ಕೂಡಿಗೆ: ಕುಶಾಲನಗರ ತಾಲೂಕು ತಹಶೀಲ್ದಾರ್ ಪ್ರಕಾಶ್ ಕುಶಾಲನಗರ ಹೋಬಳಿ ವ್ಯಾಪ್ತಿಯ ತೊರೆನೂರು, ಹೆಬ್ಬಾಲೆ,ಶಿರಂಗಾಲ ಕಣಿವೆ ಗ್ರಾಮ ಪಂಚಾಯಿತಿ ವ್ಯಾಪ್ತಿಯ ವಿವಿಧ ಗ್ರಾಮಗಳಲ್ಲಿ ಮಳೆಯಿಂದಾಗಿ ವಾಸದ ಮನೆಯ ಗೋಡೆ ಮತ್ತು ಕೊಟ್ಟಿಗೆ ಬಿದ್ದ ಸ್ಧಳಗಳಿಗೆ ಗ್ರಾಮ ಲೆಕ್ಕಾಧಿಕಾರಿ ಮತ್ತು ಕಂದಾಯ ಪರಿವೀಕ್ಷಣಾಧಿಕಾರಿಗಳೊಂದಿಗೆ ಭೇಟಿ ನೀಡಿ ಪರಿಶೀಲನೆ ಮಾಡಿದರು.

ಕಂದಾಯ ಪರಿವೀಕ್ಷಕ ಸಂತೋಷ್, ಲೆಕ್ಕಾಧಿಕಾರಿ ಗುರುದರ್ಶನ್, ಫೀರ್ ಮಹಮ್ಮದ್, ಆಯಾ ಗ್ರಾಮ ಪಂಚಾಯಿತಿ ಅಭಿವೃದ್ಧಿ ಅಧಿಕಾರಿಗಳು ಹಾಜರಿದ್ದರು.ಗೋಣಿಕೊಪ್ಪ ವರದಿ: ಮಳೆ, ಗಾಳಿಗೆ ಗುಡಿಸಲು ಕಳೆದುಕೊಂಡಿದ್ದ ಮಹಿಳೆಗೆ ಶ್ರೀ ಕ್ಷೇತ್ರ ಧರ್ಮಸ್ಥಳ ಗ್ರಾಮಾಭಿವೃದ್ಧಿ ಯೋಜನೆಯ ವಿಪತ್ತು ನಿರ್ವಹಣಾ ಘಟಕದ ವತಿಯಿಂದ ಶೆಡ್ ನಿರ್ಮಿಸಿಕೊಡಲಾಗಿದೆ.

ಕುಟ್ಟ ಭದ್ರಕಾಳಿ ದೇವಸ್ಥಾನ ಸಮೀಪ ಗುಡಿಸಲು ಕಟ್ಟಿಕೊಂಡು ಜೀವನ ಸಾಗಿಸುತ್ತಿದ್ದ ಸರೋಜಿನಿ ಎಂಬವರಿಗೆ ಅದೇ ಜಾಗದಲ್ಲಿ ಗುಡಿಸಲು ನಿರ್ಮಿಸಿಕೊಡಲಾಯಿತು. ಮಳೆಗೆ ಅವರ ಹಕ್ಕುಪತ್ರ, ಆಧಾರ್ ನಾಶವಾಗಿದ್ದು, ಈ ಬಗ್ಗೆ ಸ್ಥಳೀಯ ಆಡಳಿತಕ್ಕೆ ತಿಳಿಸಿ ಕ್ರಮಕೈಗೊಳ್ಳುವ ಬಗ್ಗೆ ಸಮಿತಿ ಸದಸ್ಯರು ಭರವಸೆ ನೀಡಿದರು. ಪತಿಯನ್ನು ಕಳೆದುಕೊಂಡಿರುವ ಸರೋಜಿನಿಯವರು ಮಕ್ಕಳು ಕೂಡ ಜೊತೆಯಲ್ಲಿ ಇಲ್ಲದೆ ಏಕಾಂಗಿಯಾಗಿ ವಾಸವಿದ್ದರು.

ಘಟಕದ ಸಂಯೋಜಕಿ ರೇಖಾ ಗಣೇಶ್, ಕಳತ್ಮಾಡು ಸಂಯೋಜಕ ಜಯಪ್ರಕಾಶ್, ಸ್ವಯಂ ಸೇವಕರಾದ ಕಿರಣ್‌ಕುಮಾರ್, ಅವ್ವಿ, ತೀರ್ಥಕುಮಾರ್, ಸಂದೀಪ್, ಕುಶಾಲಪ್ಪ, ಹರ್ಷಿದ್, ದಿನೇಶ್, ಮೋಹನ್, ಅಕ್ಷತ್ ಇದ್ದರು.

