(ಕೆ.ಎಂ. ಇಸ್ಮಾಯಿಲ್ ಕಂಡಕರೆ)
ಮಡಿಕೇರಿ, ಜು. ೧೮: ಜಿಲ್ಲೆಯಲ್ಲಿ ಸುರಿದ ಮಳೆಯಿಂದಾಗಿ, ಮನೆ ಹಾನಿಗೊಳಗಾಗಿ ವಾಸಕ್ಕೆ ಯೋಗ್ಯವಲ್ಲ ಎಂದು ಹೇಳಿ ಕಂದಾಯ ಇಲಾಖೆ, ಜಿಲ್ಲಾಡಳಿತ ಹಾಗೂ ಚೆಟ್ಟಳ್ಳಿ ಗ್ರಾಮ ಪಂಚಾಯಿತಿಯವರು, ಚೆಟ್ಟಳ್ಳಿ ಗ್ರಾಮ ಪಂಚಾಯಿತಿ ವ್ಯಾಪ್ತಿಯ ಏಳು ಕುಟುಂಬಗಳಿಗೆ ನೋಟೀಸ್ ನೀಡಿ ಸುರಕ್ಷಿತ ಸ್ಥಳಕ್ಕೆ ಅಥವಾ ಕಾಳಜಿ ಕೇಂದ್ರದಲ್ಲಿ ಇರುವಂತೆ ಸೂಚನೆ ನೀಡಿದ್ದರು.
ಆರ್.ಎಸ್. ಚೆಟ್ಟಳ್ಳಿ (ಪೊನ್ನತ್‌ಮೊಟ್ಟೆಯ ಸರಕಾರಿ ಹಿರಿಯ ಪ್ರಾಥಮಿಕ ಶಾಲೆಯಲ್ಲಿ) ಕಾಳಜಿ ಕೇಂದ್ರವನ್ನು ತೆರದು ಸಂತ್ರಸ್ತರಿಗೆ ಆಶ್ರಯ ನೀಡಲಾಗಿತ್ತು.
೧೧ ದಿನಗಳ ಕಾಲ ಕಾಳಜಿ ಕೇಂದ್ರದಲ್ಲಿ ಆಶ್ರಯ ಪಡೆದ ಪೊನ್ನತ್‌ಮೊಟ್ಟೆಯ ಏಳು ಕುಟುಂಬಗಳ ೨೮ ಸಂತ್ರಸ್ತರಿಗೆ ಏಕಾಏಕಿ ಕಂದಾಯ ಇಲಾಖೆಯವರು, ಮಳೆ ಕಡಿಮೆಯಾಗಿದೆ, ನೀವು ನಿಮ್ಮ ಮನೆ ಅಥವಾ ಸಂಬಧಿಕರ ಮನೆಗೆ ಭಾನುವಾರ ಮಧ್ಯರಾತ್ರಿಯೊಳಗೆ ತೆರಳಿ, ಸೋಮವಾರ ಬೆಳಿಗ್ಗೆ ಶಾಲೆಯ ಬಿಟ್ಟು ತೆರಳಿ ಎಂದು ನೋಟೀಸ್ ನೀಡಿದ್ದಾರೆ ಹಾಗೂ ಸಂತ್ರಸ್ತರಿಗೆ ನೀಡುತ್ತಿದ್ದ ಊಟ ಕೂಡ ಸ್ಥಗಿತಗೊಳಿಸಿದ್ದಾರೆ.
