ಮಡಿಕೇರಿಯ ಕೊಡಗು ವೈದ್ಯಕೀಯ ವಿಜ್ಞಾನಗಳ ಕಾಲೇಜಿನ ವೈದ್ಯರ ತಂಡವು ಮಹಾನ್ ಸಾಧನೆಯೊಂದಕ್ಕೆ ಅಡಿಗಲ್ಲು ಹಾಕಿದೆ. ಕೊಡಗಿನ ಇತಿಹಾಸದಲ್ಲೇ ಮೊದಲ ಬಾರಿಗೆ ಜಿಲ್ಲಾಸ್ಪತ್ರೆಯಲ್ಲಿ `ಟೋಟಲ್ ಹಿಪ್ ರಿಪ್ಲೇಸ್‌ಮೆಂಟ್’ ಶಸ್ತçಚಿಕಿತ್ಸೆಯನ್ನು ಯಶಸ್ವಿಯಾಗಿ ಮಾಡಲಾಗಿದೆ. ಚಿಕಿತ್ಸೆಗೊಳಗಾದ ಮಹಿಳೆ ಇದೀಗ, ದೀರ್ಘಕಾಲದ ಸೊಂಟ ನೋವಿನಿಂದ ಮುಕ್ತಿ ಪಡೆದಿದ್ದಾಳೆ.

ಏನಿದು ಶಸ್ತç ಚಿಕಿತ್ಸೆ?

ಸೊಂಟ ಮತ್ತು ತೊಡೆಯ ಸಂಪರ್ಕವನ್ನು ಬೆಸೆಯುವ `ಕಾರ್ಟಿಲೆಜ್’ ಮತ್ತು ಹಾನಿಯಾದ ಮೂಳೆಯನ್ನು ಪ್ರತ್ಯೇಕಿಸಿ, ಆ ಜಾಗಕ್ಕೆ `ಪ್ರೊಸ್ತೆಟಿಕ್’ ಸಲಕರಣೆ ಅಳವಡಿಸುವ ವಿಧಾನವೇ `ಟೋಟಲ್ ಹಿಪ್ ರಿಪ್ಲೇಸ್ಮೆಂಟ್’ ಅಥವಾ `ಟೋಟಲ್ ಹಿಪ್ ರ‍್ತೊçÃಪ್ಲಾಸ್ಟಿç. ಇದನ್ನು ಸಂಕ್ಷಿಪ್ತವಾಗಿ ಟಿಹೆಚ್‌ಎ ಎನ್ನಲಾಗುತ್ತದೆ. ಹಾನಿಗೊಳಗಾದ ತೊಡೆಯ ಶಿರಭಾಗವನ್ನು ತೆಗೆದು, ಆ ಜಾಗಕ್ಕೆ ಲೋಹದ ಕಾಂಡವನ್ನು, ಮೂಳೆಯ ಟೊಳ್ಳಾದ ಜಾಗಕ್ಕೆ ಇಳಿಸಲಾಗುತ್ತದೆ. ಅರ್ಥಾತ್, ನಮ್ಮ ಶರೀರದ ಸ್ವಾಭಾವಿಕ ಮೂಳೆಯನ್ನು ಪ್ರತ್ಯೇಕಿಸಿ, ಆ ಜಾಗಕ್ಕೆ ಕೃತಕ ಮೂಳೆ ಮತ್ತು ಜೋಡಣೆ (ಜಾಯಿಂಟ್) ಅಳವಡಿಸಲಾಗುತ್ತದೆ.

