ಸೋಮವಾರಪೇಟೆ, ಜು. ೧೪: ಗಾಳಿ ಮಳೆಗೆ ತಾಲೂಕಿನಾದ್ಯಂತ ಹಾನಿ ಮುಂದುವರೆದಿದ್ದು, ಮನೆಗಳ ಗೋಡೆಗಳು ಕುಸಿದು ಹಲವಷ್ಟು ಕುಟುಂಬಗಳು ಪರಿಹಾರಕ್ಕಾಗಿ ಕಂದಾಯ ಇಲಾಖೆಯ ಬಾಗಿಲು ಬಡಿಯುವಂತಾಗಿದೆ.
ವರುಣನ ಆರ್ಭಟದೊಂದಿಗೆ ಗಾಳಿಯ ರಭಸವೂ ಹೆಚ್ಚಿದ್ದು, ತೋಟ, ರಸ್ತೆಯ ಬದಿಯಲ್ಲಿ ಮರಗಳು ನೆರಕ್ಕುರುಳುತ್ತಿವೆ. ಭಾರೀ ಮಳೆಯಿಂದಾಗಿ ಗ್ರಾಮೀಣ ಪ್ರದೇಶದ ರಸ್ತೆಗಳು ಸಂಚಾರಕ್ಕೆ ಅಯೋಗ್ಯವಾಗಿ ಪರಿಣಮಿಸಿದ್ದು, ರಸ್ತೆಯ ಗುಂಡಿಗಳಲ್ಲಿ ಮಳೆ ನೀರು ನಿಂತು ಜನಸಂಚಾರವೂ ದುಸ್ತರವಾಗುತ್ತಿದೆ.
ತಾಲೂಕಿನ ಪಶ್ಚಿಮಘಟ್ಟ ಪ್ರದೇಶ ವ್ಯಾಪ್ತಿಯಲ್ಲಿ ಭಾರೀ ಮಳೆಯಾಗುತ್ತಿದೆ. ಪುಷ್ಪಗಿರಿ ಬೆಟ್ಟಶ್ರೇಣಿ ಗ್ರಾಮಗಳಲ್ಲಿ ಜನಜೀವನ ಅಸ್ತವ್ಯಸ್ಥಗೊಂಡಿದೆ. ಕೃಷಿ ಗದ್ದೆಗಳು ಜಲಾವೃತವಾಗಿವೆ. ಸಣ್ಣಪುಟ್ಟ ನದಿ ತೊರೆಗಳು ತುಂಬಿ ಹರಿಯುತ್ತಿವೆ.
ಕಳೆದ ೨೪ ಗಂಟೆಗಳಲ್ಲಿ ಶಾಂತಳ್ಳಿ ಹೋಬಳಿ ವ್ಯಾಪ್ತಿಯಲ್ಲಿ ೧೧.೩೬ ಇಂಚಿನಷ್ಟು ದಾಖಲೆಯ ಮಳೆ ಸುರಿದಿದೆ. ಕೊಡ್ಲಿಪೇಟೆಗೆ ೩.೬೯ ಇಂಚು, ಶನಿವಾರಸಂತೆಗೆ ೪ ಇಂಚು, ಸೋಮವಾರಪೇಟೆಗೆ ೫ ಇಂಚಿನಷ್ಟು ಮಳೆ ಸುರಿದಿದೆ.
ಭಾರೀ ಮಳೆಯಿಂದಾಗಿ ಶೀತ ಅಧಿಕಗೊಂಡು ಹಲವಷ್ಟು ಕಚ್ಚಾ ಮನೆಗಳು ಕುಸಿಯುತ್ತಿವೆ. ಸಂತ್ರಸ್ಥರು ಪರಿಹಾರಕ್ಕಾಗಿ ಕಂದಾಯ ಇಲಾಖೆಗೆ ಅರ್ಜಿ ಸಲ್ಲಿಸುತ್ತಿದ್ದಾರೆ. ತಾಲೂಕಿನ ಗರಗಂದೂರು ಬಿ ಗ್ರಾಮದ ರಕ್ಷಿತ್ ಅವರಿಗೆ ಸೇರಿದ ದನದ ಕೊಟ್ಟಿಗೆ ಸಂಪೂರ್ಣ ನೆಲಸಮವಾಗಿದೆ.
ಕೂಗೇಕೋಡಿ ಗ್ರಾಮದ ಜಯಮ್ಮ ಅವರ ಮನೆ ಗಾಳಿ ಮಳೆಗೆ ಸಂಪೂರ್ಣ ಕುಸಿದುಬಿದ್ದಿದೆ. ವೃದ್ದೆಯಾಗಿರುವ ಜಯಮ್ಮ ಅವರು ಓರ್ವರೇ ವಾಸವಿದ್ದು, ಇದೀಗ ನೆಲೆ ಇಲ್ಲದಂತಾಗಿದೆ. ತಕ್ಷಣ ಸಂಬAಧಪಟ್ಟ ಇಲಾಖೆ ಇತ್ತ ಗಮನ ಹರಿಸಿ ಪರಿಹಾರ ಒದಗಿಸಬೇಕೆಂದು ಸ್ಥಳೀಯರು ಆಗ್ರಹಿಸಿದ್ದಾರೆ.
