ಸರಕಾರಿ ಕಚೇರಿಗಳಲ್ಲಿ ಫೋಟೋ, ವೀಡಿಯೋ ಚಿತ್ರೀಕರಣಕ್ಕೆ ನಿರ್ಬಂಧ

ಬೆAಗಳೂರು, ಜು. ೧೫: ಸರ್ಕಾರಿ ಕಚೇರಿಗಳಲ್ಲಿ ಫೋಟೋ ತೆಗೆಯುವುದು ಹಾಗೂ ವೀಡಿಯೋ ಮಾಡುವುದನ್ನು ನಿಷೇಧಗೊಳಿಸಿ ಆದೇಶ ಹೊರಡಿಸಲಾಗಿದೆ. ಕರ್ನಾಟಕ ರಾಜ್ಯ ಸರ್ಕಾರಿ ನೌಕರರ ಸಂಘದ ಬೇಡಿಕೆ ಹಿನ್ನೆಲೆಯಲ್ಲಿ ರಾಜ್ಯ ಸರ್ಕಾರ ಈ ಆದೇಶ ಹೊರಡಿಸಿದೆ. ಸಿಬ್ಬಂದಿ ಹಾಗೂ ಆಡಳಿತ ಸುಧಾರಣೆ ಅಧೀನ ಕಾರ್ಯದರ್ಶಿ ಕೆ. ವೆಂಕಟೇಶಪ್ಪ ಅವರು ಈ ಕುರಿತು ಆದೇಶ ಹೊರಡಿಸಿದ್ದು, ರಾಜ್ಯ ಸರ್ಕಾರದ ಎಲ್ಲ ಇಲಾಖೆಗಳ ಕಚೇರಿಗಳಲ್ಲಿ ಅನುಮತಿ ಇಲ್ಲದೆ ಸಾರ್ವಜನಿಕರು ಅನಧಿಕೃತವಾಗಿ ಫೋಟೋ ಅಥವಾ ವೀಡಿಯೋ ಮಾಡದಂತೆ ನಿಷೇಧ ಹೇರಲಾಗಿದೆ ಎಂದು ಆದೇಶದಲ್ಲಿ ಉಲ್ಲೇಖ ಮಾಡಲಾಗಿದೆ. ರಾಜ್ಯಾದ್ಯಂತ ಎಲ್ಲಾ ಜಿಲ್ಲೆ, ತಾಲೂಕು ಹಾಗೂ ರಾಜ್ಯ ಮಟ್ಟದಲ್ಲಿ, ಸರ್ಕಾರದ ವಿವಿಧ ಇಲಾಖೆಗಳ ಕಚೇರಿಗಳು ಕಾರ್ಯನಿರ್ವಹಿಸುತ್ತಿದ್ದು,. ಕೆಲವು ಖಾಸಗಿ ವ್ಯಕ್ತಿಗಳು ಸರ್ಕಾರಿ ಕಚೇರಿಗಳಿಗೆ ಕಚೇರಿ ವೇಳೆಯಲ್ಲಿ ಒಂದು ಕಚೇರಿಯ ಫೋಟೋ, ವೀಡಿಯೋ ಮಾಡಿ ಸಾಮಾಜಿಕ ಜಾಲತಾಣಗಳಲ್ಲಿ ಹರಿಬಿಡುವ ಹಾಗೂ ಇಂತಹ ಪೋಟೋ, ವೀಡಿಯೋಗಳನ್ನು ದುರ್ಬಳಕೆ ಮಾಡಿಕೊಳ್ಳುತ್ತಿದ್ದಾರೆ. ಇದರಿಂದ ಇಲಾಖೆ, ಸರ್ಕಾರದ ಘನತೆಗೆ ಕುಂದು ಉಂಟಗುತ್ತಿದೆ. ಅದರಲ್ಲೂ, ವಿಶೇಷವಾಗಿ ಮಹಿಳಾ ನೌಕರರಿಗೆ ಸಮಸ್ಯೆ ಉಂಟಾಗುತ್ತಿರುವುದರಿAದ ರಾಜ್ಯ ಸರ್ಕಾರದ ಎಲ್ಲಾ ಇಲಾಖೆಗಳ ಕಚೇರಿ ವೇಳೆಯಲ್ಲಿ, ಖಾಸಗಿ ವ್ಯಕ್ತಿಗಳು ಅನಧಿಕೃತವಾಗಿ ಫೋಟೋ, ವೀಡಿಯೋ ಮಾಡದಂತೆ ನಿರ್ಬಂಧಿಸುವ ಕುರಿತು ಸರ್ಕಾರಿ ನೌಕರರ ಸಂಘ ಮನವಿ ಮಾಡಿತ್ತು.