ಸುಂಟಿಕೊಪ್ಪ: ಇಲ್ಲಿಗೆ ಸಮೀಪದ ಮಾದಾಪುರ ರಸ್ತೆಯ ಸ್ವಸ್ಥ ಶಾಲೆ ಸಮೀಪ ಗಾಳಿ ಮಳೆಗೆ ರಸ್ತೆ ಬದಿಯಲ್ಲಿದ್ದ ಭಾರೀ ಗಾತ್ರದ ಸಿಲ್ವರ್ ಮರ ರಸ್ತೆಗೆ ಅಢ್ಡವಾಗಿ ಬಿದ್ದ ಪರಣಾಮ ವಿದ್ಯುತ್ ತಂತಿಯೊAದಿಗೆ ಕಂಬವು ಬಿದ್ದು ಮಾದಾಪುರ, ಸುಂಟಿಕೊಪ್ಪ ರಸ್ತೆಯಲ್ಲಿ ಒಂದು ಗಂಟೆಗಳ ಕಾಲ ವಾಹನ ಸಂಚಾರಕ್ಕೆ ಅಡಚಣೆಯಾಗಿ ವಾಹನ ಸವಾರರು ಶಾಲಾ ವಾಹನಗಳು ತೊಂದರೆ ಅನುಭವಿಸುವಂತಾಯಿತು.

ಸುಂಟಿಕೊಪ್ಪ ವ್ಯಾಪ್ತಿಯಲ್ಲಿ ಬುಧವಾರ ರಾತ್ರಿ ಸುರಿದ ಭಾರೀ ಗಾಳಿ -ಮಳೆಗೆ ಕಂಬಿಬಾಣೆ ಮತ್ತಿಕಾಡು ತೊಂಡೂರು ಭಾಗದಲ್ಲಿ ಗಾಳಿ ಮಳೆಗೆ ಸುಮಾರು ೧೩ ವಿದ್ಯುತ್ ಕಂಬಗಳು ಮುರಿದು ಬಿದ್ದು ಇಲಾಖೆಗೆ ಅಪಾರ ನಷ್ಟ ಸಂಭವಿಸಿದೆ. ನಾವು ದಿನವಿಡಿ ಶ್ರಮಪಟ್ಟು ಕಂಬಗಳನ್ನು ಅಳವಡಿಸಿ ತಂತಿ ಜೋಡಣೆಯಲ್ಲಿ ನಿರತರಾಗಿರುವಾಗ ಬೇರೊಂದೆಡೆ ಮರಗಳು ಬಿದ್ದು ಕಂಬಗಳು ಮುರಿದು ಬೀಳುತ್ತಿದ್ದು, ಇದರಿಂದ ಸಾರ್ವಜನಿಕರಿಗೆ ಸಕಾಲದಲ್ಲಿ ವಿದ್ಯುತ್ ಪೂರೈಸಲು ಸಾದ್ಯವಾಗುತ್ತಿಲ್ಲ. ಸಾರ್ವಜನಿಕರು ಸಹಕಾರ ನೀಡಬೇಕೆಂದು ಸೆಸ್ಕ್ ಇಲಾಖೆ ಇಂಜಿನಿಯರ್ ಜಯದೀಪ್ ಮಾಹಿತಿ ನೀಡಿದ್ದಾರೆ.ಶಾಲಾ, ಕಾಲೇಜುಗಳಿಗೆ ರಜೆ ಘೋಷಿಸಲು ಒತ್ತಾಯ

ಮಡಿಕೇರಿ : ಭಾರೀ ಗಾಳಿ ಮಳೆಯಿಂದ ಕೊಡಗು ಜಿಲ್ಲೆ ತತ್ತರಿಸಿ ಹೋಗಿದ್ದು, ಮಕ್ಕಳ ಸುರಕ್ಷತೆಯ ದೃಷ್ಟಿಯಿಂದ ಜಿಲ್ಲಾಡಳಿತ ಎಲ್ಲಾ ಶಾಲಾ, ಕಾಲೇಜುಗಳಿಗೆ ರಜೆ ಘೋಷಿಸಬೇಕೆಂದು ಕೊಡಗು ಜಿಲ್ಲಾ ಕಾಂಗ್ರೆಸ್ ಸಮಿತಿಯ ಅಲ್ಪಸಂಖ್ಯಾತರ ಘಟಕ ಒತ್ತಾಯಿಸಿದೆ.

