್ಲಿ ಗುರುಪೂರ್ಣಿಮೆ ಅಂಗವಾಗಿ ಗುರು ಪೂಜೆ ಕಾರ್ಯಕ್ರಮ ನಡೆಯಿತು. ಕಾರ್ಯಕ್ರಮದ ಅಧ್ಯಕ್ಷತೆಯನ್ನು ಬಿ.ಎಸ್. ದಿನೇಶ್ ವಹಿಸಿದ್ದರು. ವನವಾಸಿ ಕಲ್ಯಾಣ ಸಂಘಟನಾ ತಾಲೂಕು ಕಾರ್ಯದರ್ಶಿ ಮತ್ತು ವಕೀಲರಾದ ಭರತ್‌ಮಾಚಯ್ಯ ಗುರುಪೂಜೆಯ ಬಗ್ಗೆ ಬೌದ್ಧಿಕ್ ನೀಡಿದರು. ಈ ಸಂದರ್ಭ ಸ್ವಯಂ ಸೇವಕ ಸಂಘದ ತಾಲೂಕು ಸಂಘಟನಾ ಕಾರ್ಯದರ್ಶಿ ಬಿ. ರಮೇಶ್, ಬಸವನಹಳ್ಳಿ ಶಾಖೆಯ ಪ್ರಮುಖ ಮಹೇಂದ್ರ, ಆದೇಶ್, ಜಿ.ಎಂ. ಸಲೀ, ಕುಡೆಕ್ಕಲ್ ನಿತ್ಯನಂದ, ಮಾಜಿ ಸೈನಿಕರಾದ ಕೋಡಿ ಜಯಣ್ಣ, ಕೆ.ಯು. ತಿಮ್ಮಯ್ಯ ಮುಂತಾದವರು ಉಪಸ್ಥಿತರಿದ್ದರು.