ಸುಂಟಿಕೊಪ್ಪ, ಜು. ೧೬: ಸಮೀಪದ ಮಾದಾಪುರದ ಡಿ.ಚೆನ್ನಮ್ಮ ಪದವಿ ಪೂರ್ವ ಕಾಲೇಜಿನಲ್ಲಿ ಬೆಂಗಳೂರಿನ ಯುವ ನಿಯೋಗ ಹಾಗೂ ಮೈಸೂರಿನ ವೈಟ್ ಫೆದರ್ ಟ್ರಸ್ಟ್ ವತಿಯಿಂದ ಸುಂಟಿಕೊಪ್ಪದ ಜೆಸಿಐ ಘಟಕದ ಸಹಕಾರದೊಂದಿಗೆ ಇಲ್ಲಿನ ವಿದ್ಯಾರ್ಥಿಗಳಿಗೆ ವ್ಯಕ್ತಿತ್ವ ವಿಕಸನ, ಸೇವೆ, ದಾನ, ಧ್ಯಾನ, ಯೋಗ, ಯೋಗದ ಮುದ್ರೆಗಳ ಬಗ್ಗೆ ಉಪನ್ಯಾಸ ಕಾರ್ಯಕ್ರಮ ನಡೆಯಿತು.
ಯುವ ನಿಯೋಗದ ಮುಖ್ಯಸ್ಥ ಎಸ್.ಎಂ.ಕಿರಣ್ ಮಾತನಾಡಿ, ಆರೋಗ್ಯವನ್ನು ಯೋಗದ ಮೂಲಕ ಹೇಗೆ ಕಾಪಾಡಿಕೊಳ್ಳಬಹುದು ಎಂಬುದರ ಬಗ್ಗೆ ಯೋಗ ಮುದ್ರೆಗಳನ್ನು ಹೇಳಿಕೊಡುವುದರ ಮೂಲಕ ಉಪನ್ಯಾಸ ನೀಡಿದ ಅವರು, ಇಂದಿನ ಸಾಮಾಜಿಕ ಬೆಳವಣಿಗೆಯಲ್ಲಿ ಯುವಕರ ಪಾತ್ರ ಬಹಳ ಮುಖ್ಯ. ನಾವು ಮನುಷ್ಯರಾಗಿ ಜನಿಸಿದ ಮೆಲೆ ತಂದೆ ತಾಯಿಗೆ ಮತ್ತು ತಾಯ್ನಾಡಿಗೂ ಋಣಿಯಾಗಿರಬೇಕು. ಹಾಗೇ ಪರಿಸರ ದಿನಾಚರಣೆಯಂದು ಮಾತ್ರ ಗಿಡ ನೆಡುವುದು, ಯೋಗ ದಿನಾಚರಣೆಯಂದು ಮಾತ್ರ ಯೋಗ ಮಾಡುವುದನ್ನು ಬಿಟ್ಟು ಯೋಗವನ್ನು ನಿರಂತರವಾಗಿ ಮಾಡಬೇಕು, ಹಾಗೆ ನಮ್ಮ ಸುತ್ತ ಮುತ್ತಲಿನ ಪರಿಸರವನ್ನು ಕಾಪಾಡಿಕೊಳ್ಳಬೇಕು ಎಂದು ಕರೆ ನೀಡಿದರು.
ಕಾರ್ಯಕ್ರಮದ ಅಧ್ಯಕ್ಷತೆ ವಹಿಸಿದ್ದ ಕಾಲೇಜಿನ ಉಪಪ್ರಾಂಶುಪಾಲ ರಾಜ ಸುಂದರಮ್ ಮಾತನಾಡಿದರು. ಕಾರ್ಯಕ್ರಮzಲ್ಲಿ ಸ್ವಸ್ಥ ಶಾಲೆಯ ಸಿ.ಬಿ.ಆರ್. ಸಂಯೋಜಕ ಮುರುಗೇಶ್, ಸುಂಟಿಕೊಪ್ಪ ಸರ್ಕಾರಿ ಪ್ರೌಢಶಾಲೆಯ ಮುಖ್ಯ ಶಿಕ್ಷಕ ಬಾಲಕೃಷ್ಣ, ಸುಂಟಿಕೊಪ್ಪ ಜೆಸಿಐ ಘಟಕದ ಅಧ್ಯಕ್ಷ ಸತೀಶ್ ಕುಮಾರ್, ಜೆಸಿ. ಡಿನ್ನಿಸ್ ಡಿಸೋಜ, ಚೆನ್ನಮ್ಮ ಕಾಲೇಜಿನ ಉಪನ್ಯಾಸಕರುಗಳಾದ ಮನೋಹರ್, ಮೋಹನ ಹೆಗಡೆ, ಅಶ್ವಿನಿ, ಬಸವರಾಜು ಹಾಜರಿದ್ದರು.