ಮಡಿಕೇರಿ, ಜೂ. ೧೩: ಜಿಲ್ಲೆಯಲ್ಲಿ ಮುಂಗಾರುವಿನ ಅಬ್ಬರ ಮುಂದುವರಿಯುತ್ತಿದೆ. ಜಿಲ್ಲೆಯ ಗಡಿ ಪ್ರದೇಶ ಹಾಗೂ ಕೆಲವು ಗ್ರಾಮೀಣ ವಿಭಾಗದಲ್ಲಿ ಈಗಾಗಲೇ ೧೦೦ ಇಂಚುಗಳಿಗೂ ಹೆಚ್ಚು ಮಳೆಯಾಗಿರುವ ಕುರಿತು ವರದಿಯಾಗಿದೆ. ಜಿಲ್ಲೆಯಲ್ಲಿ ಅತಿ ಹೆಚ್ಚು ಮಳೆಯಾಗುವ ಪ್ರದೇಶಗಳಾದ ಸೂರ್ಲಬ್ಬಿ ವಿಭಾಗ ಶಾಂತಳ್ಳಿ, ಭಾಗಮಂಡಲ ವ್ಯಾಪ್ತಿಗಳಲ್ಲಿ ಈಗಾಗಲೇ ೧೦೦ ಇಂಚು ಗಡಿ ದಾಟಿದೆ. ಜೂನ್ ತಿಂಗಳಿನಲ್ಲಿ ಮಳೆ ಕ್ಷೀಣಗೊಂಡಿತ್ತಾದರೂ ಜುಲೈ ಆರಂಭದಿAದ ಭಾರೀ ಮಳೆ ಸುರಿದಿದ್ದು, ಅಲ್ಪಾವಧಿಯಲ್ಲೇ ದಾಖಲೆಯ ಮಟ್ಟ ತಲುಪಿದೆ.

(ಮೊದಲ ಪುಟದಿಂದ) ಸೂರ್ಲಬ್ಬಿ, ಮಂಕ್ಯ, ಕುಂಬಾರಗಡಿಗೆ, ಕಿಕ್ಕರಳ್ಳಿ, ಮುಟ್ಲು, ಹಮ್ಮಿಯಾಲ ವ್ಯಾಪ್ತಿಯಲ್ಲಿ ಭಾರೀ ಮಳೆಯಾಗಿದ್ದು, ೧೦೦ ರಿಂದ ೧೨೦ ಇಂಚುಗಳಷ್ಟು ದಾಖಲಾಗಿದೆ. ಭಾಗಮಂಡಲ ವಿಭಾಗದಲ್ಲೂ ಈತನಕ ೧೦೪ ಇಂಚಿನಷ್ಟು ಮಳೆಯಾಗಿದ್ದು, ಕಳೆದ ವರ್ಷಕ್ಕಿಂತ ೧೧೪ ಇಂಚುಗಳಷ್ಟು ಹೆಚ್ಚಾಗಿದೆ.

ಜಿಲ್ಲಾ ಕೇಂದ್ರ ಮಡಿಕೇರಿಯಲ್ಲೂ ೭೦ ಇಂಚು ಗಡಿ ದಾಟಿದ್ದರೆ, ಬಿರುನಾಣಿ (ಮೊದಲ ಪುಟದಿಂದ) ಸೂರ್ಲಬ್ಬಿ, ಮಂಕ್ಯ, ಕುಂಬಾರಗಡಿಗೆ, ಕಿಕ್ಕರಳ್ಳಿ, ಮುಟ್ಲು, ಹಮ್ಮಿಯಾಲ ವ್ಯಾಪ್ತಿಯಲ್ಲಿ ಭಾರೀ ಮಳೆಯಾಗಿದ್ದು, ೧೦೦ ರಿಂದ ೧೨೦ ಇಂಚುಗಳಷ್ಟು ದಾಖಲಾಗಿದೆ. ಭಾಗಮಂಡಲ ವಿಭಾಗದಲ್ಲೂ ಈತನಕ ೧೦೪ ಇಂಚಿನಷ್ಟು ಮಳೆಯಾಗಿದ್ದು, ಕಳೆದ ವರ್ಷಕ್ಕಿಂತ ೧೧೪ ಇಂಚುಗಳಷ್ಟು ಹೆಚ್ಚಾಗಿದೆ.

ಜಿಲ್ಲಾ ಕೇಂದ್ರ ಮಡಿಕೇರಿಯಲ್ಲೂ ೭೦ ಇಂಚು ಗಡಿ ದಾಟಿದ್ದರೆ, ಬಿರುನಾಣಿ ಸಹಿತ ವರುಣನ ಆರ್ಭಟ ಮುಂದುವರಿಯುತ್ತಿದೆ.

ಕಳೆದ ೨೪ ಗಂಟೆಗಳ ಅವಧಿಯಲ್ಲಿ ಜಿಲ್ಲೆಯಲ್ಲಿ ಸರಾಸರಿ ೨ ಇಂಚು ಮಳೆ ಸುರಿದಿದೆ. ಮಡಿಕೇರಿ ತಾಲೂಕಿನಲ್ಲಿ ೧.೭೭, ವೀರಾಜಪೇಟೆ ೧.೭೫, ಸೋಮವಾರಪೇಟೆಯಲ್ಲಿ ೨.೩೮ ಇಂಚು ಸರಾಸರಿ ಮಳೆಯಾಗಿದೆ.

