ಸುAಟಿಕೊಪ್ಪ, ಜು. ೨೦: ಕೊಡಗು ಜಿಲ್ಲಾ ಪ್ರೌಢಶಾಲಾ ಸಹಶಿಕ್ಷಕರ ಸಂಘದ ನೂತನ ಸಾಲಿನ ಪದಗ್ರಹಣ ಸಮಾರಂಭವು ಮಡಿಕೇರಿ ಪದವಿ ಪೂರ್ವ ಕಾಲೇಜಿನ ಸಭಾಂಗಣದಲ್ಲಿ ನಡೆಯಿತು.
ಅಧ್ಯಕ್ಷ ಸಿ.ಟಿ. ಸೋಮಶೇಖರ್, ಕಾರ್ಯದರ್ಶಿಗಳಾಗಿ ಹೆಚ್.ಜಿ. ಕುಮಾರ್, ಜಿಲ್ಲಾ ಖಜಾಂಚಿಯಾಗಿ ಎ.ಸಿ. ಮಂಜುನಾಥ ಹಾಗೂ ಸಂಘಟನಾ ಕಾರ್ಯದರ್ಶಿಯಾಗಿ ದಯಾನಂದ ಪ್ರಕಾಶ್ ಹಾಗೂ ನಿರ್ದೇಶಕರು ಅಧಿಕಾರ ಸ್ವೀಕರಿಸಿದರು. ಈ ಸಂದರ್ಭ ಜಿಲ್ಲಾ ಚುನಾವಣಾಧಿಕಾರಿ ಎಂ.ಆರ್. ರಂಗಸ್ವಾಮಿ, ಸೋಮವಾರಪೇಟೆ ತಾಲೂಕು ಚುನಾವಣಾಧಿಕಾರಿ ತಿಲೋತ್ತಮೆ, ಮಡಿಕೇರಿ ತಾಲೂಕು ಚುನಾವಣಾಧಿಕಾರಿ ನಳಿನಿ, ವೀರಾಜಪೇಟೆ ತಾಲೂಕು ಚುನಾವಣಾಧಿಕಾರಿ ಬಿಂದು, ಸೋಮವಾರಪೇಟೆ ತಾಲೂಕು ಪ್ರೌಢಶಾಲಾ ಸಹಶಿಕ್ಷಕರ ಸಂಘದ ಅಧ್ಯಕ್ಷ ವಿ.ಪಿ. ಉತ್ತಪ್ಪ ಮತ್ತು ಪದಾಧಿಕಾರಿಗಳು ಮಡಿಕೇರಿ ತಾಲೂಕು ಪ್ರೌಢಶಾಲಾ ಶಿಕ್ಷಕರ ಸಂಘದ ಅಧ್ಯಕ್ಷ ಪಿ.ಎಸ್. ರವಿಕೃಷ್ಣ ಹಾಗೂ ಪದಾಧಿಕಾರಿಗಳು, ಜಿಲ್ಲಾ ಉಪನ್ಯಾಸಕರ ಸಂಘದ ಅಧ್ಯಕ್ಷ ಪಿಲಿಫ್ವಾಸ್, ಕಾರ್ಯದರ್ಶಿ ಹಂಡರAಗಿ ನಾಗರಾಜು ಉಪಸ್ಥಿತರಿದ್ದರು.