ರಷ್ಯಾ ಜೊತೆ ಕ್ಷಿಪಣಿ ಒಪ್ಪಂದದ ನಿರ್ಬಂಧ-ಭಾರತಕ್ಕೆ ವಿನಾಯಿತಿ

ವಾಷಿಂಗ್ಟನ್, ಜು. ೧೫: ಚೀನಾದಂತಹ ಆಕ್ರಮಣಕಾರರನ್ನು ತಡೆಯಲು ನೆರವಾಗಲು ರಷ್ಯಾದಿಂದ ಭಾರತ ಖರೀದಿಸುತ್ತಿರುವ ಎಸ್-೪೦೦ ಕ್ಷಿಪಣಿ ರಕ್ಷಣಾ ವ್ಯವಸ್ಥೆಗೆ ಸಿಎಎಟಿಎಸ್‌ಎಸ್ (ಕಾಟ್ಸಾ) ಕಾಯ್ದೆಯಿಂದ ವಿನಾಯಿತಿ ನೀಡುವ ತಿದ್ದುಪಡಿ ಮಸೂದೆಗೆ ಅಮೆರಿಕದ ಪ್ರಜಾ ಪ್ರತಿನಿಧಿ ಸಭೆಯಲ್ಲಿ ಧ್ವನಿಮತದ ಅಂಗೀಕಾರ ದೊರೆತಿದೆ. ಭಾರತೀಯ-ಅಮೆರಿಕನ್ ಕಾಂಗ್ರೆಸ್ ಸದಸ್ಯ ರೋ ಖನ್ನಾ ಅವರು ತಿದ್ದುಪಡಿ ಮಸೂದೆ ಮಂಡಿಸಿದರು. ಈ ತಿದ್ದುಪಡಿ ಕಾಯ್ದೆಯು ಚೀನಾದಂತಹ ಆಕ್ರಮಣಕಾರರನ್ನು ತಡೆಯಲು ಸಹಾಯ ಮಾಡುವ ನಿಟ್ಟಿನಲ್ಲಿ ವಿನಾಯಿತಿಯನ್ನು ಭಾರತಕ್ಕೆ ಒದಗಿಸಲು ಬೈಡನ್ ಆಡಳಿತ ಅನುವು ಮಾಡಿಕೊಟ್ಟಿದೆ. ೨೦೧೪ರಲ್ಲಿ ಕ್ರೆöÊಮಿಯಾವನ್ನು ಸ್ವಾಧೀನಪಡಿಸಿಕೊಂಡ ಮತ್ತು ೨೦೧೬ರ ಅಮೆರಿಕದ ಅಧ್ಯಕ್ಷೀಯ ಚುನಾವಣೆಯಲ್ಲಿ ಮಧ್ಯ ಪ್ರವೇಶಿಸಿದ್ದ ರಷ್ಯಾ ಕ್ರಮಕ್ಕೆ ಪ್ರತಿಯಾಗಿ ಆ ದೇಶದಿಂದ ಪ್ರಮುಖ ರಕ್ಷಣಾ ಯಂತ್ರಗಳನ್ನು ಖರೀದಿಸುವ ದೇಶಗಳ ಮೇಲೆ ನಿರ್ಬಂಧಗಳನ್ನು ವಿಧಿಸಲು ಕಾಟ್ಸಾ ಅಮೆರಿಕ ಆಡಳಿತಕ್ಕೆ ಅಧಿಕಾರ ನೀಡುವ ಕಠಿಣ ಕಾನೂನು ಆಗಿದೆ. ಚೀನಾದಿಂದ ಆಕ್ರಮಣವನ್ನು ಎದುರಿಸುವಲ್ಲಿ ಭಾರತದೊಂದಿಗೆ ಅಮೆರಿಕ ನಿಲ್ಲಲಿದೆ. ಇಂಡಿಯಾ ಕಾಕಸ್‌ನ ಉಪಾಧ್ಯಕ್ಷನಾಗಿ ನಮ್ಮ ದೇಶಗಳ ನಡುವಿನ ಪಾಲುದಾರಿಕೆಯನ್ನು ಬಲಪಡಿಸಲು ಮತ್ತು ಚೀನಾದ ಗಡಿಯಲ್ಲಿ ಭಾರತವು ತನ್ನನ್ನು ತಾನು ರಕ್ಷಿಸಿಕೊಳ್ಳುವುದನ್ನು ಖಚಿತಪಡಿಸಿಕೊಳ್ಳಲು ಕೆಲಸ ಮಾಡುತ್ತಿದ್ದೇನೆ ಎಂದು ಕ್ಯಾಲಿಫೋರ್ನಿಯಾದ ೧೭ನೇ ಕಾಂಗ್ರೆಸ್ ಜಿಲ್ಲೆಯ ಅಮೆರಿಕದ ಪ್ರತಿನಿಧಿ ಖನ್ನಾ ಹೇಳಿದರು.

ಅಮೃತ್ ಪೌಲ್‌ಗೆ ೧೪ ದಿನಗಳ ನ್ಯಾಯಾಂಗ ಬಂಧನ

ಬೆAಗಳೂರು, ಜು. ೧೫: ೫೪೫ ಪಿಎಸ್‌ಐ ನೇಮಕಾತಿ ಅಕ್ರಮ ಪ್ರಕರಣ ಸಂಬAಧ ಬಂಧನಕ್ಕೀಡಾಗಿರುವ ಅಮೃತ್ ಪೌಲ್‌ರನ್ನು ಕೋರ್ಟ್ ೧೪ ದಿನಗಳ ನ್ಯಾಯಾಂಗ ಬಂಧನಕ್ಕೆ ಆದೇಶಿಸಿದೆ. ನೇಮಕಾತಿ ವಿಭಾಗದ ಎಜಿಡಿಪಿಯಾಗಿದ್ದ ಅಮೃತ್ ಪೌಲ್‌ರ ಸಿಐಡಿ ಕಸ್ಟಡಿ ಅವಧಿ ಇಂದಿಗೆ ಮುಕ್ತಾಯವಾದ ಹಿನ್ನೆಲೆಯಲ್ಲಿ ಅವರನ್ನು ೧ನೇ ಎಸಿಎಂಎA ಕೋರ್ಟ್ ಮುಂದೆ ಹಾಜರುಪಡಿಸಿದ್ದು ಕೋರ್ಟ್ ನ್ಯಾಯಾಂಗ ಬಂಧನಕ್ಕೆ ಆದೇಶಿಸಿದೆ. ಇದೇ ವೇಳೆ ಅಮೃತ್ ಪೌಲ್ ಪರ ವಕೀಲರು ಸಲ್ಲಿಸಿದ್ದ ಜಾಮೀನು ಅರ್ಜಿ ವಿಚಾರಣೆಯನ್ನು ಮುಂದೂಡಿದೆ. ಎಡಿಜಿಪಿ ಅಮೃತ್ ಪೌಲ್ ಹಾಗೂ ಆರೋಪಿ ಶಾಂತಕುಮಾರ್ ನಡುವೆ ೧.