ಮಡಿಕೇರಿ, ಜು. ೧೮: ಬೆಲೆಬಾಳುವ ಕೆಂಪು ಹರಳು ಕಲ್ಲು ನಿಕ್ಷೇಪವಿರುವ., ಆಗಾಗ್ಗೆ ಅಕ್ರಮ ಹರಳುಕಲ್ಲು ಗಣಿಗಾರಿಕೆ ನಡೆಯುತ್ತಿರುವ ಪಟ್ಟಿಘಾಟ್ ರಕ್ಷಿತಾರಣ್ಯ ವ್ಯಾಪ್ತಿಯಲ್ಲಿರುವ ನಿಶಾನೆ ಮೊಟ್ಟೆ ಪ್ರದೇಶದಲ್ಲಿ ಕೊನೆಗೂ ಸಿಸಿ ಕ್ಯಾಮರಾ ಅಳವಡಿಸಲಾಗಿದೆ. ಸ್ಥಳಕ್ಕೆ ಮುಖ್ಯ ಅರಣ್ಯ ಸಂರಕ್ಷಣಾಧಿಕಾರಿ, ಉಪ ಅರಣ್ಯ ಸಂರಕ್ಷಣಾಧಿಕಾರಿಗಳು ಭೇಟಿ ನೀಡಿ ಪರಿಶೀಲನೆ ಮಾಡಿ ಸಿಸಿ ಕ್ಯಾಮರಾ ಅಳವಡಿಸುವ ನಿಟ್ಟಿನಲ್ಲಿ ಕ್ರಮ ಕೈಗೊಂಡಿದ್ದಾರೆ.

ಪಟ್ಟಿಘಾಟ್ ರಕ್ಷಿತಾರಣ್ಯ ವ್ಯಾಪ್ತಿಗೊಳಪಡುವ ಭಾಗಮಂಡಲ ವಲಯ, ತೊಡಿಕಾನ ಉಪವಲಯದ ನಿಶಾನೆ ಮೊಟ್ಟೆಯಲ್ಲಿ ಕಳೆದ ೨೦ ವರ್ಷಗಳಿಂದ ಅಕ್ರಮ ಹರಳುಕಲ್ಲು ಗಣಿಗಾರಿಕೆ ನಡೆಯತ್ತಿದೆ. ಎರಡು ವರ್ಷದ ಹಿಂದೆ ಕೂಡ ನಡೆದ ಸಂದರ್ಭ ಆ ಪ್ರದೇಶದಲ್ಲಿ ಅರಣ್ಯ ಇಲಾಖೆ ವತಿಯಿಂದ ಮಡಿಕೇರಿ, ಜು. ೧೮: ಬೆಲೆಬಾಳುವ ಕೆಂಪು ಹರಳು ಕಲ್ಲು ನಿಕ್ಷೇಪವಿರುವ., ಆಗಾಗ್ಗೆ ಅಕ್ರಮ ಹರಳುಕಲ್ಲು ಗಣಿಗಾರಿಕೆ ನಡೆಯುತ್ತಿರುವ ಪಟ್ಟಿಘಾಟ್ ರಕ್ಷಿತಾರಣ್ಯ ವ್ಯಾಪ್ತಿಯಲ್ಲಿರುವ ನಿಶಾನೆ ಮೊಟ್ಟೆ ಪ್ರದೇಶದಲ್ಲಿ ಕೊನೆಗೂ ಸಿಸಿ ಕ್ಯಾಮರಾ ಅಳವಡಿಸಲಾಗಿದೆ. ಸ್ಥಳಕ್ಕೆ ಮುಖ್ಯ ಅರಣ್ಯ ಸಂರಕ್ಷಣಾಧಿಕಾರಿ, ಉಪ ಅರಣ್ಯ ಸಂರಕ್ಷಣಾಧಿಕಾರಿಗಳು ಭೇಟಿ ನೀಡಿ ಪರಿಶೀಲನೆ ಮಾಡಿ ಸಿಸಿ ಕ್ಯಾಮರಾ ಅಳವಡಿಸುವ ನಿಟ್ಟಿನಲ್ಲಿ ಕ್ರಮ ಕೈಗೊಂಡಿದ್ದಾರೆ.

