ಸೋಮವಾರಪೇಟೆ, ಜು. ೧೪: ಪಟ್ಟಣ ಸಮೀಪದ ಹಾನಗಲ್ಲು ಗ್ರಾಮ ಪಂಚಾಯಿತಿ ವ್ಯಾಪ್ತಿಯ ಹಾನಗಲ್ಲು ಬಾಣೆಯಲ್ಲಿ ಕೆಪಿಟಿಸಿಎಲ್‌ನಿಂದ ೧೦ ಕೋಟಿ ವೆಚ್ಚದಲ್ಲಿ ೬೬/೩೩/೧೧ಕೆ.ವಿ. ವಿದ್ಯುತ್ ವಿತರಣಾ ಕೇಂದ್ರ ನಿರ್ಮಾಣ ಕಾಮಗಾರಿ ಪ್ರಗತಿಯ ಲ್ಲಿದ್ದು, ಉದ್ದೇಶಿತ ಯೋಜನೆ ಪೂರ್ಣಗೊಂಡರೆ ೧೮ ಸಾವಿರ ಗ್ರಾಹಕರಿಗೆ ವಿದ್ಯುತ್ ಸಮಸ್ಯೆ ಬಗೆಹರಿಯುವ ನಿರೀಕ್ಷೆಯಿದೆ.
ಹಾನಗಲ್ಲು ಬಾಣೆಯಲ್ಲಿ ಈಗಾಗಲೇ ಚಾಮುಂಡೇಶ್ವರಿ ವಿದ್ಯುತ್ ಸರಬರಾಜು ನಿಗಮದ ಸಹಾಯಕ ಕಾರ್ಯಪಾಲಕ ಅಭಿಯಂತರರ ಕಚೇರಿ ಮತ್ತು ಸಿಬ್ಬಂದಿಗಳ ವಸತಿ ಗೃಹ ನಿರ್ಮಾಣವಾಗಿ ಕಾರ್ಯಾರಂಭ ಮಾಡಿದ್ದು, ಇದಕ್ಕೆ ಒತ್ತಿಕೊಂಡAತೆ ೬೬ ಕೆ.ವಿ. ಸಾಮರ್ಥ್ಯದ ವಿದ್ಯುತ್ ವಿತರಣಾ ಕೇಂದ್ರದ ಕಾಮಗಾರಿ ಕಳೆದೆರಡು ತಿಂಗಳಿನಿAದ ಆರಂಭಗೊAಡಿದೆ.
ಪ್ರಸ್ತುತ ಸೋಮವಾರಪೇಟೆಗೆ ಕುಶಾಲನಗರದಿಂದ ೩೩ ಕೆ.ವಿ. ವಿದ್ಯುತ್ ಮಾರ್ಗ ಅಳವಡಿಸಲಾಗಿದೆ. ದಟ್ಟ ಅರಣ್ಯ, ಕಾಫಿ ತೋಟದ ನಡುವೆ ಈ ಮಾರ್ಗ ಹಾದು ಬಂದಿರುವುದರಿAದ ಮಳೆಗಾಲದಲ್ಲಿ ಆಗಾಗ್ಗೆ ವಿದ್ಯುತ್ ಸಮಸ್ಯೆ ಎದುರಾಗುತ್ತಿದೆ.
ಕುಶಾಲನಗರದಿಂದ ಆಗಮಿಸಿರುವ ವಿದ್ಯುತ್ ಮಾರ್ಗವು ಯಡವನಾಡು ಮೀಸಲು ಅರಣ್ಯ ಹಾಗೂ ಬಹುತೇಕ ಕಾಫಿ ತೋಟದ ನಡುವೆಯೇ ಬಂದಿದೆ. ಮಳೆಗಾಲದಲ್ಲಿ ಮರದ ಸಣ್ಣಪುಟ್ಟ ಕೊಂಬೆಗಳು ಮಾಡಿದ್ದು, ಇದಕ್ಕೆ ಒತ್ತಿಕೊಂಡAತೆ ೬೬ ಕೆ.ವಿ. ಸಾಮರ್ಥ್ಯದ ವಿದ್ಯುತ್ ವಿತರಣಾ ಕೇಂದ್ರದ ಕಾಮಗಾರಿ ಕಳೆದೆರಡು ತಿಂಗಳಿನಿAದ ಆರಂಭಗೊAಡಿದೆ.
