ನಾಪೋಕ್ಲು, ಜು. ೧೬: ರಸ್ತೆ ಬದಿಗಳಲ್ಲಿ ಚರಂಡಿ ವ್ಯವಸ್ಥೆ ಇಲ್ಲದೇ ರಸ್ತೆಗಳು ಹಾಳಾಗುತ್ತಿವೆ ಎಂದು ಸಾರ್ವಜನಿಕರು ಆರೋಪಿಸಿದ್ದಾರೆ. ನಾಪೋಕ್ಲು ವ್ಯಾಪ್ತಿಯಲ್ಲಿ ಹಲವು ಸಂಪರ್ಕ ರಸ್ತೆಗಳಿದ್ದು ಕೆಲವೆಡೆ ಹೊಸ ರಸ್ತೆಗಳನ್ನು ನಿರ್ಮಿಸಲಾಗಿದೆ.

ಗುಣಮಟ್ಟದ ರಸ್ತೆ ನಿರ್ಮಿಸಿ ಚರಂಡಿ ನಿರ್ಮಾಣ ಮಾಡದೇ ಇರುವುದರಿಂದ ಧಾರಾಕಾರ ಮಳೆಯಿಂದ ರಸ್ತೆಗಳ ಮೇಲೆ ನೀರು ಹರಿದು ರಸ್ತೆಗಳು ಅಧ್ವಾನವಾಗುತ್ತಿವೆ.

ಸಮೀಪದ ಕೊಟ್ಟಮುಡಿಯಲ್ಲಿ ರಸ್ತೆಯ ಎರಡೂ ಬದಿ ಕಾಡು ತುಂಬಿದ್ದು, ರಸ್ತೆಯೇ ಗೋಚರಿಸದಂತಹ ಪರಿಸ್ಥಿತಿ ಇದೆ. ಪರಿಣಾಮ, ವಾಹನ ಚಾಲಕರಿಗೆ ತೊಂದರೆ ಉಂಟಾಗುತ್ತಿದೆ. ಇದೀಗ ಮಳೆಯಿಂದಾಗಿ ಉಂಟಾದ ಪ್ರವಾಹ ಪರಿಸ್ಥಿತಿಯಲ್ಲಿ ರಸ್ತೆ ಅಧ್ವಾನದಿಂದ ಅನಾಹುತಗಳು ಸಂಭವಿಸುತ್ತಿವೆ.

ಜಿಲ್ಲಾಡಳಿತ ರಸ್ತೆ ಬದಿ ಚರಂಡಿ ನಿರ್ಮಾಣ ಮತ್ತು ಕೊಟ್ಟಮುಡಿ ಬಳಿ ಇಕ್ಕೆಲಗಳಲ್ಲಿ ತುಂಬಿರುವ ಕಾಡು ಕಡಿಸಲು ಕ್ರಮ ಕೈಗೊಳ್ಳಬೇಕು ಎಂದು ನಾಗರಿಕರು ಒತ್ತಾಯಿಸಿದ್ದಾರೆ.