ಮಡಿಕೇರಿ ಹೋಬಳಿಯಲ್ಲಿ ೧.೮೦, ನಾಪೋಕ್ಲು ೨, ಸಂಪಾಜೆ ೧.೦೨,ಭಾಗಮಂಡಲ ೨.೨೬ ಇಂಚು ಮಳೆಯಾಗಿದೆ. ವೀರಾಜಪೇಟೆ ಹೋಬಳಿಯಲ್ಲಿ ೧.೩೯, ಹುದಿಕೇರಿ ೨.೪೩, ಶ್ರೀಮಂಗಲ ೩.೩೨, ಪೊನ್ನಂಪೇಟೆ ೧.೯೮, ಬಾಳೆಲೆ ೧.೧೭ ಮಳೆಯಾಗಿದೆ. ಸೋಮವಾರಪೇಟೆ ಹೋಬಳಿಯಲ್ಲಿ ೨.೧೭, ಶನಿವಾರಸಂತೆ ೩.೨೦, ಕೊಡ್ಲಿಪೇಟೆ ೧.೯೬, ಶಾಂತಳ್ಳಿ ೫.೨೦, ಸುಂಟಿಕೊಪ್ಪ ಹೋಬಳಿಯಲ್ಲಿ ೧.೪೮ ಇಂಚು ಮಳೆ ಕಳೆದ ೨೪ ಗಂಟೆಯಲ್ಲಿ ದಾಖಲಾಗಿದೆ.ನಾಪೋಕ್ಲು: ಹೋಬಳಿ ವ್ಯಾಪ್ತಿಯಲ್ಲಿ ಮಂಗಳವಾರ ಮಳೆ ಬಿರುಸುಗೊಂಡಿದ್ದು ವಿವಿಧೆಡೆ ವ್ಯಾಪಕವಾಗಿ ಸುರಿದಿದೆ. ಕಕ್ಕಬ್ಬೆ ಕುಂಜಿಲ ಗ್ರಾಮಪಂಚಾಯಿತಿಯ ನಾಲಡಿ ಗ್ರಾಮಕ್ಕೆ ಜನವರಿಯಿಂದ ಇಂದಿನವರೆಗೆ ೯೩ ಇಂಚು ಮಳೆಯಾಗಿದ್ದು, ಯವಕಪಾಡಿ ಗ್ರಾಮಕ್ಕೆ ೮೫ ಇಂಚು ಮಳೆ ಸುರಿದಿದೆ.

ಕಕ್ಕಬ್ಬೆ, ಕುಂಜಿಲ, ನಾಲಡಿ, ಯವಕಪಾಡಿ ಭಾಗಗಳಲ್ಲಿ ಬಿರುಸಿನ ಮಳೆಯಾಗಿದೆ. ಅಲ್ಲಲ್ಲಿ ಹಾನಿ ಸಂಭವಿಸಿ ಕುಂಜಿಲ ಗ್ರಾಮದ ಕೊಲೆಯಂಡ ಗಣಪತಿ ಹಾಗೂ ಪಾರ್ವತಿ ಎಂಬವರ ವಾಸದ ಮನೆಗೆ ಭಾಗಶಃ ಹಾನಿಯಾಗಿದೆ.

ಕುಂಜಿಲ ಗ್ರಾಮದ ಜುನೇದ್ ಅವರ ವಾಸದ ಮನೆಯ ಶೀಟುಗಳು ಗಾಳಿ ಮಳೆಯಿಂದ ಹಾರಿ ಹೋಗಿದ್ದು ಹಾನಿ ಸಂಭವಿಸಿದೆ. ಹಾನಿಗೊಳಗಾದ ಸ್ಥಳಗಳಿಗೆ ತಹಶೀಲ್ದಾರ್ ಮಹೇಶ್, ಕಂದಾಯ ಪರಿವೀಕ್ಷಕ ರವಿಕುಮಾರ್, ಕಕ್ಕಬ್ಬೆ ಕುಂಜಿಲ ಗ್ರಾಮ ಪಂಚಾಯಿತಿ ಅಧ್ಯಕ್ಷ ಕಲಿಯಂಡ ಸಂಪನ್ನ್ ಅಯ್ಯಪ್ಪ ಭೇಟಿ ನೀಡಿ ಪರಿಶೀಲನೆ ನಡೆಸಿದರು.

