ಮಡಿಕೇರಿ, ಜು. ೧೬: ಇಲ್ಲಿನ ನಗರಸಭೆಯ ನೂತನ ಪೌರಾಯುಕ್ತ ರಾಗಿ ವಿಜಯ ನೇಮಕಗೊಂಡಿದ್ದಾರೆ.

ರಾಮದಾಸ್ ವರ್ಗಾವಣೆ ಹಿನ್ನೆಲೆ ತೆರವಾಗಿದ್ದ ಸ್ಥಾನಕ್ಕೆ ವಿಜಯ ಅವರು ನಿಯೋಜನೆಗೊಂಡಿದ್ದು, ಪ್ರಭಾರ ಪೌರಾಯುಕ್ತರಾಗಿದ್ದ ಸಹಾಯಕ ಕಾರ್ಯಪಾಲಕ ಅಭಿಯಂತರ ರಾಜೇಂದ್ರ ಅವರು ಅಧಿಕಾರ ಹಸ್ತಾಂತರಿಸಿದರು.