`ಟೋಟಲ್ ಹಿಪ್ ರಿಪ್ಲೇಸ್ಮೆಂಟ್’ ಎಂಬುದು ಮೂಳೆ ಚಿಕಿತ್ಸಾ ಕ್ಷೇತ್ರದಲ್ಲಿ ದುಬಾರಿ ಮತ್ತು ಜಟಿಲವಾದ ಚಿಕಿತ್ಸೆ ಎನಿಸಿಕೊಂಡಿದೆ. ಮೈಸೂರು, ಮಂಗಳೂರು, ಬೆಂಗಳೂರು ಮುಂತಾದ ಮಹಾನಗರಗಳಲ್ಲಿ ನಡೆಯುತ್ತಿದ್ದ ಟಿಹೆಚ್‌ಎ ಶಸ್ತçಚಿಕಿತ್ಸೆಯನ್ನು ಮೊದಲ ಬಾರಿಗೆ ಜಿಲ್ಲಾಸ್ಪತ್ರೆಯ ಮೆಡಿಕಲ್ ಸೂಪರಿಂಟೆAಡೆAಟ್ ಡಾ. ರೂಪೇಶ್ ಗೋಪಾಲ್ ಅವರ ಮಾರ್ಗದರ್ಶನದಲ್ಲಿ ಯುವ ವೈದ್ಯರ ತಂಡ ಮಾಡಿ ತೋರಿಸಿದೆ.

ಯುವ ವೈದ್ಯರ ಸಾಧನೆ

ಭಾಗಮಂಡಲ ಬಳಿಯ ತಾವೂರಿನ ಚಿನ್ನಮ್ಮ ಎಂಬ ೬೯ರ ಪ್ರಾಯದ ಮಹಿಳೆ, ಕಳೆದ ೩ ವರ್ಷಗಳಿಂದ ಸೊಂಟನೋವಿನಿAದ ಬಳಲುತ್ತಿದ್ದರು. ದುಬಾರಿ ಚಿಕಿತ್ಸೆಗಳ ಬಳಿಕ ಆಕೆ, ಮಡಿಕೇರಿಯ ಜಿಲ್ಲಾಸ್ಪತ್ರೆಗೆ ದಾಖಲಾಗಿದ್ದರು. ಯುವ ವೈದ್ಯರ ತಂಡವು ಚಿನ್ನಮ್ಮ ಅವರಿಗೆ ಟಿಹೆಚ್‌ಎ ಶಸ್ತçಚಿಕಿತ್ಸೆ ಮಾಡಿ, ಮರುಜನ್ಮ ನೀಡಿದೆ. ನಯಾ ಪೈಸೆ ಖರ್ಚಿಲ್ಲದೆ ಈ ಬಡ ಮಹಿಳೆ ದುಬಾರಿ ಚಿಕಿತ್ಸೆಯನ್ನು ತಮ್ಮದಾಗಿಸಿಕೊಂಡಿದ್ದಾಳೆ. ಮೂಳೆ ವೈದ್ಯರಾದ ಡಾ. ಆನಂದ್, ಡಾ. ಮಂಜುನಾಥ್, ಡಾ ಸಂತೋಷ್, ಅನಸ್ತೇಷಿಯಾ ಸ್ಪೆಷಲಿಸ್ಟ್ ಡಾ. ಪ್ರದೀಪ್, ಡಾ. ಯುವರಾಜ್, ನರ್ಸಿಂಗ್ ವಿಭಾಗದ ಮಂಜುನಾಥ್, ದಮಯಂತಿ, ಗಾಯತ್ರಿ ಮತ್ತಿತರರು ಈ ಯಶಸ್ವಿ ಶಸ್ತçಚಿಕಿತ್ಸೆಯ ಹಿಂದಿದ್ದಾರೆ. ಆಸ್ಪತ್ರೆಗೆ ದಾಖಲಾದ ಚಿನ್ನಮ್ಮ ಅವರನ್ನು ಪರೀಕ್ಷಿಸಿದ ವೈದ್ಯರು, ಮೊಟ್ಟ ಮೊದಲ ಬಾರಿಗೆ ಟಿಹೆಚ್‌ಎ ಶಸ್ತçಚಿಕಿತ್ಸೆ ಮಾಡುವುದೆಂದು ಛಲ ತೊಟ್ಟಿದ್ದರು. ಇದಕ್ಕಾಗಿ ಅಗತ್ಯವಿರುವ ವೈದ್ಯಕೀಯ ಸಲಕರಣೆಗಳನ್ನು ಜೋಡಿಸಿದರು. ತಮ್ಮ ನಿರ್ಧಾರವನ್ನು ಮೆಡಿಕಲ್ ಸೂಪರಿಂಟೆAಡೆAಟ್ ಡಾ. ರೂಪೇಶ್ ಗೋಪಾಲ್ ಅವರಿಗೆ ತಿಳಿಸಿದರು.