ಬೆಳಗ್ಗೆ ಉಪಹಾರವಿಲ್ಲ, ಉಪವಾಸದಲ್ಲಿ ಸಂತ್ರಸ್ತರು
ಆರ್.ಎಸ್. ಚೆಟ್ಟಳ್ಳಿ (ಪೊನ್ನತ್‌ಮೊಟ್ಟೆಯ) ಶಾಲೆಯ ಆಶ್ರಯ ಪಡೆದಿರುವ ಸಂತ್ರಸ್ತರಿಗೆ ನೀಡುವ ಆಹಾರವನ್ನು ಕೂಡ ಕಂದಾಯ ಇಲಾಖೆ ಸ್ಥಗಿತಗೊಳಿಸಿದ್ದಾರೆ. ಸೋಮವಾರ ಬೆಳಿಗ್ಗೆ ಊಟವಿಲ್ಲದೆ ಸಂತ್ರಸ್ತರು ಉಪವಾಸ ಕುಳಿತಿದ್ದರು. ಹಿರಿಯರಿಂದ ಚಿಕ್ಕ ಪುಟಾಣಿಗಳು ಕೂಡ ಕಾಳಜಿ ಕೇಂದ್ರದಲ್ಲಿ ಆಶ್ರಯ ಪಡೆದಿದ್ದರು. ಬೆಳಗ್ಗಿನ ಉಪಹಾರವಿಲ್ಲದೆ ಹಲವರು ಅವಲಕ್ಕಿ ಸಂತ್ರಸ್ತರಿಗೆ ನೀಡುವ ಆಹಾರವನ್ನು ಕೂಡ ಕಂದಾಯ ಇಲಾಖೆ ಸ್ಥಗಿತಗೊಳಿಸಿದ್ದಾರೆ. ಸೋಮವಾರ ಬೆಳಿಗ್ಗೆ ಊಟವಿಲ್ಲದೆ ಸಂತ್ರಸ್ತರು ಉಪವಾಸ ಕುಳಿತಿದ್ದರು. ಹಿರಿಯರಿಂದ ಚಿಕ್ಕ ಪುಟಾಣಿಗಳು ಕೂಡ ಕಾಳಜಿ ಕೇಂದ್ರದಲ್ಲಿ ಆಶ್ರಯ ಪಡೆದಿದ್ದರು. ಬೆಳಗ್ಗಿನ ಉಪಹಾರವಿಲ್ಲದೆ ಹಲವರು ಅವಲಕ್ಕಿ ಸೇವಿಸಿದರೆ, ಇನ್ನು ಕೆಲವರು ಉಪವಾಸದಲ್ಲೇ ಇದ್ದರು.
ಹೊಟ್ಟೆ ಹಸಿವಾಗುತ್ತಿದೆ ಊಟ ಕೊಡಿ ಅಮ್ಮಾ...
ಪೊನ್ನತ್‌ಮೊಟ್ಟೆಯ ಕಾಳಜಿ ಕೇಂದ್ರದಲ್ಲಿ ಒಟ್ಟು ೭ ಕುಟುಂಬಗಳ ೨೮ ಸಂತ್ರಸ್ತರು, ಆಶ್ರಯ ಪಡೆದಿದ್ದಾರೆ. ಪುಟಾಣಿ ಮಕ್ಕಳು ಸೇರಿ ಹಿರಿಯರು ಕೂಡ ಆಶ್ರಯ ಕೇಂದ್ರದಲ್ಲಿ ಇದ್ದಾರೆ. ಆದರೆ ಏಕಾಏಕಿ ಕಂದಾಯ ಇಲಾಖೆ ಕಾಳಜಿ ಕೇಂದ್ರವನ್ನು ಬಿಟ್ಟು ತೆರಳಲು ನೋಟೀಸ್ ನೀಡಿ, ಸಂತ್ರಸ್ತರಿಗೆ ನೀಡುತ್ತಿದ್ದ ಆಹಾರವನ್ನು ಕೂಡ ಬಂದ್ ಮಾಡಿದ್ದಾರೆ. ಆದರೆ ಸೋಮವಾರ ಮಧ್ಯಾಹ್ನ ಸಮಯದಲ್ಲಿ ಕಾಳಿಜಿ ಕೇಂದ್ರದಲ್ಲಿ ಆಶ್ರಯ ಪಡೆದ ಪುಟಾಣಿ ಮಗು ಹೊಟ್ಟೆ ಹಸಿವು ತಾಳಲಾರದೆ, ಊಟ ಕೊಡಿ ಅಮ್ಮಾ, ಎಂದು ಅಳುತ್ತಿದ್ದ ದೃಶ್ಯ ಕಾಳಜಿ ಕೇಂದ್ರದಲ್ಲಿ ಕಂಡುಬAತು. ಆ ಮಗುವಿಗೆ ಬೆಳಿಗ್ಗೆ ಉಪಾಹಾರಕ್ಕೆ ಮಾಡಿದ್ದ, ಅವಲಕ್ಕಿಯನ್ನು ಮಧ್ಯಾಹ್ನ ಪುಟಾಣಿ ಮಗುವಿನ ತಾಯಿ ನೀಡುತ್ತಿದ್ದ ಮನಕಲುಕುವ ದೃಶ್ಯ ಕಾಳಜಿ ಕೇಂದ್ರದಲ್ಲಿ ಕಂಡಿತು.