೩೬ ಕೋಟಿ ರೂಪಾಯಿ ಹಣ ವರ್ಗಾವಣೆ ಆಗಿದೆ. ಇನ್ನು ಮೊಬೈಲ್ ದತ್ತಾಂಶವನ್ನು ಅಳಿಸಿ ಹಾಕಲಾಗಿದೆ ಎಂದು ಸಿಐಡಿ ಆರೋಪಿಸಿದೆ. ಪ್ರಕರಣಕ್ಕೆ ಸಂಬAಧಿಸಿದAತೆ ಸತತ ಮೂರು ಬಾರಿ ವಿಚಾರಣೆ ಎದುರಿಸಿದ್ದ ಅಮೃತ್ ಪೌಲ್‌ರನ್ನು ಕಳೆದ ತಾ. ೪ ರಂದು ಸಿಐಡಿ ಬಂಧಿಸಿತ್ತು. ೫೪೫ ಪಿಎಸ್‌ಐ ಹುದ್ದೆಗಳ ಡೀಲ್ ನಡೆದಾಗ ಅಮೃತ್ ಪೌಲ್ ನೇಮಕಾತಿ ವಿಭಾಗದ ಮುಖ್ಯಸ್ಥರಾಗಿದ್ದರು. ಡಿವೈಎಸ್‌ಪಿ ಹಾಗೂ ಎಫ್‌ಡಿಎಯೊಂದಿಗೆ ಸೇರಿ ಅಮೃತ್ ಪೌಲ್ ಡೀಲ್ ಮಾಡಿಸಿದ್ದಾರೆ ಎಂಬ ಆರೋಪವಿದೆ.

ಮಂಕಿಪಾಕ್ಸ್-ಕೇAದ್ರದಿAದ ಮಾರ್ಗಸೂಚಿ ಬಿಡುಗಡೆ

ನವದೆಹಲಿ, ಜು. ೧೫: ದೇಶದ ಮೊದಲ ಮಂಕಿಪಾಕ್ಸ್ ಪ್ರಕರಣ ಕೇರಳದಲ್ಲಿ ಪತ್ತೆಯಾಗಿದ್ದು, ಕೇಂದ್ರ ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಸಚಿವಾಲಯವು ಮಂಕಿಪಾಕ್ಸ್ ನಿರ್ವಹಣೆಗೆ ಸಂಬAಧಿಸಿದAತೆ ಹೊಸ ಮಾರ್ಗಸೂಚಿಗಳನ್ನು ಬಿಡುಗಡೆ ಮಾಡಿದೆ. ಯುಎಇಯಿಂದ ಹಿಂದಿರುಗಿದ ಕೇರಳ ಮೂಲದ ವ್ಯಕ್ತಿಗೆ ಮಂಕಿಪಾಕ್ಸ್ ಪಾಸಿಟಿವ್ ದೃಢಪಟ್ಟಿದೆ. ಈ ಮೂಲಕ ಇಡೀ ದೇಶದಲ್ಲೇ ಮೊದಲ ಮಂಕಿಪಾಕ್ಸ್ ಪ್ರಕರಣ ಪತ್ತೆಯಾಗಿದೆ ಎಂದು ಕೇರಳ ಆರೋಗ್ಯ ಸಚಿವೆ ವೀಣಾ ಜಾರ್ಜ್ ಅವರು ತಿಳಿಸಿದ್ದರು. ರೋಗಿಯು ತಾ. ೧೨ ರಂದು ತಿರುವನಂತಪುರA ವಿಮಾನ ನಿಲ್ದಾಣದಲ್ಲಿ ಬಂದಿಳಿದಿದ್ದು, ಅವರ ಆರೋಗ್ಯ ಸ್ಥಿರವಾಗಿದೆ ಎಂದು ಹೇಳಿದ್ದರು. ಮಂಕಿಪಾಕ್ಸ್ ಲಕ್ಷಣಗಳು ಕಂಡುಬAದರೆ ಕೂಡಲೇ ಹತ್ತಿರದ ಆಸ್ಪತ್ರೆಗೆ ತೆರಳಿ ಔಷಧಿ ಪಡೆಯಿರಿ ಮತ್ತು ಈ ಬಗ್ಗೆ ಸರಿಯಾಗಿ ಮಾಹಿತಿ ನೀಡಿ, ಅಂರ‍್ರಾಷ್ಟಿçÃಯ ಪ್ರಯಾಣಿಕರು ಅನಾರೋಗ್ಯವಿರುವ ಜನರೊಂದಿಗೆ ನಿಕಟ ಸಂಪರ್ಕ ಹೊಂದಿರಬಾರದು, ಇಲಿಗಳು, ಅಳಿಲುಗಳು, ಮಂಗಗಳು ಮತ್ತು ಸಸ್ತನಿಗಳು ಸೇರಿದಂತೆ ಸತ್ತ ಅಥವಾ ಜೀವಂತ ಕಾಡು ಪ್ರಾಣಿಗಳ ಸಂಪರ್ಕ ದಿಂದ ದೂರವಿರಬೇಕು, ಕಾಡು ಪ್ರಾಣಿಗಳ ಮಾಂಸವನ್ನು ತಿನ್ನಬಾರದು, ಆಫ್ರಿಕಾ ಸೇರಿದಂತೆ ಇತರ ದೇಶಗಳಲ್ಲಿ ಕಾಡು ಪ್ರಾಣಿಗಳಿಂದ ಉತ್ಪಾದಿಸಿದ ಉತ್ಪನ್ನಗಳಾದ ಕ್ರೀಮ್ ಲೋಷನ್‌ಗಳನ್ನು ಬಳಸಬಾರದು ಮತ್ತು ತರಬಾರದು.

ಜಿಎಸ್‌ಟಿ ದರ ಬದಲಾವಣೆ : ತಾ. ೧೮ ರಿಂದ ಜಾರಿ

ನವದೆಹಲಿ, ಜು. ೧೫: ಆಸ್ಪತ್ರೆಯ ರೂಮ್ ಬಾಡಿಗೆ ದಿನಕ್ಕೆ ೫,೦೦೦ ರೂ.ಗಿಂತ ಹೆಚ್ಚು ಇರುವ ಕೊಠಡಿಗಳ ಬಾಡಿಗೆಗೆ ಜಿಎಸ್‌ಟಿ ವಿಧಿಸುವ ನಿರ್ಧಾರಕ್ಕೆ ತೀವ್ರ ಟೀಕೆ ವ್ಯಕ್ತವಾಗುತ್ತಿರುವುದರ ನಡುವೆಯೇ ಕೇಂದ್ರ ಸರ್ಕಾರ ಶೇ. ೫ ರಷ್ಟು ಜೆಎಸ್‌ಟಿ ವಿಧಿಸಿ ಶುಕ್ರವಾರ ಅಧಿಸೂಚನೆ ಹೊರಡಿಸಿದ್ದು, ತಾ. ೧೮ ರಿಂದ ಜಾರಿಗೆ ಬರಲಿದೆ. ಜೂನ್ ೨೮ ರಂದು ಕೇಂದ್ರ ವಿತ್ತ ಸಚಿವೆ ನಿರ್ಮಲಾ ಸೀತಾರಾಮನ್ ಅವರ ಅಧ್ಯಕ್ಷತೆಯಲ್ಲಿ ನಡೆದ ೪೭ನೇ ಜಿಎಸ್‌ಟಿ ಸಭೆಯಲ್ಲಿ ನಿರ್ಧರಿಸಿದಂತೆ ಆಸ್ಪತ್ರೆಗಳ ಜಿಎಸ್‌ಟಿ ದರ ಬದಲಾವಣೆ ಮಾಡಲಾಗಿದೆ ಎಂದು