ಶ್ರೀಮಂಗಲ, ಜು. ೧೪: ದಕ್ಷಿಣ ಕೊಡಗಿನ ಘಟ್ಟ ಪ್ರದೇಶದಲ್ಲಿ ಬುಧವಾರ ಸಂಜೆಯಿAದ ಭಾರೀ ಗಾಳಿ-ಮಳೆ ಸುರಿಯುತ್ತಿದೆ. ಈ ಹಿನೆÀ್ನಲೆ ಲಕ್ಷ್ಮಣತೀರ್ಥ ನದಿಯಲ್ಲಿ ನೀರಿನ ಮಟ್ಟ ತೀವ್ರ ಏರಿಕೆಯಾಗಿದೆ. ತಗ್ಗು ಪ್ರದೇಶ ನಾಲ್ಕೇರಿ, ಹರಿಹರ, ಬಲ್ಯಮುಂಡೂರು, ನಿಟ್ಟೂರು, ಕೊಟ್ಟಗೇರಿ, ಬೆಸಗೂರು ವ್ಯಾಪ್ತಿಯಲ್ಲಿ ಭತ್ತದ ಗದ್ದೆಗಳು ಜಲಾವೃತವಾಗಿದೆ. ಶ್ರೀಮಂಗಲ- ನಾಲ್ಕೇರಿ ರಸ್ತೆ ನಡುವೆ ಸೇತುವೆ ಮುಳುಗಡೆಯಾಗಿದೆ. ಶ್ರೀಮಂಗಲಕ್ಕೆ ಪೊನ್ನಂಪೇಟೆ ೩೩ ಕೆ.ವಿ. ವಿದ್ಯುತ್ ಮಾರ್ಗದಲ್ಲಿ ಮರ ಬಿದ್ದ ಪರಿಣಾಮ ಗುರುವಾರದಿಂದ ವಿದ್ಯುತ್ ಸ್ಥಗಿತ ವಾಗಿದೆ. ಇದಲ್ಲದೆ ಟಿ. ಶೆಟ್ಟಿಗೇರಿ-ಬಿರುನಾಣಿ ಮಾರ್ಗದಲ್ಲಿ ೧೧ ಕೆ.ವಿ. ಮಾರ್ಗಕ್ಕೆ ಮರ ಬಿದ್ದು ಹಾನಿಯಾಗಿದೆ. ದಕ್ಷಿಣ ಕೊಡಗಿನ ಗ್ರಾಮೀಣ ರಸ್ತೆಗಳಲ್ಲಿ ಮರ ಬಿದ್ದು ರಸ್ತೆ ಸಂಚಾರಕ್ಕೆ ವ್ಯತ್ಯಯ ಉಂಟಾಗಿದೆ. ನೆಮ್ಮಲೆ- ಕುರ್ಚಿ ಮಾರ್ಗದಲ್ಲಿ, ಬಿರುನಾಣಿ-ಟಿ. ಶೆಟ್ಟಿಗೇರಿ ಮಾರ್ಗದಲ್ಲಿ, ಶ್ರೀಮಂಗಲ-ನಾಲ್ಕೇರಿ ಮಾರ್ಗದಲ್ಲಿ ಬೃಹತ್ ಮರ ಬಿದ್ದಿದ್ದು, ಗ್ರಾಮಸ್ಥರು ಮತ್ತು ಸ್ಥಳೀಯ ಗ್ರಾಮ ಪಂಚಾಯಿತಿ ಮೂಲಕ ತೆರವು ಕಾರ್ಯ ನಡೆದಿದೆ.
ಗುರುವಾರ ಸಂಜೆವರೆಗೆ ಮಳೆ ಆರ್ಭಟ ಮುಂದುವರೆದಿತ್ತು. ಕೆಲವು ಖಾಸಗಿ ಶಿಕ್ಷಣ ಸಂಸ್ಥೆಗಳು ಮಳೆ ಹಿನ್ನೆಲೆ ತಮ್ಮ ವಿವೇಚನೆಯಿಂದ ಗುರುವಾರ ರಜೆ ನೀಡಿದ್ದವು. ಆದರೆ ಸರಕಾರಿ ಶಾಲಾ ವಿದ್ಯಾರ್ಥಿಗಳು ಶಾಲೆ ರಜೆ ಬಗ್ಗೆ ಯಾವುದೇ ಮಾಹಿತಿ ಇಲ್ಲದೆ ಬಂದು ವಾಪಸ್ ಹೋಗುವಂತಾ ಯಿತು. ಗುರುವಾರವೂ ಸಹ ಬಿರುನಾಣಿ, ಶ್ರೀಮಂಗಲ, ಟಿ. ಶೆಟ್ಟಿಗೇರಿ, ಹುದಿಕೇರಿ, ಪೊನ್ನಂಪೇಟೆ, ನಾಲ್ಕೇರಿ, ಕುಟ್ಟ, ಬಿ. ಶೆಟ್ಟಿಗೇರಿ ಭಾರೀ ಮಳೆ ಸುರಿದಿದೆ.