ಮಡಿಕೇರಿ, ಜು. ೧೮: ಕೊಡವ ಮಕ್ಕಡ ಕೂಟ ಅರ್ಪಿಸುವ ಸ್ವಸ್ತಿಕ್ ಎಂಟರ್‌ಟೈನ್‌ಮೆAಟ್ ಬ್ಯಾನರಡಿ ಯಲ್ಲಿ ನಿರ್ಮಾಣವಾಗಿರುವ ನಿರ್ದೇಶಕ ಕೊಟ್ಟುಕತ್ತಿರ ಪ್ರಕಾಶ್ ಕಾರ್ಯಪ್ಪ ಅವರ ನಿರ್ದೇಶನದ ‘ವಿಧಿರ ಕಳಿಲ್’ ಕಾದಂಬರಿ ಆಧಾರಿತ ‘ಪೊಮ್ಮಾಲೆ ಕೊಡಗ್’ ಕೊಡವ ಚಲನಚಿತ್ರದ ಪೋಸ್ಟರ್ ಹಾಗೂ ಹಾಡು ಬಿಡುಗq ೆಗೊಂಡಿದೆ.
ನಗರದ ಪತ್ರಿಕಾಭವನದಲ್ಲಿ ನಡೆದ ಕಾರ್ಯಕ್ರಮದಲ್ಲಿ ಹಾಡನ್ನು ಬಿಡುಗಡೆಗೊಳಿಸಿ ಮಾತನಾಡಿದ ವಿಧಾನ ಪರಿಷತ್ ಮಾಜಿ ಸದಸ್ಯ ಎಂ.ಪಿ. ಸುನೀಲ್ ಸುಬ್ರಮಣಿ, ಕೊಡಗು ಜಿಲ್ಲೆಗೆ ತನ್ನದೇ ಆದ ಘನತೆ, ಗೌರವವಿದ್ದು, ಚಲನಚಿತ್ರಗಳ ಮೂಲಕವೂ ಯುವ ಸಮೂಹಕ್ಕೆ ಸ್ಫೂರ್ತಿ ತುಂಬುವ ಕಾರ್ಯವಾಗ ಬೇಕು ಎಂದರು.
ವೀರಸೇನಾನಿಗಳಾದ ಫೀ.ಮಾ. ಕೆ.ಎಂ. ಕಾರ್ಯಪ್ಪ ಹಾಗೂ ಜನರಲ್ ತಿಮ್ಮಯ್ಯ ಅವರ ಸಾಹಸ ಮತ್ತು ಸಾಧನೆಯಿಂದ ಕೊಡಗಿನ ಗೌರವ ಮತ್ತಷ್ಟು ಹೆಚ್ಚಿದೆ. ಕೊಡಗಿನವರನ್ನು ಕಂಡರೆ ಹೊರಗಿನವರು ಖುಷಿ ಪಡುತ್ತಾರೆ, ವೀರರು, ಧೀರರು ಎಂದು ಗೌರವ ನೀಡುತ್ತಾರೆ. ಇದನ್ನು ಉಳಿಸಿ ಕೊಂಡು ಹೋಗಲು ಯುವ ಸಮೂಹಕ್ಕೆ ಸ್ಫೂರ್ತಿ ತುಂಬುವ ಕಾರ್ಯಗಳಾಗ ಬೇಕು ಎಂದು ತಿಳಿಸಿದರು.
ಪೋಸ್ಟರ್ ಬಿಡುಗಡೆಗೊಳಿಸಿ ಮಾತನಾಡಿದ ನಗರಸಭಾ ಅಧ್ಯಕ್ಷೆ ಅನಿತಾ ಪೂವಯ್ಯ, ಕೊಡಗಿನ ಸಂಸ್ಕೃತಿ, ಆಚಾರ, ವಿಚಾರಗಳನ್ನು ಪರಿಚಯಿಸುವ ಕಾರ್ಯವನ್ನು ಚಲನಚಿತ್ರಗಳು ಮಾಡುತ್ತಿರುವುದು ಶ್ಲಾಘನೀಯವೆಂದರು.