ಶಾಂತಳ್ಳಿ ಹೋಬಳಿಯ ತೋಳೂರುಶೆಟ್ಟಳ್ಳಿ ಗ್ರಾಮದ ರುಕ್ಮಿಣಿ ಅವರಿಗೆ ಸೇರಿದ ಮನೆಯ ಮೇಲ್ಛಾವಣಿ ಗಾಳಿಗೆ ಹಾರಿದ್ದು, ಗೋಡೆ ಕುಸಿದು ಬಿದ್ದು ನಷ್ಟ ಸಂಭವಿಸಿದೆ. ಕೊಡ್ಲಿಪೇಟೆ ಹೋಬಳಿ ಚಿಕ್ಕಭಂಡಾರ ಗ್ರಾಮದ ಗೌರಮ್ಮ ಅವರ ಮನೆಯು ಶೇ. ೪೦ರಷ್ಟು ಹಾನಿಯಾಗಿದೆ.
ಕೋಣಿಗನಹಳ್ಳಿ ಗ್ರಾಮದ ಗುರು ಅವರಿಗೆ ಸೇರಿದ ವಾಸದ ಮನೆಗೆ ಹಾನಿಯಾಗಿದ್ದು, ಶೇ.೧೫ರಷ್ಟು ನಷ್ಟ ಸಂಭವಿಸಿರುವುದಾಗಿ ಕಂದಾಯ ಇಲಾಖಾಧಿಕಾರಿಗಳು ವರದಿ ನೀಡಿದ್ದಾರೆ. ಬೇಳೂರು ಗ್ರಾಮ ಪಂಚಾಯಿತಿ ವ್ಯಾಪ್ತಿಯ ಬಳಗುಂದ ಗ್ರಾಮದ ಅಬ್ದುಲ್ಲ ಅವರ ಮನೆಯ ಶೀಟ್ಗಳು ಗಾಳಿಗೆ ಜಖಂಗೊAಡು ಶೇ. ೨೫ರಷ್ಟು ಹಾನಿಯಾಗಿದೆ.
ಕೊಡ್ಲಿಪೇಟೆ ಸಮೀಪದ ಮಣಗಲಿ ಗ್ರಾಮದ ಜಾನಕಮ್ಮ ಅವರ ಮನೆಯ ಮೇಲೆ ಮರಬಿದ್ದು, ಮನೆಯ ಹೆಂಚು ಹಾಗೂ ಗೋಡೆ ಕುಸಿದು ಶೇ. ೧೫ ರಷ್ಟು ಹಾನಿಯಾಗಿದೆ. ಹಂಡ್ಲಿ ಗ್ರಾಮದ ಅಪ್ಪಸ್ವಾಮಿ ಅವರ ಮನೆಯ ಗೋಡೆ ಕುಸಿತಗೊಂಡಿದ್ದರೆ, ಗರಗಂದೂರು ಗ್ರಾಮದ ಸುಬೈದ ಅವರ ಮನೆಯು ಮಳೆಗೆ ಹಾನಿಯಾಗಿದ್ದು, ಶೇ.೨೦ರಷ್ಟು ನಷ್ಟ ಸಂಭವಿಸಿದೆ ಎಂದು ಕಂದಾಯ ಇಲಾಖಾಧಿಕಾರಿಗಳು, ತಾಲೂಕು ಕಚೇರಿಗೆ ವರದಿ ನೀಡಿದ್ದಾರೆ.
