ಮಡಿಕೇರಿ, ಜು. ೧೪: ಗ್ರೀನ್ ಸಿಟಿ ಫೋರಂ ವತಿಯಿಂದ ಹೊಟೇಲ್ ನೀಲ್ ಕಿಚನ್ ಸಹಕಾರದಲ್ಲಿ ಮಡಿಕೇರಿ ನಗರಸಭೆಯ ಪೌರ ಕಾರ್ಮಿಕರಿಗೆ ಸ್ವೆಟರ್ ವಿತರಿಸಲಾಯಿತು. ಕಾವೇರಿ ಕಲಾಕ್ಷೇತ್ರದಲ್ಲಿ ನಡೆದ ಕಾರ್ಯಕ್ರಮದಲ್ಲಿ ನಗರಸಭೆ ಅಧ್ಯಕ್ಷೆ ಅನಿತಾ ಪೂವಯ್ಯ, ಆಯುಕ್ತ ರಾಮದಾಸ್, ನೀಲ್ ಕಿಚನ್ ಮಾಲೀಕ ಒಡಿಯಂಡ ದಿನೇಶ್, ಗ್ರೀನ್ ಸಿಟಿ ಫೋರಂ ಅಧ್ಯಕ್ಷ ಚೈಯ್ಯಂಡ ಸತ್ಯ ಗಣಪತಿ ಹಾಗೂ ಇತರರು ೫೪ ಮಂದಿ ಪೌರ ಕಾರ್ಮಿಕರಿಗೆ ಸ್ವೆಟರ್ ವಿತರಿಸಿದರು. ಚೈಯ್ಯಂಡ ಸತ್ಯ ಗಣಪತಿ ಮಾತನಾಡಿ, ಗ್ರೀನ್ ಸಿಟಿ ಫೋರಂ ವತಿಯಿಂದ ಮುಂದಿನ ದಿನದಲ್ಲಿ ಪೌರ ಕಾರ್ಮಿಕರು ಮತ್ತು ಕುಟುಂಬಕ್ಕೆ ಆರೋಗ್ಯ ತಪಾಸಣಾ ಶಿಬಿರವನ್ನು ಹಮ್ಮಿಕೊಳ್ಳಲಾಗುವುದು ಎಂದರು.
ನಗರಸಭೆ ಉಪಾಧ್ಯಕ್ಷೆ ಸವಿತಾ ರಾಕೇಶ್, ಸದಸ್ಯರಾದ ಕವನ್ ಕಾವೇರಪ್ಪ, ಚಂದ್ರ, ಗ್ರೀನ್ ಸಿಟಿ ಫೋರಂನ ದಾಮೋದರ್ ವ್ಯಾಂಡಮ್ ಹಾಗೂ ಇತರರು ಉಪಸ್ಥಿತರಿದ್ದರು.