ಮಡಿಕೇರಿ, ಜು. ೧೪: ಎ.ಐ.ಸಿ.ಸಿ. ನಿಯೋಜಿತ ವೀಕ್ಷಕರು ಹಾಗೂ ಕೊಡಗು ಜಿಲ್ಲಾ ಡಿ.ಆರ್.ಓ.ರಾದ ವಿ. ಬಾಬುರಾಜ್ ಜಿಲ್ಲಾ ಕಾಂಗ್ರೆಸ್ ಕಚೇರಿಗೆ ಭೇಟಿ ನೀಡಿ ಪಕ್ಷದ ಬೂತ್‌ಮಟ್ಟದ ಅಧ್ಯಕ್ಷರು ಹಾಗೂ ಪ್ರತಿನಿಧಿಗಳ ಪಟ್ಟಿಯನ್ನು ಜಿಲ್ಲಾ ಕಾಂಗ್ರೆಸ್ ಅಧ್ಯಕ್ಷ ಧರ್ಮಜ ಉತ್ತಪ್ಪ ಅವರಿಂದ ಪಡೆದುಕೊಂಡರು.
ಈ ಸಂದರ್ಭ ಡಿಸಿಸಿ ಪ್ರಧಾನ ಕಾರ್ಯದರ್ಶಿ ಕೊಲ್ಯದ ಗಿರೀಶ್, ಓಬಿ.ಸಿ. ಘಟಕದ ಜಿಲ್ಲಾಧ್ಯಕ್ಷ ಬಾನಂಡ ಪೃಥ್ವಿ, ಸಾಮಾಜಿಕ ಜಾಲತಾಣದ ಜಿಲ್ಲಾಧ್ಯಕ್ಷ ಸೂರಜ್ ಹೊಸೂರು, ಡಿಸಿಸಿ ಗೌರವ ಕಾರ್ಯದರ್ಶಿ ವಿ.ಪಿ. ಸುರೇಶ್, ಡಿಸಿಸಿ ಸದಸ್ಯ ಮುಕ್ಕಾಟೀರ ಸಂದೀಪ್, ವಕ್ಫ್ ಬೋರ್ಡ್ ಮಾಜಿ ಅಧ್ಯಕ್ಷ ಯಾಕೂಬ್, ಸಾಮಾಜಿಕ ಜಾಲತಾಣ ಪ್ರಧಾನ ಕಾರ್ಯದರ್ಶಿ ಯಶ್ ದೋಳ್ಪಾಡಿ, ಜಾನ್ಸನ್ ಪಿ.ವಿ. ಮತ್ತಿತರರು ಉಪಸ್ಥಿತರಿದ್ದರು.