ಮಡಿಕೇರಿ, ಜು. ೧೯: ಕಾಫಿ ಬೆಳೆಗೆ ಮುದ್ರಾಂಕ ಶುಲ್ಕದಿಂದ ವಿನಾಯಿತಿ ಇಲ್ಲ ಎಂಬ ನಿಯಮ ಜಾರಿಯೊಂದಿಗೆ ಬೆಳೆ ಸಾಲ ಪಡೆದ ರೈತರ ನಮೂನೆ-೩ (ಫಾರಂ-೩) ನೋಂದಣಿ ದಾಖಲಾತಿ ಸ್ಥಗಿತಗೊಂಡಿದೆ. ಇದರಿಂದಾಗಿ ರಾಜ್ಯ ಸರಕಾರದ ಶೂನ್ಯ ಬಡ್ಡಿ ದರದ ಬೆಳೆ ಸಾಲ ವಿತರಣೆಗೆ ಅಡಚಣೆಯಾಗಿದೆ. ಈ ಬಗ್ಗೆ ಗಮನಹರಿಸಿ ಇತರೆ ಆಹಾರ ಬೆಳೆಗಳಿಗೂ ಇರುವಂತೆ ಕಾಫಿ ಬೆಳೆಗೂ ಕೂಡ ಮುದ್ರಾಂಕ ಶುಲ್ಕದಿಂದ ವಿನಾಯಿತಿ ನೀಡುವಂತೆ ಜಿಲ್ಲಾ ಕೇಂದ್ರ ಸಹಕಾರ ಬ್ಯಾಂಕ್ ಅಧ್ಯಕ್ಷ ಕೊಡಂದೇರ ಬಾಂಡ್ ಗಣಪತಿ ಅವರು ಸರಕಾರ ಹಾಗೂ ಸಂಬAಧಿಸಿದವರಲ್ಲಿ ಮನವಿ ಮಾಡಿದ್ದಾರೆ.
ಡಿ.ಸಿ.ಸಿ. ಬ್ಯಾಂಕ್ ಮತ್ತು ಜಿಲ್ಲೆಯಲ್ಲಿ ಪ್ರಾಥಮಿಕ ಕೃಷಿ ಪತ್ತಿನ ಸಹಕಾರ ಸಂಘಗಳು ಫ್ರೂಟ್ಸ್ ತಂತ್ರಾAಶದಲ್ಲಿನ ರೈತರು ಹೊಂದಿರುವ ವಿಶಿಷ್ಟ ಗುರುತಿನ ಸಂಖ್ಯೆಗೆ ಅನುಗುಣವಾಗಿ ಸ್ಥಿರಾಸ್ತಿ ಮತ್ತು ಸಾಲದ ಮಾಹಿತಿಯನ್ನು ಅಳವಡಿಸಿ ಉಪನೋಂದಣಾಧಿಕಾರಿಗಳ ಕಚೇರಿಗೆ ನಮೂನೆ-೩ರ ದಾಖಲಾತಿ ಸಂಬAಧ ತಂತ್ರಾAಶದ ಮೂಲಕ ಸಲ್ಲಿಸಿದ ಸಂದರ್ಭದಲ್ಲಿ ನೋಂದಾಣಿ ಮಹಾಪರೀಕ್ಷಕರು ಮತ್ತು ಮುದ್ರಾಂಕ ಆಯುಕ್ತರ ಹಿಂಬರಹ ಸಂಖ್ಯೆ SಖಿP-೫೪/೧೧-೨೨ ದಿನಾಂಕ ೨೧.೦೯.