ಸೋಮವಾರಪೇಟೆ, ಜು. ೧೪: ಸಮೀಪದ ಶ್ರೀ ಮುತ್ತಪ್ಪ ಮತ್ತು ಅಯ್ಯಪ್ಪ ಸ್ವಾಮಿ ದೇವಾಲಯದ ಶ್ರೀ ಭುವನೇಶ್ವರಿ ಸನ್ನಿಧಿಯಲ್ಲಿ ತಾ. ೧೭ರಿಂದ ಆಗಸ್ಟ್ ೧೫ರ ವರೆಗೆ ದುರ್ಗಾದೀಪ ನಮಸ್ಕಾರ ಪೂಜೆ ನಡೆಯಲಿದೆ ಎಂದು ದೇವಾಲಯ ಸಮಿತಿ ಅಧ್ಯಕ್ಷ ವಿನೋದ್ ತಿಳಿಸಿದ್ದಾರೆ.

ತಾ ೧೭ ರಂದು ಬೆಳಿಗ್ಗೆ ೬ ಗಂಟೆಗೆ ಗಣಪತಿ ಹೋಮದೊಂದಿಗೆ ದುರ್ಗಾದೀಪ ನಮಸ್ಕಾರ ಪೂಜೆಗೆ ಚಾಲನೆ ನೀಡಲಾಗುವುದು. ದೇವಾಲಯದ ಅರ್ಚಕರಾದ ಮಣಿಕಂಠನ್ ನಂಬೂದರಿ ಮತ್ತು ಜಗದೀಶ್ ಉಡುಪ ಅವರುಗಳ ಪೌರೋಹಿತ್ವದಲ್ಲಿ ಒಂದು ತಿಂಗಳ ಕಾಲ ಪೂಜೋತ್ಸವ ಜರುಗಲಿದೆ ಎಂದು ವಿನೋದ್ ತಿಳಿಸಿದ್ದಾರೆ.

ತಾ. ೧೬ ರಂದು (ಇಂದು) ಸಂಕಷ್ಟಿ ಪೂಜೆ, ತಾ. ೨೮ ರಂದು ಆಟಿ ಅಮಾವಾಸ್ಯೆ ಅಂಗವಾಗಿ ಶತ್ರು ಸಂಹಾರ ಪೂಜೆ, ಆಗಸ್ಟ್ ೨ ರಂದು ನಾಗದೇವರ ಸನ್ನಿಧಿಯಲ್ಲಿ ನಾಗರ ಪಂಚಮಿ ಪೂಜೆ, ತಾ. ೧೩ ರಂದು ಅಯ್ಯಪ್ಪ ಸ್ವಾಮಿ ಸನ್ನಿಧಿಯಲ್ಲಿ ನಿರಾಂಜನ ಸೇವೆ, ತಾ. ೧೫ ರಂದು ಬೆಳಿಗ್ಗೆ ೮ ಗಂಟೆಯಿAದ ದೇವಾಲಯದಲ್ಲಿ ಶ್ರೀ ಸೂಕ್ತ ಹೋಮ ಮತ್ತು ಪೂರ್ಣಾಹುತಿಯೊಂದಿಗೆ ಪ್ರಸಕ್ತ ವರ್ಷದ ದುರ್ಗಾದೀಪ ನಮಸ್ಕಾರ ಪೂಜೆಗೆ ವಿಧ್ಯುಕ್ತ ತೆರೆ ಬೀಳಲಿದೆ ಎಂದು ದೇವಾಲಯ ಸಮಿತಿ ಅಧ್ಯಕ್ಷ ಎನ್.ಡಿ ವಿನೋದ್ ತಿಳಿಸಿದ್ದಾರೆ.