ಸುಂಟಿಕೊಪ್ಪ, ಜು. ೧೧: ಕೊಡಗರಹಳ್ಳಿ ಕಂಬಿಬಾಣೆ, ೭ನೇ ಹೊಸಕೋಟೆ ವ್ಯಾಪ್ತಿಯಲ್ಲಿ ಕಾಡಾನೆಗಳ ಉಪಟಳ ತೀವ್ರ ಹೆಚ್ಚಾಗಿದ್ದು ಜನರು ಜೀವ ಕೈಯಲ್ಲಿ ಹಿಡಿದುಕೊಂಡು ಓಡಾಡುವ ಪರಿಸ್ಥಿತಿ ನಿರ್ಮಾಣವಾಗಿದೆ.
ಮಳೆಗಾಲದ ತೋಟ ಕೆಲಸ, ಗದ್ದೆ ಕೆಲಸಗಳನ್ನು ನಿರ್ವಹಿಸಲು ಸಾಧ್ಯವಾಗು ತ್ತಿಲ್ಲ. ಬಾಳೆ ಮತ್ತು ಹಲಸಿಗಾಗಿ ಬರುವ ಆನೆಗಳು ಅದು ಸಿಗದ ಹಿನ್ನೆಲೆಯಲ್ಲಿ ಕಾಫಿ, ಅಡಿಕೆ, ಮತ್ತಿತರರ ಗಿಡಗಳನ್ನು ಕಿತ್ತು ಎಸೆಯುತ್ತಿದೆ ಎಂದು ರೈತರು ಅಳಲು ತೋಡಿಕೊಂಡಿದ್ದಾರೆ. ಕಾಡಾನೆ ಓಡಿಸುವ ಕಾರ್ಯಾಚರಣೆಯೊಂದಿಗೆ ಪುಂಡಾನೆಗಳನ್ನು ಹಿಡಿಯುವ ಕಾರ್ಯಾಚರಣೆಯನ್ನು ಕೂಡ ಅರಣ್ಯ ಇಲಾಖೆ ಮಾಡಬೇಕೆಂದು ಗ್ರಾಮಸ್ಥರು ಆಗ್ರಹಿಸಿದ್ದಾರೆ.