ಪ್ರಸ್ತುತ ಸೋಮವಾರಪೇಟೆಗೆ ಕುಶಾಲನಗರದಿಂದ ೩೩ ಕೆ.ವಿ. ವಿದ್ಯುತ್ ಮಾರ್ಗ ಅಳವಡಿಸಲಾಗಿದೆ. ದಟ್ಟ ಅರಣ್ಯ, ಕಾಫಿ ತೋಟದ ನಡುವೆ ಈ ಮಾರ್ಗ ಹಾದು ಬಂದಿರುವುದರಿAದ ಮಳೆಗಾಲದಲ್ಲಿ ಆಗಾಗ್ಗೆ ವಿದ್ಯುತ್ ಸಮಸ್ಯೆ ಎದುರಾಗುತ್ತಿದೆ.
ಕುಶಾಲನಗರದಿಂದ ಆಗಮಿಸಿರುವ ವಿದ್ಯುತ್ ಮಾರ್ಗವು ಯಡವನಾಡು ಮೀಸಲು ಅರಣ್ಯ ಹಾಗೂ ಬಹುತೇಕ ಕಾಫಿ ತೋಟದ ನಡುವೆಯೇ ಬಂದಿದೆ. ಮಳೆಗಾಲದಲ್ಲಿ ಮರದ ಸಣ್ಣಪುಟ್ಟ ಕೊಂಬೆಗಳು ನಿರ್ಮಾಣಗೊಳ್ಳಲಿದೆ. ಸುಮಾರು ೧೯.೩೮ ಕಿ.ಮೀ. ಅಂತರದಲ್ಲಿ ೧೦೧ ಟವರ್‌ಗಳು ನಿರ್ಮಾಣಗೊಳ್ಳಲಿದ್ದು, ಎತ್ತರದಲ್ಲಿ ವಿದ್ಯುತ್ ತಂತಿಗಳು ಹಾದು ಹೋಗುವುದರಿಂದ ಮಳೆಗಾಲದಲ್ಲಿ ಮರದ ಕೊಂಬೆಗಳು ಮುರಿದುಬಿದ್ದು ವಿದ್ಯುತ್ ಸ್ಥಗಿತಗೊಳ್ಳುವ ಆತಂಕ ಇರುವುದಿಲ್ಲ. ಇದರೊಂದಿಗೆ ವೋಲ್ಟೇಜ್‌ನಲ್ಲೂ ಸಮಸ್ಯೆ ಉದ್ಭವಿಸುವುದಿಲ್ಲ.
ಸುಂಟಿಕೊಪ್ಪದಿAದ ಆಗಮಿಸುವ ೬೬ ಕೆ.ವಿ. ವಿದ್ಯುತ್‌ನ್ನು ೩೩ ಮತ್ತು ೧೧ ಕೆ.ವಿ.ಗೆ ‘ಸ್ಟೆಪ್‌ಡೌನ್’ ಮಾಡಲಾಗು ವುದು. ಇದಕ್ಕಾಗಿ ಕಂಟ್ರೋಲ್ ರೂಂ ಸ್ಥಾಪನೆಯಾಗಲಿದೆ. ೧೨ ಫೀಡರ್‌ಗಳನ್ನು ಅಳವಡಿಸಿ ಆಧುನಿಕ ತಂತ್ರಜ್ಞಾನದ ಮೂಲಕ ಅಡಚಣೆ ರಹಿತ ವಿದ್ಯುತ್ ಪೂರೈಕೆ ಮಾಡಲು ಕೆಪಿಟಿಸಿಎಲ್ ಕ್ರಮಕೈಗೊಂಡಿದೆ ಎಂದು ಅಭಿಯಂತರರು ಮಾಹಿತಿ ನೀಡಿದ್ದಾರೆ.
