ಮಡಿಕೇರಿ, ಜು. ೧೧: ಪುನರ್ವಸು ಮಳೆ ತನ್ನ ಆರ್ಭಟವನ್ನು ಮುಂದುವರಿಸಿದೆ. ಜಿಲ್ಲೆಯಾದ್ಯಂತ ಕಳೆದ ರಾತ್ರಿಯಿಂದ ಧಾರಾಕಾರ ಮಳೆಯೊಂದಿಗೆ ಗಾಳಿಯೂ ತನ್ನ ಆರ್ಭಟ ಮುಂದುವರಿಸಿದೆ. ಜೀವನದಿ ಕಾವೇರಿ ಸೇರಿದಂತೆ ಜಿಲ್ಲೆಯಾದ್ಯಂತ ನದಿ-ತೊರೆಗಳು ತುಂಬಿ ಹರಿಯುತ್ತಿವೆ. ವಿವಿಧೆಡೆಗಳಲ್ಲಿ ಗಾಳಿ-ಮಳೆಗೆ ಮನೆಯ ಗೋಡೆ, ಬರೆ, ಮರ-ವಿದ್ಯುತ್ ಕಂಬಗಳು ಕುಸಿದುಬಿದ್ದು ಹಾನಿಯುಂಟಾಗಿದೆ. ತೆರವು ಕಾರ್ಯಾಚರಣೆ ಕೂಡ ಬಿರುಸಿನಿಂದ ಸಾಗಿದೆ.

ಜಿಲ್ಲೆಯಾದ್ಯಂತ ಕಳೆದ ೨೪ ಗಂಟೆ ಅವಧಿಯಲ್ಲಿ ಸರಾಸರಿ ೨.೬೨ ಇಂಚು ಮಳೆಯಾಗಿದೆ. ಕಳೆದ ವರ್ಷ ಇದೇ ದಿನ ೧.೧೯ ಇಂಚು ಮಳೆಯಾಗಿತ್ತು. ಜನವರಿಯಿಂದ ಇಲ್ಲಿಯವರೆಗೆ ೫೩.೦೮ ಇಂಚು ಮಳೆಯಾಗಿದೆ. ಕಳೆದ ವರ್ಷ ಇದೇ ಅವಧಿಯಲ್ಲಿ ೩೯.೫೬ ಇಂಚು ಮಳೆಯಾಗಿತ್ತು.

ತಲಕಾವೇರಿ, ಭಾಗಮಂಡಲ ವ್ಯಾಪ್ತಿಯಲ್ಲಿ ನಿನ್ನೆ ಸಂಜೆ ವೇಳೆಗೆ ಮಳೆಯ ಪ್ರಮಾಣ ತುಸು ಕಡಿಮೆಯಾಗಿತ್ತಾದರೂ ರಾತ್ರಿಯಿಂದ ಬಿರುಸುಗೊಂಡಿದೆ. ಭಾಗಮಂಡಲ ತ್ರಿವೇಣಿ ಸಂಗಮದಲ್ಲಿ ನೀರಿನ ಮಟ್ಟದಲ್ಲಿ ಏರಿಕೆಯಾಗಿದ್ದು, ಪ್ರವಾಹ ಸ್ಥಿತಿ ಮುಂದುವರಿದಿದೆ. ಕುಶಾಲನಗರ ವ್ಯಾಪ್ತಿಯಲ್ಲಿ ಮಳೆ-ಗಾಳಿಯ ರಭಸ ಹೆಚ್ಚಾಗಿದ್ದು, ಗಡಿಯಲ್ಲಿ ಕಾವೇರಿ ನದಿ ನೀರಿನ ಹರಿವಿನಲ್ಲಿ ಏರಿಕೆ ಕಂಡುಬAದಿದೆ.

ದಕ್ಷಿಣ ಕೊಡಗಿನಲ್ಲಿ ಮಳೆಯ ಆರ್ಭಟ ತೀವ್ರಗೊಂಡಿದೆ. ಗಾಳಿಯೊಂದಿಗೆ ಮಳೆ ರಭಸದಿಂದ ಸುರಿಯುತ್ತಿದ್ದು, ಜನಜೀವನ ಅಸ್ತವ್ಯಸ್ಥಗೊಂಡಿದೆ.

ಸೇತುವೆ ಜಲಾವೃತ

ಕರಿಗೆ ಗ್ರಾಮ ಪಂಚಾಯಿತಿ ಬಳಿಯ ಚರಂಡಿಯ ನೀರು ರಸ್ತೆಯ ಮೇಲೆ ಹರಿದು ಸೇತುವೆ ಜಲಾವೃತಗೊಂಡಿದೆ. ವಾಹನ ಸಂಚಾರಕ್ಕೆ ಅಡಚಣೆಯುಂಟಾಗಿದೆ.

