ಮಡಿಕೇರಿ, ಜು. ೧೪: ಗುರು ಪೂರ್ಣಿಮೆ ಪ್ರಯುಕ್ತ ಆರ್ಟ್ ಆಫ್ ಲಿವಿಂಗ್‌ನ ಸೋಮವಾರಪೇಟೆ ತಾಲೂಕಿನ ಶಿಕ್ಷಕಿ ರಾಗಿಣಿ ಅವರು ಆನ್‌ಲೈನ್‌ನಲ್ಲಿ ಆಯೋಜಿಸಿದ ಕಾರ್ಯಕ್ರಮದಲ್ಲಿ ಗುರುಪೂಜಾ ಪಂಡಿತ್‌ರಾದ ಪೋಡಮಾಡ ಭವಾನಿ ನಾಣಯ್ಯ ಅವರು ಗುರುಪೂಜೆಯನ್ನು ನೆರವೇರಿಸಿದರು.
ಕಾರ್ಯಕ್ರಮದಲ್ಲಿ ಯೋಗ, ಧ್ಯಾನ, ಸತ್ಸಂಗದ ಮೂಲಕ ಇಂದಿನ ಮಹತ್ವವನ್ನು ತಿಳಿಸಲಾಯಿತು. ಸುಶ್ರಾವ್ಯವಾದ ಭಜನೆಗಳನ್ನು ಹಾಡುತ್ತಾ ನೆರದಿದ್ದವರು ತಮ್ಮ ಅನುಭವಗಳನ್ನು ಹಂಚಿಕೊಳ್ಳುತ್ತಾ ಗುರು ಪೂರ್ಣಿಮೆಯನ್ನು ಸಂತೋಷದಿAದ ಆಚರಿಸಿದರು.