ನಾಪೋಕ್ಲು ಸಮೀಪದ ಬೆಟ್ಟಗೇರಿ ಗ್ರಾಮ ಪಂಚಾಯಿತಿ ವ್ಯಾಪ್ತಿಯ ಅರುವತ್ತೋಕ್ಲು ಗ್ರಾಮದ ಚಂಪಾ ಶೆಟ್ಟಿಗಾರ್ ಅವರ ವಾಸದ ಮನೆ ಮಳೆಗಾಳಿಗೆ ಕುಸಿದಿದೆ. ಗ್ರಾಮ ಪಂಚಾಯಿತಿ ಅಧ್ಯಕ್ಷ ನಾಪಂಡ ರ‍್ಯಾಲಿಮಾದಯ್ಯ, ಪಿಡಿಓ ಉದಯ, ಭೇಟಿ ನೀಡಿ ಪರಿಶೀಲಿಸಿದರು. ಶನಿವಾರಸಂತೆ: ಹೋಬಳಿ ವ್ಯಾಪ್ತಿಯಲ್ಲಿ ಬುಧವಾರವೂ ಧಾರಾಕಾರವಾಗಿ ಜಡಿ ಮಳೆ ಸುರಿಯುತ್ತಿದ್ದು, ೧೨ ಸೆಂಟ್ ಮಳೆಯಾಗಿದೆ. ಮಳೆಗಿಂತಲೂ ಒಂದೇ ಸಮನೆ ಬೀಸುತ್ತಿರುವ ಬಿರುಗಾಳಿ ಜನಜೀವನವನ್ನು ಅಸ್ತವ್ಯಸ್ಥಗೊಳಿಸಿದೆ. ವಾತಾವರಣದಲ್ಲಿ ಶೀತ ಹಾಗೂ ತೇವಾಂಶ ಅಧಿಕಗೊಂಡಿದ್ದು, ಚಳಿಯನ್ನು ತೀವ್ರಗೊಳಿಸಿದೆ.

ಕಾಜೂರು ಹೊಳೆ ಮೈದುಂಬಿ ಹರಿದು ಹೊಳೆ, ಕಾಲುವೆ, ಗದ್ದೆಗಳೆಲ್ಲಾ ಜಲಾವೃತಗೊಂಡಿವೆ. ಕೂಲಿ ಕಾರ್ಮಿಕರು ಗದ್ದೆಗಿಳಿದು ಕೆಲಸ ಮಾಡಲು ಹಿಂಜರಿಯುವ ಪರಿಸ್ಥಿತಿ ನಿರ್ಮಾಣವಾಗಿದೆ.

ಕಳೆದ ೨ ವಾರಗಳಿಂದ ಹಗಲು-ರಾತ್ರಿ ಮಳೆ ಸುರಿಯುತ್ತಿದ್ದರೂ ಮಂಗಳವಾರದಿAದ ಸುರಿಯುತ್ತಿರುವ ಹುಚ್ಚು ಮಳೆಗೆ ಭೂಮಿಯಲ್ಲಿ ಜಲದ ಕಣ್ಣು ಮೂಡಿದ್ದು, ನೀರು ನೆಲದ ಮೇಲೆ ಹರಿಯುತ್ತಿದೆ. ಮಳೆ ಕಡಿಮೆಯಾಗದೆ ಗದ್ದೆ ಕೆಲಸ ಸಾಧ್ಯವಿಲ್ಲ ಎನ್ನುತ್ತಾರೆ ದುಂಡಳ್ಳಿ ಗ್ರಾ.ಪಂ. ವ್ಯಾಪ್ತಿಯ ದೊಡ್ಡಬಿಳಾಹ ಗ್ರಾಮದ ರೈತರಾದ ಪ್ರಕಾಶ್ ಮತ್ತು ಪ್ರಣೀತ್.

ನಿಡ್ತ ಗ್ರಾಮ ಪಂಚಾಯಿತಿ ವ್ಯಾಪ್ತಿಯಲ್ಲಿ ಉತ್ತಮ ಮಳೆಯಾಗುತ್ತಿದ್ದು, ೬ ತಿಂಗಳ ಅವಧಿಯ ಭತ್ತದ ಬೆಳೆಗಾಗಿ ಗದ್ದೆಗಳಲ್ಲಿ ಉಳುಮೆ ಕೆಲಸ ಆರಂಭವಾಗಿದೆ. ಈ ವರ್ಷ ವಾಡಿಕೆಗಿಂತ ಕಡಿಮೆ ಮಳೆಯಾಗಿದೆ. ಆದರೆ ಭೂಮಿಯಲ್ಲಿ ತೇವಾಂಶವಿದೆ. ಹಾಗಾಗಿ ಗದ್ದೆಗಳ ಬದು ಕಡಿದು ಉಳುಮೆ ಮಾಡಲಾಗುತ್ತಿದೆ ಎಂದು ಶಿಡಿಗಳಲೆ ಗ್ರಾಮದ ಕೃಷಿಕ ಎಸ್.ಎಂ. ಉಮಾಶಂಕರ್ ತಿಳಿಸಿದರು.ಸಿದ್ದಾಪುರ: ಜಿಲ್ಲೆಯಲ್ಲಿ ಸುರಿಯುತ್ತಿರುವ ಮಳೆಗೆ ಸಿದ್ದಾಪುರ ಭಾಗದ ಮನೆಯೊಂದರ ಗೋಡೆ ಸಂಪೂರ್ಣ ಕುಸಿದು ಬಿದ್ದಿದೆ.

