ಸೋಮವಾರಪೇಟೆ, ಜು.೧೧: ತಾಲೂಕಿನಾದ್ಯಂತ ವರ್ಷಾಧಾರೆ ಮುಂದುವರೆದಿದ್ದು ಅಲ್ಲಲ್ಲಿ ಹಾನಿ ಪ್ರಕರಣಗಳು ವರದಿಯಾಗುತ್ತಿವೆ. ಸಾರ್ವಜನಿಕ ರಸ್ತೆಯ ಬರೆ ಕುಸಿತ ಸೇರಿದಂತೆ ವಾಸದ ಮನೆಗಳಿಗೆ ಹಾನಿಯಾಗುತ್ತಿದೆ.

ತಾಲೂಕಿನ ಕೊಡ್ಲಿಪೇಟೆ ಹೋಬಳಿ ವ್ಯಾಪ್ತಿಯ ಕಸೂರು ಗ್ರಾಮದಲ್ಲಿ ಮನು ಎಂಬವರ ವಾಸದ ಮನೆಯ ಒಂದು ಪಾರ್ಶ್ಚ ಕುಸಿದು ಶೇ.೫೦ರಷ್ಟು ಹಾನಿಯಾಗಿದೆ. ದೊಡ್ಡಕೊಡ್ಲಿ ಗ್ರಾಮದ ಸಿದ್ದಮ್ಮ ಅವರ ಮನೆಯ ಗೋಡೆ ಕುಸಿದು ಬಿದ್ದಿದೆ. ಕೆಂಚಮ್ಮ ಅವರ ವಾಸದ ಮನೆಗೂ ಹಾನಿ ಯಾಗಿದೆ. ಕೊಡ್ಲಿಪೇಟೆ ನಾಡ ಕಚೇರಿಯ ಉಪ ತಹಶಿಲ್ದಾರ್ ಸೇರಿ ದಂತೆ ಕಂದಾಯ ಅಧಿಕಾರಿಗಳು ಹಾನಿ ಪೀಡಿತ ಪ್ರದೇಶ ಗಳಿಗೆ ಭೇಟಿ ನೀಡಿ ಪರಿಶೀಲನೆ ನಡೆಸಿದ್ದಾರೆ.

(ಮೊದಲ ಪುಟದಿಂದ) ಎಡವಾರೆ ಗ್ರಾಮದ ಪೊನ್ನಮ್ಮ ವಿಜಯ ಅವರ ವಾಸದ ಮನೆಯ ಗೋಡೆ ಕುಸಿದು ಬಿದ್ದು, ಅಂದಾಜು ೨೦ ಸಾವಿರದಷ್ಟು ನಷ್ಟ ಸಂಭವಿಸಿದೆ ಎಂದು ಕಂದಾಯಾಧಿಕಾರಿಗಳು ವರದಿ ನೀಡಿದ್ದಾರೆ. ಅರೆಯೂರು ಗ್ರಾಮದ ಕಾಳಪ್ಪ ಅವರಿಗೆ ಸೇರಿದ ವಾಸದ ಮನೆಯ ಒಂದು ಭಾಗ ಕುಸಿದು ಬಿದ್ದು ನಷ್ಟವಾಗಿದೆ. ಹಿತ್ಲುಮಕ್ಕಿ ಗ್ರಾಮದ ಆಲ್ಫನ್ಸ್ ಪಾಯಿಸ್ ಅವರ ಮನೆಯ ಗೋಡೆ ಅತೀ ಶೀತಕ್ಕೆ ಕುಸಿದಿದೆ.

ಕಳೆದ ೨೪ ಗಂಟೆಗಳಲ್ಲಿ ಸೋಮವಾರಪೇಟೆ ಕಸಬ ಹೋಬಳಿ ವ್ಯಾಪ್ತಿಗೆ ೬೩.೬ ಮಿ.ಮೀ., ಶಾಂತಳ್ಳಿಗೆ ೧೧೮ ಮಿ.ಮೀ, ಶನಿವಾರಸಂತೆಗೆ ೩೩ ಹಾಗೂ ಕೊಡ್ಲಿಪೇಟೆಗೆ ೪೪ ಮಿ.ಮೀಟರ್ ಮಳೆಯಾದ ಬಗ್ಗೆ ವರದಿಯಾಗಿದೆ.