ಗದ್ದೆಗಳಿಗೆ ನೀರು

ಶನಿವಾರಸಂತೆ ಹೋಬಳಿಯ ನಿಡ್ತ ಗ್ರಾ.ಪಂ. ವ್ಯಾಪ್ತಿಯ ಮುಳ್ಳೂರು ಗುದ್ದಲಿ ಕೆರೆಯ ಕಟ್ಟೆ ಒಡೆದು ಕೆರೆಯ ನೀರು ಕೆಳಭಾಗದ ರೈತರ ಗದ್ದೆಗಳಿಗೆ ಹರಿಯುತ್ತಿದ್ದು, ಪಂಚಾಯಿತಿ ಅಭಿವೃದ್ಧಿ ಅಧಿಕಾರಿ, ಕಂದಾಯ ಅಧಿಕಾರಿ, ಗ್ರಾ.ಪಂ. ಸದಸ್ಯರೊಂದಿಗೆ ಪರಿಶೀಲಿಸಿ ಸಂಬAಧಿಸಿದ ಜಿಲ್ಲಾ ಪಂಚಾಯತ್ ಇಂಜಿನಿಯರಿAಗ್ ಉಪ ವಿಭಾಗದ ಇಂಜಿನಿಯರ್ ಬಳಿ ತುರ್ತು ಕ್ರಮವಹಿಸಲು ತಿಳಿಸಲಾಯಿತು.ಕರಿಕೆ: ಜಿಲ್ಲೆಯಲ್ಲಿ ಸುರಿಯುತ್ತಿರುವ ಧಾರಾಕಾರ ಮಳೆ, ಗಾಳಿಯಿಂದಾಗಿ ಗುಡ್ಡ, ಮರ, ಕುಸಿದು ಭಾಗಮಂಡಲ-ಕರಿಕೆ ಅಂತರ್‌ರಾಜ್ಯ ರಸ್ತೆ ಸಂಪರ್ಕ ನಿರಂತರವಾಗಿ ಕಡಿತಗೊಳ್ಳುತ್ತಿದೆ. ತೆರವು ಮಾಡಬೇಕಾದ ಲೋಕೋಪಯೋಗಿ ಇಲಾಖೆ ನಿದ್ರೆಯಿಂದ ಎಚ್ಚೆತ್ತಂತೆ ಕಾಣುತ್ತಿಲ್ಲ. ಈ ಭಾಗದಲ್ಲಿ ನಿರಂತರವಾಗಿ ಮಳೆಯಾಗುತ್ತಿದ್ದು, ರಸ್ತೆಗೆ ಮರಗಳು, ಕಲ್ಲು, ಮಣ್ಣು ಕುಸಿದು ಬಿದ್ದಿವೆ. ಸಾರಿಗೆ ಬಸ್ ಸೇರಿದಂತೆ ಇತರ ವಾಹನಗಳಲ್ಲಿ ತೆರಳುವ ಪ್ರಯಾಣಿಕರ ಸಹಕಾರದಿಂದ ಮರ ಕಡಿದು, ಕಲ್ಲನ್ನು ಪಕ್ಕಕ್ಕೆ ಸರಿಸಿ ತೆರಳಬೇಕಾದ ಪರಿಸ್ಥಿತಿ ಒದಗಿದೆ.

ಈ ಬಗ್ಗೆ ‘ಶಕ್ತಿ’ಗೆ ಹೇಳಿಕೆ ನೀಡಿರುವ ಖಾಸಗಿ ಬಸ್‌ನ ಚಾಲಕ, ನಿರ್ವಾಹಕರುಗಳು ದಿನ ನಿತ್ಯ ಬೆಳಿಗ್ಗೆ, ಸಂಜೆ ಮರ ಹಾಗೂ ಕಲ್ಲುಗಳನ್ನು ತೆರವುಗೊಳಿಸಬೇಕಾದ ಅನಿವಾರ್ಯತೆ ಒದಗಿದ್ದು, ಇದರಿಂದಾಗಿ ಸಮಯ ಪಾಲಿಸಲು ಅಸಾಧ್ಯವಾಗಿದೆ. ಪರಿಸ್ಥಿತಿ ಹೀಗೆ ಮುಂದುವರಿದರೆ ಬಸ್ ಸಂಚಾರ ಸ್ಥಗಿತ ಗೊಳಿಸುವುದು ಅನಿವಾರ್ಯ ಎಂದು ತಮ್ಮ ಅಳಲನ್ನು ತೋಡಿಕೊಂಡರು.

