ಚೆಟ್ಟಳ್ಳಿ, ಜು. ೧೭: ಸಮೀಪದ ಕಂಡಕರೆಯ ಗಾಂಧಿ ಯುವಕ ಸಂಘಕ್ಕೆ ಸಲಹೆಗಾರರಾಗಿ ಮಾಜಿ ಗ್ರಾಮ ಪಂಚಾಯಿತಿ ಸದಸ್ಯ ಮೊಹಮ್ಮದ್ ರಫಿ ಹಾಗೂ ನೂತನ ಸಂಘಟನಾ ಕಾರ್ಯದರ್ಶಿಯಾಗಿ ಸುಹಲ್ ಓ.ಎಸ್ ಆಯ್ಕೆ ಆಗಿದ್ದಾರೆ.
ಮುಂದಿನ ವರ್ಷ ಸಂಘದ ವತಿಯಿಂದ ಮೂವರು ಬಡ ಹೆಣ್ಣು ಮಕ್ಕಳ ಸಾಮೂಹಿಕ ವಿವಾಹ ನಡೆಯಲಿದ್ದು, ಮುಂದಿನ ತಿಂಗಳು ಗಾಂಧಿ ಯುವಕ ಸಂಘದ ವತಿಯಿಂದ ಚೆಟ್ಟಳ್ಳಿಯಲ್ಲಿ ಬೃಹತ್ ರಕ್ತದಾನ ಶಿಬಿರ ಆಯೋಜಿಸಲಾಗಿದೆ ಎಂದು ಗಾಂಧಿ ಯುವಕ ಸಂಘದ ಪ್ರಧಾನ ಕಾರ್ಯದರ್ಶಿ ಷರೀಫ್ ಪಿ.ಎಂ ಪತ್ರಿಕಾ ಪ್ರಕಟಣೆಯಲ್ಲಿ ತಿಳಿಸಿದ್ದಾರೆ.