ಪತ್ರಿಕಾ ಪ್ರಕಟಣೆ ನೀಡಿರುವ ಅಲ್ಪಸಂಖ್ಯಾತರ ಘಟಕದ ಜಿಲ್ಲಾಧ್ಯಕ್ಷ ಎಂ.ಎ.ಉಸ್ಮಾನ್ ಕಳೆದ ೧೫ ದಿನಗಳಿಂದ ಜಿಲ್ಲೆಯಲ್ಲಿ ಧಾರಾಕಾರ ಮಳೆಯಾಗುತ್ತಿದ್ದು, ಗಾಳಿಯ ವೇಗ ಹೆಚ್ಚಾಗಿದೆ. ವಿವಿಧೆಡೆ ಮರಗಳು ಮತ್ತು ವಿದ್ಯುತ್ ಕಂಬಗಳು ಧರೆಗುರುಳುತ್ತಿದ್ದು, ಅಪಾಯದ ಸ್ಥಿತಿ ಎದುರಾಗಿದೆ. ಬರೆಗಳು ಕುಸಿಯುತ್ತಿವೆ, ನದಿಗಳಲ್ಲಿ ಅಪಾಯದ ಮಟ್ಟ ಮೀರಿ ನೀರು ಹರಿಯುತ್ತಿದ್ದು, ರಸ್ತೆ ಸಂಪರ್ಕ ಕಡಿತಗೊಳ್ಳುತ್ತಿದೆ. ಮೈಕೊರೆಯುವ ಚಳಿ ಕಾಡುತ್ತಿದೆ. ಮಕ್ಕಳ ಹಿತದೃಷ್ಟಿಯಿಂದ ಶಾಲಾ, ಕಾಲೇಜುಗಳಿಗೆ ರಜೆ ಘೋಷಿಸಬೇಕೆಂದು ಮನವಿ ಮಾಡಿದ್ದಾರೆ.ಸುಂಟಿಕೊಪ್ಪ : ಹರದೂರು ಗ್ರಾಮ ಪಂಚಾಯಿತಿ ವ್ಯಾಪ್ತಿಯಲ್ಲಿ ಗರಗಂದೂರುವಿನಲ್ಲಿ ೨ ಮನೆಗೆ ಸಂಪೂರ್ಣ ಹಾನಿಯಾಗಿದೆ.

೩ ಮನೆಗೆ ಭಾಗಶÀಃ ಹಾನಿಯಾಗಿದ್ದು, ೪ ಮನೆಗೆ ಅಲ್ಪ ಪ್ರಮಾಣದ ಹಾನಿಯಾಗಿದೆ. ಹೊಸತೋಟ ರುಕಿಯ ಅವರ ಮನೆ ಮೇಲೆ ಮರ ಬಿದ್ದು ಅವರ ಪುತ್ರಿ ಕೈರುನ್ನಿಸನಿಗೆ ಸಣ್ಣ ಪ್ರಮಾಣದ ಗಾಯಗಳಾಗಿವೆ. ಸ್ಥಳಕ್ಕೆ ಅಧ್ಯಕ್ಷರು, ಸದಸ್ಯರು, ಅಧಿಕಾರಿಗಳು ಭೇಟಿ ನೀಡಿದರು.ಕೂಡಿಗೆ: ಕೂಡಿಗೆ ಗ್ರಾಮ ಪಂಚಾಯಿತಿ ವ್ಯಾಪ್ತಿಯ ಸೀಗೆಹೊಸೂರು ಗ್ರಾಮದ ಚಂದ್ರಾವತಿ ಎಂಬುವವರಿಗೆ ಸೇರಿದ ವಾಸದ ಮನೆಯ ಗೋಡೆ ಮಳೆಯಿಂದಾಗಿ ಕುಸಿತಗೊಂಡಿದೆ.

ಸ್ಥಳಕ್ಕೆ ಗ್ರಾಮ ಪಂಚಾಯಿತಿ ಸದಸ್ಯ ಅನಂತ್, ಚಂದ್ರು, ಜಯಶೀಲಾ, ಅಭಿವೃದ್ಧಿ ಅಧಿಕಾರಿ ಎಂ. ಕೆ. ಅಯಿಷಾ, ಲೆಕ್ಕಾಧಿಕಾರಿ ಗುರುದರ್ಶನ್, ಕಾರ್ಯದರ್ಶಿ ಪುನಿತ್ ಭೇಟಿ ನೀಡಿ ಪರಿಶೀಲನೆ ನಡೆಸಿ ಪರಿಹಾರದ ನೀಡುವ ಭರವಸೆ ನೀಡಿದ್ದಾರೆ.ಮಡಿಕೇರಿ: ಮಡಿಕೇರಿ-ಚೆಟ್ಟಳ್ಳಿ ಮಾರ್ಗದಲ್ಲಿ ಧಾರಾಕಾರ ಮಳೆ ಹಾಗೂ ಗಾಳಿಯಿಂದಾಗಿ ಬಿದ್ದಿದ್ದ ಮರವನ್ನು ಅರಣ್ಯ ಇಲಾಖೆಯ ೧೦ ಮಂದಿ ತಂಡ ತೆರವುಗೊಳಿಸಿದೆ. ಮರದ ಜೊತೆಗೆ ರಸ್ತೆ ಬದಿಗೆ ಬಿದ್ದಿದ್ದ ಮಣ್ಣನ್ನು ತೆರವುಗೊಳಿಸಿ, ಸುಗಮ ಸಾರಿಗೆ ಸಂಚಾರಕ್ಕೆ ವ್ಯವಸ್ಥೆ ಮಾಡಲಾಗಿದೆ ಎಂದು ಲೋಕೋಪಯೋಗಿ ಇಲಾಖೆ ಇಇ ನಾಗರಾಜು ತಿಳಿಸಿದ್ದಾರೆ.