ಪಟ್ಟಣ ಪಂಚಾಯಿತಿ ವ್ಯಾಪ್ತಿಯ ವಾರ್ಡ್ ೩ರ ವಲ್ಲಭಬಾಯಿ ರಸ್ತೆ ನಿವಾಸಿ ಮಹದೇವಮ್ಮ ಅವರಿಗೆ ಸೇರಿದ ಮನೆಯು ಅತೀ ಮಳೆಗೆ ಸಂಪೂರ್ಣ ಕುಸಿದುಬಿದ್ದಿದೆ. ಸ್ಥಳಕ್ಕೆ ಪಟ್ಟಣ ಪಂಚಾಯಿತಿ ಅಧ್ಯಕ್ಷ ಪಿ.ಕೆ. ಚಂದ್ರು, ಸದಸ್ಯೆ ಮೋಹಿನಿ, ಮುಖ್ಯಾಧಿಕಾರಿ ನಾಚಪ್ಪ, ಆರೋಗ್ಯ ನಿರೀಕ್ಷಕ ಜಾಸಿಂ ಖಾನ್, ಕಂದಾಯ ನಿರೀಕ್ಷಕ ರಫೀಕ್ ಅವರುಗಳು ಭೇಟಿ ನೀಡಿ ಪರಿಶೀಲನೆ ನಡೆಸಿದ್ದಾರೆ.ಕುರ್ಚಿ ಗ್ರಾಮದ ಕೋಳೇರ ಜಾನ್ಸಿ ಮೊಣ್ಣಯ್ಯ ಅವರಿಗೆ ಸೇರಿದ ಲೈನ್ ಮನೆಯ ಮೇಲೆ ತಾ.೧೩ ರಂದು ತೀವ್ರ ಗಾಳಿಯಿಂದಾಗಿ ಮರ ಬಿದ್ದು ಹಾನಿಯಾಗಿದೆ. ನಿವಾಸಿಗಳು ಊಟ ಮಾಡುತ್ತಿದ್ದಾಗ ಮರವು ಮನೆಯ ಮೇಲೆ ಬಿದ್ದ ಪರಿಣಾಮ ಜೋರಾಗಿ ಶಬ್ದ ಕೇಳಿದೆ. ತಕ್ಷಣವೆ ಹೆಂಚುಗಳು ಚೂರಾಗಿ ಬೀಳತೊಡಗಿದ್ದು, ಈ ಸಂದರ್ಭ ಮನೆಯಲ್ಲಿದ್ದ ಕಾರ್ಮಿಕ ಗಣೇಶ್ ಹಾಗೂ ಅವರ ಪತ್ನಿ ತಮ್ಮ ೩ ವರ್ಷದ ಮಗುವಿನೊಂದಿಗೆ ಹೊರ ಓಡಿ ಪ್ರಾಣಪಾಯದಿಂದ ಪಾರಾಗಿದ್ದಾರೆ. ಸ್ಥಳಕ್ಕೆ ಕಂದಾಯ ಇಲಾಖೆಯ ಅಧಿಕಾರಿಗಳು ಭೇಟಿ ನೀಡಿ ಪರಿಶೀಲನೆ ನಡೆಸಿದರುಭಾಗಮಂಡಲ- ತಲಕಾವೇರಿ ರಸ್ತೆ ನಡುವೆ ಬಿದ್ದ ಮರ ತೆರವುಗೊಳಿಸಿದ ಅರಣ್ಯ ಇಲಾಖೆ ಸಿಬ್ಬಂದಿ.ಸೋಮವಾರಪೇಟೆ, ಜು. ೧೪: ಗಾಳಿ ಮಳೆಗೆ ತಾಲೂಕಿನಾದ್ಯಂತ ಹಾನಿ ಮುಂದುವರೆದಿದ್ದು, ಮನೆಗಳ ಗೋಡೆಗಳು ಕುಸಿದು ಹಲವಷ್ಟು ಕುಟುಂಬಗಳು ಪರಿಹಾರಕ್ಕಾಗಿ ಕಂದಾಯ ಇಲಾಖೆಯ ಬಾಗಿಲು ಬಡಿಯುವಂತಾಗಿದೆ.
ವರುಣನ ಆರ್ಭಟದೊಂದಿಗೆ ಗಾಳಿಯ ರಭಸವೂ ಹೆಚ್ಚಿದ್ದು, ತೋಟ, ರಸ್ತೆಯ ಬದಿಯಲ್ಲಿ ಮರಗಳು ನೆರಕ್ಕುರುಳುತ್ತಿವೆ. ಭಾರೀ ಮಳೆಯಿಂದಾಗಿ ಗ್ರಾಮೀಣ ಪ್ರದೇಶದ ರಸ್ತೆಗಳು ಸಂಚಾರಕ್ಕೆ ಅಯೋಗ್ಯವಾಗಿ ಪರಿಣಮಿಸಿದ್ದು, ರಸ್ತೆಯ ಗುಂಡಿಗಳಲ್ಲಿ ಮಳೆ ನೀರು ನಿಂತು ಜನಸಂಚಾರವೂ ದುಸ್ತರವಾಗುತ್ತಿದೆ.
ತಾಲೂಕಿನ ಪಶ್ಚಿಮಘಟ್ಟ ಪ್ರದೇಶ ವ್ಯಾಪ್ತಿಯಲ್ಲಿ ಭಾರೀ ಮಳೆಯಾಗುತ್ತಿದೆ. ಪುಷ್ಪಗಿರಿ ಬೆಟ್ಟಶ್ರೇಣಿ ಗ್ರಾಮಗಳಲ್ಲಿ ಜನಜೀವನ ಅಸ್ತವ್ಯಸ್ಥಗೊಂಡಿದೆ. ಕೃಷಿ ಗದ್ದೆಗಳು ಜಲಾವೃತವಾಗಿವೆ. ಸಣ್ಣಪುಟ್ಟ ನದಿ ತೊರೆಗಳು ತುಂಬಿ ಹರಿಯುತ್ತಿವೆ.
