ಸೋಮವಾರಪೇಟೆ,ಜು.೧೫: ಜಿಲ್ಲೆಯಲ್ಲಿ ಅಕ್ರಮ ಗೋ ಸಾಗಾಟ, ಗೋ ಕಳ್ಳತನ, ಗೋ ಹತ್ಯೆಯಂತಹ ಪ್ರಕರಣಗಳು ಆಗಾಗ್ಗೆ ವರದಿಯಾಗುತ್ತಲೇ ಇವೆ. ಈ ನಡುವೆ ಯಡವನಾಡು ಮೀಸಲು ಅರಣ್ಯ ಪ್ರದೇಶದಲ್ಲಿ ಗೋ ಕಳ್ಳರು ವಿನೂತನ ಮಾದರಿಯ ತಂತ್ರ ಅಳವಡಿಸಿಕೊಂಡು ಎಗ್ಗಿಲ್ಲದೇ ಗೋ ಸಾಗಾಟ ಮಾಡುತ್ತಿದ್ದಾರೆ.
ಯಡವನಾಡು, ಬೇಳೂರು, ಕಾರೇಕೊಪ್ಪ, ಸಜ್ಜಳ್ಳಿ, ಬೇಳೂರು ಬಸವನಹಳ್ಳಿ, ಕಾರೇಕೊಪ್ಪ, ಹುದುಗೂರು ಸೇರಿದಂತೆ ಸುತ್ತಮುತ್ತಲ ಗ್ರಾಮದ ಕೃಷಿಕರು ತಮ್ಮ ಗೋವುಗಳನ್ನು ಯಡವನಾಡು ಅರಣ್ಯ ಪ್ರದೇಶದಲ್ಲಿ ಮೇಯಲು ಬಿಡುತ್ತಿದ್ದು, ಇಂತಹ ಗೋವುಗಳನ್ನು ತಂತ್ರಗಾರಿಕೆಯ ಮೂಲಕ ಕಳವು ಮಾಡುತ್ತಿದ್ದ ಪ್ರಕರಣವೊಂದು ಇದೀಗ ಬಯಲಾಗಿದೆ.
ಯಡವನಾಡು ಅರಣ್ಯ ಪ್ರದೇಶದಲ್ಲಿ ಈ ಹಿಂದೆ ನೂರಾರು ಗೋವುಗಳು ಕಂಡುಬರುತ್ತಿದ್ದವು. ಆದರೆ ಇತ್ತೀಚಿನ ದಿನಗಳಲ್ಲಿ ಅವುಗಳ ಸಂಖ್ಯೆ ಕಡಿಮೆಯಾಗುತ್ತಿದ್ದು, ಇದರ ಮರ್ಮ ಅರಿಯಲು ಸ್ಥಳೀಯರು ಮುಂದಾದ ಸಂದರ್ಭ ಅಕ್ರಮ ಗೋ ಕಳ್ಳತನ ಪ್ರಕರಣ ಬೆಳಕಿಗೆ ಬಂದಿದೆ.
ಅರಣ್ಯದ ಅಂಚಿನಲ್ಲಿರುವ ರಸ್ತೆ ಬದಿಯಲ್ಲಿ ಮೇಯುವ ಗೋವುಗಳನ್ನು ಹಲಸಿನ ಹಣ್ಣಿನ ಆಸೆ ತೋರಿಸಿ ಅರಣ್ಯದ ಒಳಗೆ ಬರುವಂತೆ ಮಾಡಿ, ನಂತರ ಸಮಯ ಸಾಧಿಸಿ ಸಾಗಾಟ ಮಾಡುತ್ತಿದ್ದ ವ್ಯವಸ್ಥಿತ ಜಾಲವೊಂದು ಪತ್ತೆಯಾಗಿದ್ದರೂ, ಇದರ ಸೂತ್ರದಾರರು ಮಾತ್ರ ನಾಪತ್ತೆಯಾಗಿದ್ದಾರೆ.
