*ಗೋಣಿಕೊಪ್ಪ, ಜು. ೧೮: ಪಟ್ಟಣದಲ್ಲಿರುವ ಹೊಟೇಲ್, ಬೇಕರಿಗಳು ಸೇರಿದಂತೆ ಇನ್ನಿತರ ವಾಣಿಜ್ಯ ಕೇಂದ್ರಗಳ ಮೇಲೆ ಗೋಣಿಕೊಪ್ಪ ಗ್ರಾಮ ಪಂಚಾಯಿತಿ ಮತ್ತು ತಾಲೂಕು ಆಹಾರ ಇಲಾಖೆ ಅಧಿಕಾರಿಗಳ ತಂಡ ಸೋಮವಾರ ಏಕಕಾಲದಲ್ಲಿ ದಾಳಿ ನಡೆಸಿ ಎಚ್ಚರಿಕೆ ನೀಡಿದೆ.
ಗೋಣಿಕೊಪ್ಪ ಗ್ರಾಮ ಪಂಚಾಯಿತಿ ಅಧ್ಯಕ್ಷೆ ಚೈತ್ರ ಬಿ ಚೇತನ್ ಅವರ ನೇತೃತ್ವದಲ್ಲಿ ಗ್ರಾ.ಪಂ. ಸದಸ್ಯರುಗಳು ಹಾಗೂ ಜಿಲ್ಲಾ ಆಹಾರ ಇಲಾಖೆ ಅಧಿಕಾರಿ ಶ್ರೀನಿವಾಸ್ ಮೂರ್ತಿ ಅವರ ತಂಡ ಹಲವು ಹೊಟೇಲ್ ಹಾಗೂ ಬೇಕರಿಗಳ ತಪಾಸಣೆ ನಡೆಸಿ ಆಹಾರ ಸುರಕ್ಷತೆಯನ್ನು ಪರಿಶೀಲಿಸಿತು. ಶುಚಿತ್ವ ಕಾಪಾಡಿಕೊಳ್ಳದೆ ಮತ್ತು ಪರವಾನಗಿ ಹೊಂದದೆ ಅನಧಿಕೃತವಾಗಿ ವ್ಯಾಪಾರದಲ್ಲಿ ತೊಡಗಿಸಿಕೊಂಡಿರುವ ಹೊಟೇಲ್ ಮತ್ತು ಬೇಕರಿಗಳ ಬಾಗಿಲು ಮುಚ್ಚಿಸಿ ನಿರ್ದಾಕ್ಷೀಣ್ಯ ಕ್ರಮ ಕೈಗೊಂಡರು.
ಆಹಾರ ಸುರಕ್ಷತೆ ಕಾಯ್ದೆ, ಸೂಕ್ತ ದಾಸ್ತಾನು, ಪರವಾನಗಿ ನವೀಕರಣ, ಕಾರ್ಮಿಕರಿಗೆ ವಿಮಾ ಸೌಲಭ್ಯ, ಹೊಟೇಲ್ಗಳಲ್ಲಿ ಶುದ್ಧ ಕುಡಿಯುವ ನೀರು ಕೊಡದೇ ಇರುವುದು, ಆಹಾರದಲ್ಲಿ ಅತಿಯಾದ ಬಣ್ಣ,
(ಮೊದಲ ಪುಟದಿಂದ) ಟೇಸ್ಟಿಂಗ್ ಸಾಲ್ಟ್ ಬಳಕೆ ಮಾಡುವುದು ಅಲ್ಲದೇ, ಸ್ವಚ್ಛತೆ ಕಾಪಾಡಿಕೊಳ್ಳದಿರುವುದು ಹೀಗೆ ಅನೇಕ ವಿಷಯಗಳ ಬಗ್ಗೆ ಪರಿಶೀಲಿಸಲು ವಿವಿಧ ಹೊಟೇಲ್, ಬೇಕರಿ, ಮಾಂಸದAಗಡಿಗಳ ಮೇಲೆ ದಾಳಿ ನಡೆಸಿ ಕ್ರಮ ಕೈಗೊಂಡರು.