ಕಳೆದ ೨೪ ಗಂಟೆಗಳಲ್ಲಿ ಶಾಂತಳ್ಳಿ ಹೋಬಳಿ ವ್ಯಾಪ್ತಿಯಲ್ಲಿ ೧೧.೩೬ ಇಂಚಿನಷ್ಟು ದಾಖಲೆಯ ಮಳೆ ಸುರಿದಿದೆ. ಕೊಡ್ಲಿಪೇಟೆಗೆ ೩.೬೯ ಇಂಚು, ಶನಿವಾರಸಂತೆಗೆ ೪ ಇಂಚು, ಸೋಮವಾರಪೇಟೆಗೆ ೫ ಇಂಚಿನಷ್ಟು ಮಳೆ ಸುರಿದಿದೆ.
ಭಾರೀ ಮಳೆಯಿಂದಾಗಿ ಶೀತ ಅಧಿಕಗೊಂಡು ಹಲವಷ್ಟು ಕಚ್ಚಾ ಮನೆಗಳು ಕುಸಿಯುತ್ತಿವೆ. ಸಂತ್ರಸ್ಥರು ಪರಿಹಾರಕ್ಕಾಗಿ ಕಂದಾಯ ಇಲಾಖೆಗೆ ಅರ್ಜಿ ಸಲ್ಲಿಸುತ್ತಿದ್ದಾರೆ. ತಾಲೂಕಿನ ಗರಗಂದೂರು ಬಿ ಗ್ರಾಮದ ರಕ್ಷಿತ್ ಅವರಿಗೆ ಸೇರಿದ ದನದ ಕೊಟ್ಟಿಗೆ ಸಂಪೂರ್ಣ ನೆಲಸಮವಾಗಿದೆ.
ಕೂಗೇಕೋಡಿ ಗ್ರಾಮದ ಜಯಮ್ಮ ಅವರ ಮನೆ ಗಾಳಿ ಮಳೆಗೆ ಸಂಪೂರ್ಣ ಕುಸಿದುಬಿದ್ದಿದೆ. ವೃದ್ದೆಯಾಗಿರುವ ಜಯಮ್ಮ ಅವರು ಓರ್ವರೇ ವಾಸವಿದ್ದು, ಇದೀಗ ನೆಲೆ ಇಲ್ಲದಂತಾಗಿದೆ. ತಕ್ಷಣ ಸಂಬAಧಪಟ್ಟ ಇಲಾಖೆ ಇತ್ತ ಗಮನ ಹರಿಸಿ ಪರಿಹಾರ ಒದಗಿಸಬೇಕೆಂದು ಸ್ಥಳೀಯರು ಆಗ್ರಹಿಸಿದ್ದಾರೆ.
ಶಾಂತಳ್ಳಿ ಹೋಬಳಿಯ ತೋಳೂರುಶೆಟ್ಟಳ್ಳಿ ಗ್ರಾಮದ ರುಕ್ಮಿಣಿ ಅವರಿಗೆ ಸೇರಿದ ಮನೆಯ ಮೇಲ್ಛಾವಣಿ ಗಾಳಿಗೆ ಹಾರಿದ್ದು, ಗೋಡೆ ಕುಸಿದು ಬಿದ್ದು ನಷ್ಟ ಸಂಭವಿಸಿದೆ. ಕೊಡ್ಲಿಪೇಟೆ ಹೋಬಳಿ ಚಿಕ್ಕಭಂಡಾರ ಗ್ರಾಮದ ಗೌರಮ್ಮ ಅವರ ಮನೆಯು ಶೇ. ೪೦ರಷ್ಟು ಹಾನಿಯಾಗಿದೆ.
ಕೋಣಿಗನಹಳ್ಳಿ ಗ್ರಾಮದ ಗುರು ಅವರಿಗೆ ಸೇರಿದ ವಾಸದ ಮನೆಗೆ ಹಾನಿಯಾಗಿದ್ದು, ಶೇ.೧೫ರಷ್ಟು ನಷ್ಟ ಸಂಭವಿಸಿರುವುದಾಗಿ ಕಂದಾಯ ಇಲಾಖಾಧಿಕಾರಿಗಳು ವರದಿ ನೀಡಿದ್ದಾರೆ. ಬೇಳೂರು ಗ್ರಾಮ ಪಂಚಾಯಿತಿ ವ್ಯಾಪ್ತಿಯ ಬಳಗುಂದ ಗ್ರಾಮದ ಅಬ್ದುಲ್ಲ ಅವರ ಮನೆಯ ಶೀಟ್ಗಳು ಗಾಳಿಗೆ ಜಖಂಗೊAಡು ಶೇ. ೨೫ರಷ್ಟು ಹಾನಿಯಾಗಿದೆ.
