*ಸಿದ್ದಾಪುರ, ಜು. ೧೬: ಕೊಡಗು ಜಿಲ್ಲೆಯಾದ್ಯಂತ ಕೃಷಿ ಚಟುವಟಿಕೆಗಳು ಬಿರುಸಿನಿಂದ ಸಾಗಿದೆ. ಕೃಷಿ ಕಾರ್ಯಗಳಿಗಾಗಿ ಕೃಷಿಕರು ಸಹಕಾರ ಸಂಘ ಮತ್ತು ಬ್ಯಾಂಕ್ಗಳಿAದ ಸಾಲ ಪಡೆಯುವ ಸಂದರ್ಭವಿದು. ಆದರೆ ಕುಶಾಲನಗರ ತಾಲೂಕು ವ್ಯಾಪ್ತಿಯ ಕೃಷಿಕರಿಗೆ ಈಸಿ ಲಭ್ಯವಾಗದ ಕಾರಣ ಸಾಲ ಸಿಗದೆ ಪರದಾಡುವ ಪರಿಸ್ಥಿತಿ ನಿರ್ಮಾಣವಾಗಿದೆ. ಸಹಕಾರ ಸಂಘಗಳಿAದ ಸಾಲ ಪಡೆಯಬೇಕಾದರೆ ರೈತರು ಕುಶಾಲನಗರ ನೋಂದಣಿ ಕೇಂದ್ರದಿAದ ಈಸಿ ಪಡೆಯ ಬೇಕಾಗುತ್ತದೆ. ಆದರೆ ಇಲ್ಲಿನ ಅಧಿಕಾರಿ ವರ್ಗಾವಣೆಯಾಗಿರುವುದರಿಂದ ಡಿಜಿಟಲ್ ಸಹಿ ಹೊಂದಿಕೆಯಾಗದೆ ಈಸಿ ಲಭ್ಯವಾಗುತ್ತಿಲ್ಲ. ಸೈಬರ್ ಸೆಂಟರ್ಗೆ ಹೋದ ಅರ್ಜಿದಾರರು ಈಸಿ ದೊರೆಯದೆ ವಾಪಾಸ್ಸಾಗುತ್ತಿರುವ ದೃಶ್ಯಗಳು ಸಾಮಾನ್ಯವಾಗಿದೆ. ಇದಕ್ಕೆ ಪ್ರಮುಖ ಕಾರಣ ನೂತನ ಅಧಿಕಾರಿಯ ಡಿಜಿಟಲ್ ಸಹಿ ಅಪ್ಡೇಟ್ ಆಗದೆ ಇರುವುದು. ಗ್ರಾಮ ಒನ್ ಮೂಲಕ ಕೂಡ ಈಸಿ ಲಭ್ಯವಾಗುತ್ತಿಲ್ಲ. ಕೃಷಿ ಚಟುವಟಿಕೆಗೆ ಅಗತ್ಯವಾಗಿ ಹಣ ಬೇಕಾದವರು ಈಸಿ ಸಿಗದೆ ಸಾಲ ಪಡೆಯಲು ಸಾಧ್ಯವಾಗುತ್ತಿಲ್ಲ. ರೈತರಿಗೆ ಅನುಕೂಲ ಕಲ್ಪಿಸುವ ಉದ್ದೇಶದಿಂದ ಎಲ್ಲಾ ವ್ಯವಸ್ಥೆಗಳನ್ನು ಸರಕಾರ ಡಿಜಿಟಲೀಕರಣ ಮಾಡಿದೆ. ಆದರೆ ಇದರಿಂದ ಎಷ್ಟು ಅನುಕೂಲ ಇದೆಯೋ ಅಷ್ಟೇ ಅನಾನುಕೂಲವೂ ಇದೆ ಎಂದು ರೈತರು ಬೇಸರ ವ್ಯಕ್ತಪಡಿಸಿದ್ದಾರೆ. ಕುಶಾಲನಗರ ತಾಲೂಕು ವ್ಯಾಪ್ತಿಯ ಕೃಷಿಕರು ನೋಂದಣಿ ಕಚೇರಿಗೆ ಪ್ರತಿದಿನ ಬಂದು ಬರಿಗೈಯಲ್ಲಿ ಮರಳುವಂತಾಗಿದೆ. ಆದಷ್ಟು ಬೇಗ ಡಿಜಿಟಲ್ ಸಹಿಯನ್ನು ಹೊಂದಾಣಿಕೆ ಮಾಡಿ ಅಪ್ಡೇಟ್ ಮಾಡುವ ಕಾರ್ಯ ಮಾಡಬೇಕೆಂದು ರೈತರು ಒತ್ತಾಯಿಸಿದ್ದಾರೆ. ಈಸಿ ಪಡೆಯುವ ನಿಯಮವನ್ನು ಸರಳೀಕರಣ ಗೊಳಿಸಬೇಕು ಮತ್ತು ಡಿಜಿಟಲ್ ಸಹಿ ಸರಿಯಾಗುವಲ್ಲಿಯವರೆಗೆ ಕೈಬರಹದ ಮೂಲಕ ಈಸಿ ನೀಡಲು ಕ್ರಮ ಕೈಗೊಳ್ಳಬೇಕೆನ್ನುವ ಒತ್ತಾಯ ಕೇಳಿ ಬಂದಿದೆ.
- ಅಂಚೆಮನೆ ಸುಧಿ