ಪ್ರಸ್ತುತ ಸೋಮವಾರಪೇಟೆಗೆ ೩೩ ಕೆ.ವಿ. ವಿದ್ಯುತ್ ಪ್ರವಹಿಸುತ್ತಿದೆ. ಇದನ್ನು ಕೆಲವು ಕಡೆಗಳಲ್ಲಿ ೧೧ ಕೆ.ವಿ.ಗೆ ‘ಸ್ಟೆಪ್‌ಡೌನ್’ ಮಾಡಲಾಗುತ್ತಿದೆ. ಮಳೆಗಾಲದಲ್ಲಿ ಗ್ರಾಮೀಣ ಭಾಗದಲ್ಲಿ ಆಗಾಗ್ಗೆ ವಿದ್ಯುತ್ ಕಡಿತ ಉಂಟಾಗುತ್ತಿರುತ್ತದೆ. ಇದರಿಂದ ಸಾರ್ವಜನಿಕರು, ಉದ್ಯಮಗಳು, ಕೈಗಾರಿಕೆಗಳಿಗೆ ಅನಾನುಕೂಲ ವಾಗುತ್ತಿದ್ದು, ಇವುಗಳಿಗೆ ಕಡಿವಾಣ ಹಾಕಿ ನಿರಂತರ ವಿದ್ಯುತ್ ಪೂರೈಕೆಗೆ ಕ್ರಮ ಕೈಗೊಳ್ಳಲಾಗುತ್ತಿದೆ.
ಈಗಿರುವ ೩೩ ಕೆ.ವಿ. ವಿದ್ಯುತ್ ವಿತರಣಾ ಘಟಕ ಹಳೆಯ ತಂತ್ರಜ್ಞಾನದಲ್ಲಿದ್ದು, ಫೀಡರ್, ಟ್ರಾನ್ಸ್ ಫಾರ್ಮರ್‌ಗಳು ಕೆಟ್ಟುಹೋದರೆ ದುರಸ್ತಿ ಕಷ್ಟವಾಗುತ್ತಿದೆ. ಇದಕ್ಕೆ ಸಂಬAಧಿಸಿದ ಪರಿಕರಗಳೂ ಲಭ್ಯವಾಗುತ್ತಿಲ್ಲ. ವಿದ್ಯುತ್ ಮಾರ್ಗ ದುರಸ್ತಿಗೀಡಾದರೆ ಸರಿಪಡಿಸಲು ಸಮಯಾವಕಾಶ ಬೇಕಾಗುತ್ತದೆ. ಹೀಗಾಗಿ ತಕ್ಷಣಕ್ಕೆ ಸಮಸ್ಯೆ ಬಗೆಹರಿಸಿ ಸಾರ್ವಜನಿಕರಿಗೆ ಸ್ಪಂದಿಸಲು ಸಾಧ್ಯವಾಗುತ್ತಿಲ್ಲ. (ಮೊದಲ ಪುಟದಿಂದ) ೬೬ ಕೆ.ವಿ. ಘಟಕದ ಸ್ಥಾಪನೆಯಿಂದ ಈ ಎಲ್ಲಾ ಸಮಸ್ಯೆಗಳಿಗೆ ಮುಕ್ತಿ ದೊರೆಯಲಿದೆ ಎಂದು ಸೆಸ್ಕ್ ಅಭಿಯಂತರರು ಅಭಿಪ್ರಾಯಿಸಿದ್ದಾರೆ.
೬೬ ಕೆ.ವಿ. ಘಟಕ ಸ್ಥಾಪನೆಯಾದರೆ ಇದರ ನಿರ್ವಹಣೆಗೆ ಪ್ರತ್ಯೇಕ ತಂಡ ಇರಲಿದೆ. ಮಾರ್ಗ ಹಾಗೂ ಕೇಂದ್ರದಲ್ಲಿ ಯಾವುದೇ ಸಮಸ್ಯೆ ಉಂಟಾದರೂ ತಕ್ಷಣಕ್ಕೆ ಸ್ಪಂದಿಸಲಾಗುತ್ತದೆ. ಸೆಸ್ಕ್ನವರು ವಿದ್ಯುತ್ ವಿತರಣೆ ಮತ್ತು ಶುಲ್ಕ ಸಂಗ್ರಹ ನಿರ್ವಹಣೆ ಮಾಡಲಿದ್ದಾರೆ. ಸೆಸ್ಕ್ ಸಿಬ್ಬಂದಿಗಳಿಗೆ ಕೆಲಸದ ಹೊರೆ ಕಡಿಮೆಯಾಗಲಿದೆ ಎಂದು ಸೆಸ್ಕ್ನ ಸಹಾಯಕ ಕಾರ್ಯಪಾಲಕ ಅಭಿಯಂತರ ಧನಂಜಯ್ ತಿಳಿಸಿದ್ದಾರೆ.