ಇಲ್ಲಿನ ಎಂ.ಜಿ. ರಸ್ತೆಯಲ್ಲಿರುವ ಸುಶೀಲ ಎಂಬವರ ಮನೆಯ ಗೋಡೆ ಮಂಗಳವಾರ ಸುರಿದ ಮಳೆಗೆ ಕುಸಿದು ಬಿದ್ದಿದೆ. ಮನೆಯ ಮೇಲ್ಛಾವಣಿ ಸೇರಿದಂತೆ ಗೋಡೆ ಸಂಪೂರ್ಣ ಬಿದ್ದು ಹೋಗಿದ್ದು ಮನೆಯಲ್ಲಿ ಮಗ, ಸೊಸೆ ಎಲ್ಲರೂ ಇದ್ದ ಸಂದÀರ್ಭ ಗೋಡೆ ಕುಸಿದಿದೆ. ಮನೆ ಹಾಗೂ ಮನೆಯಲ್ಲಿರುವ ಸಾಮಗ್ರಿಗಳು ಸಂಪೂರ್ಣ ಹಾನಿಯಾಗಿವೆ. ಮಳೆಗೆ ದೊಡ್ಡ ಶಬ್ಧ ಕೇಳಿದಾಗ ಮನೆಯವರೆಲ್ಲರೂ ಹೊರಕ್ಕೆ ಓಡಿದ್ದರಿಂದ ಯಾವುದೇ ಪ್ರಾಣಹಾನಿ ಸಂಭವಿಸಲಿಲ್ಲ ಎಂದು ನೆರೆಮನೆಯವರು ತಿಳಿಸಿದ್ದಾರೆ. ನಾವುಗಳು ಬಡವರಾಗಿದ್ದು ಸರ್ಕಾರ ನಮಗೆ ಮನೆ ದುರಸ್ತಿ ಮಾಡಿಕೊಡಬೇಕು ಎಂದು ಸುಶೀಲ ಅಳಲು ತೋಡಿಕೊಂಡಿದ್ದಾರೆ.

ಸ್ಥಳಕ್ಕೆ ಕಂದಾಯ ಅಧಿಕಾರಿಗಳು, ಗ್ರಾ.ಪಂ. ಸದಸ್ಯೆ ಪ್ರೇಮ ಸಮೀರಾ ಭೇಟಿ ನೀಡಿ ಪರಿಶೀಲನೆ ನಡೆಸಿದರು.ಸೋಮವಾರಪೇಟೆ: ತಾಲೂಕಿನಾದ್ಯಂತ ಮತ್ತೆ ಮಳೆ ಬಿರುಸುಗೊಂಡಿದ್ದು, ಹಾನಿ ಪ್ರಕರಣಗಳು ವರದಿಯಾಗುತ್ತಲೇ ಇವೆ. ನಿನ್ನೆ ದಿನ ಕೊಂಚ ಬಿಡುವು ನೀಡಿದ್ದ ವರುಣ ಇಂದು ಮತ್ತೆ ತನ್ನ ಆರ್ಭಟ ಮುಂದುವರೆಸಿದ್ದು, ಭಾರೀ ಪ್ರಮಾಣದಲ್ಲಿ ಗಾಳಿಯೊಂದಿಗೆ ಮಳೆ ಸುರಿಯುತ್ತಿದೆ.

ಪರಿಣಾಮ ವಾಸದ ಮನೆಗಳ ಮೇಲೆ ಮರ ಬಿದ್ದು, ಹಾನಿಯಾಗುತ್ತಿದ್ದರೆ, ಅತೀ ಶೀತಕ್ಕೆ ಮನೆಗಳ ಗೋಡೆ ಕುಸಿದು ನಷ್ಟ ಸಂಭವಿಸುತ್ತಲೇ ಇವೆ. ಕಳೆದ ೨೪ ಗಂಟೆಗಳಲ್ಲಿ ಸೋಮವಾರಪೇಟೆ ಹೋಬಳಿ ವ್ಯಾಪ್ತಿಯಲ್ಲಿ ೫೪.೪, ಶಾಂತಳ್ಳಿ ಹೋಬಳಿ ವ್ಯಾಪ್ತಿಗೆ ೧೩೦, ಕೊಡ್ಲಿಪೇಟೆಗೆ ೪೮ ಹಾಗೂ ಶನಿವಾರಸಂತೆಗೆ ೮೦ ಮಿ.ಮೀಟರ್‌ನಷ್ಟು ಮಳೆ ಸುರಿದ ಬಗ್ಗೆ ವರದಿಯಾಗಿದೆ.

ತೋಳೂರುಶೆಟ್ಟಳ್ಳಿ ಗ್ರಾಮ ಪಂಚಾಯಿತಿ ವ್ಯಾಪ್ತಿಯ ದೊಡ್ಡತೋಳೂರು ಗ್ರಾಮದ ಜಿ.ಎಂ. ನಿಂಗಪ್ಪ ಅವರ ಮನೆಯ ಹಿಂಭಾಗದ ಗೋಡೆ ಕುಸಿದು ಪತ್ನಿ ಲಲಿತಾ ಹಾಗೂ ಮೊಮ್ಮಗು ಯಕ್ಷಾಳಿಗೆ ಸಣ್ಣ ಪುಟ್ಟ ಗಾಯಗಳಾಗಿದ್ದು, ಸೋಮವಾರಪೇಟೆ ಸರ್ಕಾರಿ ಆಸ್ಪತ್ರೆಗೆ ಆಗಮಿಸಿ ಚಿಕಿತ್ಸೆ ಪಡೆದಿದ್ದಾರೆ. ಸ್ಥಳಕ್ಕೆ ತೋಳೂರುಶೆಟ್ಟಳ್ಳಿ ಗ್ರಾ.ಪಂ. ಅಧ್ಯಕ್ಷ ಶೇಖರ್ ಹಾಗೂ ಪಿಡಿಓ ಸೇರಿದಂತೆ ಇತರ ಅಧಿಕಾರಿಗಳು ಭೇಟಿ ನೀಡಿ ಪರಿಶೀಲನೆ ನಡೆಸಿದ್ದಾರೆ.

