ಡಾ. ಗುರುಶಾಂತ್

ವೀರಾಜಪೇಟೆ, ಜು. ೧೩: ಯುವ ಜನಾಂಗ ದೇಶದ ಅಭಿವೃದ್ಧಿಯ ಬಗ್ಗೆ ಚಿಂತಿಸಬೇಕಾಗಿದೆ ಎಂದು ಬೆಂಗಳೂರು ಜನಶಕ್ತಿ ವಾರಪತ್ರಿಕೆಯ ಸಂಪಾದಕ ಡಾ. ಎಸ್.ವೈ. ಗುರುಶಾಂತ್ ಹೇಳಿದರು.

ವೀರಾಜಪೇಟೆ ಕೆಎಸ್‌ಆರ್‌ಟಿಸಿ ಬಸ್ ನಿಲ್ದಾಣದ ಬಳಿಯಿರುವ ಮಹಾವಿಷ್ಣು ಸಭಾಂಗಣದಲ್ಲಿ ಆಯೋಸಿದ್ದ ಭಾರತ ಪ್ರಜಾಸತ್ತಾತ್ಮಕ ಯುವಜನ ಫೆಡರೇಷನ್ ಡಿ.ವೈ.ಎಫ್.ಐ. ಸಂಘಟನಾ ಜಿಲ್ಲಾ ಸಮಿತಿ ವತಿಯಿಂದ ಆಯೊಜಿಸ ಲಾಗಿದ್ದ ಸೌಹಾರ್ದ ಸಮಾವೇಶದಲ್ಲಿ ಮುಖ್ಯ ಅತಿಥಿಯಾಗಿ ಭಾಗವಹಿಸಿ ಮಾತನಾಡಿದ ಅವರು, ನಿರು ದ್ಯೋಗದ ಬೇಗೆಯಲ್ಲಿ ಬೇಯುತ್ತಿ ರುವ ಯುವ ಜನತೆ ಒಗ್ಗಟ್ಟಿನಿಂದ ದೇಶದ ಸಮಗ್ರತೆ ಮತ್ತು ಐಕ್ಯತೆಗೆ ಬೇಕಾದ ಅಭಿವೃದ್ಧಿ ಕಾರ್ಯಗಳಿಗೆ ಪೂರಕವಾಗಿ ಸಂಘಟಿತರಾಗಬೇಕು ಎಂದರು. ಸಾಮಾಜಿಕ ಕಾರ್ಯಕರ್ತ, ಚಿತ್ರನಟ ನೆರವಂಡ ಉಮೇಶ್ ಮಾತನಾಡಿ, ಪ್ರಕೃತಿ ಸೌಂದರ್ಯದ ಪರಿಸರದಲ್ಲಿ ಸಹಬಾಳ್ವೆಯಿಂದ ಜೀವನ ನಡೆಸುತ್ತಿರುವಾಗ ಜಾತಿ-ಧರ್ಮದ ವೈಷಮ್ಯವನ್ನು ಬಿತ್ತಲಾಗುತ್ತಿದೆ. ಇದನ್ನು ಮೆಟ್ಟಿ ನಿಲ್ಲಲು ಯುವಜನ ಫೆಡರೇಷನ್ ಮತ್ತು ಒಕ್ಕೂಟಗಳು ಸದಾ ಜಾಗೃತ ರಾಗಿರಬೇಕು ಹಾಗೂ ಎಲ್ಲರೂ ಸಹ ಬಾಳ್ವೆಯನ್ನು ನಡೆಸಲು ನಾವೆಲ್ಲರು ಜೊತೆಗೂಡಿ ಬದುಕು ಸಾಗಿಸು ವಂತಾಗಬೇಕು ಎಂದರು. ದಲಿತ ಸಂಘರ್ಷ ಸಮಿತಿಯ ಪ್ರಮುಖ ಸತೀಶ್, ವಕೀಲ ಕೆ.ವಿ. ಸುನೀಲ್ ಮಾತನಾಡಿದರು. ಪ್ರಮುಖರಾದ ಸಾಧಿಕ್, ಶಾಹಿದ್, ಚೈತನ್ಯ, ಹುಸೈನ್, ಹಮಾಲಿ ಕಾರ್ಮಿಕ ಸಂಘದ ಕಾರ್ಯದರ್ಶಿ ಹ್ಯಾರಿಸ್ ಇತರರು ಉಪಸ್ಥಿತರಿದ್ದರು. ಡಿವೈಎಫ್‌ಐ ಸಂಘಟನೆಯ ವೀರಾಜಪೇಟೆ ಘಟಕದ ಶಿಜೊಯ್ ವರ್ಗಿಸ್ ಸ್ವಾಗತಿಸಿದರು. ಕೆ.ಎಸ್. ಶಾಜಿ ರಮೇಶ್ ನಿರೂಪಿಸಿ, ವೈ.ಯು. ವಿದ್ಯಾ ವಂದಿಸಿದರು. ಸೌಹಾರ್ದ ಸಮಾ ವೇಶದಲ್ಲಿ ವೀರಾಜಪೇಟೆ, ಅಮ್ಮತ್ತಿ, ಸಿದ್ದಾಪುರ, ಕುಂಜಿಲ, ನೆಲ್ಲಿಹುದಿಕೇರಿ ಸೇರಿದಂತೆ ವಿವಿಧೆಡೆಗಳಿಂದ ಕಾರ್ಯಕರ್ತರು ಭಾಗವಹಿಸಿದ್ದರು.