ವೀರಾಜಪೇಟೆ, ಜು. ೨೦: ವೀರಾಜಪೇಟೆ ಪಟ್ಟಣದಲ್ಲಿ ಜೆöÊಭಾರತ್ ಆಟೋ ಚಾಲಕರ ಸಂಘ ಅಸ್ತಿತ್ವಕ್ಕೆ ಬಂದಿದ್ದು ಸರ್ಕಾರದ ಮಾನ್ಯತೆ ಪಡೆದು ಬೈಲಾವನ್ನು ಹೊಂದಿದೆ. ಸಂಘದ ಕಚೇರಿ ಮಲಬಾರ್ ರಸ್ತೆಯ ಆಟೋ ನಿಲ್ದಾಣದ ಮೇಲಂತಸ್ತಿನಲ್ಲಿ ಕಾರ್ಯ ನಿರ್ವಹಿಸುತ್ತಿದೆ ಎಂದು ಸಂಘದ ನೂತನ ಅಧ್ಯಕ್ಷ ಎನ್.ಎನ್. ಶಿವು ಹೇಳಿದರು.

ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು, ಪಟ್ಟಣದಲ್ಲಿ ಆಟೋ ಚಾಲಕರ ಹಲವಾರು ಸಂಘಗಳಿದ್ದು ಎಲ್ಲವೂ ನಿಷ್ಕಿçಯಗೊಂಡಿದೆ. ಜಿಲ್ಲಾ ಸಂಘದ ಅಡಿಯಲ್ಲಿ ಇತರ ಸಂಘಗಳು ಕಾರ್ಯನಿರ್ವಹಿಸುತ್ತದೆ. ಆದರೆ ಜಿಲ್ಲಾ ಸಂಘ ನೋಂದಣಿ ಆಗದೆ ೨೨ ವರ್ಷಗಳಾದ ಕಾರಣ ಜಿಲ್ಲಾ ಸಂಘವು ನಿಷ್ಕಿçಯಗೊಂಡಿವೆೆ. ಜಿಲ್ಲಾ ಅಧ್ಯಕ್ಷರು ಹಾಗೂ ಪದಾಧಿಕಾರಿಗಳು ಕೂಡಲೇ ರಾಜೀನಾಮೆ ನೀಡಿ ಸಂಘವನ್ನು ವಿಸರ್ಜಿಸಿ ನೋಂದಣಿ ಮಾಡಿಸಿ ನೂತನ ಸಂಘವನ್ನು ರಚಿಸಬೇಕು ಎಂದು ಆಗ್ರಹಿಸಿದರು.

ಪ್ರಧಾನ ಕಾರ್ಯದರ್ಶಿ ದೀಪು ಮಾತನಾಡಿ, ನೋಂದಣಿ ಆಗದ ಸಂಘಗಳು ಕ್ರೀಡಾಕೂಟ ಹಾಗೂ ವಿವಿಧ ಕಾರ್ಯಕ್ರಮಗಳನ್ನು ನಡೆಸಲಾಗುವುದು ಎಂದು ಸಾರ್ವಜನಿಕರಲ್ಲಿ ದೇಣಿಗೆ ಪಡೆಯುತ್ತಿರುವುದು ಗಮನಕ್ಕೆ ಬಂದಿದೆ. ನೋಂದಣಿ ಆಗದ ಸಂಘ-ಸAಸ್ಥೆಗಳಿಗೆ ಯಾರೂ ದೇಣಿಗೆ ನೀಡಬಾರದು. ಸದಸ್ಯರಾಗದವರು ಕೂಡಲೇ ಸಂಘದ ಸದಸ್ಯತ್ವ ಪಡೆದುಕೊಳ್ಳಬಹುದು ಎಂದು ಹೇಳಿದರು.

ಗೌರವ ಅಧ್ಯಕ್ಷ ತೋರೆರ ಕುಟ್ಟಪ್ಪ ಮಾತನಾಡಿ, ಕಡು ಬಡವರು ಧಾರ್ಮಿಕ ಸ್ಥಳಗಳು ಸೇರಿದಂತೆ ಇನ್ನಿತರ ಸ್ಥಳಗಳಿಗೆ ತೆರಳಬೇಕಾದರೆ ಬಾಡಿಗೆ ವಾಹನಗಳಿಗೆ ದುಬಾರಿ ಹಣ ನೀಡಬೇಕಾಗಿದೆ. ಇತರ ಜಿಲ್ಲೆಗಳಲ್ಲಿ ಇರುವ ಹಾಗೆ ನಮ್ಮ ಜಿಲ್ಲೆಯಲ್ಲೂ ಸಂಚರಿಸಲು ತಾತ್ಕಾಲಿಕ ಪರವಾನಿಗೆಯನ್ನು ವಿಸ್ತರಿಸುವಂತೆ ಪ್ರಾದೇಶಿಕ ಸಾರಿಗೆ ಅಧಿಕಾರಿಗಳಿಗೆ ಸಂಘದ ವತಿಯಿಂದ ಮನವಿ ಸಲ್ಲಿಸಲಾಗುವುದು ಎಂದು ಹೇಳಿದರು.

ಉಪಾಧ್ಯಕ್ಷ ಅರ್ಜುನ್ ತಿಮ್ಮಯ್ಯ ಮಾತನಾಡಿ, ಮೀನುಪೇಟೆಯ ಹಿಂದೂ ರುದ್ರಭೂಮಿಯಲ್ಲಿ ಸಿಲಿಕಾನ್ ಮೃತದೇಹ ಸುಡುವ ಯಂತ್ರದಲ್ಲಿ ಒಂದು ಕೆಟ್ಟು ಹೋಗಿದೆ. ಮತ್ತೊಂದರ ಕಬ್ಬಿಣದ ತುಂಡುಗಳು ಕಳವಾಗಿವೆÉ. ಮೃತದೇಹ ಸಾಗಿಸುವ ಅಲ್ಯೂಮಿನಿಯಂ ಚಟ್ಟ ಮುರಿದು ಹೋಗಿದ್ದು ಕೂಡಲೇ ಪಟ್ಟಣ ಪಂಚಾಯಿತಿ ಅಧಿಕಾರಿಗಳು ಸರಿಪಡಿಸುವಂತೆ ಆಗ್ರಹಿಸಿದರು.

ಗೋಷ್ಠಿಯಲ್ಲಿ ಖಜಾಂಚಿ ಸೋಮಶೇಖರ್, ಗೌರವ ಸಲಹೆಗಾರ ಪ್ರವೀಣ್ ಕುಮಾರ್ ಉಪಸ್ಥಿತರಿದ್ದರು.