ಚೆಟ್ಟಳ್ಳಿ, ಜು. ೧೬: ಮಳೆಗಾಲದ ಬಿಳಿನೊರೆಯ ಹಿನ್ನೀರ ನಡುವೆ ಅತೀ ರೋಮಾಂಚಕಾರಿ ದಕ್ಷಿಣ ಕೊಡಗಿನ ಬರಪೊಳೆಯ (ಕೆಕೆಆರ್) ವೈಟ್ ವಾಟರ್ ರ‍್ಯಾಫ್ಟಿಂಗ್ ಕಳೆದೆರಡು ವಾರದಿಂದ ಪ್ರಾರಂಭಗೊAಡಿದೆ.

ಕಳೆದ ಆರೇಳು ದಿನಗಳಿಂದ ಕೊಡಗಿನಲ್ಲಿ ಭಾರೀ ಮಳೆಯಾಗುತ್ತಿರುವ ಪರಿಣಾಮ ಅಲ್ಲಲ್ಲ್ಲಿ ಅನಾಹುತಗಳು ನಡೆಯುತ್ತಿವೆ ಎಂಬ ಸುದ್ದಿ ಮಾಧ್ಯಮಗಳಲ್ಲಿ ಬಿತ್ತರ ಗೊಳ್ಳುತ್ತಿರುವ ಹಿನ್ನೆಲೆ ಬರಪೊಳೆಗೆ ಪ್ರವಾಸಿಗರ ಸಂಖ್ಯೆ ಕ್ಷೀಣಿಸಿರುವುದಾಗಿ ಕೊಡಗು ವೈಟ್‌ವಾಟರ್ ರ‍್ಯಾಫ್ಟಿಂಗ್‌ನ ಮಾಲೀಕ ಚೋನಿರ ರತನ್ ಮಾಹಿತಿ ನೀಡಿದ್ದಾರೆ.

ಅದೇ ರೀತಿ ಕುಶಾಲನಗರದ ದುಬಾರೆಯಲ್ಲೂ ಮಳೆಯ ಪ್ರಭಾವದಿಂದ ಪ್ರವಾಸಿಗರು ಕ್ಷೀಣಿಸಿದ್ದು, ಮುಂದಿನ ದಿನಗಳಲ್ಲಿ ಮಳೆ ಕಡಿಮೆಯಾದಂತೆ ಪ್ರವಾಸಿಗರು ಕೊಡಗಿನ ಮಳೆಗಾಲದ ಹಾಲ್ನೊರೆಯ ನಡುವೆ ಜಲಕ್ರೀಡೆಯಲ್ಲಿ ತೊಡಗಿಸಿಕೊಳ್ಳುವ ನಿರೀಕ್ಷೆಯಿದೆ.

-ಪುತ್ತರಿರ ಕರುಣ್‌ಕಾಳಯ್ಯ