*ಗೋಣಿಕೊಪ್ಪ, ಜು. ೧೯: ಬಿಜೆಪಿ ಕಾರ್ಯತಂಡ ಸಭೆಯನ್ನು ಗೋಣಿಕೊಪ್ಪ ಕೃಷಿ ಉತ್ಪನ್ನ ಮಾರುಕಟ್ಟೆ ಸಮಿತಿ ಸಭಾಂಗಣದಲ್ಲಿ ವೀರಾಜಪೇಟೆ ಮಂಡಲ ಅಧ್ಯಕ್ಷ ನೆಲ್ಲಿರ ಚಲನ್ ಕುಮಾರ್ ಅವರ ಅಧ್ಯಕ್ಷತೆಯಲ್ಲಿ ನಡೆಸಲಾಯಿತು.

ಜಿಲ್ಲಾ ಅಧ್ಯಕ್ಷ ಪಳೆಯಂಡ ರಾಬಿನ್ ದೇವಯ್ಯ, ಜಿಲ್ಲಾ ಪ್ರಧಾನ ಕಾರ್ಯದರ್ಶಿ ಕುಂಞAಗಡ ಅರುಣ್ ಭೀಮಯ್ಯ, ತಾಲೂಕು ಮಂಡಲ ಪ್ರಧಾನ ಕಾರ್ಯದರ್ಶಿಗಳಾದ ವಾಟೇರಿರ ಬೋಪಣ್ಣ, ಅಜ್ಜಿಕುಟ್ಟಿರ ಪ್ರವೀಣ್, ತಾಲೂಕು ಪದಾಧಿಕಾರಿಗಳು, ಮಹಿಳಾ ಮೋರ್ಚಾ, ಯುವ ಮೋರ್ಚಾ, ಕೃಷಿ ಮೋರ್ಚಾ, ಓ.ಬಿ.ಸಿ ಮೋರ್ಚಾ, ಎಸ್.ಟಿ ಮೋರ್ಚಾ, ಎಸ್.ಸಿ ಮೋರ್ಚಾ, ಅಲ್ಪಾಸಂಖ್ಯಾತ ಮೋರ್ಚಾ, ಎಲ್ಲಾ ಪ್ರಕೋಷ್ಠದ ಪದಾಧಿಕಾರಿಗಳು, ವೀರಾಜಪೇಟೆ ತಾಲೂಕಿನ ಪಂಚಾಯಿತಿ ಮಟ್ಟದ ಶಕ್ತಿ ಕೆಂದ್ರ ಪ್ರಮುಖ್, ಸಹ ಪ್ರಮುಖ್ ಕಾರ್ಯಕರ್ತರು ಇದ್ದರು.