ಕೊಡ್ಲಿಪೇಟೆ ಸಮೀಪದ ಮಣಗಲಿ ಗ್ರಾಮದ ಜಾನಕಮ್ಮ ಅವರ ಮನೆಯ ಮೇಲೆ ಮರಬಿದ್ದು, ಮನೆಯ ಹೆಂಚು ಹಾಗೂ ಗೋಡೆ ಕುಸಿದು ಶೇ. ೧೫ ರಷ್ಟು ಹಾನಿಯಾಗಿದೆ. ಹಂಡ್ಲಿ ಗ್ರಾಮದ ಅಪ್ಪಸ್ವಾಮಿ ಅವರ ಮನೆಯ ಗೋಡೆ ಕುಸಿತಗೊಂಡಿದ್ದರೆ, ಗರಗಂದೂರು ಗ್ರಾಮದ ಸುಬೈದ ಅವರ ಮನೆಯು ಮಳೆಗೆ ಹಾನಿಯಾಗಿದ್ದು, ಶೇ.೨೦ರಷ್ಟು ನಷ್ಟ ಸಂಭವಿಸಿದೆ ಎಂದು ಕಂದಾಯ ಇಲಾಖಾಧಿಕಾರಿಗಳು, ತಾಲೂಕು ಕಚೇರಿಗೆ ವರದಿ ನೀಡಿದ್ದಾರೆ.
ಪಟ್ಟಣ ಪಂಚಾಯಿತಿ ವ್ಯಾಪ್ತಿಯ ವಾರ್ಡ್ ೩ರ ವಲ್ಲಭಬಾಯಿ ರಸ್ತೆ ನಿವಾಸಿ ಮಹದೇವಮ್ಮ ಅವರಿಗೆ ಸೇರಿದ ಮನೆಯು ಅತೀ ಮಳೆಗೆ ಸಂಪೂರ್ಣ ಕುಸಿದುಬಿದ್ದಿದೆ. ಸ್ಥಳಕ್ಕೆ ಪಟ್ಟಣ ಪಂಚಾಯಿತಿ ಅಧ್ಯಕ್ಷ ಪಿ.ಕೆ. ಚಂದ್ರು, ಸದಸ್ಯೆ ಮೋಹಿನಿ, ಮುಖ್ಯಾಧಿಕಾರಿ ನಾಚಪ್ಪ, ಆರೋಗ್ಯ ನಿರೀಕ್ಷಕ ಜಾಸಿಂ ಖಾನ್, ಕಂದಾಯ ನಿರೀಕ್ಷಕ ರಫೀಕ್ ಅವರುಗಳು ಭೇಟಿ ನೀಡಿ ಪರಿಶೀಲನೆ ನಡೆಸಿದ್ದಾರೆ.ನಾಪೋಕ್ಲು: ನಾಪೋಕ್ಲು ಹೋಬಳಿ ವ್ಯಾಪ್ತಿಯಲ್ಲಿ ಧಾರಾಕಾರ ಮಳೆಯಾಗುತ್ತಿದ್ದು, ಇದರಿಂದಾಗಿ ವಾತಾವರಣದಲ್ಲಿ ಶೀತ ಹಾಗೂ ತೇವಾಂಶ ಅಧಿಕಗೊಂಡು ಚಳಿ ತೀವ್ರಗೊಂಡಿದೆ. ಕಾವೇರಿ ನದಿ ತುಂಬಿ ಹರಿಯುತ್ತಿರುವುದರಿಂದ ನಾಪೋಕ್ಲು - ಮೂರ್ನಾಡು ಸಂಪರ್ಕ ರಸ್ತೆಯ ಬೊಳಿಬಾಣೆ ಎಂಬಲ್ಲಿ ೪ ಅಡಿ ನೀರು ಹರಿಯುತ್ತಿರುವುದರಿಂದ ವಾಹನ ಸಂಚಾರ ಸ್ಥಗಿತಗೊಂಡಿದೆ. ಇದರಿಂದ ವಾಹನಗಳು ಮುರ್ನಾಡು ಸಂಪರ್ಕಕ್ಕೆ ಸುತ್ತು ಬಳಸಿ ತೆರಳಬೇಕಾದ ಅನಿವಾರ್ಯ ಪರಿಸ್ಥಿತಿ ನಿರ್ಮಾಣವಾಗಿದೆ.