ಸೂಕ್ತ ವ್ಯವಸ್ಥೆ ಕಲ್ಪಿಸಲು ಒತ್ತಾಯ!
ಆರ್.ಎಸ್. ಚೆಟ್ಟಳ್ಳಿ ಶಾಲೆಯ ಕಾಳಜಿ ಕೇಂದ್ರದಲ್ಲಿ ಆಶ್ರಯ ಪಡೆದಿರುವ ಸಂತ್ರಸ್ತರಿಗೆ ಕಾಳಜಿ ಕೇಂದ್ರ ಬಿಟ್ಟು ತೆರಳಲು ನೋಟೀಸಿನ ವಿಷಯಕ್ಕೆ ಸಂತ್ರಸ್ತರು ಕಂದಾಯ ಇಲಾಖೆಯವರ ವಿರುದ್ಧ ಆಕ್ರೋಶ ಹೊರಹಾಕಿದ್ದಾರೆ. ನಾವು ಕಾಳಜಿ ಕೇಂದ್ರ ಬಿಟ್ಟು ತೆರಳಲ್ಲ. ನಮ್ಮ ಮನೆ ವಾಸಕ್ಕೆ ಯೋಗ್ಯವಲ್ಲ, ಅಪಾಯವಿದೆ ಎಂದು ಹೇಳಿ ಇವರೇ ಕಾಳಜಿ ಕೇಂದ್ರಕ್ಕೆ ತೆರಳುವಂತೆ ನೋಟೀಸ್ ನೀಡಿದ್ದರು.
ಇದೀಗ ರಾತ್ರೋರಾತ್ರಿ ಕಂದಾಯ ಇಲಾಖೆಯವರು ನಮಗೆ ಕಾಳಜಿ ಕೇಂದ್ರವನ್ನು ಬಿಟ್ಟು ತೆರಳಲು ಹೇಳುತ್ತಿದ್ದಾರೆ. ಚಿಕ್ಕ ಮಕ್ಕಳು ಹಾಗೂ ವಯಸ್ಸಾದವರನ್ನು ಕರೆದುಕೊಂಡು ನಾವು ಎಲ್ಲಿಗೆ ಹೋಗುವುದು?
ನಾವು ಶಾಲೆಯಲ್ಲಿರುವ ಕಾಳಜಿ ಕೇಂದ್ರವನ್ನು ಬಿಟ್ಟು ತೆರಳುತ್ತೇವೆ. ಆದರೆ ನಮಗೆ ಚೆಟ್ಟಳ್ಳಿ ಭಾಗದಲ್ಲೇ ಮಳೆ ಕಡಿಮೆಯಾಗುವವರೆಗೆ ಜಿಲ್ಲಾಡಳಿತ ಆಶ್ರಯ ನೀಡಬೇಕೆಂದು ಸಂತ್ರಸ್ತರು ಒತ್ತಾಯ ಮಾಡಿದ್ದಾರೆ.