ಶನಿವಾರಸಂತೆ, ಜು. ೧೮: ದುಂಡಳ್ಳಿ ಗ್ರಾಮ ಪಂಚಾಯಿತಿ ವ್ಯಾಪ್ತಿಯ ಸುಳುಗಳಲೆಯಲ್ಲಿ ಭಾರೀ ಮಳೆಯಿಂದ ಮನೆಯ ಗೋಡೆ ಕುಸಿದು ಸಾವನ್ನಪ್ಪಿದ್ದ ವಸಂತಮ್ಮ ಅವರ ಮನೆಗೆ ಭೇಟಿ ನೀಡಿದ ಶಾಸಕ ಎಂ.ಪಿ. ಅಪ್ಪಚ್ಚು ರಂಜನ್ ಸರಕಾರದ ರೂ. ೫ ಲಕ್ಷದ ಪರಿಹಾರ ವಿತರಿಸಿದರು.

ನಂತರ ಮಾತನಾಡಿದ ಶಾಸಕರು, ಮಳೆಗೆ ಜೀವಹಾನಿಯಾದ ವಸಂತಮ್ಮ

(ಮೊದಲ ಪುಟದಿಂದ) ಕುಟುಂಬದವರಿಗೆ ಸರಕಾರ ಘೋಷಣೆ ಮಾಡಿದಂತೆ ರೂ. ೫ ಲಕ್ಷ ಪರಿಹಾರ ವಿತರಿಸಲಾಗಿದೆ. ಮೃತರ ಬ್ಯಾಂಕ್ ಖಾತೆಗೆ ಹಣ ನೇರವಾಗಿ ಜಮೆಯಾಗುತ್ತದೆ. ಮನೆ ಹಾನಿಯಾದ ಸ್ಥಳಗಳಿಗೆ ಭೇಟಿ ನೀಡಲಾಗುತ್ತಿದೆ ಎಂದರು.

ತಹಶೀಲ್ದಾರ್ ಗೋವಿಂದರಾಜ್, ನೋಡೆಲ್ ಅಧಿಕಾರಿ ಬಾಲಕೃಷ್ಣ ರೈ, ಕಂದಾಯ ಪರಿವೀಕ್ಷಕ ಬಿ.ಆರ್. ಮಂಜುನಾಥ್, ಲೆಕ್ಕಾಧಿಕಾರಿ ಕೆ.ಎಚ್. ಸಂತೋಷ್, ಬಿಜೆಪಿ ಮುಖಂಡರಾದ ಎಸ್.ಎನ್. ರಘು, ಯತೀಶ್, ಭುವನೇಶ್ವರಿ, ದುಂಡಳ್ಳಿ ಗ್ರಾಮ ಪಂಚಾಯಿತಿ ಉಪಾಧ್ಯಕ್ಷ ನಿತಿನ್, ಸದಸ್ಯರಾದ ಮನು ಮಹಾಂತೇಶ್, ಕಾಂತರಾಜ್, ನಂದಿನಿ ನಾಗರತ್ನ, ಪಿಡಿಓ ರಾಜೇಂದ್ರ, ಯೋಗೇಶ್ ಇತರರು ಹಾಜರಿದ್ದರು.