ಗೋಣಿಕೊಪ್ಪ ವರದಿ, ಜು. ೧೬: ಕುಟ್ಟಂದಿ ಗ್ರಾಮದ ಪಾಲೇಕಂಡ ಬೆಳ್ಯಪ್ಪ ಎಂಬವರ ಮನೆಗೆ ಕಳ್ಳರು ನುಗ್ಗಿ ಕೋವಿ ಮತ್ತು ನಗದು ದೋಚಿ ಪರಾರಿಯಾಗಿದ್ದಾರೆ.

.೨೨ ಕೋವಿ, ೩ ಬಾಕ್ಸ್ ಕಾಡತೂಸು ಹಾಗೂ ೨೫ ಸಾವಿರ ನಗದು ಕದ್ದಿದ್ದಾರೆ. ೮೫ ವಯಸ್ಸಿನ ವೃದ್ಧರಾಗಿರುವ ಬೆಳ್ಯಪ್ಪ ಮನೆಯಲ್ಲಿ ಒಬ್ಬರೇ ಜೀವನ ಸಾಗಿಸುತ್ತಿದ್ದಾರೆ. ತಾ. ೧೨ ರಂದು ಮಧ್ಯಾಹ್ನ ೧೦.೩೦ ಗಂಟೆಯಿAದ ಮಧ್ಯಾಹ್ನ ೧ ಗಂಟೆಯ ಅವಧಿಯಲ್ಲಿ ಬೆಳ್ಯಪ್ಪ ಅವರು ವೀರಾಜಪೇಟೆಗೆ ತೆರಳಿದ್ದ ಸಂದರ್ಭ ಯಾರೋ ಕಳ್ಳತನ ಎಸಗಿದ್ದಾರೆ. ಮನೆಯ ಎದುರಿನ ಬಾಗಿಲಿನಲ್ಲಿನ ಮುಂಭಾಗ ಇದ್ದ ಗಾಜು ಮುರಿದು ಒಳಗೆ ಕೈ ಹಾಕಿ ಚಿಲಕ ತೆಗೆದು ಒಳನುಗ್ಗಿದ್ದಾರೆ. ಗೋಣಿಕೊಪ್ಪ ಪೊಲೀಸ್ ಠಾಣೆ ಯಲ್ಲಿ ಪ್ರಕರಣ ದಾಖಲಿಸಲಾಗಿದೆ.