ಸೋಮವಾರಪೇಟೆ, ಜು.೧೮: ಮಳೆ ಗಾಳಿಯಿಂದ ವಾತಾವರಣದಲ್ಲಿ ತೇವಾಂಶ ಅಧಿಕಗೊಂಡು ಮನೆಗಳು ಹಾನಿಗೀಡಾಗಿದ್ದು, ನಿಡ್ತ ಗ್ರಾಮದಲ್ಲಿ ಜಾನುವಾರೊಂದು ಸಾವನ್ನಪ್ಪಿದೆ.
ಕೊಡ್ಲಿಪೇಟೆ ಹೋಬಳಿ ವ್ಯಾಪ್ತಿಯ ನಿಲುವಾಗಿಲು ಗ್ರಾಮದ ಭವ್ಯ ಚಂದ್ರ ಅವರ ವಾಸದ ಮನೆಯು ಸಂಪೂರ್ಣ ಕುಸಿದು ಬಿದ್ದಿದ್ದು, ಭಾರೀ ನಷ್ಟ ಸಂಭವಿಸಿದೆ. ಮನೆಯೊಳಗಿದ್ದ ದಿನ ಬಳಕೆಯ ವಸ್ತುಗಳು ಹಾನಿಯಾಗಿವೆ. ಮನೆ ಮಂದಿ ಸಂಬAಧಿಕರ ಮನೆಗೆ ಸ್ಥಳಾಂತರಗೊAಡಿದ್ದಾರೆ. ಸ್ಥಳಕ್ಕೆ ಕಂದಾಯ ಇಲಾಖಾಧಿಕಾರಿಗಳು ಭೇಟಿ ನೀಡಿ ಪರಿಶೀಲನೆ ನಡೆಸಿದ್ದಾರೆ.
ಮಾಲಂಬಿ ಸಮೀಪದ ಮಲ್ಲೇಶ್ವರ ಗ್ರಾಮದಲ್ಲಿ ಪೊನ್ನು ಎಂಬವರಿಗೆ ಸೇರಿದ ವಾಸದ ಮನೆಗೆ ಹಾನಿಯಾಗಿದ್ದರೆ, ಪಟ್ಟಣ ಪಂಚಾಯಿತಿ ವ್ಯಾಪ್ತಿಯ ವೆಂಕಟೇಶ್ವರ ಬ್ಲಾಕ್ನಲ್ಲಿ ಅಂಜು ಅವರ ಮನೆಯ ಶೀಟ್ಗಳು ಬಿದ್ದು ನಷ್ಟ ಸಂಭವಿಸಿದೆ.
ಜಾನುವಾರು ಸಾವು: ಮೇಯಲು ಬಿಟ್ಟಿದ್ದ ಹಸುವಿನ ಮೇಲೆ ಮರ ಬಿದ್ದು ಸಾವನ್ನಪ್ಪಿರುವ ಘಟನೆ ಶನಿವಾರಸಂತೆ ಸಮೀಪದ ನಿಡ್ತ ಗ್ರಾಮದಲ್ಲಿ ನಡೆದಿದೆ. ಗ್ರಾಮದ ಜಯಪ್ಪ ಅವರಿಗೆ ಸೇರಿದ ಹಸುವಿನ ಮೇಲೆ ಮರ ಬಿದ್ದ ಹಿನ್ನೆಲೆ ಗಂಭೀರ ಗಾಯಗೊಂಡಿತ್ತು. ಇಂದು ಚಿಕಿತ್ಸೆ ಫಲಕಾರಿಯಾಗದೇ ಹಸು ಸಾವನ್ನಪ್ಪಿದ್ದು, ಇಲಾಖಾಧಿಕಾರಿಗಳು ಸ್ಥಳ ಪರಿಶೀಲನೆ ನಡೆಸಿದ್ದಾರೆ. ಮಡಿಕೇರಿ, ಜು. ೧೮: ಗಾಳಿ-ಮಳೆಯಿಂದ ರಸ್ತೆಗೆ ಅಡ್ಡಲಾಗಿ ಬಿದ್ದ ಮರಗಳನ್ನು ತೆರವು ಮಾಡಲಾಯಿತು.
ಮಾಕುಟ್ಟ-ಪೆರಂಬಾಡಿ ನಡುವೆ, ಶನಿವಾರಸಂತೆ-ಸೋಮವಾರಪೇಟೆ ನಡುವೆ ಬಿದ್ದಿದ್ದ ಮರಗಳನ್ನು ತೆರವುಗೊಳಿಸಿ ಸುಗಮ ಸಂಚಾರಕ್ಕೆ ಅವಕಾಶ ಮಾಡಿಕೊಡಲಾಯಿತು.
