ಕಣಿವೆ, ಜು. ೧೩: ಟಿಬೆಟಿಯನ್ ಧರ್ಮಗುರು ಓರ್ವರು ಕಳೆದುಕೊಂಡಿದ್ದ ರೂ. ೬೦ ಸಾವಿರ ನಗದನ್ನು ಕುಶಾಲನಗರದ ನಿವಾಸಿ ಚಂದ್ರುರವರು ಹಿಂದಿರುಗಿಸುವ ಮೂಲಕ ಜನರ ಮೆಚ್ಚುಗೆಗೆ ಪಾತ್ರರಾಗಿದ್ದಾರೆ.
ಕುಶಾಲನಗರದ ಬಿ.ಎಂ. ರಸ್ತೆಯಲ್ಲಿರುವ ಚಂದ್ರು ಅವರ ಚಪ್ಪಲಿ ಮಳಿಗೆಯಲ್ಲಿ ಟಿಬೆಟಿಯನ್ ಧರ್ಮ ಗುರು ಸೆರಜೀ ಅವರು ಮಂಗಳವಾರ ತಮ್ಮ ಬ್ಯಾಗನ್ನು ಮರೆತು ಹೋಗಿದ್ದಾರೆ. ನಂತರ ಚಂದ್ರು ಬ್ಯಾಗ್ನ ಮಾಲೀಕನ ಬಗ್ಗೆ ಯಾವುದೇ ಮಾಹಿತಿ ಇಲ್ಲದಿದ್ದರೂ, ಟಿಬೆಟಿಯನ್ ಸ್ನೇಹಿತರ ಮೂಲಕ ಸೆರಜೀ ಅವರನ್ನು ಪತ್ತೆ ಹಚ್ಚಿದ್ದಾರೆ. ನಂತರ ಬ್ಯಾಗ್ ಮರೆತು ಬಿಟ್ಟಿದ್ದ ಬಗ್ಗೆ ಮಾಹಿತಿ ತಿಳಿಸಿದ ಚಂದ್ರು, ಬ್ಯಾಗ್ನಲ್ಲಿದ್ದ ರೂ. ೬೦ ಸಾವಿರ ನಗದು ಹಾಗೂ ಬ್ಯಾಗನ್ನು ಹಿಂದಿರುಗಿಸಿ ಪ್ರಾಮಾಣಿಕತೆ ತೋರಿದ್ದಾರೆ.