ಪ್ರಾಸ್ತವಿಕವಾಗಿ ಮಾತನಾಡಿದ ಚಿತ್ರ ನಿರ್ದೇಶಕ ಕೊಟ್ಟುಕತ್ತಿರ ಪ್ರಕಾಶ್ ಕಾರ್ಯಪ್ಪ ಕೊಡವ ಚಲನಚಿತ್ರ ರಂಗದಲ್ಲೇ ಮೊದಲ ಬಾರಿಗೆ ‘ಪೊಮ್ಮಾಲೆ ಕೊಡಗ್’ ಚಿತ್ರದ ಹಾಡು ಗಳನ್ನು ಸಾಹಿತ್ಯ ಸಹಿತ ಬಿಡುಗಡೆ ಮಾಡಲಾ ಗಿದೆ. ಈ ಚಿತ್ರ ಕೊಡವ ಸಂಸ್ಕೃತಿಯ ಪ್ರತಿಬಿಂಬ ವಾಗಿದೆ ಎಂದರು.
ಎರಡೂವರೆ ತಿಂಗಳಿನಲ್ಲಿ ಚಿತ್ರೀಕರಣ ಪೂರ್ಣಗೊಳಿಸಿದ್ದು, ಶೀಘ್ರ ಬಿಡುಗಡೆ ಮಾಡಲಾಗುವುದು. ಚಿತ್ರಮಂದಿರಗಳ ಕೊರತೆ ಇರುವುದ ರಿಂದ ಕೊಡವ ಸಮಾಜಗಳಲ್ಲಿ ಪ್ರದರ್ಶಿಸಲಾಗುತ್ತಿದೆ. ಜಿಲ್ಲಾ ಕೇಂದ್ರಮಡಿಕೇರಿಯಲ್ಲಿ ಸುಸಜ್ಜಿತ ಸಭಾಂಗಣ ನಿರ್ಮಾಣಗೊಂಡರೆ ಉತ್ತಮ ಎಂದು ಅಭಿಪ್ರಾಯಪಟ್ಟರು. ಕೊಡವ ಸಮಾಜದಲ್ಲಿ ಚಿತ್ರ ಪ್ರದರ್ಶನವಾದಾ ಕ್ಷಣ ಅದು ಕೊಡವ ರಿಗೆ ಮಾತ್ರ ಸೀಮಿತವಾದ ಚಿತ್ರವಲ್ಲ. ಪ್ರತಿಯೊಬ್ಬರು ಬಂದು ಸಿನಿಮಾ ನೋಡಿ ಪ್ರೋತ್ಸಾಹಿಸಿ ಎಂದು ಮನವಿ ಮಾಡಿದರು.
‘ಪೊಮ್ಮಾಲೆ ಕೊಡಗ್’ ತಮ್ಮ ೧೫ನೇ ಚಿತ್ರವಾಗಿದ್ದು, ಕೊಡವ ಭಾಷೆಯಲ್ಲಿ ೪ನೇ ಚಿತ್ರವಾಗಿದೆ. ೫ನೇ ಕೊಡವ ಚಿತ್ರ ‘ನಾಡ ಕೊಡಗ್’ಗೆ ಚಿತ್ರಕಥೆ ಸಿದ್ಧವಾಗಿದೆ. ೧೬ನೇ ಕನ್ನಡ ಚಿತ್ರ ‘ಅಂತರ್ ಮುಖಿ’ಯ ಚಿತ್ರೀಕರಣ ನಡೆಯುತ್ತಿದೆ ಎಂದು ಪ್ರಕಾಶ್ ಕಾರ್ಯಪ್ಪ ಮಾಹಿತಿ ನೀಡಿದರು.
ಹಿರಿಯ ನಟ ವಾಂಚೀರ ವಿಠಲ್ ನಾಣಯ್ಯ ಮಾತನಾಡಿ ಕೊಡಗಿನ ಸಂಸ್ಕೃತಿಯನ್ನು ಪ್ರತಿಬಿಂಬಿಸಿರುವ ‘ಪೊಮ್ಮಾಲೆ ಕೊಡಗ್’ ಚಿತ್ರದಲ್ಲಿ ಸ್ವತಂತ್ರö್ಯವಾಗಿ ಅಭಿನಯಿಸಲು ನಿರ್ದೇಶಕರು ಅವಕಾಶ ಕಲ್ಪಿಸಿದರು. ಚಿತ್ರ ಉತ್ತಮವಾಗಿ ಮೂಡಿ ಬಂದಿದೆ. ೪ ಕನ್ನಡ ಮತ್ತು ೧೦ ಕೊಡವ ಭಾಷೆಯ ಸಿನಿಮಾಗಳಲ್ಲಿ ತಾವು ಅಭಿನಯಿಸಿದ್ದು, ಉತ್ತಮ ಅನುಭವವಾಗಿದೆ ಎಂದರು.