ಈ ಬಗ್ಗೆ ‘ಶಕ್ತಿ’ ಭಾಗಮಂಡಲ-ವನ್ಯಜೀವಿ ವಲಯದ ವಲಯಾರಣ್ಯಾಧಿಕಾರಿಗಳಿಗೆ ಮರ ಬಿದ್ದಿರುವ ಮಾಹಿತಿ ನೀಡಿದಾಗ ಕೂಡಲೇ ಕಾರ್ಯ ಪ್ರವೃತರಾದ ಅಧಿಕಾರಿಗಳು ತಮ್ಮ ಸಿಬ್ಬಂದಿಗಳನ್ನು ಸ್ಥಳಕ್ಕೆ ಕಳುಹಿಸಿ ಮರ ತೆರವುಗೊಳಿಸಿದ್ದು, ಸಾರ್ವಜನಿಕರು ಮೆಚ್ಚುಗೆ ವ್ಯಕ್ತಪಡಿಸಿದ್ದಾರೆ. ಆದರೆ ಬರೆಯ ಮಣ್ಣು, ಕಲ್ಲುಗಳು ಹಾಗೆಯೇ ಬಿದ್ದಿದ್ದು, ರಸ್ತೆ ಬದಿ ಚರಂಡಿ ಸಂಪೂರ್ಣ ಮುಚ್ಚಿ ನೀರು ರಸ್ತೆಯ ಮೇಲೆ ಹರಿದು ಪ್ರಯಾಣ ಕಷ್ಟ ಸಾಧ್ಯವಾಗಿದೆ. ಜನರು ಲೋಕೋಪಯೋಗಿ ಇಲಾಖೆಗೆ ಹಿಡಿ ಶಾಪ ಹಾಕುತ್ತಿದ್ದಾರೆ. ಕೂಡಲೇ ಜಿಲ್ಲಾಡಳಿತ ಈ ಬಗ್ಗೆ ಕ್ರಮವಹಿಸಬೇಕೆಂದು ಜನತೆ ಆಗ್ರಹಿಸಿದ್ದಾರೆ.ಕೂಡಿಗೆ: ಕೂಡಿಗೆ ಗ್ರಾಮ ಪಂಚಾಯಿತಿ ವ್ಯಾಪ್ತಿಯ ಹಳೆ ಕೂಡಿಗೆ ಗ್ರಾಮದ ಪಾರ್ವತಿ ದೇವಪ್ಪ ಎಂಬವರಿಗೆ ಸೇರಿದ ವಾಸದ ಮನೆಯ ಗೋಡೆಯು ಒಂದು ಭಾಗ ಮಳೆ, ಗಾಳಿಯಿಂದಾಗಿ ಕುಸಿತಗೊಂಡಿದೆ.

ಸ್ಥಳಕ್ಕೆ ಗ್ರಾಮ ಪಂಚಾಯಿತಿ ಉಪಾಧ್ಯಕ್ಷೆ ಮೋಹಿನಿ ತಮ್ಮಣೆಗೌಡ, ಗ್ರಾಮ ಲೆಕ್ಕಾಧಿಕಾರಿ ಗುರುದರ್ಶನ್ ಭೇಟಿ ನೀಡಿ ಪರಿಶೀಲನೆ ನಡೆಸಿದ್ದಾರೆ.ನವ ಗ್ರಾಮದಲ್ಲಿ ಬೆಟ್ಟ ಕುಸಿತ

ಕೂಡಿಗೆ : ಕೂಡುಮಂಗಳೂರು ಗ್ರಾಮ ಪಂಚಾಯಿತಿ ವ್ಯಾಪ್ತಿಯ ನವಗ್ರಾಮದ ವಿಶಾಲಾಕ್ಷಿ ಪ್ರಕಾಶ್ ಎಂಬವರ ಮನೆಯ ಹತ್ತಿರದ ಬೆಟ್ಟ ಕುಸಿಯುತ್ತಿದ್ದು, ಮನೆ ಹಿಂಭಾಗಕ್ಕೆ ಬೆಟ್ಟದ ಮಣ್ಣು ಮತ್ತು ಕಲ್ಲುಗಳು ಬಿದ್ದಿವೆ.