ಇಲ್ಲಿಯ ಪಟ್ಟಣ ವ್ಯಾಪ್ತಿಯಲ್ಲಿ ೨೪ ಗಂಟೆಗೆ ೪ ಇಂಚು ಅಧಿಕ ಮಳೆಯಾಗಿದೆ. ಕಕ್ಕಬೆ ಗ್ರಾಮ ಪಂಚಾಯಿತಿ ನಾಲಡಿ ಗ್ರಾಮದಲ್ಲಿ ೫.೩೯ ಇಂಚು, ಯವಕಪಾಡಿ ಗ್ರಾಮದಲ್ಲಿ ೫.೧೦ ಇಂಚು ಮಳೆಯಾಗಿದೆ. ಬಲ್ಲಮಾವಟಿ ನಾಪೋಕ್ಲು: ನಾಪೋಕ್ಲು ಹೋಬಳಿ ವ್ಯಾಪ್ತಿಯಲ್ಲಿ ಧಾರಾಕಾರ ಮಳೆಯಾಗುತ್ತಿದ್ದು, ಇದರಿಂದಾಗಿ ವಾತಾವರಣದಲ್ಲಿ ಶೀತ ಹಾಗೂ ತೇವಾಂಶ ಅಧಿಕಗೊಂಡು ಚಳಿ ತೀವ್ರಗೊಂಡಿದೆ. ಕಾವೇರಿ ನದಿ ತುಂಬಿ ಹರಿಯುತ್ತಿರುವುದರಿಂದ ನಾಪೋಕ್ಲು - ಮೂರ್ನಾಡು ಸಂಪರ್ಕ ರಸ್ತೆಯ ಬೊಳಿಬಾಣೆ ಎಂಬಲ್ಲಿ ೪ ಅಡಿ ನೀರು ಹರಿಯುತ್ತಿರುವುದರಿಂದ ವಾಹನ ಸಂಚಾರ ಸ್ಥಗಿತಗೊಂಡಿದೆ. ಇದರಿಂದ ವಾಹನಗಳು ಮುರ್ನಾಡು ಸಂಪರ್ಕಕ್ಕೆ ಸುತ್ತು ಬಳಸಿ ತೆರಳಬೇಕಾದ ಅನಿವಾರ್ಯ ಪರಿಸ್ಥಿತಿ ನಿರ್ಮಾಣವಾಗಿದೆ.
ಇಲ್ಲಿಯ ಪಟ್ಟಣ ವ್ಯಾಪ್ತಿಯಲ್ಲಿ ೨೪ ಗಂಟೆಗೆ ೪ ಇಂಚು ಅಧಿಕ ಮಳೆಯಾಗಿದೆ. ಕಕ್ಕಬೆ ಗ್ರಾಮ ಪಂಚಾಯಿತಿ ನಾಲಡಿ ಗ್ರಾಮದಲ್ಲಿ ೫.೩೯ ಇಂಚು, ಯವಕಪಾಡಿ ಗ್ರಾಮದಲ್ಲಿ ೫.೧೦ ಇಂಚು ಮಳೆಯಾಗಿದೆ. ಬಲ್ಲಮಾವಟಿ ಪೊನ್ನಂಪೇಟೆ: ಪೊನ್ನಂಪೇಟೆ ತಾಲೂಕಿನಲ್ಲಿ ಮಳೆಯ ಅಬ್ಬರ ಹೆಚ್ಚಾಗಿದ್ದರೂ, ಕೆಲ ಶಾಲೆಗಳಿಗೆ ರಜೆ ಇಲ್ಲದ ಕಾರಣ, ಸುರಿಯುತ್ತಿರುವ ಮಳೆಯ ನಡುವೆ ವಿದ್ಯಾರ್ಥಿಗಳು ಶಾಲೆಗೆ ಆಗಮಿಸಿದರು. ಶೀತಗಾಳಿಯ ಜೊತೆಗೆ ಮಳೆ ಜೋರಾಗಿ ಪೊನ್ನಂಪೇಟೆ: ಪೊನ್ನಂಪೇಟೆ ತಾಲೂಕಿನಲ್ಲಿ ಮಳೆಯ ಅಬ್ಬರ ಹೆಚ್ಚಾಗಿದ್ದರೂ, ಕೆಲ ಶಾಲೆಗಳಿಗೆ ರಜೆ ಇಲ್ಲದ ಕಾರಣ, ಸುರಿಯುತ್ತಿರುವ ಮಳೆಯ ನಡುವೆ ವಿದ್ಯಾರ್ಥಿಗಳು ಶಾಲೆಗೆ ಆಗಮಿಸಿದರು. ಶೀತಗಾಳಿಯ ಜೊತೆಗೆ ಮಳೆ ಜೋರಾಗಿ ಶನಿವಾರಸಂತೆ : ಸಮೀಪದ ಕೊಡ್ಲಿಪೇಟೆ ಹೋಬಳಿ ವ್ಯಾಪ್ತಿಯ ಶಾಂತಪುರ ಗ್ರಾಮದ ಬಸ್ ತಂಗುದಾಣದ ಬಳಿ ಅಪಾಯ ಸ್ಥಿತಿಯಲ್ಲಿದ್ದ ಮಾವಿನ ಮರವನ್ನು ಗ್ರಾಮ ಪಂಚಾಯಿತಿ ಮಾಜಿ ಅಧ್ಯಕ್ಷ ಕೆ.ಆರ್. ಚಂದ್ರಶೇಖರ್ ನೇತೃತ್ವದಲ್ಲಿ ಸ್ಥಳೀಯರ ಸಹಕಾರದಿಂದ ತೆರವುಗೊಳಿಸಲಾಯಿತು.