ಮಾಟ್ನಳ್ಳಿ ಗ್ರಾಮದ ಪುಟ್ಟಯ್ಯ ಅವರ ಮನೆಯ ಒಂದು ಗೋಡೆ ಧರಾಶಾಹಿಯಾಗಿದ್ದು, ಅಂದಾಜು ೨೫ ಸಾವಿರ ನಷ್ಟ ಸಂಭವಿಸಿದೆ ಎಂದು ಕಂದಾಯ ಇಲಾಖಾಧಿಕಾರಿಗಳು ವರದಿ ನೀಡಿದ್ದಾರೆ. ಚೌಡ್ಲು ಗ್ರಾಮದ ಡಿ.ಡಿ. ಪೊನ್ನಪ್ಪ ಅವರ ಮನೆಯ ಮೇಲೆ ಮರ ಬಿದ್ದು ಚಾವಣಿಗೆ ಹಾನಿಯಾಗಿದ್ದು, ಅಂದಾಜು ೨೦ ಸಾವಿರ ನಷ್ಟವಾಗಿದೆ.

ಯಡವನಾಡು ಗ್ರಾಮದ ದಮಯಂತಿ ಅವರ ವಾಸದ ಮನೆಗೆ ಮಳೆಯಿಂದ ಹಾನಿಯಾಗಿದೆ. ಮನೆಯ ಗೋಡೆ ಹಾಗೂ ಛಾವಣಿ ಕುಸಿದಿದ್ದು, ೨೫ ಸಾವಿರ ನಷ್ಟ ಸಂಭವಿಸಿದೆ. ಯಡವಾರೆ ಗ್ರಾಮದ ಪೊನ್ನಮ್ಮ ಅವರಿಗೆ ಸೇರಿದ ವಾಸದ ಮನೆಯ ಒಂದು ಗೋಡೆ ಕಳೆದ ವಾರ ಕುಸಿದಿದ್ದು, ನಿನ್ನೆ ಹಾಗೂ ಮೊನ್ನೆ ಸುರಿದ ಮಳೆಗೆ ಇದೀಗ ಶೇ.೭೦ರಷ್ಟು ಕುಸಿದು ತೀವ್ರ ನಷ್ಟ ಸಂಭವಿಸಿದೆ. ಮನೆಯು ವಾಸಕ್ಕೆ ಅಯೋಗ್ಯವಾಗಿ ಪರಿಣಮಿಸಿದ್ದು, ತಾಲೂಕು ತಹಶೀಲ್ದಾರ್ ಗೋವಿಂದರಾಜು ಸೇರಿದಂತೆ ಅಧಿಕಾರಿಗಳು ಭೇಟಿ ನೀಡಿ ಪರಿಶೀಲನೆ ನಡೆಸಿದ್ದಾರೆ.

ಯಡವನಾಡು ಗ್ರಾಮದ ಕಾಮಾಕ್ಷಿ ಅವರ ವಾಸದ ಮನೆಯ ಗೋಡೆ ಕುಸಿತವಾಗಿದ್ದು, ಅಂದಾಜು ೨೫ ಸಾವಿರ ನಷ್ಟವಾಗಿದೆ. ಮಸಗೋಡು ಗ್ರಾಮದ ಬೇಬಿ ಅವರ ಮನೆಯ ಹಿಂಬದಿಯ ಗೋಡೆ ಕುಸಿದು ಬಿದ್ದಿದೆ. ಮನೆಯು ವಾಸಕ್ಕೆ ಅಯೋಗ್ಯವಾಗಿ ಪರಿಣಮಿಸಿದ್ದು, ಗೋಡೆ ಕುಸಿತದಿಂದ ಅಂದಾಜು ೨೫ ಸಾವಿರ ನಷ್ಟ ಸಂಭವಿಸಿದೆ ಎಂದು ಕಂದಾಯ ಇಲಾಖೆಗೆ ವರದಿ ಸಲ್ಲಿಸಲಾಗಿದೆ.

ಒಟ್ಟಾರೆ ಗಾಳಿಯೊಂದಿಗೆ ಬಿಟ್ಟೂ ಬಿಡದೇ ಮಳೆ ಸುರಿಯುತ್ತಿದ್ದು, ಜನಜೀವನ ಅಸ್ತವ್ಯಸ್ಥಗೊಂಡಿದೆ. ಶಾಲಾ ಕಾಲೇಜಿಗೆ ತೆರಳಲು ವಿದ್ಯಾರ್ಥಿಗಳು ಹರಸಾಹಸ ಪಡುವಂತಾಗಿದೆ. ಗ್ರಾಮೀಣ ಪ್ರದೇಶದಿಂದ ಆಗಮಿಸುವ ಹಲವಷ್ಟು ವಿದ್ಯಾರ್ಥಿಗಳು ಗೈರಾಗುತ್ತಿದ್ದಾರೆ.ಶನಿವಾರಸಂತೆ: ಹೋಬಳಿ ವ್ಯಾಪ್ತಿಯಲ್ಲಿ ಬುಧವಾರವೂ ಧಾರಾಕಾರವಾಗಿ ಜಡಿ ಮಳೆ ಸುರಿಯುತ್ತಿದ್ದು, ೧೨ ಸೆಂಟ್ ಮಳೆಯಾಗಿದೆ. ಮಳೆಗಿಂತಲೂ ಒಂದೇ ಸಮನೆ ಬೀಸುತ್ತಿರುವ ಬಿರುಗಾಳಿ ಜನಜೀವನವನ್ನು ಅಸ್ತವ್ಯಸ್ಥಗೊಳಿಸಿದೆ. ವಾತಾವರಣದಲ್ಲಿ ಶೀತ ಹಾಗೂ ತೇವಾಂಶ ಅಧಿಕಗೊಂಡಿದ್ದು, ಚಳಿಯನ್ನು ತೀವ್ರಗೊಳಿಸಿದೆ.