ರಸ್ತೆ ಬದಿಯಿಂದ ಅರಣ್ಯದ ಒಳಭಾಗದವರೆಗೆ ಹಲಸಿನ ಹಣ್ಣಿನ ಸಿಪ್ಪೆಗಳನ್ನು ಒಂದೊAದೇ ಹಾಕುತ್ತಾ, ನಡು ನಡುವೆ ಇರುವ ಮರಗಳಿಗೆ ನೈಲಾನ್ ಹಗ್ಗದಿಂದ ಕುಣಿಕೆ ಮಾಡಿ ಗೋವುಗಳನ್ನು ‘ಟ್ರಾö್ಯಪ್’ ಮಾಡುವ ವ್ಯವಸ್ಥಿತ ಜಾಲವನ್ನು ಸ್ಥಳೀಯರು ಪತ್ತೆ ಹಚ್ಚಿದ್ದು, ಈ ಸಂದರ್ಭ ಗೋ ಕಳ್ಳರು ಅರಣ್ಯದೊಳಗೆ ಓಡಿ ನಾಪತ್ತೆಯಾಗಿದ್ದಾರೆ.
ಜಾನುವಾರುಗಳು ಹಲಸಿನ ಹಣ್ಣಿನ ಸಿಪ್ಪೆ ತಿನ್ನುತ್ತಾ ಮುಂದೆ ಸಾಗಿ ಕುಣಿಕೆಗೆ ಸಿಕ್ಕಿಹಾಕಿಕೊಂಡರೆ ತಕ್ಷಣ ಮರಕ್ಕೆ ಬಿಗಿದುಕೊಳ್ಳುವ ವ್ಯವಸ್ಥೆಯನ್ನು ಖದೀಮರು ಕಂಡುಕೊAಡಿದ್ದಾರೆ. ನಂತರ ರಸ್ತೆಯಲ್ಲಿ ಜನಸಂಚಾರ ಇಲ್ಲದ ಸಂದರ್ಭ ಅಥವಾ ರಾತ್ರಿ ವೇಳೆಯಲ್ಲಿ ವಾಹನ ತಂದು ಜಾನುವಾರುಗಳನ್ನು ತುಂಬಿಸಿಕೊAಡು ಹೋಗುತ್ತಿದ್ದ ಪ್ರಕರಣ ಇದೀಗ ಬೆಳಕಿಗೆ ಬಂದಿದೆ.
ಇAದು ಮಧ್ಯಾಹ್ನ ಇದೇ ರೀತಿಯಲ್ಲಿ ಗೋವುಗಳನ್ನು ಟ್ರಾö್ಯಪ್ ಮಾಡಲು ಯತ್ನಿಸುತ್ತಿದ್ದ ಸಂದರ್ಭ ಕುಸುಬೂರು ಗ್ರಾಮದ ಸೋಮೇಶ್ ಎಂಬವರು ಅನುಮಾನಗೊಂಡು ಹತ್ತಿರ ತೆರಳಿ ವಿಚಾರಿಸಲು ಮುಂದಾಗಿದ್ದಾರೆ. ಈ ಸಂದರ್ಭ ಗೋ ಕಳ್ಳರು ಸ್ಥಳದಿಂದ ಪರಾರಿಯಾಗಿದ್ದಾರೆ.
ನಂತರ ಸ್ಥಳೀಯರಿಗೆ ಮಾಹಿತಿ ನೀಡಿ ಸುತ್ತಮುತ್ತಲ ಪ್ರದೇಶದಲ್ಲಿ ಹುಡುಕಾಟ ನಡೆಸಿದಾಗ ಗೋವುಗಳು ಕುಣಿಕೆಗೆ ಸಿಲುಕಿರುವುದು ಕಂಡುಬAದಿದೆ. ಆ ಮೂಲಕ ವಿನೂತನ ತಂತ್ರದ ಮೂಲಕ ಗೋವುಗಳನ್ನು ಕಳವು ಮಾಡುವ ಸಂಚು ಬಯಲಾಗಿದೆ. ಕೃಷಿಕರು ತಮ್ಮ ಜಾನುವಾರುಗಳ ಬಗ್ಗೆ ಹೆಚ್ಚಿನ ಜಾಗ್ರತೆ ವಹಿಸಬೇಕು. ಗೋ ಕಳ್ಳರಿಂದ ತಮ್ಮ ಗೋವುಗಳನ್ನು ರಕ್ಷಿಸಿಕೊಳ್ಳಲು ಮುಂದಾಗಬೇಕು ಎಂದು ಸೋಮೇಶ್ ಅವರು ಮನವಿ ಮಾಡಿದ್ದಾರೆ.