ಮನೆಗೆ ಹಾನಿ
ಸೋಮವಾರಪೇಟೆ: ಸಮೀಪದ ಹರದೂರು ಗ್ರಾಮ ಪಂಚಾಯಿತಿ ವ್ಯಾಪ್ತಿಯ ಗರಗಂದೂರು ಬಿ ಗ್ರಾಮದ ಪ್ರೀತ ಜನಾರ್ಧನ್ ಅವರ ವಾಸದ ಮನೆಯ ಮೇಲೆ ಮರ ಬಿದ್ದು ನಷ್ಟ ಸಂಭವಿಸಿದೆ.
ಸ್ಥಳಕ್ಕೆ ಗ್ರಾಮ ಲೆಕ್ಕಾಧಿಕಾರಿ ದೀಪಿಕ, ಸಹಾಯಕ ರೋಷನ್, ಗ್ರಾ.ಪಂ. ಸದಸ್ಯ ಸಲೀಂ ಅವರುಗಳು ಭೇಟಿ ನೀಡಿ ಪರಿಶೀಲಿಸಿದ್ದಾರೆ.
ಕಡಂಗ: ಸಮೀಪದ ಕೆನರಾ ಬ್ಯಾಂಕ್ ಹಿಂಬದಿ ೧೫ ಮನೆಗಳಿಗೆ ಸಂಪರ್ಕ ಕಲ್ಪಿಸುವ ರಸ್ತೆಯು ಕಳೆದ ಎರಡು ದಿನಗಳಿಂದ ಸುರಿದ ಮಳೆಯಲ್ಲಿ ರಸ್ತೆಯ ಬದಿ ಕೊಚ್ಚಿಹೋಗಿದೆ. ಈ ರಸ್ತೆಯಲ್ಲಿ ಜನರು ನಡೆದಾಡಲು ಕೂಡ ಕಷ್ಟಕರವಾಗಿದೆ.
ಸೂಕ್ತ ಕ್ರಮ ವಹಿಸಲು ಗ್ರಾಮ ಪಂಚಾಯಿತಿ ಸದಸ್ಯ ಸುಬೇರ್ ಮತ್ತು ಗ್ರಾಮಸ್ಥರು ಒತ್ತಾಯಿಸಿದ್ದಾರೆ.
ಕೂಡಿಗೆ: ಕೂಡುಮಂಗಳೂರು ಗ್ರಾಮ ಪಂಚಾಯಿತಿ ವ್ಯಾಪ್ತಿಯ ದೊಡ್ಡತ್ತೂರು ಗ್ರಾಮದ ಪಾರ್ವತಿ ಎಂಬವರಿಗೆ ಸೇರಿದ ಮನೆ ಮಳೆಯಿಂದಾಗಿ ಕಳೆದ ರಾತ್ರಿ ಕುಸಿತಗೊಂಡಿದೆ.
ಮನೆಯವರು ಬಂಧುಗಳ ಮನೆಗೆ ತೆರಳಿದ್ದ ಹಿನ್ನೆಲೆ ಯಾವುದೇ ಪ್ರಾಣಹಾನಿ ಸಂಭವಿಸಿಲ್ಲ. ಸ್ಥಳಕ್ಕೆ ಕುಶಾಲನಗರ ತಾಲೂಕು ತಹಶೀಲ್ದಾರ್ ಪ್ರಕಾಶ್, ಕೂಡುಮಂಗಳೂರು ಗ್ರಾಮ ಪಂಚಾಯತಿ ಅಧ್ಯಕ್ಷೆ ಇಂದಿರಾ ರಮೇಶ್, ಸದಸ್ಯರಾದ ದಿನೇಶ್, ಪಾರ್ವತಮ್ಮ, ಅಭಿವೃದ್ಧಿ ಅಧಿಕಾರಿ ಸಂತೋಷ್, ಗ್ರಾಮ ಲೆಕ್ಕಾಧಿಕಾರಿ ಗುರುದರ್ಶನ್ ಭೇಟಿ ನೀಡಿ ಪರಿಶೀಲನೆ ನಡೆಸಿ ಶೇಕಡ ೧೦೦ ರಷ್ಟು ಹಾನಿಯಾಗಿದ್ದು ಪರಿಹಾರವನ್ನು ನೀಡುವ ಭರವಸೆಯನ್ನು ನೀಡಿದರು.