ಕಾಜೂರು ಹೊಳೆ ಮೈದುಂಬಿ ಹರಿದು ಹೊಳೆ, ಕಾಲುವೆ, ಗದ್ದೆಗಳೆಲ್ಲಾ ಜಲಾವೃತಗೊಂಡಿವೆ. ಕೂಲಿ ಕಾರ್ಮಿಕರು ಗದ್ದೆಗಿಳಿದು ಕೆಲಸ ಮಾಡಲು ಹಿಂಜರಿಯುವ ಪರಿಸ್ಥಿತಿ ನಿರ್ಮಾಣವಾಗಿದೆ.

ಕಳೆದ ೨ ವಾರಗಳಿಂದ ಹಗಲು-ರಾತ್ರಿ ಮಳೆ ಸುರಿಯುತ್ತಿದ್ದರೂ ಮಂಗಳವಾರದಿAದ ಸುರಿಯುತ್ತಿರುವ ಹುಚ್ಚು ಮಳೆಗೆ ಭೂಮಿಯಲ್ಲಿ ಜಲದ ಕಣ್ಣು ಮೂಡಿದ್ದು, ನೀರು ನೆಲದ ಮೇಲೆ ಹರಿಯುತ್ತಿದೆ. ಮಳೆ ಕಡಿಮೆಯಾಗದೆ ಗದ್ದೆ ಕೆಲಸ ಸಾಧ್ಯವಿಲ್ಲ ಎನ್ನುತ್ತಾರೆ ದುಂಡಳ್ಳಿ ಗ್ರಾ.ಪಂ. ವ್ಯಾಪ್ತಿಯ ದೊಡ್ಡಬಿಳಾಹ ಗ್ರಾಮದ ರೈತರಾದ ಪ್ರಕಾಶ್ ಮತ್ತು ಪ್ರಣೀತ್.

ನಿಡ್ತ ಗ್ರಾಮ ಪಂಚಾಯಿತಿ ವ್ಯಾಪ್ತಿಯಲ್ಲಿ ಉತ್ತಮ ಮಳೆಯಾಗುತ್ತಿದ್ದು, ೬ ತಿಂಗಳ ಅವಧಿಯ ಭತ್ತದ ಬೆಳೆಗಾಗಿ ಗದ್ದೆಗಳಲ್ಲಿ ಉಳುಮೆ ಕೆಲಸ ಆರಂಭವಾಗಿದೆ. ಈ ವರ್ಷ ವಾಡಿಕೆಗಿಂತ ಕಡಿಮೆ ಮಳೆಯಾಗಿದೆ. ಆದರೆ ಭೂಮಿಯಲ್ಲಿ ತೇವಾಂಶವಿದೆ. ಹಾಗಾಗಿ ಗದ್ದೆಗಳ ಬದು ಕಡಿದು ಉಳುಮೆ ಮಾಡಲಾಗುತ್ತಿದೆ ಎಂದು ಶಿಡಿಗಳಲೆ ಗ್ರಾಮದ ಕೃಷಿಕ ಎಸ್.ಎಂ. ಉಮಾಶಂಕರ್ ತಿಳಿಸಿದರು.ಸುಂಟಿಕೊಪ್ಪ: ಸುಂಟಿಕೊಪ್ಪ ಹೋಬಳಿ ವ್ಯಾಪ್ತಿಯಲ್ಲಿ ತೀವ್ರ ಮಳೆ ಗಾಳಿಯ ಅಬ್ಬರಕ್ಕೆ ಆಸ್ತಿ ಪಾಸ್ತಿ ನಷ್ಟ ಸಂಭವಿಸಿದೆ.