ಮಡಿಕೇರಿ-ಚೆಟ್ಟಳ್ಳಿ ಮಾರ್ಗದ ಅಭ್ಯಾಲದಲ್ಲಿ ಮರವನ್ನು ಅರಣ್ಯ ಇಲಾಖೆಯ ೧೦ ಮಂದಿಯ ತಂಡ ತೆರವುಗೊಳಿಸಿದ್ದಾರೆ. ಜೊತೆಗೆ ಲೋಕೋಪಯೋಗಿ ಇಲಾಖೆಯಿಂದ ಜೆಸಿಬಿ, ಟಿಪ್ಪರ್ ಮತ್ತು ಟ್ರಾö್ಯಕ್ಟರ್ ಮೂಲಕ ಮಣ್ಣು ತೆರವುಗೊಳಿಸಿ ಸಾರಿಗೆ ಸಂಚಾರಕ್ಕೆ ಯಾವುದೇ ರೀತಿಯಲ್ಲಿ ವ್ಯತ್ಯಯ ಉಂಟಾಗದAತೆ ಗಮನಹರಿಸಲಾಗಿದೆ ಎಂದು ನಾಗರಾಜು ಅವರು ಮಾಹಿತಿ ನೀಡಿದ್ದಾರೆ.

ಜಿಲ್ಲೆಯ ಯಾವುದೇ ಭಾಗದಲ್ಲಿ ಸಾರಿಗೆ ಸಂಚಾರಕ್ಕೆ ವ್ಯತ್ಯಯ ಉಂಟಾಗದAತೆ ತಾಲೂಕು ಹಂತದಲ್ಲಿ ವಿಶೇಷ ಗಮನ ಹರಿಸಲಾಗಿದೆ. ಅರಣ್ಯ, ಲೋಕೋಪಯೋಗಿ ಹಾಗೂ ಸೆಸ್ಕ್ ಇಲಾಖೆಗಳು ಜೊತೆಗೂಡಿ ಕಾರ್ಯನಿರ್ವಹಿಸುತ್ತಿವೆ ಎಂದು ತಿಳಿಸಿದರು.ಶನಿವಾರಸಂತೆ : ಹೋಬಳಿ ವ್ಯಾಪ್ತಿಯಲ್ಲಿ ಗುರುವಾರ ಮಳೆ ಪ್ರಮಾಣ ಕಡಿಮೆಯಾಗಿದೆ. ಬಿಡುವು ನೀಡುತ್ತಾ ಸಾಧಾರಣವಾಗಿ ಸುರಿಯುತ್ತಾ ೩ ಸೆಂಟ್ ಮಳೆಯಾಗಿದೆ. ಗಾಳಿಯ ಅಬ್ಬರ ಕಡಿಮೆಯಾಗಿಲ್ಲ. ಅಲ್ಲಲ್ಲಿ ಮರಗಳು, ವಿದ್ಯುತ್ ಕಂಬಗಳು ಧರೆಗುರುಳಿ ಸಂಚಾರಕ್ಕೆ ಅಡಚಣೆಯಾಗುತ್ತಿದೆ. ವಿದ್ಯುತ್ ಸಂಪರ್ಕ ಆಗಾಗ್ಗೆ ಕಡಿತಗೊಳ್ಳುತ್ತಿದ್ದು, ಸೆಸ್ಕ್ ಸಿಬ್ಬಂದಿ ಅವಿರತ ಶ್ರಮಿಸುತ್ತಿದ್ದಾರೆ.

ಸುರಿಯುವ ಮಳೆ, ಅಧಿಕ ಶೀತ, ತೇವಾಂಶಕ್ಕೆ ಈ ವಿಭಾಗದ ತೋಟಗಳಲ್ಲಿ ಅರೇಬಿಕಾ, ರೋಬಸ್ಟಾ ಕಾಫಿ ಗಿಡಗಳಿಗೆ ಕೊಳೆ ರೋಗ ತಗುಲಿ ಹೀಚುಕಾಯಿ ಸಹಿತ ಎಲೆಗಳು ಉದುರಿ ಮಣ್ಣಾಗುತ್ತಿವೆ.

