ಮಡಿಕೇರಿ, ಜು. ೧೮: ರೋಟರಿ ಕ್ಲಬ್ ಮಡಿಕೇರಿ ವುಡ್ಸ್ನ ವತಿಯಿಂದ ನಗರದ ಬಾಲಭವನದ ೨೦ ವಿದ್ಯಾರ್ಥಿಗಳಿಗೆ ಅಗತ್ಯ ಔಷಧಿ, ಸ್ಯಾನಿಟರಿ ಪ್ಯಾಡ್, ಟಾನಿಕ್‌ಗಳನ್ನು ರೋಟರಿ ಕ್ಲಬ್‌ನ ಆರೋಗ್ಯ ಸಿರಿಯೋಜನೆಯ ಅಡಿಯಲ್ಲಿ ವಿತರಿಸಲಾಯಿತು.

ಜಿಲ್ಲಾ ರೋಟರಿಯ ಓರಿಯೆಂಟೇಷನ್ ಛೇರ್ಮನ್ ಬಿ.ಜಿ. ಅನಂತಶಯನ, ಮಡಿಕೇರಿ ವುಡ್ಸ್ನ ಅಧ್ಯಕ್ಷ ಸಂಪತ್ ಕುಮಾರ್, ಕಾರ್ಯದರ್ಶಿ ವಸಂತಕುಮಾರ್, ಉಪಾಧ್ಯಕ್ಷೆ ಪದ್ಮಗಿರಿ, ತೀಕ್ಷ÷್ಣ, ಧನಂಜಯ್ ಶಾಸ್ತಿç, ಬಾಲಸುಬ್ರಮಣ್ಯ, ಕವಿತಾ, ಎ.ಕೆ. ಲೋಕೇಶ್, ಡಾ. ಅಧಿತಿ ಪಿ. ಭಟ್ ಮತ್ತು ಬಾಲಭವನದ ಮೇಲ್ವಿಚಾರಕರುಗಳಾದ ಚೈತ್ರ, ದಮಯಂತಿ ಹಾಜರಿದ್ದರು.