ಸುಂಟಿಕೊಪ್ಪ ಹೋಬಳಿಯ ಕೊಡಗರಹಳ್ಳಿ ಗ್ರಾಮದ ಕೆದಕಲ್ ಗ್ರಾಮ ಪಂಚಾಯಿತಿ ವ್ಯಾಪ್ತಿಯ ಹಾಲೇರಿ ಚಾಮುಂಡೇಶ್ವರಿ ಕಾಲೋನಿಯ ಅಂಬಿಕಾ ನಾರಾಯಣ ಮನೆಯು ಭೂಕುಸಿತದ ಹಿನ್ನೆಲೆ ಅವರನ್ನು ಪರಿಹಾರ ಕೇಂದ್ರಕ್ಕೆ ಸ್ಥಳಾಂತರಿಸಲಾಗಿದೆ. ಹರದೂರು ಪಂಚಾಯಿತಿ ಒಂದನೇ ವಾರ್ಡಿನ ಕುಂಬಾರ ಬಾಣೆ ರತ್ನ ಅವರ ಮನೆಯೊಳಗಡೆ ನೀರು ಆವರಿಸುತ್ತಿದ್ದು, ವಾಸ ಮಾಡಲು ಅನಾನುಕೂಲವಾಗಿದೆ. ತೆರೆಸ ಮನೆಯ ಗೋಡೆ ಮಂಗಳವಾರ ಬಿರುಕು ಬಿಟ್ಟಿದ್ದು, ಮಳೆಯ ರಭಸಕ್ಕೆ ಬುಧವಾರ ಗೋಡೆ ಬಿದ್ದ ಪರಿಣಾಮ ಮನೆಯನ್ನು ಖಾಲಿ ಮಾಡಿ ಸಂಬAಧಿಕರ ಮನೆಗೆ ತೆರಳಿದ್ದಾರೆ. ಸ್ಥಳಕ್ಕೆ ಸುಂಟಿಕೊಪ್ಪ ನಾಡಕಚೇರಿಯ ಅಧಿಕಾರಿಗಳು, ಹರದೂರು ಗ್ರಾಮ ಪಂಚಾಯಿತಿ ಅಧ್ಯಕ್ಷ ಪದ್ಮನಾಭ. ಸದಸ್ಯರುಗಳಾದ ಅಬ್ದುಲ್ ಸಲಾಂ, ಉಷಾ ಭೇಟಿ ನೀಡಿ ಪರಿಶೀಲಿಸಿದ್ದಾರೆ.ಕುಶಾಲನಗರ: ಹಾರಂಗಿ ಅಣೆಕಟ್ಟಿನ ಎದುರು ಭಾಗದ ಮುಳುಗು ಸೇತುವೆ ಮೇಲಿಂದ ಕರುವೊಂದು ಬಿದ್ದು ನೀರುಪಾಲಾದ ಘಟನೆ ಬುಧವಾರ ಸಂಜೆ ಸಂಭವಿಸಿದೆ.

ಹಾರAಗಿ ಜಲಾಶಯದಿಂದ ಹೆಚ್ಚುವರಿ ನೀರನ್ನು ನದಿಗೆ ಹರಿಸಿದ ಸಂದರ್ಭ ಸೇತುವೆ ಮೇಲೆ ನೀರು ಹರಿಯುತ್ತಿದ್ದು, ಕೆಲವು ಜಾನುವಾರುಗಳು ಸೇತುವೆ ಮೇಲೆ ಸಾಗುತ್ತಿದ್ದ ಸಂದರ್ಭ ಕರು ಆಯತಪ್ಪಿ ನದಿಗೆ ಬಿದ್ದಿದೆ.

ಕರು ನದಿಯಲ್ಲಿ ಕೊಚ್ಚಿ ಹೋಗುತ್ತಿದ್ದ ದೃಶ್ಯ ಕಂಡ ಹೊಸಕೋಟೆಯ ಸ್ನೇಕ್ ಶಾಜಿ ಮತ್ತು ಸ್ನೇಹಿತರು ಕರುವನ್ನು ರಕ್ಷಿಸಲು ಪ್ರಯತ್ನಿಸಿದರೂ ಸಾಧ್ಯವಾಗಲಿಲ್ಲ.