ಸಮೀಪದ ದುಂಡಳ್ಳಿ ಗ್ರಾಮ ಪಂಚಾಯಿತಿ ವ್ಯಾಪ್ತಿಯ ಅಪ್ಪಶೆಟ್ಟಳ್ಳಿ ಗ್ರಾಮದ ಕೃಷಿಕ ಎ.ಡಿ. ದೊಡ್ಡಪ್ಪ ಅವರ ೧೦ ಎಕರೆ ತೋಟದಲ್ಲಿ ಬಹುತೇಕ ಗಿಡಿಗಳ ಬುಡದಲ್ಲಿ ಎಲೆ, ಕಾಯಿ ಉದುರಿವೆ. ಕಾಳು ಮೆಣಸು ಬಳ್ಳಿಗೂ ಕೊಳೆ ರೋಗ ತಗುಲಿದೆ. ಬೆಲೆ ಕೈಗೆ ಬರುವ ಮೊದಲೇ ಮುಂಗಾರು ಮಳೆಗೆ ಬೆಳೆ ನಷ್ಟವಾಗುತ್ತಿದೆ. ರೈತರ ಜೀವನ ಸಾಗಿಸುವುದು ಹೇಗೆ ಎಂದು ಅಳಲು ವ್ಯಕ್ತಪಡಿಸಿದ್ದಾರೆ.

ಪಟ್ಟಣ ಹಾಗೂ ಹೋಬಳಿ ವ್ಯಾಪ್ತಿಯಲ್ಲಿ ಮಳೆಗಿಂತ ಗಾಳಿಯ ಆರ್ಭಟ ಜೋರಾಗಿದ್ದು, ಸಮೀಪದ ಮಾದೇಗೋಡು ಗ್ರಾಮದಲ್ಲಿ ವಿದ್ಯುತ್ ಕಂಬವೊAದು ಧರೆಗುರುಳಿದ್ದು, ಗೋಪಾಲಪುರದ ಶನಿವಾರಸಂತೆ- ಸೋಮವಾರಪೇಟೆ ರಸ್ತೆಯಲ್ಲಿ ಮರವೊಂದು ರಸ್ತೆಗೆ ಅಡ್ಡಲಾಗಿ ಬಿದ್ದಿದೆ. ವಿದ್ಯುತ್ ಸಂಪರ್ಕ ಆಗಾಗ್ಗೆ ಸ್ಥಗಿತಗೊಳ್ಳುತ್ತಿದ್ದು, ಶನಿವಾರಸಂತೆ ವಿದ್ಯುತ್ ಇಲಾಖೆ ಅಧಿಕಾರಿಗಳು, ಸಿಬ್ಬಂದಿ ಸಾರ್ವಜನಿಕರ ಸಹಕಾರದಿಂದ ವಿದ್ಯುತ್ ಕಂಬ ಹಾಗೂ ಮರ ತೆರವುಗೊಳಿಸುವ ಕಾರ್ಯದಲ್ಲಿ ಶ್ರಮಿಸುತ್ತಿದ್ದರು.ಶನಿವಾರಸಂತೆ : ಹೋಬಳಿ ವ್ಯಾಪ್ತಿಯಲ್ಲಿ ಗುರುವಾರ ಮಳೆ ಪ್ರಮಾಣ ಕಡಿಮೆಯಾಗಿದೆ. ಬಿಡುವು ನೀಡುತ್ತಾ ಸಾಧಾರಣವಾಗಿ ಸುರಿಯುತ್ತಾ ೩ ಸೆಂಟ್ ಮಳೆಯಾಗಿದೆ. ಗಾಳಿಯ ಅಬ್ಬರ ಕಡಿಮೆಯಾಗಿಲ್ಲ. ಅಲ್ಲಲ್ಲಿ ಮರಗಳು, ವಿದ್ಯುತ್ ಕಂಬಗಳು ಧರೆಗುರುಳಿ ಸಂಚಾರಕ್ಕೆ ಅಡಚಣೆಯಾಗುತ್ತಿದೆ. ವಿದ್ಯುತ್ ಸಂಪರ್ಕ ಆಗಾಗ್ಗೆ ಕಡಿತಗೊಳ್ಳುತ್ತಿದ್ದು, ಸೆಸ್ಕ್ ಸಿಬ್ಬಂದಿ ಅವಿರತ ಶ್ರಮಿಸುತ್ತಿದ್ದಾರೆ.

ಸುರಿಯುವ ಮಳೆ, ಅಧಿಕ ಶೀತ, ತೇವಾಂಶಕ್ಕೆ ಈ ವಿಭಾಗದ ತೋಟಗಳಲ್ಲಿ ಅರೇಬಿಕಾ, ರೋಬಸ್ಟಾ ಕಾಫಿ ಗಿಡಗಳಿಗೆ ಕೊಳೆ ರೋಗ ತಗುಲಿ ಹೀಚುಕಾಯಿ ಸಹಿತ ಎಲೆಗಳು ಉದುರಿ ಮಣ್ಣಾಗುತ್ತಿವೆ.

