ಗೋಣಿಕೊಪ್ಪಲು, ಜು. ೧೮: ತಿತಿಮತಿ ವಲಯ ವ್ಯಾಪ್ತಿಯ ನೊಕ್ಯ ಗ್ರಾಮದಲ್ಲಿ ಅಕ್ರಮವಾಗಿ ೨ ನಂದಿ ಮರಗಳ ನಾಟ ಸಾಗಾಟ ಮಾಡುತ್ತಿದ್ದ ಸಂದರ್ಭ ದಾಳಿ ನಡೆಸಿದ ಅರಣ್ಯ ಇಲಾಖೆ ಮಾಲನ್ನು ವಶಪಡಿಸಿ ಕೊಂಡಿದೆ. ಖಚಿತ ಮಾಹಿತಿಯ ಮೇರೆಗೆ ವೀರಾಜಪೇಟೆ ವಿಭಾಗದ ಡಿ.ಸಿ.ಎಫ್. ಶಿವರಾಂ ಬಾಬು, ತಿತಿಮತಿ ಉಪವಿಭಾಗದ ಎ.ಸಿ.ಎಫ್. ಪಿ.ಪಿ. ಉತ್ತಪ್ಪ ಮಾರ್ಗದರ್ಶನದಲ್ಲಿ ತಿತಿಮತಿ ವಲಯದ ಆರ್ಎಫ್ಓ ಅಶೋಕ್, ದೇವಮಚ್ಚಿ ಶಾಖೆ ಉಪ ವಲಯಾರಣ್ಯಾಧಿಕಾರಿ ಹಾಲೇಶ್ ಎಂ.ಸಿ. ಹಾಗೂ ಡಿವೈಆರ್ಎಫ್ಓ ಉಮಾಶಂಕರ್ ಎ.ಎಸ್., ಅರಣ್ಯ ರಕ್ಷಕರಾದ ರೇವಪ್ಪ ಜಿ.ಎನ್. ಮತ್ತು ಸಿಬ್ಬಂದಿಗಳು ಸ್ಥಳಕ್ಕೆ ತೆರಳಿ ಅಕ್ರಮವಾಗಿ ಸಾಗಾಟ ಮಾಡಲು ಯತ್ನಿಸಿದ ವಾಹನ, ಮಾರುತಿ ಓಮಿನಿ ಮತ್ತು ದಾಸ್ತಾನು ಮಾಡಿದ ನಂದಿ ಮರದ ನಾಟಗಳನ್ನು ವಶಪಡಿಸಿಕೊಂಡು ಪ್ರಕರಣ ದಾಖಲಿಸಿದ್ದಾರೆ.
ಆರೋಪಿಗಳು ತಲೆಮರೆಸಿ ಕೊಂಡಿದ್ದಾರೆ ಎಂದು ಅರಣ್ಯ ಇಲಾಖೆ ತಿಳಿಸಿದೆ.