ನಾಯಕ ನಟ ಕ್ಯಾಲೇಟಿರ ಪವಿತ್ ಮಾತನಾಡಿ ‘ಪೊಮ್ಮಾಲೆ ಕೊಡಗ್’ ನೈಜತೆಯಿಂದ ಕೂಡಿದ ಚಿತ್ರವಾಗಿದ್ದು, ಕಥೆ ಮನ ಸೆಳೆಯುವಂತ್ತಿದೆ ಎಂದು ತಿಳಿಸಿದರು.
ಕಾರ್ಯಕಾರಿ ನಿರ್ಮಾಪಕ, ನಟ ಹಾಗೂ ಕೊಡವ ಮಕ್ಕಡ ಕೂಟದ ಅಧ್ಯಕ್ಷ ಬೊಳ್ಳಜಿರ ಬಿ. ಅಯ್ಯಪ್ಪ ಮಾತನಾಡಿ ‘ಪೊಮ್ಮಾಲೆ ಕೊಡಗ್’ ಚಿತ್ರ ಸೆಪ್ಟಂಬರ್ ತಿಂಗಳಿನಲ್ಲಿ ತೆರೆಗೆ ಬರಲಿದೆ. ಕೊಡಗಿಗೆ ಸಂಶೋಧನೆ ಗೆಂದು ಬಂದ ಯುವತಿಯೊಬ್ಬಳ ಸುತ್ತ ಹೆಣೆದ ಚಿತ್ರ ಇದಾಗಿದ್ದು, ಹಾಕತ್ತೂರಿನ ಅಮ್ಮಾಟಂಡ ಐನ್‌ಮನೆ ಸೇರಿದಂತೆ ಕೊಡಗಿನ ಸುಂದರತಾಣಗಳಲ್ಲಿ ಚಿತ್ರೀಕರಣ ಗೊಂಡಿದೆ ಎಂದರು.ಚಿತ್ರತAಡ
ಚಿತ್ರಕತೆ, ಸಂಭಾಷಣೆ, ನಿರ್ದೇಶನ ಕೊಟ್ಟುಕತ್ತಿರ ಪ್ರಕಾಶ್ ಕಾರ್ಯಪ್ಪ, ನಿರ್ಮಾಪಕಿ ಕೊಟ್ಟುಕತ್ತಿರ ಯಶೋಧ ಪ್ರಕಾಶ್, ಸಾಹಿತ್ಯ ಆಪಾಡಂಡ ಜಗ ಮೊಣ್ಣಪ್ಪ, ನಿರ್ಮಾಣ ನಿಯಂತ್ರಕರಾಗಿ ಈರಮಂಡ ವಿಜಯ್ ಉತ್ತಯ್ಯ, ಛಾಯಾಗ್ರಾಹಕರಾಗಿ ಶಿವಕುಮಾರ್ ಅಂಬಲಿ ಕಾರ್ಯನಿರ್ವಹಿಸಿದ್ದು, ವಿಠಲ್ ರಂಗದೋಳ್ ಸಂಗೀತ ನೀಡಿದ್ದಾರೆ.
ಸಂಶೋಧನೆ, ಸಹ ಸಂಭಾಷಣೆ ಆಪಾಡಂಡ ಜಗ ಮೊಣ್ಣಪ್ಪ, ಉಳುವಂಗಡ ಕಾವೇರಿ ಉದಯ, ಬಾಚರಣಿಯಂಡ ಅಪ್ಪಣ್ಣ, ರಾಣು ಅಪ್ಪಣ್ಣ, ತಾಂತ್ರಿಕ ವಿಭಾಗದಲ್ಲಿ ಚೋಕಂಡ ದಿನು ನಂಜಪ್ಪ, ಈರಮಂಡ ಹರಿಣಿ ವಿಜಯ್, ನಾಗರಾಜ್ ನೀಲ್, ಅಪೂರ್ವ, ಶರತ್, ಮೇಘರಾಜ್, ಪುಟ್ಟ ಪಾಂಡವಪುರ, ಪ್ರದೀಪ್ ಆರ್ಯನ್, ನಿರಂಜನ್ ಹಾಗೂ ಸಹ ನಿರ್ದೇಶಕರಾಗಿ ಇತಿಹಾಸ ಶಂಕರ್ ಕಾರ್ಯನಿರ್ವಹಿಸಿದ್ದಾರೆ.