ಪಟ್ಟಿಘಾಟ್ ರಕ್ಷಿತಾರಣ್ಯ ವ್ಯಾಪ್ತಿಗೊಳಪಡುವ ಭಾಗಮಂಡಲ ವಲಯ, ತೊಡಿಕಾನ ಉಪವಲಯದ ನಿಶಾನೆ ಮೊಟ್ಟೆಯಲ್ಲಿ ಕಳೆದ ೨೦ ವರ್ಷಗಳಿಂದ ಅಕ್ರಮ ಹರಳುಕಲ್ಲು ಗಣಿಗಾರಿಕೆ ನಡೆಯತ್ತಿದೆ. ಎರಡು ವರ್ಷದ ಹಿಂದೆ ಕೂಡ ನಡೆದ ಸಂದರ್ಭ ಆ ಪ್ರದೇಶದಲ್ಲಿ ಅರಣ್ಯ ಇಲಾಖೆ ವತಿಯಿಂದ (ಮೊದಲ ಪುಟದಿಂದ) ದಳದ ಅಧಿಕಾರಿಗಳು ಸ್ಥಳಕ್ಕೆ ಭೇಟಿ ನೀಡಿ ಸ್ಥಳ ಪತ್ತೆ ಮಾಡಿದ್ದರು. ನಂತರ ಪಶ್ಚಿಮಘಟ್ಟ ಸಂರಕ್ಷಣೆ ಕಾರ್ಯಪಡೆ ಅಧ್ಯಕ್ಷರಾಗಿದ್ದ ಶಾಂತೆಯAಡ ರವಿ ಕುಶಾಲಪ್ಪ ಅವರು ಅಧಿಕಾರಿಗಳೊಂದಿಗೆ ಭೇಟಿ ನೀಡಿ ಹರಳು ಕಲ್ಲು ದಂಧೆಯನ್ನು ಸಂಪೂರ್ಣವಾಗಿ ತಡೆಗಟ್ಟುವ ನಿಟ್ಟಿನಲ್ಲಿ ಕರ್ತವ್ಯಲೋಪವೆಸಗಿದ ಸಿಬ್ಬಂದಿಗಳ ಮೇಲೆ ಕ್ರಮ ಕೈಗೊಳ್ಳುವದಲ್ಲದೆ, ಸ್ಥಳದಲ್ಲಿ ಸಿಸಿ ಕ್ಯಾಮರಾ ಅಳವಡಿಸುವಂತೆ ಇಲಾಖಾಧಿಕಾರಿಗಳಿಗೆ ಸೂಚಿಸಿದ್ದರು. ಈ ಹಿನ್ನೆಲೆಯಲ್ಲಿ ಉಪ ಅರಣ್ಯ ಸಂರಕ್ಷಣಾಧಿಕಾರಿ ಎ.ಟಿ.ಪೂವಯ್ಯ ಅವರು ಸಿಸಿ ಕ್ಯಾಮರಾ ಅಳವಡಿಸಲು ವಲಯ ಅರಣ್ಯಾಧಿಕಾರಿಗಳಿಗೆ ಸೂಚಿದ್ದರು.