ಸಮೀಪದ ದುಂಡಳ್ಳಿ ಗ್ರಾಮ ಪಂಚಾಯಿತಿ ವ್ಯಾಪ್ತಿಯ ಅಪ್ಪಶೆಟ್ಟಳ್ಳಿ ಗ್ರಾಮದ ಕೃಷಿಕ ಎ.ಡಿ. ದೊಡ್ಡಪ್ಪ ಅವರ ೧೦ ಎಕರೆ ತೋಟದಲ್ಲಿ ಬಹುತೇಕ ಗಿಡಿಗಳ ಬುಡದಲ್ಲಿ ಎಲೆ, ಕಾಯಿ ಉದುರಿವೆ. ಕಾಳು ಮೆಣಸು ಬಳ್ಳಿಗೂ ಕೊಳೆ ರೋಗ ತಗುಲಿದೆ. ಬೆಲೆ ಕೈಗೆ ಬರುವ ಮೊದಲೇ ಮುಂಗಾರು ಮಳೆಗೆ ಬೆಳೆ ನಷ್ಟವಾಗುತ್ತಿದೆ. ರೈತರ ಜೀವನ ಸಾಗಿಸುವುದು ಹೇಗೆ ಎಂದು ಅಳಲು ವ್ಯಕ್ತಪಡಿಸಿದ್ದಾರೆ.

