ಕೂಡಿಗೆ, ಜು. ೧೪: ದಾವಣಗೆರೆ ಜಿಲ್ಲೆಯ ಹರಿಹರದಲ್ಲಿ ನಡೆದ ರಾಜ್ಯ ಮಟ್ಟದ ಕ್ರಾಸ್ ಕಂಟ್ರಿ ಓಟದ ಸ್ಪರ್ಧೆಯಲ್ಲಿ ಕೂಡಿಗೆ ಸರಕಾರಿ ಪದವಿ ಪೂರ್ವ ಕಾಲೇಜಿನ ದ್ವಿತೀಯ ಪಿಯುಸಿಯ ವಿದ್ಯಾರ್ಥಿ ಭೀಮಾ ಶಂಕರ್ ೬ ಕಿಲೋಮೀಟರ್ ಕ್ರಾಸ್ ಕಂಟ್ರಿ (೨೦ ವರ್ಷ ಕೆಳಗಿನ ವಯೋಮಿತಿ) ಸ್ಪರ್ಧೆಯಲ್ಲಿ ಚಿನ್ನದ ಪದಕ ಗಳಿಸಿದ್ದಾರೆೆ.
ಕುಶಾಲನಗರದ ನಿತಿನ್ ಕುಮಾರ್ ಪುರುಷರ ೧೦ ಕಿಲೋಮೀಟರ್ ಓಟದ ಸ್ಪರ್ಧೆಯಲ್ಲಿ ಕಂಚಿನ ಪದಕ ಪಡೆದಿದ್ದಾರೆ.
ದಾವಣಗೆರೆ ಜಿಲ್ಲಾ ಅಥ್ಲೆಟಿಕ್ಸ್ ಅಸೋಸಿಯೇಷನ್ ಮತ್ತು ಮಂಜಣ್ಣ ಕ್ರೀಡಾ ಸಮಿತಿಯ ಸಂಯೋಗದೊAದಿಗೆ ಭಾರತೀಯ ರೈಲ್ವೆ ಇಲಾಖೆಯ ಮಾಜಿ ಕ್ರೀಡಾಪಟು ದಿ. ಮಂಜಣ್ಣ ಸ್ಮರಣಾರ್ಥವಾಗಿ ಪಂದ್ಯಾವಳಿಯಲ್ಲಿ ಸುಮಾರು ೫೦೦ಕ್ಕೂ ಹೆಚ್ಚು ಕ್ರೀಡಾಪಟುಗಳು ಭಾಗವಹಿಸಿದ್ದರು. ಸ್ಥಳೀಯ ಶಾಸಕ ಎಸ್. ರಾಮಪ್ಪ ಅವರು ಕ್ರೀಡಾಕೂಟದ ಉದ್ಘಾಟನೆ ನೆರವೇರಿಸಿದರು.
ಭೀಮಾ ಶಂಕರ್ ಅವರಿಗೆ ಕೂಡಿಗೆ ಕ್ರೀಡಾಶಾಲೆ ಅಥ್ಲೆಟಿಕ್ ತರಬೇತಿದಾರ ಮಂಜುನಾಥ ತರಬೇತಿ ನೀಡುತ್ತಿದ್ದಾರೆ. ನಿತಿನ್ ಕುಮಾರ್‌ಗೆ ಅಂತೋಣಿ ಡಿಸೋಜ ಅವರು ತರಬೇತಿ ನೀಡುತ್ತಿದ್ದಾರೆ.