ಹೆಚ್ಚುವರಿ ನೀರು ನದಿಗೆ ಬಿಟ್ಟ ಸಂದರ್ಭ ಮುಳುಗು ಸೇತುವೆ ಮೇಲೆ ತೆರಳದಂತೆ ನಿರ್ಬಂಧಿಸಲು ಸಂಬAಧಿಸಿದ ಅಧಿಕಾರಿಗಳು ಎಚ್ಚರವಹಿಸಬೇಕಾಗಿದೆ ಎಂದು ಶಾಜಿ ಮನವಿ ಮಾಡಿದ್ದಾರೆ. -ಸಿಂಚುಮಡಿಕೇರಿ: ಮಳೆ - ಗಾಳಿಯಿಂದ ಇಬ್ನಿವಳವಾಡಿ ಗ್ರಾಮದ ದೇವರಕಾಡುವಿನಲ್ಲಿ ೬೬ ಕೆ.ವಿ. ವಿದ್ಯುತ್ ಸಂಪರ್ಕ ಮಾರ್ಗದ ಮೇಲೆ ಇಂದು ಮುಂಜಾನೆ ಮರ ಬಿದ್ದ ಪರಿಣಾಮ ಮಡಿಕೇರಿ ಸುತ್ತಮುತ್ತ ವಿದ್ಯುತ್ ಸರಬರಾಜಿನಲ್ಲಿ ವ್ಯತ್ಯಯ ಉಂಟಾಗಿತ್ತು. ಕೂಡಲೇ ಕಾರ್ಯಪ್ರವೃತ್ತರಾದ ಸೆಸ್ಕ್ ಸಿಬ್ಬಂದಿ ಸ್ಥಳಕ್ಕೆ ತೆರಳಿ ಮರವನ್ನು ತೆರವುಗೊಳಿಸಿ ವಿದ್ಯುತ್ ಸಂಪರ್ಕವನ್ನು ದುರಸ್ತಿಪಡಿಸಿದ ಬಳಿಕ ವಿದ್ಯುತ್ ವ್ಯತ್ಯಯವನ್ನು ಸರಿಪಡಿಸಲಾಯಿತು ಎಂದು ಸೆಸ್ಕ್ ಕಾರ್ಯಪಾಲಕ ಅಭಿಯಂತರರಾದ ಎಸ್. ಅನಿತಾ ಬಾಯಿ ‘ಶಕ್ತಿ’ಗೆ ಮಾಹಿತಿ ನೀಡಿದ್ದಾರೆ.ಸಿದ್ದಾಪುರ: ಗಾಳಿ ಮಳೆಗೆ ಸಿಲುಕಿ ಮಾಲ್ದಾರೆ ಗ್ರಾಮದ ಶಂಕರ್ ಕುಟ್ಟಿ ಎಂಬವರ ಕೊಟ್ಟಿಗೆಯ ಗೋಡೆ ಕುಸಿದು ಬಿದ್ದಿದೆ. ಸ್ಥಳಕ್ಕೆ ಅಮ್ಮತ್ತಿ ಹೋಬಳಿ ಕಂದಾಯ ಪರಿವೀಕ್ಷಕ ಅನಿಲ್ ಕುಮಾರ್, ಕಂದಾಯ ಇಲಾಖೆ ಅಧಿಕಾರಿಗಳು, ಸ್ಥಳೀಯ ಗ್ರಾಮ ಪಂಚಾಯಿತಿ ಸದಸ್ಯರುಗಳು ಭೇಟಿ ನೀಡಿ ಪರಿಶೀಲನೆ ನಡೆಸಿದರು.ಕಣಿವೆ: ಹೆಬ್ಬಾಲೆ ಗ್ರಾಮ ಪಂಚಾಯಿತಿ ವ್ಯಾಪ್ತಿಯ ಚಿನ್ನೇನಹಳ್ಳಿ ಗಿರಿಜನ ಹಾಡಿಯ ಬಳಿ ವಿದ್ಯುತ್ ಕಂಭವೊAದು ಧರೆಗುರುಳಿದ ಪರಿಣಾಮ ಆ ಭಾಗದಲ್ಲಿ ಮಂಗಳವಾರ ರಾತ್ರಿಯಿಂದ ವಿದ್ಯುತ್ ಸರಬರಾಜು ಸ್ಥಗಿತಗೊಂಡಿದೆ.

ಹಾಡಿಯ ವಾಸಿ ಪುಟ್ಟ ಎಂಬ ಕೃಷಿಕರು ಬೆಳೆದಿದ್ದ ಜೋಳದ ಬೆಳೆಯ ಹೊಲದೊಳಗೆ ವಿದ್ಯುತ್ ಕಂಬ ಉರುಳಿದ ರಭಸಕ್ಕೆ ಸನಿಹದಲ್ಲೇ ಇದ್ದ ಮರವೊಂದು ಬೇರು ಸಹಿತ ಉರುಳಿದ್ದು ಬೆಳೆ ನಷ್ಟವಾಗಿದೆ.

ಕಣಿವೆ: ಹಾರಂಗಿ ಬಳಿಯ ಬೆಂಡೆಬೆಟ್ಟ ಗಿರಿಜನ ಹಾಡಿಗೆ ತೆರಳುವ ರಸ್ತೆಯ ಮಧ್ಯೆ ಅರಣ್ಯದಂಚಿನ ತೇಗದ ಮರವೊಂದು ಬಿದ್ದ ಪರಿಣಾಮ ಅಲ್ಲಿನ ಜನರ ಸಂಚಾರಕ್ಕೆ ಕೆಲ ಹೊತ್ತು ಅಡಚಣೆ ಆಗಿತ್ತು.

ಶನಿವಾರಸಂತೆ - ಕೊಡ್ಲಿಪೇಟೆ ಹೆದ್ದಾರಿಯಲ್ಲಿ ಬಿದ್ದ ಮರವನ್ನು ಶನಿವಾರಸಂತೆ ವಲಯ ಅರಣ್ಯ ಸಿಬ್ಬಂದಿಯಿAದ ತೆರವುಗೊಳಿಸಲಾಯಿತು.ಕನ್ನಂಡಬಾಣೆಯ ತಂಗಮ್ಮ ಎಂಬವರ ಮನೆಯ ಮೇಲೆ ಮರ ಬಿದ್ದು ಮನೆಗೆ ಹಾನಿಯಾಗಿದೆ.ಸುಂಟಿಕೊಪ್ಪ ಸಮೀಪ ೭ನೇ ಹೊಸಕೋಟೆ ರಾಷ್ಟಿçÃಯ ಹೆದ್ದಾರಿಗೆ ಬೃಹದಾಕಾರದ ಮರ ಬಿದ್ದು, ವಾಹನಗಳ ಸಂಚಾರ ಅಸ್ತವ್ಯಸ್ತಗೊಂಡಿತ್ತು. ಗ್ರಾಮಸ್ಥರು ಹಾಗೂ ಸ್ಥಳೀಯರ ಸಹಕಾರದೊಂದಿಗೆ ಮರವನ್ನು ತೆರವುಗೊಳಿಸಲಾಗಿದೆ.