ಮಡಿಕೇರಿ, ಜು. ೧೯: ಕಾವೇರಿ ಮಾತೆ ಹಾಗೂ ಕೊಡವ ಜನಾಂಗದ ಮಹಿಳೆಯರ ಬಗ್ಗೆ ಅವಹೇಳನ ಮಾಡಿದ್ದ ಪ್ರಕರಣಕ್ಕೆ ಸಂಬAಧಿಸಿದAತೆ ಕೊಡವ ಸಮಾಜಗಳ ಒಕ್ಕೂಟ ವಿವಿಧ ಕೊಡವ ಸಮಾಜ - ಸಂಘಟನೆಗಳ ಮೂಲಕ ತಾ. ೨೯ ರಂದು ಮಡಿಕೇರಿ ಯಲ್ಲಿ ನಡೆಸಲು ಉದ್ದೇಶಿಸಲಾಗಿದ್ದ ಪ್ರತಿಭಟನೆಯನ್ನು ಕೈಬಿಡಲು ನಿರ್ಧರಿಸಲಾಗಿದೆ. ಈ ಬಗ್ಗೆ ಒಕ್ಕೂಟದ ಅಧ್ಯಕ್ಷ ಕಳ್ಳಿಚಂಡ ವಿಷ್ಣು ಕಾರ್ಯಪ್ಪ ಹಾಗೂ ಕಾರ್ಯದರ್ಶಿ ವಾಟೇರಿರ ಶಂಕರಿ ಪೂವಯ್ಯ ಅವರುಗಳು ಮಾಹಿತಿ ನೀಡಿದ್ದಾರೆ.

ಸಾಮಾಜಿಕ ಜಾಲತಾಣದಲ್ಲಿ ಅವಹೇಳನಕಾರಿ ಸಂದೇಶ ಹರಿಯ ಬಿಟ್ಟಿದ್ದನ್ನು ಆಕ್ಷೇಪಿಸಿ ಇದಕ್ಕೆ ಎಲ್ಲಾ ಸಮಾಜ - ಸಂಘಟನೆಗಳು ತೀವ್ರ ವಿರೋಧ ವ್ಯಕ್ತಪಡಿಸಿದ್ದವು. ಅಲ್ಲದೆ ಹಲವೆಡೆ ಪೊಲೀಸ್ ದೂರು ದಾಖಲಿಸಲಾಗಿತ್ತು. ಆದರೆ ಆರೋಪಿ ಬಂಧನ ವಿಳಂಬವಾಗುತ್ತಿದ್ದ ಬಗ್ಗೆ ಅಸಮಾಧಾನ ವ್ಯಕ್ತಪಡಿಸಿ ತಾ. ೨೯ ರಂದು ಮಡಿಕೇರಿಯಲ್ಲಿ ಪ್ರತಿಭಟನೆಗೆ ಮುಂದಾಗಲಾಗಿತ್ತು. ಇದೀಗ ಪೊಲೀಸ್ ಇಲಾಖೆ ಆರೋಪಿಯನ್ನು ಬಂಧಿಸಿ ಈ ಪ್ರಕರಣವನ್ನು ಬಯಲಿಗೆಳೆದಿದೆ. ಈ ಕಾರಣದಿಂದ ಪ್ರತಿಭಟನೆ ಕೈಬಿಡಲಾಗಿದೆ ಎಂದು ತಿಳಿಸಿದ್ದಾರೆ.

(ಮೊದಲ ಪುಟದಿಂದ) ಕೊಡವ ಸಮಾಜ ಒಕ್ಕೂಟ, ಸಮಾಜ - ಸಂಘಟನೆಗಳು ಸಂದೇಶ ಹರಿಯಬಿಟ್ಟಿದ್ದ ನೈಜ ಆರೋಪಿಯನ್ನು ಬಂಧಿಸಿ ಸೂಕ್ತ ಕಾನೂನು ಕ್ರಮಕ್ಕೆ ಒಕ್ಕೊರಲಿನಿಂದ ಆಗ್ರಹಿಸಿತ್ತು. ಈ ಬೇಡಿಕೆ ಒತ್ತಾಯ ಯಾವುದೇ ಜನಾಂಗದ ವಿರುದ್ಧವಾಗಿರಲಿಲ್ಲ ಎಂದು ಸ್ಪಷ್ಟಪಡಿಸುವದಾಗಿ ತಿಳಿಸಿರುವ ಅವರು ಇದಕ್ಕೆ ಸ್ಪಂದಿಸಿದ್ದ ನಾಡಿನ ಎಲ್ಲಾ ಜನರ ಸಹಕಾರಕ್ಕೆ ಕೃತಜ್ಞತೆ ಸಲ್ಲಿಸುವುದಾಗಿಯೂ ಹೇಳಿದ್ದಾರೆ.

ಈ ಘಟನೆಗೆ ಸಂಬAಧಿಸಿದAತೆ ಸೂಕ್ತ ತನಿಖೆಯ ಮೂಲಕ ನೈಜಾಂಶ ಬಯಲಿಗೆಳೆದ ಜಿಲ್ಲೆಯ ಪೊಲೀಸ್ ವರಿಷ್ಠಾಧಿಕಾರಿಗಳು ಸೇರಿದಂತೆ ಇತರ ಎಲ್ಲಾ ಅಧಿಕಾರಿಗಳು, ಸಿಬ್ಬಂದಿಗಳ ಕಾರ್ಯವೈಖರಿಯನ್ನು ಒಕ್ಕೂಟ ಸ್ವಾಗತಿಸಿ ಅಭಿನಂದಿಸುವುದಾಗಿಯೂ ಅವರು ಪ್ರಕಟಣೆಯಲ್ಲಿ ತಿಳಿಸಿದ್ದಾರೆ.