ಆಪರೇಷನ್ ಸಕ್ಸಸ್

ದುಬಾರಿ ಆಸ್ಪತ್ರೆಗಳಲ್ಲಿ ಮಾತ್ರ `ಟಿಹೆಚ್‌ಎ’ಯಂಥ ಸೂಕ್ಷö್ಮ ಶಸ್ತçಚಿಕಿತ್ಸೆಗಳು ನಡೆಯಲು ಸಾಧ್ಯ. ಇದಕ್ಕಾಗಿ ರೋಗಿಯು ರೂ. ೨ ರಿಂದ ೩ ಲಕ್ಷ ಖರ್ಚು ಮಾಡಬೇಕಾಗುತ್ತದೆ. ಆದರೆ, ಈ ದುಬಾರಿ ವೆಚ್ಚದ ಶಸ್ತçಚಿಕಿತ್ಸೆಯನ್ನು ಸರ್ಕಾರಿ ಆಸ್ಪತ್ರೆಯೊಂದಲ್ಲಿ ಉಚಿತವಾಗಿಯೂ ಮಾಡಲು ಸಾಧ್ಯವಿದೆ ಎಂಬುದನ್ನು ಜಿಲ್ಲೆಯ ವೈದ್ಯರು ಸಾಬೀತುಮಾಡಿದ್ದಾರೆ. ಮೂಳೆ ಸಂಬAಧಿತ ಸಮಸ್ಯೆಯಿಂದ ದಿನಂಪ್ರತಿ ಆಸ್ಪತ್ರೆಗೆ ೧೦೦ ರಿಂದ ೧೩೦ ರೋಗಿಗಳು ಬರುತ್ತಾರೆ. ಈ ಪೈಕಿ ಶಸ್ತçಚಿಕಿತ್ಸೆ ಅಗತ್ಯವಿದ್ದವರು ಕಾಯದೇ ವಿಧಿಯಿಲ್ಲ. ಏಕೆಂದರೆ, ಒಂದು ಆಪರೇಷÀನ್‌ಗೆ ಗರಿಷ್ಠ ೩ ಗಂಟೆ ಹಿಡಿಯುವದರಿಂದ ದಿನಕ್ಕೆ ೨ ಶಸ್ತçಚಿಕಿತ್ಸೆ ಮಾತ್ರ ಸಾÀಧ್ಯ ಎನ್ನುತ್ತಾರೆ ವೈದ್ಯರು.

ಟಿಹೆಚ್‌ಎ ಶಸ್ತçಚಿಕಿತ್ಸೆಯಾದವರು ಕೇವಲ ನಾಲ್ಕೆöÊದು ದಿನಗಳಲ್ಲಿ ಓಡಾಡಬಹುದು. ಈ ಚಿಕಿತ್ಸೆ ಪಡೆದು ಮ್ಯಾರಥಾನ್ ಓಡಿದವರೂ ಇದ್ದಾರೆ. ಒಂದು ವೇಳೆ ರೋಗಿಗೆ ಮಧುಮೇಹ ಅಥವಾ ರಕ್ತದೊತ್ತಡ ಇದ್ದರೆ, ಇವುಗಳನ್ನು ನಿಯಂತ್ರಿಸಿದ ಬಳಿಕವಷ್ಟೇ ಶಸ್ತçಚಿಕಿತ್ಸೆ ಮಾಡಲಾಗುತ್ತದೆ. ಇದೀಗ ಚಿನ್ನಮ್ಮ ಹಿಂದಿಗಿAತ ಸಲೀಸಾಗಿ ಓಡಾಡುತ್ತಾರೆ.