ಕಲಾವಿದರು: ಚಿತ್ರದಲ್ಲಿ ನಾಯಕನಾಗಿ ಕೇಲೆಟಿರ ಪವಿತ್, ನಾಯಕಿಯಾಗಿ ತೀತಿರ ತನುಜ (ಸೌಮ್ಯ), ಇತರ ಪಾತ್ರವರ್ಗದಲ್ಲಿ ಬೊಳ್ಳಜಿರ ಬಿ.ಅಯ್ಯಪ್ಪ, ವಾಂಚೀರ ವಿಠಲ್ ನಾಣಯ್ಯ, ಮಂಡೀರ ಪದ್ಮ ಬೋಪಯ್ಯ, ಅಲ್ಲಾರಂಡ ವಿಠಲ್ ನಂಜಪ್ಪ, ಈರಮಂಡ ವಿಜಯ್ ಉತ್ತಯ್ಯ, ಈರಮಂಡ ಹರಿಣಿ ವಿಜಯ್, ಬಾಚರಣಿಯಂಡ ಅಪ್ಪಣ್ಣ, ರಾಣು ಅಪ್ಪಣ್ಣ, ಪುಲಿಯಂಡ ಯಾಮಿನಿ ಪೊನ್ನಪ್ಪ, ಕಾಣತಂಡ ನೇಹಾ, ಅಮ್ಮಾಟಂಡ ವಿಂಧ್ಯಾ ದೇವಯ್ಯ, ಮೇಜರ್ ಡಾ.ಕುಶ್ವಂತ್ ಕೋಳಿಬೈಲ್, ಕೋಳುಮಾಡಂಡ ತಾವರೆ ಉತ್ತಪ್ಪ, ಕೋಳುಮಾಡಂಡ ಸಾಬು ಉತ್ತಪ್ಪ, ಬುಟ್ಟಂಡ ಕಸ್ಮಾಅಯ್ಯಣ್ಣ, ಮೊಣ್ಣಂಡ ನೇಹಾ ಮೋಟಯ್ಯ, ಪುತ್ತರಿರ ಕರುಣ್ ಕಾಳಯ್ಯ, ಅಜ್ಜಮಕ್ಕಡ ವಿನು ಕುಶಾಲಪ್ಪ, ಮಂದೆಯAಡ ರಜಿ ಬೆಳ್ಯಪ್ಪ, ಅಮ್ಮಾಟಂಡ ದೇವಯ್ಯ, ಏಳ್ತ್ಂಡ ಮಮತ ಬೋಪಣ್ಣ, ಬೊಳ್ಳಜಿರ ಯಮುನಾ ಅಯ್ಯಪ್ಪ, ಚೊಟ್ಟಂಡ ನಿರ್ಷಿತ ದೇಚಮ್ಮ ಪಡಿಯೆಟ್ಟಿರ ಭರತ್ ಬಿದ್ದಪ್ಪ ಬೀಕಚಂಡ ಬೆಳ್ಯಪ್ಪ (ಪುಟ್ಟ) ಹಾಗೂ ತಂಡ, ಮಡಿಕೇರಿ ಕೊಡವ ಸಮಾಜ ಪೊಮ್ಮಕ್ಕಡ ಒಕ್ಕೂಟದ ತಂಡ, ಬಾಲ ಕಲಾವಿದರಾಗಿ ಬೊಳ್ಳಜಿರ ದೇಚಮ್ಮ ಅಯ್ಯಪ್ಪ, ಬೊಳ್ಳಜಿರ ಬೋಪಣ್ಣ ಅಯ್ಯಪ್ಪ, ಅಮ್ಮಾಟಂಡ ಕೆನ್ ಕಾವೇರಪ್ಪ, ಅಮ್ಮಾಟಂಡ ದಕ್ಷ್ ಸೋಮಯ್ಯ, ಅಮ್ಮಾಟಂಡ ಪ್ರಾಪ್ತಿ ದೇವಯ್ಯ, ಆಂಗೀರ ನೀಲ್ ಮಾಚಯ್ಯ ಅಭಿನಯಿಸಿದ್ದಾರೆ.