ಪಟ್ಟಣ ಹಾಗೂ ಹೋಬಳಿ ವ್ಯಾಪ್ತಿಯಲ್ಲಿ ಮಳೆಗಿಂತ ಗಾಳಿಯ ಆರ್ಭಟ ಜೋರಾಗಿದ್ದು, ಸಮೀಪದ ಮಾದೇಗೋಡು ಗ್ರಾಮದಲ್ಲಿ ವಿದ್ಯುತ್ ಕಂಬವೊAದು ಧರೆಗುರುಳಿದ್ದು, ಗೋಪಾಲಪುರದ ಶನಿವಾರಸಂತೆ- ಸೋಮವಾರಪೇಟೆ ರಸ್ತೆಯಲ್ಲಿ ಮರವೊಂದು ರಸ್ತೆಗೆ ಅಡ್ಡಲಾಗಿ ಬಿದ್ದಿದೆ. ವಿದ್ಯುತ್ ಸಂಪರ್ಕ ಆಗಾಗ್ಗೆ ಸ್ಥಗಿತಗೊಳ್ಳುತ್ತಿದ್ದು, ಶನಿವಾರಸಂತೆ ವಿದ್ಯುತ್ ಇಲಾಖೆ ಅಧಿಕಾರಿಗಳು, ಸಿಬ್ಬಂದಿ ಸಾರ್ವಜನಿಕರ ಸಹಕಾರದಿಂದ ವಿದ್ಯುತ್ ಕಂಬ ಹಾಗೂ ಮರ ತೆರವುಗೊಳಿಸುವ ಕಾರ್ಯದಲ್ಲಿ ಶ್ರಮಿಸುತ್ತಿದ್ದರು.ಸೋಮವಾರಪೇಟೆ: ಭಾರೀ ಮಳೆಗೆ ಸಮೀಪದ ಅಭಿಮಠ ಗ್ರಾಮದಲ್ಲಿ ಜಾನುವಾರು ಸಾವನ್ನಪ್ಪಿದ ಘಟನೆ ನಡೆದಿದೆ. ಗ್ರಾಮದ ಕೃಷಿಕ ಮಹಿಳೆ ಎಸ್.ಕೆ. ಕೊಟ್ರಮ್ಮ ಅವರಿಗೆ ಸೇರಿದ ಆರು ವರ್ಷದ ಹಸು ಅತೀ ಶೀತಕ್ಕೆ ಮೃತಪಟ್ಟಿದೆ. ಸ್ಥಳಕ್ಕೆ ಕಂದಾಯ ಇಲಾಖಾಧಿಕಾರಿ ಕರಿಬಸವರಾಜು ಮತ್ತು ಪಶು ವೈದ್ಯಕೀಯ ಇಲಾಖೆಯ ಸಹಾಯಕ ನಿರ್ದೇಶಕ ಡಾ. ಬದಾಮಿ ಅವರುಗಳು ಭೇಟಿ ನೀಡಿ ಪರಿಶೀಲನೆ ನಡೆಸಿದ್ದಾರೆ.ಸಿದ್ದಾಪುರ: ಕಳೆದ ಕೆಲವು ದಿನಗಳಿಂದ ಸುರಿಯುತ್ತಿರುವ ಧಾರಾಕಾರ ಮಳೆಯಿಂದಾಗಿ ಕಾವೇರಿ ನದಿಯು ಮೈದುಂಬಿ ಹರಿಯುತ್ತಿದೆ. ನದಿ ತೀರದ ನಿವಾಸಿಗಳಿಗೆ ಪ್ರವಾಹ ಭೀತಿ ಎದುರಾಗಿದೆ. ಈ ಹಿನ್ನೆಲೆಯಲ್ಲಿ ಪ್ರವಾಹ ಪೀಡಿತ ಪ್ರದೇಶಗಳಾದ ಸಿದ್ದಾಪುರದ ಕರಡಿಗೋಡು ಹಾಗೂ ಗುಹ್ಯ ಗ್ರಾಮದ ನದಿ ತೀರಕ್ಕೆ ಸಿದ್ದಾಪುರ ಗ್ರಾ.ಪಂ. ಅಧ್ಯಕ್ಷೆ ರೀನಾ ತುಳಸಿ, ಸದಸ್ಯರುಗಳಾದ ದೇವಜಾನು, ಪೂರ್ಣಿಮಾ, ಜಯಂತ್, ಪಿಡಿಓ ಮನ್‌ಮೋಹನ್ ಭೇಟಿ ನೀಡಿ ನದಿ ತೀರದ ನಿವಾಸಿಗಳು ಸುರಕ್ಷಿತ ಸ್ಥಳಗಳಿಗೆ ತೆರಳುವಂತೆ ಮನವಿ ಮಾಡಿದರು. ಈಗಾಗಲೇ ನದಿ ತೀರದ ನಿವಾಸಿಗಳಿಗೆ ಸುರಕ್ಷಿತ ಸ್ಥಳಗಳಿಗೆ ತೆರಳುವಂತೆ ಅಂತಿಮ ನೋಟೀಸ್ ನೀಡಲಾಗಿದೆ ಎಂದು ಅಧ್ಯಕ್ಷೆ ತುಳಸಿ ತಿಳಿಸಿದರು. ಕಂದಾಯ ಪರಿವೀಕ್ಷಕ ಅನಿಲ್ ಕುಮಾರ್, ಗ್ರಾಮ ಲೆಕ್ಕಿಗ ಓಮಪ್ಪ ಬಣಾಕರ್, ಗ್ರಾಮ ಸಹಾಯಕ ಕೃಷ್ಣ ಸ್ಥಳದಲ್ಲೇ ಠಿಕಾಣಿ ಹೂಡಿದ್ದಾರೆ. ಸೋಮವಾರಪೇಟೆ: ಗರಗಂದೂರು ಬಿ ಗ್ರಾಮದ ಬಟಕನಹಳ್ಳಿಯ ಗೋಪಿ ಸಣ್ಣಪ್ಪ ಅವರ ವಾಸದ ಮನೆಯ ಮೇಲೆ ಸಿಲ್ವರ್ ಮರ ಬಿದ್ದು ಹಾನಿಯಾಗಿದೆ. ಸ್ಥಳಕ್ಕೆ ಗ್ರಾ.ಪಂ. ಸದಸ್ಯ ಸಲೀಂ, ಗ್ರಾಮ ಲೆಕ್ಕಾಧಿಕಾರಿ ದೀಪಿಕ, ಸಹಾಯಕ ರೋಷನ್ ಅವರುಗಳು ಭೇಟಿ ನೀಡಿ ಪರಿಶೀಲನೆ ನಡೆಸಿದ್ದಾರೆ.ಸೋಮವಾರಪೇಟೆ ಪಟ್ಟಣ ಪಂಚಾಯಿತಿ ವ್ಯಾಪ್ತಿಯ ವಾರ್ಡ್ ೩ರ ವಲ್ಲಭಾಯಿ ರಸ್ತೆಯಲ್ಲಿರುವ ಮಹದೇವಮ್ಮ ಎಂಬವರಿಗೆ ಸೇರಿದ ಮನೆ ಮಳೆಯಿಂದ ಕುಸಿದಿದೆ.ಶನಿವಾರಸಂತೆ : ಸಮೀಪದ ಕೊಡ್ಲಿಪೇಟೆ ಹೋಬಳಿಯಾದ್ಯಂತ ಗಾಳಿಯ ಆರ್ಭಟದೊಂದಿಗೆ ಧಾರಾಕಾರ ಮಳೆ ಸುರಿಯುತ್ತಿದ್ದು, ವಿವಿಧ ಗ್ರಾಮಗಳಲ್ಲಿ ಮನೆಗಳು ಕುಸಿದು ಹಾನಿಯಾಗಿದೆ. ಗದ್ದೆಗಳಲ್ಲಿ ಭತ್ತದ ಬೇಸಾಯಕ್ಕೆ, ಕಾಫಿ ತೋಟಗಳಲ್ಲಿ ಕಾಫಿ, ಮೆಣಸು, ಇತರ ಬೆಳೆಗೆ ಹಾನಿಯಾಗಿದೆ. ರಸ್ತೆಯಲ್ಲಿ ಅಲ್ಲಲ್ಲಿ ಮರಗಳು, ವಿದ್ಯುತ್ ಕಂಬಗಳು ಧರೆಗುರುಳಿ ವಿದ್ಯುತ್ ಸಂಪರ್ಕ ಸ್ಥಗಿತಗೊಂಡಿದೆ. ಜನಜೀವನ ಅಸ್ತವ್ಯಸ್ತಗೊಂಡಿದ್ದು, ರೈತರು ಕಂಗಾಲಾಗಿದ್ದಾರೆ.