ಪ್ರತಿದಿನ ಬೆಳಿಗ್ಗೆ ಮತ್ತು ಸಂಜೆ ಸೆಂಟ್ ಆ್ಯನ್ಸ್ ವಿದ್ಯಾಸಂಸ್ಥೆ ವಿದ್ಯಾರ್ಥಿಗಳು, ಸಾರ್ವಜನಿಕರು ಬಸ್ಸಿಗಾಗಿ ಕಾಯುವ ಬಸ್ ತಂಗುದಾಣದ ಮೇಲೆ ಮರ ಬೀಳುವ ಸ್ಥಿತಿಯಲ್ಲಿತ್ತು. ಸ್ಥಳೀಯರು ಮರ ತೆರವುಗೊಳಿಸುವಂತೆ ಮನವಿ ಮಾಡುತ್ತಿದ್ದರು. ಸ್ಥಳೀಯರ ಒತ್ತಾಯಕ್ಕೆ ಮಣಿದು ಚಂದ್ರಶೇಖರ್ ಅರಣ್ಯ ಇಲಾಖೆಯ ಗಮನಕ್ಕೆ ತಂದು ಮರ ತೆರವುಗೊಳಿಸಿದರು. ವಿದ್ಯಾರ್ಥಿಗಳು, ಸಾರ್ವಜನಿಕರು ಕೃತಜ್ಞತೆ ಸಲ್ಲಿಸಿದ್ದಾರೆ.
ಭಾಗಮಂಡಲ: ಭಾಗಮಂಡಲ ವ್ಯಾಪ್ತಿಯಲ್ಲಿ ಗುರುವಾರ ಬಿರುಸಿನ ಮಳೆಯಾಗಿದೆ. ತ್ರಿವೇಣಿ ಸಂಗಮ ಭರ್ತಿಯಾಗಿದ್ದು ನಾಪೋಕ್ಲು, ಭಾಗಮಂಡಲ ರಸ್ತೆ ಜಲಾವೃತಗೊಂಡು ಸಂಚಾರ ಸ್ಥಗಿತಗೊಂಡಿತ್ತು. ಜನರ ಸಂಚಾರಕ್ಕಾಗಿ ರಾಫ್ಟಿಂಗ್ ವ್ಯವಸ್ಥೆ ಕಲ್ಪಿಸಲಾಯಿತು. ಗುರುವಾರ ಬೆಳಿಗ್ಗೆ ನೀರಿನ ಹರಿವು ಕಡಿಮೆಯಿತ್ತು. ಮಧ್ಯಾಹ್ನದ ಬಳಿಕ ಏರಿಕೆಗೊಂಡಿತು. ವ್ಯಾಪಕ ಮಳೆಯಿಂದಾಗಿ ಭಾಗಮಂಡಲ - ಮಡಿಕೇರಿ ಸಂಪರ್ಕ ರಸ್ತೆಯಲ್ಲಿ ನೀರು ಹರಿಯುತ್ತಿದೆ.