ಎರಡು ಕಡೆಗಳಲ್ಲಿ ಕ್ಯಾಮರಾ

ನಮತರದಲ್ಲಿ ಕ್ಯಾಮರಾ ಅಳವಡಿಸಲು ನಿಶಾನೆ ಮೊಟ್ಟೆಗೆ ಕೊಂಡೊಯ್ಯಲಾಗಿದ್ದ ಕಬ್ಬಿಣದ ಕಂಬಗಳು, ವಯರ್‌ಗಳನ್ನು ಅಲ್ಲಲ್ಲೇ ರಾಶಿ ಹಾಕಲಾಗಿತ್ತು. ಆರು ತಿಂಗಳಾದರೂ ಕ್ಯಾಮರಾ ಅಳವಡಿಸದ ಬಗ್ಗೆ ಶನಿವಾರ ಮತ್ತೆ ‘ಶಕ್ತಿ’ ಬೆಳಕು ಚೆಲ್ಲಿದ ಹಿನ್ನೆಲೆಯಲ್ಲಿ ಇದೀಗ ಕ್ಯಾಮರಾಗಳನ್ನು ಅಳವಡಿಸಲಾಗಿದೆ. ಆಯಕಟ್ಟಿನ ಒಟ್ಟು ಎರಡು ಕಡೆಗಳಲ್ಲಿ ಕ್ಯಾಮರಾಗಳನ್ನು ಅಳವಡಿಸಲಾಗಿದ್ದು, ಕಟ್ಟೆಚ್ಚರ ವಹಿಸಲಾಗಿದೆ. ಕ್ಯಾಮರಾಗೆ ವಿದ್ಯುತ್ ಒದಗಿಸುವ ಸಲುವಾಗಿ ಸೊಲಾರ್ ಬ್ಯಾಟರಿಗಳ ನ್ನು ಅಳವಡಿಸಲಾಗಿದೆ.

ಮುಖ್ಯ ಸಂರಕ್ಷಣಾಧಿಕಾರಿ ಭೇಟಿ

ಸ್ಥಳಕ್ಕೆ ಮುಖ್ಯ ಅರಣ್ಯ ಸಂರಕ್ಷಣಾಧಿಕಾರಿ ಬಿ.ಎನ್.ಎನ್.ಮೂರ್ತಿ ಅವರು ಇತರ ಅಧಿಕಾರಿಗಳೊಂದಿಗೆ ಭೇಟಿ ನೀಡಿ ಪರಿಶೀಲನೆ ಮಾಡಿದರು. ನಿಶಾನೆ ಮೊಟ್ಟೆಯಲ್ಲಿರುವ ಟೆಂಟ್‌ಗಳ ಅಭಿವೃದ್ಧಿಪಡಿಸಲು ಕೆಲವೊಂದು ಸೂಚನೆಗಳನ್ನು ನೀಡಿದರು. ಮಳೆಯಿಂದ ರಕ್ಷಣೆ ಪಡೆದುಕೊಳ್ಳುವ ನಿಟ್ಟಿನಲ್ಲಿ ಸ್ಥಳದಲ್ಲಿ ಬಂಕರ್(ಟೆAಟ್) ಗಳನ್ನು ನಿರ್ಮಿಸಲು ಹಾಗೂ ೨೪ ಗಂಟೆಗಳ ಕಾಲ ಕಾವಲು ಕಾಯಲು ವಿಶೇಷ ವ್ಯವಸ್ಥೆಗಾಗಿ ಸರಕಾರಕ್ಕೆ ಪತ್ರ ಬರೆಯುವಂತೆ ಸ್ಥಳದಲ್ಲಿದ್ದ ಅಧಿಕಾರಿಗಳಿಗೆ ಸೂಚಿಸಿದರು.

ಈ ಸಂದರ್ಭದಲ್ಲಿ ಉಪ ಅರಣ್ಯ ಸಂರಕ್ಷಣಾಧಿಕಾರಿ ಪೂವಯ್ಯ, ಸಹಾಯಕ ಅರಣ್ಯ ಸಂರಕ್ಷಣಾಧಿಕಾರಿ ಮೊಹಿಸಿನ್ ಪಾಷಾ, ಭಾಗಮಂಡಲ ವಲಯ ಅರಣ್ಯಾಧಿಕಾರಿ ಕೊಟ್ರೇಶ್, ಸಿಬ್ಬಂದಿಗಳು ಇದ್ದರು.

? ಕುಡೆಕಲ್ ಸಂತೋಷ್