ಮಡಿಕೇರಿ, ಜು.೧೮: ನಗರದ ಫೀಲ್ಡ್ ಮಾರ್ಷಲ್ ಕೆ.ಎಂ.ಕಾರ್ಯಪ್ಪ ಕಾಲೇಜಿನಲ್ಲಿ ಎಂ.ಎ. ಕೊಡವ ಸ್ನಾತಕೋತ್ತರ ವಿಭಾಗ, ಫೀಲ್ಡ್ ಮಡಿಕೇರಿ, ಜು.೧೮: ನಗರದ ಫೀಲ್ಡ್ ಮಾರ್ಷಲ್ ಕೆ.ಎಂ.ಕಾರ್ಯಪ್ಪ ಕಾಲೇಜಿನಲ್ಲಿ ಎಂ.ಎ. ಕೊಡವ ಸ್ನಾತಕೋತ್ತರ ವಿಭಾಗ, ಫೀಲ್ಡ್ ಮಡಿಕೇರಿ ಕೊಡವ ಸಮಾಜದ ಅಧ್ಯಕ್ಷ ಮಂಡುವAಡ ಪಿ.ಮುತ್ತಪ್ಪ ಕಾರ್ಯಕ್ರಮವನ್ನು ಉದ್ಘಾಟಿಸಿ ಮಾತನಾಡಿ, ಕೊಡವ ಜನಾಂಗ ಮಾತ್ರವಲ್ಲದೆ ಕೊಡವ ಸಂಸ್ಕೃತಿಯೂ ಉಳಿಯಬೇಕಾದರೆ ಭಾಷೆ ಬಹಳ ಮುಖ್ಯ. ಕೊಡವ ಭಾಷೆ ಉಳಿಯ ಬೇಕಾದರೆ ವ್ಯಾಕರಣವೂ ಒಂದು ಭಾಗವಾಗಿದೆ. ಕರ್ನಾಟಕ ಕೊಡವ ಸಾಹಿತ್ಯ ಅಕಾಡೆಮಿಯು ಮೊದಲ ಬಾರಿಗೆ ಕೊಡವ ವ್ಯಾಕರಣ ಪುಸ್ತಕವನ್ನು ತಂದಿರುವುದು ಒಂದು ಹೆಮ್ಮೆಯ ವಿಷಯ ಎಂದರು. ಕೊಡವ ಭಾಷೆ ಬೆಳೆಯಲಿ, ಉಳಿಯಲಿ ಎಂದು ಆಶಿಸಿದರು.

ಕೊಡಗು ಜಿಲ್ಲಾ ಕನ್ನಡ ಸಾಹಿತ್ಯ ಪರಿಷತ್ತಿನ ಅಧ್ಯಕ್ಷ ಕೇಶವ ಕಾಮತ್ ಮಾತನಾಡಿ, ಕೊಡವ ಭಾಷೆ ಉಳಿವಿಗೆÀ ವ್ಯಾಕರಣ ಬಹಳ ಮುಖ್ಯ. ಈಗಿನ ಜನಾಂಗದವರು

(ಮೊದಲ ಪುಟದಿಂದ) ಎಲ್ಲಾ ಭಾಷೆಗಳನ್ನು ಮಿಶ್ರಿತವಾಗಿ ಬಳಸಿಕೊಂಡು ಮಾತನಾಡುತ್ತಾ ನಮ್ಮ ಸಂಸ್ಕೃತಿಗೆ ಧಕ್ಕೆ ಉಂಟುಮಾಡುತ್ತಿದ್ದಾರೆ. ಇದು ನಿಲ್ಲಬೇಕು. ಎಲ್ಲರೂ ಮಾತೃ ಭಾಷೆಯನ್ನು ಬೆಳೆಸಲು ಪ್ರಯತ್ನಿಸಬೇಕು ಎಂದು ಹೇಳಿದರು.

ಫೀಲ್ಡ್ ಮಾರ್ಷಲ್ ಕೆ.ಎಂ.ಕಾರ್ಯಪ್ಪ ಕಾಲೇಜಿನ ಪ್ರಾಂಶುಪಾಲ ಡಾ.ಚೌರೀರ ಜಗತ್ ತಿಮ್ಮಯ್ಯ ಅವರು ಮಾತನಾಡಿ, ಇನ್ನೂ ಹೆಚ್ಚು ಇಂತಹ ಸ್ಫೂರ್ತಿದಾಯಕ ಕಾರ್ಯಕ್ರಮಗಳು ನಡೆಯಲಿ. ಯುವಪ್ರತಿಭೆಗಳಿಗೂ ಪ್ರೋತ್ಸಾಹ ನೀಡಿದಂತಾಗುತ್ತದೆ ಎಂದು ಹೇಳಿದರು.