ಕೂಡುಮಂಗಳೂರು ಗ್ರಾಮ ಪಂಚಾಯಿತಿ ಅಧ್ಯಕ್ಷೆ ಇಂದಿರಾ ರಮೇಶ್, ಸದಸ್ಯ ಶಂಶುದೀನ್, ಕಂದಾಯ ಇಲಾಖೆಯ ಉಪ ತಹಶೀಲ್ದಾರ್ ಮಧುಸೂದನ್, ಕಂದಾಯ ಪರಿವೀಕ್ಷಕ ಸಂತೋಷ್, ಲೆಕ್ಕಾಧಿಕಾರಿ ಗುರುದರ್ಶನ್, ಸಿಬ್ಬಂದಿ ಲೋಕೇಶ್ ಭೇಟಿ ನೀಡಿದ್ದಾರೆ.ಶನಿವಾರಸಂತೆ ಹೋಬಳಿ ವ್ಯಾಪ್ತಿಯಲ್ಲಿ ಮಳೆಯ ಪ್ರಮಾಣ ಹೆಚ್ಚಾಗಿದ್ದು, ದುಂಡಳ್ಳಿ ಗ್ರಾ.ಪಂ. ವ್ಯಾಪ್ತಿಯ ಕಾಜೂರು ಹೊಳೆ ತುಂಬಿ ಹರಿಯುತ್ತಿದೆ. ಕಾಲುವೆಗಳು ತುಂಬಿ ಹರಿಯುತ್ತಿದ್ದು, ಗ್ರಾಮಗಳ ಗದ್ದೆಗಳು ಜಲಾವೃತವಾಗಿವೆ. ಈ ಭಾಗದಲ್ಲಿ ಶೇ. ೫೦ ರಷ್ಟು ರೈತರು ಮಾತ್ರ ಭತ್ತದ ಅಗೆ ಹಾಕಿದ್ದಾರೆ. ಉಳಿದ ರೈತರು ನೀರು ಅಗೆ ಹಾಕಲು ಮಳೆ ಕಡಿಮೆಯಾಗುವುದನ್ನೇ ನಿರೀಕ್ಷಿಸುತ್ತಿದ್ದಾರೆ.ಮುಕ್ಕೋಡ್ಲು ಮತ್ತು ಆವಂಡಿ ರಸ್ತೆಯಲ್ಲಿ ಕುಸಿದ ಮಣ್ಣು ಮತ್ತು ಉರುಳಿ ಬಿದ್ದ ಮರಗಳನ್ನು ಎನ್‌ಡಿಆರ್‌ಎಫ್ ತಂಡದಿAದ ತೆರವುಗೊಳಿಸಲಾಯಿತು.ಮಡಿಕೇರಿ: ತೋಮಾರ ಪ್ರೆöÊಮರಿ ಸ್ಕೂಲ್‌ನಲ್ಲಿನ ಕಾಳಜಿ ಕೇಂದ್ರಕ್ಕೆ ಕಂದಾಯ ಇಲಾಖೆಯ ಅಧಿಕಾರಿಗಳು, ಆರೋಗ್ಯ ಅಧಿಕಾರಿಗಾಳು, ಪೊಲೀಸ್ ಸಿಬ್ಬಂದಿ ಭೇಟಿ ನೀಡಿ ಪರಿಶೀಲನೆ ನಡೆಸಿದರು. ಕಾಳಜಿ ಕೇಂದ್ರದಲ್ಲಿ ಒಟ್ಟು ೧೩ ಕುಟುಂಬಗಳ ೪೩ ಮಂದಿ ಆಶ್ರಯ ಪಡೆದಿದ್ದಾರೆ.ಕುಶಾಲನಗರ ತಾಲೂಕಿನ ೭ನೇ ಹೊಸಕೋಟೆ ಗ್ರಾಮದಲ್ಲಿ ಮಳೆ ಹಾನಿ ಪ್ರದೇಶಕ್ಕೆ ಕೊಡಗು ಜಿಲ್ಲಾ ಉಸ್ತುವಾರಿ ಸಚಿವ ಬಿ.ಸಿ. ನಾಗೇಶ್ ಭೇಟಿ ನೀಡಿ ಪರಿಶೀಲನೆ ನಡೆಸಿದರು. ಮಳೆಯಿಂದ ಕುಸಿದು ಹಾನಿಯಾಗಿರುವ ಪಂಕಜ ಕುಟುಂಬಕ್ಕೆ ಸ್ಥಳದಲ್ಲೇ ೨೮ ಸಾವಿರ ಪರಿಹಾರ ಚೆಕ್ ವಿತರಿಸಿದರು.

ಈ ವೇಳೆ ಶಾಸಕ ಅಪ್ಪಚ್ಚು ರಂಜನ್, ಜಿಲ್ಲಾಧಿಕಾರಿಗಳು, ಪೊಲೀಸ್ ವರಿಷ್ಠಾಧಿಕಾರಿ ಹಾಗೂ ಜಿಲ್ಲಾ ಪಂಚಾಯತ್ ಸಿಇಓ ಸೇರಿದಂತೆ ಇನ್ನಿತರ ಅಧಿಕಾರಿಗಳು ಉಪಸ್ಥಿತರಿದ್ದರು.ಸಿದ್ದಾಪುರ: ಕಾವೇರಿ ನದಿಯ ನೀರಿನ ಮಟ್ಟ ಏರಿಕೆಯಾದ ಹಿನ್ನೆಲೆಯಲ್ಲಿ ನೆಲ್ಲಿಹುದಿಕೇರಿಯ ಕುಂಬಾರಗುAಡಿಯ ನಿವಾಸಿ ಜೋಯಿ ಎಂಬವರ ಮನೆಗೆ ನೀರು ನುಗ್ಗಿದೆ. ಕುಶಾಲನಗರ ಕಂದಾಯ ಪರಿವೀಕ್ಷಕ ಸಂತೋಷ್, ಗ್ರಾಮ ಲೆಕ್ಕಿಗ ಸಚಿನ್ ಭೇಟಿ ನೀಡಿ ಪರಿಶೀಲನೆ ನಡೆಸಿದರು.ನಾಪೋಕ್ಲು: ಸಮೀಪದ ಬೆಟ್ಟಗೇರಿ ಗ್ರಾಮ ಪಂಚಾಯಿತಿ ವ್ಯಾಪ್ತಿಯ ಕಾರುಗುಂದ ಗ್ರಾಮದ ಕೇಟೋಳಿ ಎಂ. ಪ್ರಭಾಕರ ಎಂಬವರ ಮನೆಯ ಮುಂಭಾಗದ ಬರೆ ಕುಸಿದು ಹಾನಿ ಸಂಭವಿಸಿದೆ. ಮಣ್ಣು ಕುಸಿತದಿಂದಾಗಿ ಮನೆ ಸಹ ಕುಸಿಯುವ ಹಂತಕ್ಕೆ ತಲುಪಿದ್ದು ಸ್ಥಳಕ್ಕೆ ಬೆಟ್ಟಗೇರಿ ಗ್ರಾಮ ಪಂಚಾಯಿತಿ ಅಧ್ಯಕ್ಷ ರ‍್ಯಾಲಿ ಮಾದಯ್ಯ ಹಾಗೂ ಸದಸ್ಯ ಮುತ್ತಪ್ಪ ಭೇಟಿ ನೀಡಿ ಪರಿಶೀಲಿಸಿದರು.ಚೆಯ್ಯಂಡಾಣೆ : ವೀರಾಜಪೇಟೆ ಸಮೀಪದ ಕದನೂರು ಗ್ರಾಮ ಪಂಚಾಯಿತಿ ವ್ಯಾಪ್ತಿಗೆ ಒಳಪಟ್ಟ ದೇವಣಗೇರಿ, ಅರಮೇರಿ, ಚಾಮಿಯಾಲ ಸಂಪರ್ಕ ಕಲ್ಪಿಸುವ ಎಸ್.ಎಂ.ಎಸ್. ವಿದ್ಯಾಪೀಠದ ಸಮೀಪದ ಸೇತುವೆ ಮಳೆಯ ತೀವ್ರತೆಗೆ ಮುಳುಗಡೆಗೊಂಡಿದೆ.ವೀರಾಜಪೇಟೆ: ವೀರಾಜಪೇಟೆಯ ದಖ್ಖನಿ ಮೋಹಲ್ಲ ಸಮೀಪ ಮುರುಗೇಶ್ ಎಂಬವರ ಮನೆಯ ಬಳಿ ಉಂಟಾದ ಭೂಕುಸಿತ ಸ್ಥಳಕ್ಕೆ ಅಧಿಕಾರಿಗಳ ತಂಡ ಭೇಟಿ ನೀಡಿತು. ಮಳೆನೀರು ಹರಿಯುವ ಮಾರ್ಗ ಬದಲಾಯಿಸಿ, ಚರಂಡಿಯಲ್ಲಿ ನಿಂತಿದ್ದ ನೀರನ್ನು ಸರಾಗವಾಗಿ ಹರಿಯಲು ಕ್ರಮಕೈಗೊಳ್ಳಲಾಗಿದೆ. ಸ್ಥಳದಲ್ಲಿ ತಡೆಗೋಡೆ ನಿರ್ಮಿಸುವುದಾಗಿ ತಂಡ ಮಾಹಿತಿ ನೀಡಿದೆ. ಸ್ಥಳದಲ್ಲಿದ್ದ ೨ ಸೆಪ್ಟಿಕ್ ಟ್ಯಾಂಕ್‌ಗಳಿಗೆ ಹಾನಿಯಾಗಿದೆ.ಸುಂಟಿಕೊಪ್ಪ: ಸುಂಟಿಕೊಪ್ಪ ಗ್ರಾಮ ಪಂಚಾಯಿತಿ ವ್ಯಾಪ್ತಿಯ ನಾರ್ಗಾಣೆ ಗ್ರಾಮದ ಗಿರಿಯಪ್ಪ ಮನೆಯ ೪ ಮನೆಗಳಿಗೆ ಮಳೆ ನೀರು ನುಗ್ಗಿದ್ದು ಗದ್ದೆಹಳ್ಳದ ಚೆಟ್ಟಳ್ಳಿ ರಸ್ತೆ ಮೇಲೆ ಮಳೆಯ ನೀರು ಹರಿಯುತ್ತಿದ್ದು ಪ್ರವಾಹದ ಭೀತಿ ಎದುರಾಗಿದೆ.