ಭಾಗಮಂಡಲ - ತಲಕಾವೇರಿ ರಸ್ತೆಯಲ್ಲಿ ಮರ ಬಿದ್ದು ಸಂಪರ್ಕ ಕಡಿತಗೊಂಡಿತ್ತು. ಬಳಿಕ ಮರ ತೆರವುಗೊಳಿಸಲಾಯಿತು. ಭಾಗಮಂಡಲ, ಚೇರಂಬಾಣೆ, ಕೋರಂಗಾಲ ವ್ಯಾಪ್ತಿಯಲ್ಲಿ ಬಿರುಸಿನ ಮಳೆ ಹಾಗೂ ಗಾಳಿ ಯಿಂದಾಗಿ ಮರಗಳು ಬಿದ್ದಿದ್ದು ಅಲ್ಲಲ್ಲಿ ಹಾನಿ ಸಂಭವಿಸಿದೆ. ವಿದ್ಯುತ್ ಸಂಪರ್ಕ ಕಡಿತಗೊಂಡಿದ್ದು ಭಾಗಮಂಡಲ ಕತ್ತಲಲ್ಲಿ ಮುಳುಗಿದೆ.ಆಲೂರು-ಸಿದ್ದಾಪುರ: ಬುಧವಾರ ರಾತ್ರಿಯಿಂದ ಗುರುವಾರ ಸಂಜೆಯವರೆಗೆ ಹೋಬಳಿ ವ್ಯಾಪ್ತಿಯಲ್ಲಿ ಭಾರೀ ಮಳೆಯಾಗಿದೆ. ಹೋಬಳಿ ವ್ಯಾಪ್ತಿಯಲ್ಲಿ ಕೆರೆ, ಹೊಳೆ. ಕೊಲ್ಲಿ ತುಂಬಿ ಹರಿಯುತ್ತಿದೆ. ಕೆಲವು ಕಡೆಗಳಲ್ಲಿ ಮಳೆ-ಗಾಳಿಗೆ ವಾಸದ ಮನೆ ಬಿದ್ದು ಹೋಗಿದೆ. ಹೋಬಳಿಯ ಕಾಜೂರು ಹೊಳೆ, ಹೆಮ್ಮöನೆ, ಮುಳ್ಳೂರು ಇಂಟಿನಾಯಕನ ಕೆರೆ ಭರ್ತಿಯಾಗಿದೆ ಮಾಲಂಬಿ ಗ್ರಾಮದಲ್ಲಿ ಭಾರೀ ಮಳೆಯಾಗುತ್ತಿದ್ದು, ಇದರಿಂದ ಈ ಕೆರೆ ಭರ್ತಿಯಾಗಿದ್ದು ಕೆರೆಯ ಕೊಡಿ ಮತ್ತು ತೂಬುಗಳಲ್ಲಿ ನಾಲೆಯ ಮೂಲಕ ನೀರನ್ನು ಬಿಡಲಾಗಿದೆ. ಈ ಕೆರೆಯ ನೀರು ಪಕ್ಕದ ಹಾಸನ ಜಿಲ್ಲೆಗೆ ಸೇರಿದ ತೆರುಗಳಲೆ ಕೆರೆಗೆ ಕೊಲ್ಲಿಯ ಮೂಲಕ ಹರಿಯುತ್ತದೆ.ಗುರುವಾರ ರಾತ್ರಿ ಭಾರೀ ಗಾಳಿ-ಮಳೆಗೆ ಶನಿವಾರಸಂತೆ ಹೋಬಳಿಯ ಮಾದ್ರೆ ಗ್ರಾಮದ ದೇವರಾಜ್ ಎಂಬುವವರ ವಾಸದ ಮನೆ ಹಾಗೂ ಕೊಟ್ಟಿಗೆ ಮೇಲೆ ಮರವೊಂದು ಬಿದ್ದು ಹಾನಿಯಾಗಿದೆ. ಕುಶಾಲನಗರ, ಶನಿವಾರಸಂತೆ, ಮಾಲಂಬಿ ಮುಖ್ಯ ರಸ್ತೆಗೆ ದೊಡ್ಡ ಮರ ಬಿದ್ದು ರಸ್ತೆ ಸಂಚಾರಕ್ಕೆ ತೊಂದರೆಯಾಗಿತ್ತು. ಸೋಮವಾರಪೇಟೆ-ಶನಿವಾರಸಂತೆ ಮುಖ್ಯ ರಸ್ತೆಯ ಗೋಪಾಲಪುರದಲ್ಲಿ ಮರ ಬಿದ್ದು ರಸ್ತೆ ಸಂಚಾರಕ್ಕೆ ಅಡಚಣೆಯಾಗಿತ್ತು.
ಸೋಮವಾರಪೇಟೆ-ಶನಿವಾರಸಂತೆ ಹಾಗೂ ಕುಶಾಲನಗರ-ಕೊಡ್ಲಿಪೇಟೆಯವರೆಗೆ ರಸ್ತೆ ಬದಿಯಲ್ಲಿ ಅನೇಕ ಒಣ ಮರಗಳಿದ್ದು, ಗಾಳಿ- ಮಳೆಗೆ ಯಾವಾಗಲಾದರು ಬೀಳುವ ಸಾದ್ಯತೆ ಹೆಚ್ಚಿದೆ. ಅರಣ್ಯ ಇಲಾಖೆ ಕೂಡಲೇ ತೆರವುಗೊಳಿಸಲು ಮುಂದಾಗಬೇಕು ಎಂದು ಸಾರ್ವಜನಿಕರು ಪತ್ರಿಕೆ ಮೂಲಕ ಮನವಿ ಮಾಡಿದ್ದಾರೆ.
- ವಿಜಯ್, ನರೇಶ್, ದಿನೇಶ್ ಮಾಲಂಬಿ, ರಾಜುರೈ, ಸುನಿಲ್, ಸುಧೀರ್, ನಾಗರಾಜಶೆಟ್ಟಿ, ಚೆನ್ನನಾಯಕ, ದುಗ್ಗಳ ಸದಾನಂದ