ಮಡಿಕೇರಿಯಲ್ಲಿರುವ ಜಿಲ್ಲಾಸ್ಪತ್ರೆ ನಿಧಾನಗತಿಯಲ್ಲಿ ಸುಧಾರಣೆ ಕಾಣುತ್ತಿದೆ ಎಂಬುದಕ್ಕೆ ಇದೊಂದು ಮೈಲಿಗಲ್ಲು. ಯುವ ಮತ್ತು ಉತ್ಸಾಹಿ ವೈದ್ಯರ ತಂಡವು, ಮಾನವೀಯ ನೆಲೆಯಲ್ಲಿ ಕೆಲಸ ಮಾಡುತ್ತಿದ್ದು, ಕಡು ಬಡವರಿಗೆ ದುಬಾರಿ ಚಿಕಿತ್ಸೆಗಳನ್ನು ಉಚಿತವಾಗಿ ನೀಡಲು ಮತ್ತು ಬಿಪಿಎಲ್ ಅಲ್ಲದವರಿಗೆ ಕಡಿಮೆ ವೆಚ್ಚದಲ್ಲಿ ಆರೋಗ್ಯ ಸೌಲಭ್ಯ ನೀಡಲು ವೈದ್ಯರ ತಂಡ ಸಜ್ಜಾಗಿದೆ.

ಒಂದು ಕಾಲದಲ್ಲಿ ಮಡಿಕೇರಿಯ ಜಿಲ್ಲಾಸ್ಪತ್ರೆ ಜನಸಾಮಾನ್ಯರಿಗೆ ರೇಜಿಗೆ ತರಿಸುತ್ತಿದ್ದುದು ಸತ್ಯ. ಆದರೆ, ಕಾಲ ಬದಲಾಗುತ್ತಿದೆ. ಮೆಡಿಕಲ್ ಕಾಲೇಜು ಆರಂಭದೊAದಿಗೆ ನಿಧಾನವಾಗಿ ಅತ್ಯಾಧುನಿಕ ವೈದ್ಯಕೀಯ ಸೌಲಭ್ಯಗಳೂ ಮಡಿಕೇರಿಯತ್ತ ಬರುತ್ತಿವೆ. ಜೊತೆಗೆ ಉತ್ಸಾಹಿ ವೈದ್ಯರಾದ ಡಾ. ರೂಪೇಶ್ ಗೋಪಾಲ್ ನೇತೃತ್ವದ ಯುವ ವೈದ್ಯರು ಹಾಗೂ ಸಿಬ್ಬಂದಿಗಳ ತಂಡವೇ ಇಲ್ಲಿ ಕೆಲಸ ಮಾಡುತ್ತಿದೆ. ಸಿಬ್ಬಂದಿಗಳಲ್ಲೂ ಮಾನವೀಯತೆ ಮತ್ತು ಕಾರ್ಯ ದಕ್ಷತೆ ಮೂಡಿಸಲು ಆಡಳಿತ ಮಂಡಳಿ ಪ್ರಯತ್ನಿಸುತ್ತಿದೆ. ಎಲ್ಲ ನಿರೀಕ್ಷೆಗಳೂ ಸಾಕಾರವಾದರೆ, ಕೊಡಗಿನ ಜನತೆ ಹೊರ ಜಿಲ್ಲೆಗಳಿಗೆ ಎಡತಾಕದೆ ಜಿಲ್ಲಾಸ್ಪತ್ರೆಯಿಂದಲೇ ಎಲ್ಲ ಆರೋಗ್ಯ ಸೌಲಭ್ಯಗಳನ್ನು ಹೊಂದಿಕೊಳ್ಳಲು ಸಾಧ್ಯವಿದೆ.

- ಆನಂದ್ ಕೊಡಗು, ಮಡಿಕೇರಿ