ಕೇಂದ್ರೀಯ ಪರೋಕ್ಷ ತೆರಿಗೆಗಳು ಮತ್ತು ಕಸ್ಟಮ್ಸ್ ಮಂಡಳಿ (ಸಿಬಿಐಸಿ) ತಿಳಿಸಿದೆ. ಈ ಬದಲಾವಣೆ ತಾ. ೧೮ ರಿಂದ ಅನ್ವಯವಾಗಲಿದೆ. ತೀವ್ರ ನಿಗಾ ಘಟಕಗಳನ್ನು ಹೊರತುಪಡಿಸಿ ರೂ. ೫,೦೦೦ ಕ್ಕಿಂತ ಹೆಚ್ಚು ಬಾಡಿಗೆ ಇರುವ ಆಸ್ಪತ್ರೆಯ ಕೊಠಡಿಗಳ ಮೇಲೆ ಶೇ. ೫ ರಷ್ಟು ಜಿಎಸ್‌ಟಿ ವಿಧಿಸಲು ಕೌನ್ಸಿಲ್ ನಿರ್ಧರಿಸಿದೆ ಎಂದು ಸಿಬಿಐಸಿ ಹೇಳಿದೆ. ಆರೋಗ್ಯ ಕ್ಷೇತ್ರವು ಹೆಚ್ಚಾಗಿ ಜಿಎಸ್‌ಟಿಯಿಂದ ವಿನಾಯಿತಿ ಪಡೆದಿದ್ದರೂ, ಕೊಠಡಿ ಬಾಡಿಗೆಗೆ ತೆರಿಗೆ ವಿಧಿಸುವುದರಿಂದ ಇನ್ನು ಮುಂದೆ ಚಿಕಿತ್ಸಾ ವೆಚ್ಚವೂ ಹೆಚ್ಚಾಗುತ್ತದೆ. ಟೆಟ್ರಾ ಪ್ಯಾಕ್ ಮೊಸರು, ಲಸ್ಸಿ ಮತ್ತು ಬೆಣ್ಣೆ ಹಾಲಿನ ಬೆಲೆಗಳು ಹೆಚ್ಚಾಗಲಿವೆ. ತಾ. ೧೮ ರಿಂದ ಇವುಗಳ ಮೇಲೆ ಶೇ. ೫ ರಷ್ಟು ಜಿಎಸ್‌ಟಿ ವಿಧಿಸಲಾಗುತ್ತದೆ, ಇದು ಮೊದಲು ಅನ್ವಯಿಸುತ್ತಿರಲಿಲ್ಲ. ಚೆಕ್‌ಬುಕ್ ವಿತರಿಸಲು ಬ್ಯಾಂಕಗಳು ಈ ಹಿಂದೆ ವಿಧಿಸುತ್ತಿದ್ದ ಸೇವಾ ತೆರಿಗೆ ಇದೀಗ ಶೇ.೧೮ ರಷ್ಟು ಜಿಎಸ್‌ಟಿ ಆಕರ್ಷಿಸಲಿದೆ. ಆಸ್ಪತ್ರೆಗಳಲ್ಲಿ ರೂ ೫,೦೦೦(ಐಸಿಯು ಅಲ್ಲದ)ಕ್ಕಿಂತ ಹೆಚ್ಚಿನ ಕೊಠಡಿಗಳ ಬಾಡಿಗೆಗೆ ಶೇ. ೫ ರಷ್ಟು ಜಿಎಸ್ಟಿ ವಿಧಿಸಲಾಗುತ್ತಿದೆ. ಇವುಗಳ ಹೊರತಾಗಿ, ಇದೀಗ ಅಟ್ಲಾಸ್ ನಕ್ಷೆಯು ಶೇ. ೧೨ ರಷ್ಟು ಜಿಎಸ್‌ಟಿ ಆಕರ್ಷಿಸಲಿದೆ.