ಕರ್ನಾಟಕ ಕೊಡವ ಸಾಹಿತ್ಯ ಅಕಾಡೆಮಿಯ ಅಧ್ಯಕ್ಷೆ ಡಾ.ಅಮ್ಮಾಟಂಡ ಪಾರ್ವತಿ ಅಪ್ಪಯ್ಯ ಮಾತನಾಡಿ, ಸುಮಾರು ಐವತ್ತು ವರುಷದವರೆಗೆ ಯಾರು ಕೊಡವ ಭಾಷೆಯ ವ್ಯಾಕರಣವನ್ನು ಬರೆಯಲಿಲ್ಲ. ಕೊಡವ ಭಾಷೆಯ ಓದಿಗೆ ಹಾಗೂ ಬೆಳವಣಿಗೆಗೆ ಈ ವ್ಯಾಕರಣ ಪುಸ್ತಕವು ತುಂಬಾ ಉಪಯುಕ್ತವಾದುದು. ಅಲ್ಲದೆ ಈ ಕೊಡವ ಭಾಷೆಯು ಆಡಳಿತ ಭಾಷೆಯೂ, ಸಂಪರ್ಕ ಮಾಧ್ಯಮ ಭಾಷೆಯೂ ಆದಲ್ಲಿ ೮ನೇ ಪರಿಚ್ಛೇಧಕ್ಕೆ ಸೇರಲು ಸುಲಭವಾಗುತ್ತದೆ ಎಂದರು.

ಕರ್ನಾಟಕ ಕೊಡವ ಸಾಹಿತ್ಯ ಅಕಾಡೆಮಿ ಪ್ರಕಟಿತ ಚೀರಮ್ಮನ ವಾಣಿ ಚಂಗುಮ್ಮಯ್ಯನವರು ಬರೆದಿರುವ ‘ಭಾವನೆಲ್ ಪಬ್ಬ್ನ ಬಳ್ಳಿ’, ಪಂದ್ಯAಡ ರೇಣುಕಾ ಸೋಮಯ್ಯ ಅವರು ಬರೆದಿರುವ ‘ಪೊಂಬೊಳಿ’ ಹಾಗೂ ಡಾ.ವಿ.ಅವಿನಾಶ್‌ರವರ ಸಂಶೋಧನಾ ಪ್ರಬಂಧವಾಗಿರುವ ‘ಕೊಡಗಿನಲ್ಲಿ ಸಾಂವಿಧಾನಿಕ ಸುಧಾರಣೆ ಮತ್ತು ರಾಜಕೀಯ ಪರಿವರ್ತನೆಗಳು (ಕ್ರಿ.ಶ.೧೯೨೪-೧೯೪೭)’ಗಳನ್ನು ಈ ಕಾರ್ಯಕ್ರಮದಲ್ಲಿ ಬಿಡುಗಡೆ ಮಾಡಲಾಯಿತು.

ವ್ಯಾಕರಣ ಸಮಿತಿಯ ಸದಸ್ಯರಾಗಿರುವ ನಾಗೇಶ್ ಕಾಲೂರು ಅವರು ವ್ಯಾಕರಣದ ಮಹತ್ವದ ಬಗ್ಗೆ ತಿಳಿಸಿದರು. ವೀರಾಜಪೇಟೆ ಪೂಮಾಲೆ ವಾರಪತ್ರಿಕೆಯ ಸಂಪಾದಕರಾಗಿರುವ ಅಜ್ಜಿನಿಕಂಡ ಮಹೇಶ್ ನಾಚಯ್ಯ ಅವರು “ಕೊಡವ ಪಾಜೆಲ್ ವ್ಯಾಕರಣತ್‌ರ ಮಹತ್ವ” ಎಂಬ ವಿಷಯದ ಬಗ್ಗೆ ವಿಚಾರಮಂಡನೆ ಮಾಡಿದರು. ಕಾರ್ಯಕ್ರಮದಲ್ಲಿ ಅಕಾಡೆಮಿಯ ಸದಸ್ಯರಾದ ಕುಡಿಯರ ಮುತ್ತಪ್ಪ ಇತರರು ಇದ್ದರು.

ತೇಲಪಂಡ ಕವನ್ ಕಾರ್ಯಪ್ಪ ನಿರೂಪಿಸಿದರು. ರಿಜಿಸ್ಟಾçರ್ ಅಜ್ಜಿಕುಟ್ಟಿರ.ಸಿ.ಗಿರೀಶ್ ಸ್ವಾಗತಿಸಿದರು. ಮಾಚಿಮಾಡ ಜಾನಕಿ ಮಾಚಯ್ಯ ಅವರು ಪ್ರಾರ್ಥಿಸಿ, ಎಂ.ಎ.ಕೊಡವ ಸ್ನಾತಕೋತ್ತರ ವಿಭಾಗದ ಸಂಯೋಜಕ ಮೇಚೀರ ರವಿಶಂಕರ್ ನಾಣಯ್ಯ ಅವರು ವಂದಿಸಿದರು.