ಕಣಿವೆ, ಜು. ೧೮ : ಇಲ್ಲಿನ ಇಗ್ಗುತ್ತಪ್ಪ ಸ್ಪೋರ್ಟ್ಸ್ ಅಂಡ್ ಕಲ್ಚರಲ್ ಅಸೋಸಿಯೇಷನ್ ವತಿಯಿಂದ ಇಸ್ಕಾ ಕುಶಾಲನಗರ ಬ್ಯಾಡ್ಮಿಂಟನ್ ಲೀಗ್ ೨೦೨೨ ಪಂದ್ಯಾವಳಿಯನ್ನು ಆಯೋಜಿಸಲಾಗಿತ್ತು.
ಕ್ರೀಡಾಕೂಟವನ್ನು ಅಸೋಸಿಯೇಷನ್ ಅಧ್ಯಕ್ಷ ಕರ್ನಂಡ ಅರುಣ್ ಮೊಣ್ಣಪ್ಪ ಉದ್ಘಾಟಿಸಿ ಮಾತನಾಡಿ, ಕ್ರೀಡಾಕೂಟ ಮನುಷ್ಯನ ಆರೋಗ್ಯ ವೃದ್ದಿ ಹಾಗೂ ಸ್ನೇಹ ಸಾಮರಸ್ಯ ಬೆಸೆಯಲು ಉತ್ತಮ ಸಾಧನವಾಗಿದೆ ಎಂದರು.
ಈ ಸಂದರ್ಭ ಉಪಾಧ್ಯಕ್ಷ ಸೋಮೆಯಂಡ ಜಗ್ಗ ಪೂವಯ್ಯ, ಕಾರ್ಯದರ್ಶಿ ಮೇವಡ ಮಧು ಮಾದಯ್ಯ, ಖಜಾಂಚಿ ಮೂವೆರ ಗಣೇಶ್, ಕ್ರೀಡಾ ಕಾರ್ಯದರ್ಶಿ ಮಂಡೇಪAಡ ಚಿಮ್ಮ ಉತ್ತಪ್ಪ, ನಿರ್ದೇಶಕರಾದ ಚಂದಪAಡ ಕಾವ್ಯ ಸೂರಜ್, ಅಪ್ಪಚೆಟ್ಟೋಳಂಡ ಅಜಿತ್ ಅಚ್ಚಯ್ಯ, ಪಾಲಚಂಡ ಸುರೇಶ್ ಮಾದಪ್ಪ, ಚೌರೀರ ಪಿ.ಸುಧೀಶ್ ಹಾಗು ಕ್ರೀಡಾ ಕೂಟದ ಸಂಯೋಜಕರಾದ ಚಂದಪAಡ ಸೂರಜ್, ಮಾತಂಡ ನವೀನ್, ಕ್ರೀಡಾ ತರಬೇತುದಾರ ನಿರಂಜನ್ ಇದ್ದರು. ಪಂದ್ಯಾವಳಿಯಲ್ಲಿ ವಿವಿಧ ಏಳು ತಂಡಗಳ ೯೦ ಆಟಗಾರರು ಭಾಗವಹಿಸಿದ್ದರು.