ನಾರ್ಗಾಣೆ ಗ್ರಾಮದ ನಬೀಸಾ, ಶಹೀದಾ, ಅಬೂಬಕರ್ ಸೇರಿದಂತೆ ಮತ್ತಿತರರ ಮನೆಗಳಿಗೆ ನೀರು ನುಗ್ಗಿದ್ದು, ಕೃಷಿ ಗದ್ದೆಗಳು ಜಲಾವೃತ್ತಗೊಂಡಿವೆ. ಮನೆಯ ಆಹಾರ ಧಾನ್ಯಗಳು ಗೃಹಯೋಪಯೋಗಿ ವಸ್ತುಗಳು ನಷ್ಟವಾಗಿವೆ. ಗ್ರಾಮ ಪಂಚಾಯಿತಿ ಅಧ್ಯಕ್ಷೆ ಶಿವಮ್ಮ, ಸದಸ್ಯರುಗಳಾದ ಪಿ.ಆರ್. ಸುನಿಲ್ ಕುಮಾರ್, ರಫೀಕ್‌ಖಾನ್, ಪಿ.ಎಫ್. ಸಬಾಸ್ಟೀನ್, ಮಂಜುಳ ಹಾಗೂ ಗೀತಾ ಇವರುಗಳು ಸ್ಥಳಕ್ಕೆ ಭೇಟಿ ನೀಡಿ ಪರಿಶೀಲಿಸಿದ್ದು, ಪಂಚಾಯಿತಿಯಿAದ ನೆರವು ನೀಡುವುದಾಗಿ ತಿಳಿಸಿದ್ದಾರೆ.ಮಡಿಕೇರಿ: ಬಿರುನಾಣಿಯ ಬಕ್ಕರೆ ಗ್ರಾಮಕ್ಕೆ ಸಂಪರ್ಕ ಕಡಿತಗೊಂಡಿದ್ದು, ಅಲ್ಲಿನ ೩ ಕುಟುಂಬಗಳ ಒಟ್ಟು ೧೩ ಮಂದಿಗೆ ೫ ದಿನಗಳಿಗಾಗುವಷ್ಟು ರೇಷನ್ ಹಾಗೂ ಔಷಧಿಗಳ ಸರಬರಾಜು ಮಾಡಲು ಅಧಿಕಾರಿಗಳ ತಂಡ ಕ್ರಮಕೈಗೊಂಡಿದೆ. ಹುದಿಕೇರಿಯ ನೋಡಲ್ ಅಧಿಕಾರಿ, ಪಿ.ಡಿ.ಓ, ಆರ್.ಐ., ವಿ.ಎ. ಹಾಗೂ ಇತರರು ಇದ್ದರು.ನಾಪೋಕ್ಲು: ಕೆಲವು ದಿನಗಳಿಂದ ಸುರಿಯುತ್ತಿರುವ ಧಾರಾಕಾರ ಮಳೆಯಿಂದ ಅಲ್ಲಲ್ಲಿ ಕೊಳೆರೋಗದಿಂದ ನಷ್ಟ ಉಂಟಾಗಿದೆ.

ರಸ್ತೆ ಸಂಪರ್ಕ ಕಡಿತ, ಮನೆಯ ಗೋಡೆ ಕುಸಿತ ಸೇರಿದಂತೆ ಹಲವು ತೊಂದರೆಗಳಿಗೆ ಸಿಲುಕಿ ಜನರು ಪರಿತಪಿಸುತ್ತಿದ್ದರೆ ಇತ್ತ ರೈತರು ಸಂಕಷ್ಟ ಅನುಭವಿಸುತ್ತಿದ್ದಾರೆ. ಸತತ ಮಳೆಯಿಂದಾಗಿ ಮದೆನಾಡು, ಜೋಡುಪಾಲ, ದೇವರಕೊಲ್ಲಿ ಮತ್ತಿತರ ಭಾಗಗಳಲ್ಲಿ ಕೊಳೆರೋಗ ಆರಂಭವಾಗಿದೆ. ಶೀತ ಹವೆಯಿಂದ ಕಾಫಿ, ಕರಿಮೆಣಸು, ಅಡಿಕೆಯ ಫಸಲು ಉದುರುತ್ತಿದೆ ಎಂದು ಬೆಳೆಗಾರರು ಆತಂಕಗೊAಡಿದ್ದಾರೆ.ವೀರಾಜಪೇಟೆ: ನೆಹರೂ ನಗರ ವಾರ್ಡಿನಲ್ಲಿ ಮೊಹಮ್ಮದ್ ಎಂಬವರಿಗೆ ಸೇರಿದ ಮನೆಯ ಗೋಡೆಯ ಒಂದು ಭಾಗ ಕುಸಿದಿದೆ ಎಂದು ಪಟ್ಟಣ ಪಂಚಾಯಿತಿ ಕಂದಾಯ ಅಧಿಕಾರಿ ಸೋಮೇಶ್ ಮಾಹಿತಿ ನೀಡಿದ್ದಾರೆ.