ಜೊತೆಗೆ ಪ್ಲಾಸ್ಟಿಕ್ ಬಳಕೆ ನಿಷೇಧದ ಬಗೆ ಗಮನ ಹರಿಸುವಂತೆ ಇಲ್ಲವಾದಲ್ಲಿ ದಂಡ ವಿಧಿಸಲಾಗುತ್ತದೆ ಮತ್ತು ಪರವಾನಗಿ ನವೀಕರಣ ಮಾಡದೇ ವ್ಯಾಪಾರ ನಡೆಸುತ್ತಿರುವುದು ಕಂಡುಬAದಲ್ಲಿ ವರ್ತಕರ ವ್ಯಾಪಾರ ಮಳಿಗೆಗಳಿಗೆ ಬೀಗ ಜಡಿಯಲಾಗುವುದು ಈ ವಿಚಾರದಲ್ಲಿ ಉದ್ದಟತನ ತೋರಿದರೆ ನಿರ್ದಾಕ್ಷಿಣ್ಯ ಕ್ರಮ ಜರುಗಿಸಲಾಗುವುದು ಎಂದು ಎಚ್ಚರಿಕೆಯ ಸಂದೇಶವನ್ನು ಅಧ್ಯಕ್ಷೆ ಚೈತ್ರ ಬಿ. ಚೇತನ್ ಅವರು ವರ್ತಕರಿಗೆ ನೀಡಿದ್ದಾರೆ.
ಸರಿಯಾದ ಕ್ರಮದಲ್ಲಿ ತೆರಿಗೆ, ಪರವಾನಗಿ ನವೀಕರಣಗಳನ್ನು ಮಾಡುವುದರಿಂದ ಪಂಚಾಯಿತಿ ಮಟ್ಟದಲ್ಲಿ ಗ್ರಾಮ ಅಭಿವೃದ್ಧಿಗೆ ಆರ್ಥಿಕ ಕ್ರೋಢಿಕರಣಕ್ಕೆ ಸಾಧ್ಯವಾಗಬಲ್ಲದು. ಈ ನಿಟ್ಟಿನಲ್ಲಿ ಪ್ರತಿಯೊಬ್ಬರು ತಮ್ಮ ಜವಾಬ್ದಾರಿಯನ್ನು ನಿಭಾಯಿಸಬೇಕಾಗಿದೆ. ಈ ಕಾರಣ ಪಂಚಾಯಿತಿಯು ಕಟ್ಟು ನಿಟ್ಟಿನಲ್ಲಿಯೇ ಕಾನೂನು ನೆಲಗಟ್ಟಿನಲ್ಲಿ ಕರ್ತವ್ಯ ಪಾಲನೆ ಮಾಡಲು ಮುಂದಾಗಿದೆ. ಇದಕ್ಕೆ ಸಾರ್ವಜನಿಕರು ಸಹಕಾರ ಮನೋಭಾವಬೇಕೆಂದು ಹೇಳಿದರು.
ದಾಳಿಯ ಬಗ್ಗೆ ತಿಳಿಯುತ್ತಿದ್ದಂತೆ ವರ್ತಕರು ಪರವಾನಗಿ ನವೀಕರಣಕ್ಕೆ ಮತ್ತು ಉಳಿಸಿಕೊಂಡ ತೆರಿಗೆಯನ್ನು ಕಟ್ಟಲು ಪಂಚಾಯಿತಿಗೆ ಬಹುಸಂಖ್ಯೆಯಲ್ಲಿ ಹಾಜರಾದರು. ಈ ಸಂದರ್ಭ ಗ್ರಾ.ಪಂ. ಸದಸ್ಯರುಗಳಾದ ರಾಜೇಶ್ ಕೆ, ವಿವೇಕ್ ರಾಯ್ಕರ್, ಹಕೀಮ್, ಕೊಣಿಯಂಡ ಬೋಜಮ್ಮ, ಗೋಣಿಕೊಪ್ಪ ಎ.ಎಸ್.ಐ ಕೆ.ಸಿ ನಾಣಯ್ಯ, ಲೆಕ್ಕ ಪರಿಶೋಧಕ ಶುಭಾಶ್, ಕರ ವಸೂಲಿಗಾರ ಸತೀಶ್ ಇದ್ದರು. - ಎನ್.ಎನ್. ದಿನೇಶ್