ಸೋಮವಾರಪೇಟೆ ಉಪ ವಿಭಾಗಕ್ಕೆ ಸಂಬAಧಿಸಿದAತೆ ಒಟ್ಟು ೩೮ ಸಾವಿರ ಗ್ರಾಹಕರಿದ್ದು, ಶನಿವಾರಸಂತೆಯಲ್ಲಿ ೬೬ ಕೆ.ವಿ. ಘಟಕದಿಂದ ೬ ಫೀಡರ್‌ಗಳ ಮೂಲಕ ೯ ಸಾವಿರ ಗ್ರಾಹಕರಿಗೆ ವಿದ್ಯುತ್ ಪೂರೈಸಲಾಗುತ್ತಿದೆ. ಯಸಳೂರು ಮಾರ್ಗದಿಂದ ಕೊಡ್ಲಿಪೇಟೆಯ ೪,೫೦೦ ಗ್ರಾಹಕರಿಗೆ ವಿದ್ಯುತ್ ಒದಗಿಸಲಾಗುತ್ತಿದೆ. ಆಲೂರುಸಿದ್ದಾಪುರದಲ್ಲಿ ೬೬ ಕೆ.ವಿ. ಮೂಲಕ ೫ ಸಾವಿರ ಗ್ರಾಹಕರಿಗೆ ವಿದ್ಯುತ್ ಕಲ್ಪಿಸಲಾಗಿದೆ.
ಉಳಿದಂತೆ ಸೋಮವಾರಪೇಟೆ ಮತ್ತು ಶಾಂತಳ್ಳಿ ವ್ಯಾಪ್ತಿಯ ೧೮,೫೦೦ ಗ್ರಾಹಕರಿಗೆ ಪ್ರಸ್ತುತ ೩೩ ಕೆ.ವಿ. ಮಾರ್ಗದ ಮೂಲಕವೇ ವಿದ್ಯುತ್ ಪೂರೈಸಲಾಗುತ್ತಿದ್ದು, ಈ ವ್ಯವಸ್ಥೆಯನ್ನು ಮೇಲ್ದರ್ಜೆಗೇರಿಸಿ ೬೬ ಕೆ.ವಿ. ಮೂಲಕ ವಿದ್ಯುತ್ ಪೂರೈಸುವ ಯೋಜನೆ ಇದಾಗಿದೆ.
ಸೋಮವಾರಪೇಟೆ ಉಪ ವಿಭಾಗಕ್ಕೆ ಒಳಪಟ್ಟಂತೆ ಮನೆಗಳು, ಸಣ್ಣಪುಟ್ಟ ಕೈಗಾರಿಕೆಗಳು, ಅಂಗಡಿ ಮುಂಗಟ್ಟುಗಳು, ಕೃಷಿಕರ ಬೋರ್‌ವೆಲ್‌ಗಳು, ಶಾಲಾ ಕಾಲೇಜು, ಸರ್ಕಾರಿ ಕಚೇರಿಗಳಿಗೆ ಪ್ರಸ್ತುತ ೬ ಫೀಡರ್‌ಗಳ ಮೂಲಕವೇ ವಿದ್ಯುತ್ ಸರಬರಾಜು ಮಾಡಲಾಗುತ್ತಿದೆ. ೬೬ ಕೆ.ವಿ. ವಿದ್ಯುತ್ ವಿತರಣಾ ಘಟಕ ಆರಂಭಗೊAಡರೆ ಹೆಚ್ಚುವರಿಯಾಗಿ ೬ ಫೀಡರ್‌ಗಳನ್ನು ಅಳವಡಿಸಲಾಗುತ್ತದೆ. ಒಟ್ಟು ೧೨ ಫೀಡರ್‌ಗಳ ಮೂಲಕ ತಡೆರಹಿತ ವಿದ್ಯುತ್ ನೀಡಲು ಅನುಕೂಲವಾಗಲಿದೆ. ಜೊತೆಗೆ ವೋಲ್ಟೇಜ್ ಸಮಸ್ಯೆಯಿಂದಲೂ ಮುಕ್ತಿ ಪಡೆಯಬಹುದಾಗಿದೆ.