ನೆಹರು ನಗರ ವಾರ್ಡ್ನಲ್ಲಿ ರಶೀದ್ ಎಂಬವರ ಮನೆಯ ಮುಂಭಾಗದ ರಸ್ತೆಯ ಒಂದು ಭಾಗ ಕುಸಿದಿದ್ದು, ಪಟ್ಟಣ ಪಂಚಾಯಿತಿ ವತಿಯಿಂದ ಮರಳಿನ ಚೀಲಗಳನ್ನು ಇಟ್ಟು ರಸ್ತೆಯನ್ನು ತಾತ್ಕಾಲಿಕವಾಗಿ ಪುನರ್ ನಿರ್ಮಾಣ ಮಾಡÀಲಾಗಿದೆ. ಮಳೆ ಕಡಿಮೆಯಾದ ಬಳಿಕ ರಸ್ತೆಯನ್ನು ಪಟ್ಟಣ ಪಂಚಾಯಿತಿ ವತಿಯಿಂದ ಸರಿಪಡಿಸಲಾಗುವುದು ಎಂದು ನೆಹರು ನಗರ ವಾರ್ಡ್ ಸದಸ್ಯ ಅಗಸ್ಟೀನ್ ಬೆನ್ನಿ ತಿಳಿಸಿದ್ದಾರೆ.ಕೂಡಿಗೆ: ಕಣಿವೆಯ ಶ್ರೀ ರಾಮಲಿಂಗೇಶ್ವರ ದೇವಾಲಯ ಎದುರು ನಿರ್ಮಾಣ ಮಾಡಲಾಗಿರುವ ತೂಗು ಸೇತುವೆಯು ದುರಸ್ತಿಗೆ ಒಳಗಾಗಿದ್ದು, ಕಾವೇರಿ ನದಿಯ ನೀರು ತೂಗು ಸೇತುವೆ ಸಮೀಪಿಸಲು ೬ ಅಡಿಗಳಷ್ಟು ಮಾತ್ರ ಬಾಕಿ ಇದೆ.ನಾಪೋಕ್ಲು: ಕೆಲವು ದಿನಗಳಿಂದ ಸುರಿಯುತ್ತಿರುವ ಧಾರಾಕಾರ ಮಳೆಯಿಂದ ಅಲ್ಲಲ್ಲಿ ಕೊಳೆರೋಗದಿಂದ ನಷ್ಟ ಉಂಟಾಗಿದೆ.