ಕೊಡ್ಲಿಪೇಟೆ ಗ್ರಾಮ ಪಂಚಾಯಿತಿ ವ್ಯಾಪ್ತಿಯ ದೊಡ್ಡಕುಂದ ಗ್ರಾಮದ ರೈತ ಹಾಗೂ ಗ್ರಾಮ ಪಂಚಾಯಿತಿ ನೀರು ನಿರ್ವಾಹಕ ಲೋಕೇಶ್ ಅವರ ರಾಮನಹಳ್ಳಿಯ ೩ ಎಕರೆ ಗದ್ದೆಯಲ್ಲಿ ನಾಟಿಗಾಗಿ ಹಾಕಿದ್ದ ೧ ಕ್ವಿಂಟಾಲ್ ಭತ್ತದ ಬೀಜದ ಅಗೆ ಬುಧವಾರ ರಾತ್ರಿಯಿಡೀ ಸುರಿದ ಮಳೆಗೆ ಸಂಪೂರ್ಣ ಕೊಚ್ಚಿ ಹೋಗಿದೆ. ಗದ್ದೆಯಲ್ಲಿ ನೀರು ತುಂಬಿ ಕಾಲುವೆಯಾಗಿ ಹರಿದಿದೆ.ಕರಿಕೆ: ಕಳೆದ ಕೆಲ ದಿನಗಳಿಂದ ಸುರಿಯುತ್ತಿರುವ ಧಾರಾಕಾರ ಮಳೆಯಿಂದಾಗಿ ಹಾನಿಗೊಳಗಾದ ಪ್ರದೇಶಕ್ಕೆ ಸ್ಥಳೀಯ ಗ್ರಾಮ ಪಂಚಾಯಿತಿ ತಂಡ ಭೇಟಿ ನೀಡಿ ಪರಿಶೀಲನೆ ನಡೆಸಿದರು. ಚೆತ್ತುಕಾಯ ಪಚ್ಚೆಪಿಲಾವು ನಿವಾಸಿ ಹುಲಿಮನೆ ಮಾಧವ ಅವರ ಹಾಗೂ ಎಂ.ಕೆ. ಗೋಪಾಲ ಅವರ ಮನೆ ಬಳಿ ಬರೆ ಕುಸಿದಿದ್ದನ್ನು ವೀಕ್ಷಿಸಿ ವಿಪರೀತ ಮಳೆ ಇದ್ದಲ್ಲಿ ಸುರಕ್ಷಿತ ಸ್ಥಳಕ್ಕೆ ತೆರಳಲು ಸೂಚನೆ ನೀಡಿದರು. ಪಂಚಾಯಿತಿ ಅಭಿವೃದ್ಧಿ ಅಧಿಕಾರಿ ಗಣಪತಿ, ಉಪಾಧ್ಯಕ್ಷ ಬಾಲಚಂದ್ರ ನಾಯರ್ ಹಾಗೂ ಸ್ಥಳೀಯ ಗ್ರಾಮ ಪಂಚಾಯಿತಿ ಸದಸ್ಯರು ಭೇಟಿ ನೀಡಿ ಪರಿಶೀಲಿಸಿದರು.

ಗೋಣಿಕೊಪ್ಪ: ಬಲ್ಯಮುಂಡೂರು - ಹರಿಹರ - ಟಿ.ಶೆಟ್ಟಿಗೇರಿ ಗೆ ತೆರಳುವ ಸಂಪರ್ಕ ರಸ್ತೆಯು ಹರಿಹರದಲ್ಲಿ ಸೇತುವೆ ಮೇಲೆ ನೀರು ಬಂದ ಕಾರಣ ಈ ಭಾಗದ ರಸ್ತೆ ಸಂಚಾರ ಕಡಿತ ಗೊಂಡಿದೆ. ಈ ಸುತ್ತಮುತ್ತಲಿನ ಪ್ರದೇಶಗಳ ಭತ್ತದ ಗದ್ದೆಗಳಲ್ಲಿ ಹೆಚ್ಚಿನ ಪ್ರಮಾಣದಲ್ಲಿ ನೀರು ನಿಂತಿವೆ.