೨೦೧೧ರನ್ವಯ ಉಪ ನೋಂದಣಾಧಿಕಾರಿಗಳು ಕಾಫಿ ಬೆಳೆಗೆ ಮುದ್ರಾಂಕ ಶುಲ್ಕದಿಂದ ವಿನಾಯಿತಿ ಇಲ್ಲವೆಂದು ತಿಳಿಸಿದ್ದಾರೆ. ‘ಅoಜಿಜಿee ಅಡಿoಠಿ ಛಿಚಿಟಿಟಿoಣ be seಟeಛಿಣeಜ ಜಿoಡಿ ಈoಡಿm-೩, ಞiಟಿಜಟಥಿ seಟeಛಿಣ moಡಿಣಚಿge ಣಡಿಚಿಟಿsಚಿಛಿಣioಟಿ’ ಇದರಿಂದ ಬೆಳೆ ಸಾಲ ಪಡೆದ ರೈತರ ನಮೂನೆ-೩ರ ನೋಂದಣಿ ದಾಖಲಾತಿಯ ಸ್ಥಗಿತಗೊಂಡಿರುತ್ತದೆ ಮತ್ತು ಫ್ರೂಟ್ಸ್ ತಂತ್ರಾAಶದಡಿ ನೋಂದಣಿ ಪ್ರಕ್ರಿಯೆಯನ್ನು ಪೂರ್ಣಗೊಳಿಸದೇ ಇರುವುದರಿಂದ ರೈತರ ಕಾಫಿ ಬೆಳೆ ಆಧಾರಿತ ಬೆಳೆ ಸಾಲವನ್ನು ಸಕಾಲದಲ್ಲಿ ರೈತರಿಗೆ ವಿತರಣೆ ಮಾಡುವಲ್ಲಿ ಗೊಂದಲ ಉಂಟಾಗಿರುತ್ತದೆ ಎಂದು ಬಾಂಡ್ ಗಣಪತಿ ಗಮನ ಸೆಳೆದಿದ್ದಾರೆ.
ಜಿಲ್ಲೆಯು ಪ್ರಮುಖವಾಗಿ ಕಾಫಿ ಬೆಳೆಯನ್ನು ಅವಲಂಭಿಸಿದ್ದು, ರೈತರು ಸದರಿ ಕಾಫಿ ಬೆಳೆÀಯ ಆಧಾರದಲ್ಲಿ ಸಹಕಾರ ಸಂಘಗಳು ಮತ್ತು ಡಿ.ಸಿ.ಸಿ. ಬ್ಯಾಂಕಿನಿAದ ಅಲ್ಪಾವಧಿ ಬೆಳೆ ಸಾಲವನ್ನು ಪಡೆಯುತ್ತಿದ್ದು, ರಾಜ್ಯ ಸರ್ಕಾರವು ಫ್ರೂಟ್ಸ್ ತಂತ್ರಾAಶದಡಿ ರೈತರು ಪಡೆಯುವ ಬೆಳೆ ಸಾಲದ ನಮೂನೆ-೩ರ ದಾಖಲಾತಿಗಾಗಿ e-sಚಿಚಿಟಚಿ ತಂತ್ರಾAಶವನ್ನು ಹೊರತಂದ ನಂತರದಲ್ಲಿ ‘ಕಾಫಿ ಬೆಳೆಗೆ’ ಮುದ್ರಾಂಕ ಶುಲ್ಕದಿಂದ ವಿನಾಯಿತಿ ಇಲ್ಲವೆಂದು ಉಪನೋಂದಣಾಧಿಕಾರಿಗಳ ಕಚೇರಿಯಲ್ಲಿ ಈ ಪ್ರಕ್ರಿಯೆಯನ್ನು ಸ್ಥಗಿತಗೊಳಿಸಿದೆ. ಇದನ್ನು ಮನಗಂಡು ಮತ್ತು ನೆರೆಯ ಕಾಫಿ ಬೆಳೆಯುವ ಜಿಲ್ಲೆಗಳಾದ ಹಾಸನ ಮತ್ತು ಚಿಕ್ಕಮಗಳೂರು ಜಿಲ್ಲೆಗಳಲ್ಲಿ ಕಾಫಿ ಬೆಳೆಗಾರರಿಂದ ಮುದ್ರಾಂಕ ಶುಲ್ಕ ಪಡೆಯದೇ ನಮೂನೆ-೩ರ ದಾಖಲಾತಿಯನ್ನು ಮಾಡುತ್ತಿರುವುದನ್ನು ತಿಳಿದು - ಜಿಲ್ಲೆಯ ರೈತರು ಮತ್ತು ಸಹಕಾರ ಸಂಘಗಳ ಹಿತದೃಷ್ಟಿಯಿಂದ - ಇತರೆ ಆಹಾರ ಬೆಳೆಗಳಿಗೂ ಇರುವಂತೆ ಕಾಫಿ ಬೆಳಗೂ ಮುದ್ರಾಂಕ ಶುಲ್ಕದಲ್ಲಿ ವಿನಾಯಿತಿಯನ್ನು ಕೊಡಿಸಿಕೊಡುವಂತೆ ಅವರು ಮನವಿ ಮಾಡಿದ್ದಾರೆ. ಈ ಬಗ್ಗೆ ರಾಜ್ಯದ ಮುಖ್ಯಮಂತ್ರಿಗಳು, ಕಂದಾಯ ಸಚಿವರು, ಜಿಲ್ಲಾ ಉಸ್ತುವಾರಿ ಸಚಿವರು, ಸಂಸದರು, ಜಿಲ್ಲೆಯ ಎಲ್ಲಾ ಶಾಸಕರುಗಳು ಜಿಲ್ಲೆಯ ವಿಧಾನಪರಿಷತ್ ಸದಸ್ಯರುಗಳು ಹಾಗೂ ಜಿಲ್ಲಾಧಿಕಾರಿಗಳಿಗೆ ಮನವಿ ಪತ್ರಗಳನ್ನು ಸಲ್ಲಿಸಲಾಗಿದೆ.
ಮುಖ್ಯಮಂತ್ರಿಗಳು ತಮ್ಮ ಅಧೀನ ಕಾರ್ಯದರ್ಶಿಗಳ ಪತ್ರದ ಮುಖಾಂತರ ಅಧ್ಯಕ್ಷರ ಮನವಿಗೆ ಸ್ಪಂದಿಸಿ ಪ್ರಸ್ತಾವನೆಯನ್ನು ಕಂದಾಯ ಇಲಾಖೆಗೆ ಸೂಕ್ತ ಕ್ರಮಕ್ಕಾಗಿ ಕಳುಹಿಸಿಕೊಟ್ಟಿರುವುದಾಗಿ ತಿಳಿಸಿದ್ದಾರೆ.
ಉಸ್ತುವಾರಿ ಸಚಿವರಾದ ಬಿ.ಸಿ. ನಾಗೇಶ್ ಅವರು ಕಾಫಿ ಬೆಳೆಗೆ ನಮೂನೆ-೩ರ ದಾಖಲಾತಿ ಮಾಡುವ ಸಂದರ್ಭದಲ್ಲಿ ಮುದ್ರಾಂಕ ಶುಲ್ಕ ವಿಧಿಸುತ್ತಿರುವುದಕ್ಕೆ ವಿನಾಯಿತಿಯನ್ನು ಕೊಡಿಸಿಕೊಡುವಂತೆ ಕಂದಾಯ ಇಲಾಖೆಗೆ ಸೂಚಿಸಿರುವುದಾಗಿ ತಿಳಿಸಿದ್ದಾರೆ. ಜಿಲ್ಲಾಧಿಕಾರಿಗಳು ಕೂಡ ಮುಖ್ಯಮಂತ್ರಿಗಳ ಪ್ರಧಾನ ಕಾರ್ಯದರ್ಶಿಗಳಿಗೆ ತಮ್ಮ ಪತ್ರ ಬರೆದು ಏಚಿveಡಿi ಈಡಿuiಣs ಸಂಯೋಜಿತ ತಂತ್ರಾAಶದಲ್ಲಿ ಸೂಕ್ತ ಮಾರ್ಪಾಡುಗಳನ್ನು ಅಳವಡಿಸಿ ಕಾಫಿ ಬೆಳೆಗಾರರು ಬರೆದುಕೊಡುವ ಫಾರಂ-೩ ಡಿಕ್ಲರೇಷನ್‌ಗಳಿಗೆ ಮುದ್ರಾಂಕ ಶುಲ್ಕ ಆಕರಣೆಯಿಂದ ಬೇರೆ ರೈತರಿಗೆ ವಿನಾಯಿತಿ ನೀಡಿದಂತೆ ಕಾಫಿ ಬೆಳೆಗಾರರಿಗೂ ಸಹ ವಿನಾಯಿತಿ ನೀಡಿ ತಂತ್ರಾAಶವನ್ನು ಅಭಿವೃದ್ಧಿಪಡಿಸಿರುವ ಸಂಬAಧಪಟ್ಟ ಇಲಾಖಾಧಿಕಾರಿಗಳಿಗೆ ಸೂಕ್ತ ನಿರ್ದೇಶನ ನೀಡುವ ಬಗ್ಗೆ ಕೋರಿಕೊಂಡಿರುವುದಾಗಿ ಬಾಂಡ್ ಗಣಪತಿ ತಿಳಿಸಿದ್ದಾರೆ.
ಈ ಎಲ್ಲಾ ಮನವಿ ಪತ್ರಗಳ ಹಿನ್ನೆಲೆಯಲ್ಲಿ ಜಿಲ್ಲೆಯ ರೈತರು ಹಾಲಿ ಕಾಫಿ ಬೆಳೆ ಆಧಾರದಲ್ಲಿ ಪಡೆಯುತ್ತಿರುವ ಬೆಳೆ ಸಾಲದ ಫಾರಂ-೩ರ ನೋಂದಾಣಿಯಲ್ಲಿನ ಮುದ್ರಾಂಕ ಶುಲ್ಕಕ್ಕೆ ಶೀಘ್ರ ವಿನಾಯಿತಿ ದೊರಕುವ ಆಶಾಭಾವನೆಯನ್ನು ಹೊಂದಲಾಗಿದೆ. ಜಿಲ್ಲೆಯ ರೈತರು ಗೊಂದಲಕ್ಕೀಡಾಗದೇ ಡಿ.ಸಿ.ಸಿ. ಬ್ಯಾಂಕ್ ಮತ್ತು ಸಹಕಾರ ಸಂಘಗಳು ಒದಗಿಸಿರುವ ಬೆಳೆ ಸಾಲವನ್ನು ಅವಧಿಗೆ ಸರಿಯಾಗಿ ಮರುಪಾವತಿಸಿ ಹೊಸ ಸಾಲ ಪಡೆದುಕೊಳ್ಳುವಂತೆ ಹಾಗೂ ಹಿಂದಿನ ಅವಧಿಯಲ್ಲಿ ಪಡೆದ ಬೆಳೆ ಸಾಲವನ್ನು ಅವಧಿಗನುಗುಣವಾಗಿ ಮರುಪಾವತಿಸಿದ ರೈತರ ಪರವಾಗಿ ರಾಜ್ಯ ಸರ್ಕಾರವು ಭರಿಸಿಕೊಡಲಿರುವ ವ್ಯತ್ಯಾಸದ ಬಡ್ಡಿ ಸಹಾಯಧನವನ್ನು ಕ್ಲೆöÊಂ ಮಾಡಿಕೊಡುವಲ್ಲಿಯೂ ಡಿ.ಸಿ.ಸಿ. ಬ್ಯಾಂಕ್ ಎಲ್ಲಾ ಅಗತ್ಯ ಕ್ರಮಗಳನ್ನು ಕೈಗೊಂಡಿರುವುದಾಗಿ ಅವರು ಪ್ರಕಟಣೆಯಲ್ಲಿ ವಿವರಿಸಿದ್ದಾರೆ.