ರಸ್ತೆ ಸಂಪರ್ಕ ಕಡಿತ, ಮನೆಯ ಗೋಡೆ ಕುಸಿತ ಸೇರಿದಂತೆ ಹಲವು ತೊಂದರೆಗಳಿಗೆ ಸಿಲುಕಿ ಜನರು ಪರಿತಪಿಸುತ್ತಿದ್ದರೆ ಇತ್ತ ರೈತರು ಸಂಕಷ್ಟ ಅನುಭವಿಸುತ್ತಿದ್ದಾರೆ. ಸತತ ಮಳೆಯಿಂದಾಗಿ ಮದೆನಾಡು, ಜೋಡುಪಾಲ, ದೇವರಕೊಲ್ಲಿ ಮತ್ತಿತರ ಭಾಗಗಳಲ್ಲಿ ಕೊಳೆರೋಗ ಆರಂಭವಾಗಿದೆ. ಶೀತ ಹವೆಯಿಂದ ಕಾಫಿ, ಕರಿಮೆಣಸು, ಅಡಿಕೆಯ ಫಸಲು ಉದುರುತ್ತಿದೆ ಎಂದು ಬೆಳೆಗಾರರು ಆತಂಕಗೊAಡಿದ್ದಾರೆ.ಚೆಯ್ಯAಡಾಣೆ : ವೀರಾಜಪೇಟೆ ಸಮೀಪದ ಕದನೂರು ಗ್ರಾಮ ಪಂಚಾಯಿತಿ ವ್ಯಾಪ್ತಿಗೆ ಒಳಪಟ್ಟ ದೇವಣಗೇರಿ, ಅರಮೇರಿ, ಚಾಮಿಯಾಲ ಸಂಪರ್ಕ ಕಲ್ಪಿಸುವ ಎಸ್.ಎಂ.ಎಸ್. ವಿದ್ಯಾಪೀಠದ ಸಮೀಪದ ಸೇತುವೆ ಮಳೆಯ ತೀವ್ರತೆಗೆ ಮುಳುಗಡೆಗೊಂಡಿದೆ.ನಾಪೋಕ್ಲು: ಸಮೀಪದ ಬೆಟ್ಟಗೇರಿ ಗ್ರಾಮ ಪಂಚಾಯಿತಿ ವ್ಯಾಪ್ತಿಯ ಕಾರುಗುಂದ ಗ್ರಾಮದ ಕೇಟೋಳಿ ಎಂ. ಪ್ರಭಾಕರ ಎಂಬವರ ಮನೆಯ ಮುಂಭಾಗದ ಬರೆ ಕುಸಿದು ಹಾನಿ ಸಂಭವಿಸಿದೆ. ಮಣ್ಣು ಕುಸಿತದಿಂದಾಗಿ ಮನೆ ಸಹ ಕುಸಿಯುವ ಹಂತಕ್ಕೆ ತಲುಪಿದ್ದು ಸ್ಥಳಕ್ಕೆ ಬೆಟ್ಟಗೇರಿ ಗ್ರಾಮ ಪಂಚಾಯಿತಿ ಅಧ್ಯಕ್ಷ ರ‍್ಯಾಲಿ ಮಾದಯ್ಯ ಹಾಗೂ ಸದಸ್ಯ ಮುತ್ತಪ್ಪ ಭೇಟಿ ನೀಡಿ ಪರಿಶೀಲಿಸಿದರು.ಮಡಿಕೇರಿ: ಚೆಂಬು ಗ್ರಾಮದ ಕುದುರೆಪಾಯ ಕಟ್ಟಪಾರೆ ಅಶೋಕ ಎಂಬವರ ಮನೆಯ ಮೇಲೆ ಗುಡ್ಡದ ಮಣ್ಣು ಕುಸಿಯುತ್ತಿದ್ದು, ಅಪಾಯ ಎದುರಾಗಿದೆ.ಕೂಡಿಗೆ: ಹೆಬ್ಬಾಲೆ-ಹುಲುಸೆ ಮದ್ಯ ಭಾಗದ ಜಮೀನಿಗೆ ಕಾವೇರಿ ನದಿಯ ಹೆಚ್ಚುವರಿ ನೀರು ನುಗ್ಗಿದ ಪರಿಣಾಮ ಶುಂಠಿ ಬೇಸಾಯ ಮಾಡಿದ ಜಮೀನು ಜಲಾವೃತಗೊಂಡ ಹಿನ್ನೆಲೆಯಲ್ಲಿ ಶುಂಠಿ ಬೆಳೆ ಕರಗಿ ಹಾಳಾಗಿದೆ.ಕೂಡಿಗೆ: ಹೆಬ್ಬಾಲೆ-ಹುಲುಸೆ ಮದ್ಯ ಭಾಗದ ಜಮೀನಿಗೆ ಕಾವೇರಿ ನದಿಯ ಹೆಚ್ಚುವರಿ ನೀರು ನುಗ್ಗಿದ ಪರಿಣಾಮ ಶುಂಠಿ ಬೇಸಾಯ ಮಾಡಿದ ಜಮೀನು ಜಲಾವೃತಗೊಂಡ ಹಿನ್ನೆಲೆಯಲ್ಲಿ ಶುಂಠಿ ಬೆಳೆ ಕರಗಿ ಹಾಳಾಗಿದೆ.ಭಾಗಮಂಡಲ: ಭಾಗಮಂಡಲ ವ್ಯಾಪ್ತಿಯಲ್ಲಿ ಸೋಮವಾರ ಬೆಳಿಗ್ಗೆ ಮಳೆಯ ಪ್ರಮಾಣ ಕಡಿಮೆ ಇತ್ತು. ಬಳಿಕ ಸುರಿದ ಧಾರಾಕಾರ ಮಳೆಯಿಂದ ನಾಪೋಕ್ಲು ಭಾಗಮಂಡಲ ರಸ್ತೆಯಲ್ಲಿ ನೀರಿನ ಪ್ರಮಾಣ ಏರಿಕೆ ಆಯಿತು. ಸೋಮವಾರ ಸಂತೆಯ ದಿನವಾದ್ದರಿಂದ ಜನರು ರಸ್ತೆ ದಾಟಲು ಪರದಾಡುವಂತಾಯಿ ತು.ಕೋರಂಗಾಲದ ಅಟಲ್ ಬಿಹಾರಿ ವಾಜಪೇಯಿ ವಸತಿ ಶಾಲೆಗೆ ಮಕ್ಕಳು ರಜೆಯಿಂದ ಹಿಂತಿರುಗಿದ್ದು ಜಲಾವೃತಗೊಂಡ ರಸ್ತೆಯಲ್ಲಿಯೇ ನಡೆದು ಸಾಗಿದರು. ಕಾಲೇಜುಗಳು ಆರಂಭಗೊAಡಿದ್ದರಿAದ ವಿದ್ಯಾರ್ಥಿಗಳು ಸಹ ಜಲಾವೃತಗೊಂಡ ರಸ್ತೆಯಲ್ಲೇ ನಡೆಯಬೇಕಾಯಿತು. ಜಲಾವೃತಗೊಂಡ ರಸ್ತೆಯಲ್ಲಿ ಜೀಪೊಂದು ಸಿಲುಕಿಕೊಂಡ ಪರಿಣಾಮ ಸಮಸ್ಯೆ ಉಂಟಾಯಿತು. ಬಳಿಕ ಜನರು ಜೀಪನ್ನು ತಳ್ಳಿ ಬದಿಗೆ ಸರಿಸಿ ಗ್ಯಾರೇಜ್‌ಗೆ ತಲುಪಿಸಿದರು.

ಭಾಗಮಂಡಲಕ್ಕೆ ಇಂದು ೪.೯೬ ಇಂಚು ಹಾಗೂ ತಲಕಾವೇರಿಗೆ ೫.೩೧ ಇಂಚು ಮಳೆಯಾಗಿದೆ.