ಒಟ್ಟಾರೆ ಉದ್ದೇಶಿತ ಯೋಜನೆ ಪೂರ್ಣಗೊಳಿಸಲು ಕೆಪಿಟಿಸಿಎಲ್‌ಗೆ ಒಂದು ವರ್ಷದ ಅವಧಿ ನೀಡಲಾಗಿದೆ. ಈ ಅವಧಿಯೊಳಗೆ ಕಾಮಗಾರಿ ಪೂರ್ಣಗೊಂಡರೆ ಮುಂದಿನ ಮಳೆಗಾಲದೊಳಗೆ ಸೋಮವಾರಪೇಟೆಯಲ್ಲಿ ೬೬ ಕೆ.ವಿ. ವಿದ್ಯುತ್ ವಿತರಣಾ ಕೇಂದ್ರ ಕಾರ್ಯಾರಂಭ ಮಾಡಲಿದೆ. ಆ ಮೂಲಕ ಅನೇಕ ದಶಕಗಳ ಬೇಡಿಕೆಯೂ ಈಡೇರಿದಂತಾಗುತ್ತದೆ.
-ವಿಜಯ್ ಹಾನಗಲ್ ಕಾಲೇಜು, ಸರ್ಕಾರಿ ಕಚೇರಿಗಳಿಗೆ ಪ್ರಸ್ತುತ ೬ ಫೀಡರ್‌ಗಳ ಮೂಲಕವೇ ವಿದ್ಯುತ್ ಸರಬರಾಜು ಮಾಡಲಾಗುತ್ತಿದೆ. ೬೬ ಕೆ.ವಿ. ವಿದ್ಯುತ್ ವಿತರಣಾ ಘಟಕ ಆರಂಭಗೊAಡರೆ ಹೆಚ್ಚುವರಿಯಾಗಿ ೬ ಫೀಡರ್‌ಗಳನ್ನು ಅಳವಡಿಸಲಾಗುತ್ತದೆ. ಒಟ್ಟು ೧೨ ಫೀಡರ್‌ಗಳ ಮೂಲಕ ತಡೆರಹಿತ ವಿದ್ಯುತ್ ನೀಡಲು ಅನುಕೂಲವಾಗಲಿದೆ. ಜೊತೆಗೆ ವೋಲ್ಟೇಜ್ ಸಮಸ್ಯೆಯಿಂದಲೂ ಮುಕ್ತಿ ಪಡೆಯಬಹುದಾಗಿದೆ.
ಒಟ್ಟಾರೆ ಉದ್ದೇಶಿತ ಯೋಜನೆ ಪೂರ್ಣಗೊಳಿಸಲು ಕೆಪಿಟಿಸಿಎಲ್‌ಗೆ ಒಂದು ವರ್ಷದ ಅವಧಿ ನೀಡಲಾಗಿದೆ. ಈ ಅವಧಿಯೊಳಗೆ ಕಾಮಗಾರಿ ಪೂರ್ಣಗೊಂಡರೆ ಮುಂದಿನ ಮಳೆಗಾಲದೊಳಗೆ ಸೋಮವಾರಪೇಟೆಯಲ್ಲಿ ೬೬ ಕೆ.ವಿ. ವಿದ್ಯುತ್ ವಿತರಣಾ ಕೇಂದ್ರ ಕಾರ್ಯಾರಂಭ ಮಾಡಲಿದೆ. ಆ ಮೂಲಕ ಅನೇಕ ದಶಕಗಳ ಬೇಡಿಕೆಯೂ ಈಡೇರಿದಂತಾಗುತ್ತದೆ.
-ವಿಜಯ್ ಹಾನಗಲ್